<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಬಿಡಿಎ ಸುಧಾರಣೆಗೆ ಡಿಕೆಶಿ ದಿಟ್ಟ ಸಂದೇಶ

ಬಿಡಿಎ ಸುಧಾರಣೆಗೆ ಡಿಕೆಶಿ ದಿಟ್ಟ ಸಂದೇಶ
Summary: ಬಿಡಿಎ ಎಂದರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ತೆಗೆದುಹಾಕಿ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಕುರಿತಾಗಿ ವ್ಯಾಪಾರ ಮತ್ತು ಬ್ರೋಕರೇಜ್ ಎಂಬ ಕಳಂಕ ಹೋಗಬೇಕು ಎಂದು ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
BELAGAVI NEWS :

"ನಮಗೆ ಏನು ತರಬೇತಿ ನೀಡಿದ್ದಾರೆ ಎಂದು ನಿಮಗೆ ಅಚ್ಚರಿಯಾಗಬಹುದು. ನಾವು ಎಷ್ಟೇ ಬುದ್ಧಿವಂತರಾದರೂ ಜ್ಞಾನ, ಅನುಭವದ ಮೂಲಕ ಸಾಯುವವರೆಗೂ ಕಲಿಯುವ ಅಗತ್ಯವಿರುತ್ತದೆ.

ಹೊಸ ತಲೆಮಾರು, ಹೊಸ ವ್ಯವಸ್ಥೆ ಬರುತ್ತದೆ. ನಾವು ಅಂಕಿಗಳನ್ನು ಗುಣಿತ ಮಾಡುತ್ತಿದ್ದೆವು, ನಂತರ ಕ್ಯಾಲ್ಕುಲೇಟರ್ ಬಂತು. ನಂತರ ಕಂಪ್ಯೂಟರ್, ಈಗ ಕೃತಕ ಬುದ್ಧಿಮತ್ತೆಯ ಕಾಲ ಬಂದಿದೆ. ಈಗ ಭೂ ಮಾಪನವನ್ನು ಟೇಪ್ ಹಿಡಿದು ಮಾಡುವ ಅಗತ್ಯವಿಲ್ಲ, ಡ್ರೋನ್ ಮೂಲಕವೇ ಅಳತೆ ಮಾಡಬಹುದಾಗಿದೆ" ಎಂದು ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಐವತ್ತು ವರ್ಷ ತುಂಬಿದ್ದು, ಈ ವರ್ಷದಿಂದಾದರೂ ಘನತೆ ಬದಲಾಯಿಸಿ. ಬಿಡಿಎ ಎಂದರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ತೆಗೆದುಹಾಕಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.

ಬೆಂಗಳೂರು ಕಟ್ಟುವಲ್ಲಿ ನಿಮ್ಮ ಕೊಡುಗೆಯೂ ಇರಲಿ. ಬಿಡಿಎ ಹಾಗೂ ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದೇ ತಿಂಗಳು 17ಕ್ಕೆ ಬಿಡಿಎ ರಚನೆಯಾಗಿ 50 ವರ್ಷ ಪೂರ್ಣಗೊಳ್ಳಲಿದೆ. ಈ ಸಂಭ್ರಮಾಚರಣೆ ವೇಳೆ ಹೆಗ್ಗುರುತು ಬಿಟ್ಟು ಹೋಗಲು ನನ್ನ ಹಾಗೂ ಬಿಡಿಎ ಅಧ್ಯಕ್ಷರಾದ ಹ್ಯಾರಿಸ್ ಅವರ ತಂಡದ ಅಭಿಲಾಶೆಯಾಗಿದೆ. ಇದಕ್ಕೆ ಬಿಡಿಎನಲ್ಲಿ ಪಾರದರ್ಶಕತೆ ತರಬೇಕು. ನೊಂದ ಜನರು ಬಿಡಿಎ ಬಳಿ ಬರುತ್ತಾರೆ. ಜನ ನಿಮ್ಮ ಬಳಿಗೆ ಬಹಳ ಗೌರವಯುತವಾಗಿ ಬರುವಂತಾಗಬೇಕು" ಎಂದು ಮಾರ್ಗದರ್ಶನ ನೀಡಿದರು.

"ಕೆಲವರು ಶಿವಕುಮಾರ್ ಅವರಂತಹವರು ಈ ರೀತಿ ಮಾತನಾಡುತ್ತಾರಾ? ಎಂದು ಭಾವಿಸಬಹುದು. ಅವರಿಗೆ ನಮ್ಮ ಬದುಕಿನಲ್ಲಿರುವ ಶಿಸ್ತಿನ ಬಗ್ಗೆ ಗೊತ್ತಿರುವುದಿಲ್ಲ. ನಮ್ಮ ಶ್ರಮ ಇಲ್ಲದೆ ನಾವು ಈ ಹಂತ ತಲುಪಲು ಸಾಧ್ಯವೇ? ನಾನು ಯಾರಿಗೂ ಮೆಚ್ಚಿಸುವ ಅಗತ್ಯವಿಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಒಪ್ಪಿಸಿದರೆ ಸಾಕು. ನಾವು ಹೋಗುವಾಗ ಎಲ್ಲವನ್ನು ಹೊತ್ತುಕೊಂಡು ಹೋಗುವುದಿಲ್ಲ. ಸಮಾಜಕ್ಕೆ ಪ್ರತಿಯಾಗಿ ಕೊಡುಗೆ ನೀಡಬೇಕು.

