<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ದೇವಾಲಯದಲ್ಲಿ ಕೇಸರಿ ಧ್ವಜ ಹಾರಿಸಬೇಡಿ : ಕಾಂಗ್ರೆಸ್ ಸಚಿವ ಹೇಳಿಕೆ

ದೇವಾಲಯದಲ್ಲಿ ಕೇಸರಿ ಧ್ವಜ ಹಾರಿಸಬೇಡಿ : ಕಾಂಗ್ರೆಸ್ ಸಚಿವ ಹೇಳಿಕೆ
Summary: ದೇವಾಲಯಗಳಲ್ಲಿ ಕೇಸರಿ ಸೇರಿದಂತೆ ಯಾವುದೇ ರಾಜಕೀಯ ಧ್ವಜ ಹಾರಿಸಬಾರದು ಎಂದು ಹೇಳಿರುವ ಕಾಂಗ್ರೆಸ್ನ ಮಾಜಿ ಸಚಿವ ರಮಾನಾಥ ರೈ ಅವರ ಹೇಳಿಕೆ ರಾಜ್ಯಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಸರಿ ಧ್ವಜ ಹಾರಿಸಿರುವುದನ್ನು ಖಂಡಿಸಿದ ಅವರು, ದೇಗುಲಗಳು ಎಲ್ಲರಿಗೂ ಸೇರಿದ ಪವಿತ್ರ ಸ್ಥಳಗಳು, ಅಲ್ಲಿ ರಾಜಕೀಯಕ್ಕೆ ಅವಕಾಶ ನೀಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹೇಳಿಕೆಗೆ ಹಿಂದೂಪರ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಷಯ ರಾಜಕೀಯ-ಧಾರ್ಮಿಕ ಸಂಘರ್ಷದ ರೂಪ ಪಡೆದುಕೊಳ್ಳುತ್ತಿದೆ.
Belagavi News:

ಮಂಗಳೂರು ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ರಾಮನಾಥ ರೈ ನೀಡಿರುವ ಹೇಳಿಕೆ ಇದೀಗ ದಕ್ಷಿಣ ಕನ್ನಡ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ."ದೇವಾಲಯಗಳಲ್ಲಿ ಕೇಸರಿ ಬಾವುಟ ಸೇರಿ ಯಾವುದೇ ಧ್ವಜ ಹಾರಿಸಬಾರದು"ಎಂದು ಅವರು ಹೇಳಿದ ಬಳಿಕ, ಹಿಂದೂ ಪರ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.



ಈ ಹೇಳಿಕೆಯ ಬೆನ್ನಲೇ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಅಲೆ ಎದ್ದಿದ್ದು, ಹಲವಾರು "ನೀವು ದೈವದ ಗುತ್ತು ಮನೆಯವರಾಗಿ ಇಂತಹ ಮಾತು ಹೇಳುವುದು ಸರಿಯಲ್ಲ"ಎಂದು ಕಿಡಿಕಾರಿದ್ದಾರೆ. ದಕ್ಷಿಣ ಕನ್ನಡದಲ್ಲಿ ಈ ಹೇಳಿಕೆಯನ್ನು ಹಿಂದು ಭಾವನೆಗಳಿಗೆ ಧಕ್ಕೆ ತರುವುದಾಗಿ ಪರಿಗಣಿಸಲಾಗಿದ್ದು, ರಾಜಕೀಯ ವಾಗ್ವಾದವು ತೀವ್ರಗೊಂಡಿದೆ.



ಉಡುಪಿ ಮಠದ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಟಿ.ಕೆ . ಸ್ವರೂಪಾ ಕೆಸರಿ ಧ್ವಜ ಹಾರಿಸಿದ ವಿಚಾರ ರಾಜ್ಯಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಇದೇ ವಿಷಯವನ್ನು ಖಂಡಿಸುವ ಭರದಲ್ಲಿ ರಾಮನಾಥ ರೈ ದೇವಸ್ಥಾನಗಳಲ್ಲಿ ಕೇಸರಿ ಬಾವುಟ ಹಾಕಬಾರದು ಎಂದು ಹೇಳಿರುವುದು ಇದೀಗ ಅವರ ವಿರುದ್ಧವೇ ವಿವಾದವಾಗಿ ತಿರುಗಿದೆ.



ಉಡುಪಿ ಜಿಲ್ಲಾಧಿಕಾರಿ ಭಗವಾಧ್ವಜ ಹಾರಿಸಿದ್ದದ್ದು ತಪ್ಪು ಎಂದು ಮಂಗಳೂರು ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ರಮನಾಥ ರೈ ಖಂಡಿಸಿದ್ದಾರೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.



ಮಂಗಳೂರಿನ ಗಾಂಧಿ ಪ್ರತಿಮೆ ಬಳಿ ನಡೆದ ಉಪವಾಸ ಸತ್ಯಾಗ್ರಹದ ವೇಳೆ ಮಾತನಾಡಿದ ರಮಾನಾಥ ರೈ ,"ದೇವಾಲಯಗಳ ಕಾರ್ಯಕ್ರಮಗಳು ಎಲ್ಲರಿಗೂ ಸಂಬಂಧಿಸಿದವು. ಅಲ್ಲಿ ರಾಜಕೀಯ ಪ್ರೇರಿತ ಯಾವುದೇ ಪತಾಕೆಗೆ ಜಾಗ