ಕೇವಲ ಬೆಂಗಳೂರು ನಗರದ ಅಕ್ಕಪಕ್ಕ ಮಾತ್ರವಲ್ಲ ಎಲ್ಲೆಡೆ ಸಂಚಾರಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಈ ದೇಶದಲ್ಲಿ ವಿದ್ಯಾವಂತರು, ಬುದ್ದಿವಂತರಿಲ್ಲದಿದ್ದರೂ ಪ್ರಜ್ಞಾವಂತರು ಇರಬೇಕು.

ಪ್ಲಾನಿಂಗ್ ವಿಚಾರದಲ್ಲಿ ಮೈಸೂರು ಬೆಂಗಳೂರಿಗಿಂತ ಉತ್ತಮವಾಗಿದೆ. ಬೆಂಗಳೂರಿನಲ್ಲಿ ಜಯನಗರ, ಮಲ್ಲೇಶ್ವರ, ಚಾಮರಾಜಪೇಟೆ ಹೊರತಾಗಿ ಬೇರೆ ಪ್ರದೇಶಗಳಲ್ಲಿ ಹೇಳಿಕೊಳ್ಳುವ ಯೋಜನೆ ರೂಪಿಸಿಲ್ಲ. ಇದಕ್ಕೆ ಕೇವಲ ನೀವು ಮಾತ್ರವಲ್ಲ, ಆಡಳಿತ ನಡೆಸುವ ರಾಜಕಾರಣಿಗಳು, ಬಿಡಿಎ ಮುನ್ನಡೆಸಿರುವ ಆಯುಕ್ತರು, ಟೌನ್ ಪ್ಲಾನರ್ ಸೇರಿದಂತೆ ಎಲ್ಲರ ತಪ್ಪು ಇದೆ. ಇದನ್ನು ಸರಿಪಡಿಸಲು ನಮ್ಮ ಮಕ್ಕಳ ಭವಿಷ್ಯ ರೂಪಿಸಬೇಕು" ಎಂದು ಕರೆ ನೀಡಿದರು.

ಹೊಸ ಪರಿಕಲ್ಪನೆಗೆ ಬೆಂಗಳೂರನ್ನು ತೆಗೆದುಕೊಂಡು ಹೋಗಲು ಅನೇಕ ತೀರ್ಮಾನ ಮಾಡಿದರು. ಈಗ ಜನಸಂಖ್ಯೆ ಬೆಳೆದಿದೆ. ಹ್ಯಾರಿಸ್ ಹಾಗೂ ನಾನು ಸೇರಿ ಬೆಂಗಳೂರಿಗೆ ಏನಾದರೂ ಕೊಡುಗೆ ನೀಡಲು ಅನೇಕ ಐತಿಹಾಸಿಕ ಯೋಜನೆ ಕೈಗೊಂಡಿದ್ದೇವೆ" ಎಂದರು.

"ನಿನ್ನೆ ಮಲೇಷ್ಯಾ ಡಿಸಿಎಂ ಬಂದಿದ್ದರು. ನಮ್ಮನ್ನು ಬಂದು ಭೇಟಿ ಮಾಡುವ ಎಲ್ಲ ವಿದೇಶಿ ನಾಯಕರು ಇಲ್ಲಿನ ಪ್ರತಿಭೆಗಳನ್ನು ಶ್ಲಾಘಿಸುತ್ತಾರೆ. ನಮ್ಮ ಬೆಂಗಳೂರಿನಲ್ಲಿ ಅತ್ಯಂತ ಪ್ರಜ್ಞಾವಂತ ಹಾಗೂ ಕೌಶಲ್ಯಭರಿತ ಮಾನವ ಸಂಪನ್ಮೂಲವಿದೆ.

ಬೆಂಗಳೂರಿನಲ್ಲಿ ನ್ಯಾಷನಲ್ ಲಾ ಸ್ಕೂಲ್, ಬಿಇಎಲ್, ಬಿಹೆಚ್‌ಇಎಲ್, ಐಟಿಐ, ಬೆಮೆಲ್ ಸೇರಿದಂತೆ ಅನೇಕ ಉದ್ಯಮಗಳನ್ನು ನೆಹರು ಅವರು ಆರಂಭಿಸಿದರು. ಜಿಂದಾಲ್, ಮಹಿಂದ್ರಾ ಸಂಸ್ಥೆಯ ಉದ್ಯಮಿಗಳು ಇಲ್ಲಿ ವ್ಯಾಸಂಗ ಮಾಡಿ ಇಂದು ದೊಡ್ಡ ಸ್ಥಾನವನ್ನು ಅಲಂಕರಿಸಿದ್ದಾರೆ. ನಮ್ಮಲ್ಲಿರುವ ತಾಂತ್ರಿಕ ಶಿಕ್ಷಣ, ನಮ್ಮಲ್ಲಿರುವ ಉದ್ಯಮಗಳು ಬೇರೆ ಕಡೆ ಇಲ್ಲ. ಇಂದು ನಮ್ಮಲ್ಲಿ 260 ಇಂಜಿನಿಯರಿಂಗ್ ಕಾಲೇಜುಗಳಿವೆ.

"ಕ್ಯಾಲಿಫೋರ್ನಿಯಾ ವಿಶ್ವದ ಸಿಲಿಕಾನ್ ವ್ಯಾಲಿ. ಅಲ್ಲಿ 13 ಲಕ್ಷ ಇಂಜಿನಿಯರಿಂಗ್ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರಿಂಗ್ ವೃತ್ತಿಪರರು ಇದ್ದಾರೆ. 2 ಲಕ್ಷ ವಿದೇಶಿ ಪಾಸ್‌ಪೋರ್ಟ್‌ನವರು ಇಲ್ಲಿದ್ದಾರೆ. ಹೀಗಾಗಿ ವಿಶ್ವದ ಅಗ್ರ 500 ಕಂಪನಿಗಳು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿವೆ. ಬೆಂಗಳೂರಿನಲ್ಲಿ ಉತ್ತಮ ಶಾಲೆ, ರಸ್ತೆಗಳು, ಆರೋಗ್ಯ ವ್ಯವಸ್ಥೆ ಇರಬೇಕು ಎಂದು ಕೇಳುತ್ತಾರೆ.

ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಆಗಿದೆ. ಇದಕ್ಕೆ ಬೆಂಗಳೂರು ಸರಿಯಾಗಿ ಸಿದ್ಧವಾಗಿರಲಿಲ್ಲ. ಬೆಂಗಳೂರು ಯೋಜಿತ ನಗರವಲ್ಲ. ಹೀಗಾಗಿ ಬೆಂಗಳೂರನ್ನು ಹೇಗೆ ರೂಪಿಸಬೇಕು ಎಂದು ನಾವು ಆಲೋಚಿಸಬೇಕು" ಎಂದು ಕರೆ ನೀಡಿದರು.

"ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಾಗ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಬಂದು ವಿಶ್ವದ ಅನೇಕ ನಾಯಕರು ಮೊದಲು ಬೆಂಗಳೂರಿಗೆ ಬಂದು ಆ ನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದರು.

ಮೆಟ್ರೋ ಉದ್ಘಾಟನೆಗೆ ಬಂದ ಪ್ರಧಾನಿ ಮೋದಿ ಅವರು ಬೆಂಗಳೂರನ್ನು ಜಾಗತಿಕ ನಗರ ಎಂದು ಕರೆದರು. ಬೆಂಗಳೂರಿನಲ್ಲಿ ವಾಸಯೋಗ್ಯ ಮನೆ, ನೀರಿನ ಸಂಪರ್ಕ, ಸಂಚಾರಯುಕ್ತ ರಸ್ತೆ ನೀಡಬೇಕು. ಇದನ್ನೇ ಜನ ನಿಮ್ಮಿಂದ ಅಪೇಕ್ಷೆಪಡುತ್ತಿದ್ದಾರೆ. ಜನ ಟೀಕೆ ಮಾಡುತ್ತಾರೆ. ನನ್ನ ವಿರುದ್ಧ ವಿರೋಧ ಪಕ್ಷದವರು ಹಾಗೂ ಇತರರು ಟೀಕೆ ಮಾಡುತ್ತಿದ್ದು, ಮಾಡಲಿ. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ.

ಹೀಗಾಗಿ ನಾನು ಜಿಬಿಎ ರಚಿಸಿದ್ದು, ಐದು ಪಾಲಿಕೆ ಮಾಡಿದ್ದೇನೆ. ಬೆಂಗಳೂರಿನ ಸುತ್ತಮುತ್ತ ಪ್ರದೇಶ ಬೆಳೆಯುತ್ತಿದೆ. ಅವುಗಳ ಪಟ್ಟಿ ಮಾಡುತ್ತಿದ್ದೇನೆ. ಆದಷ್ಟು ಬೇಗ ಪಾಲಿಕೆ ಚುನಾವಣೆ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ" ಎಂದು ತಿಳಿಸಿದರು.

ಇನ್ನಷ್ಟು ಓದಿರಿ :
ವೈದ್ಯ ದಂಪತಿಯ ಮಾನವೀಯ ಕಾರ್ಯ : ಸಾವಿನ ಸುದ್ದಿ ಟೆರೆಸ್ ಮೇಲೆ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online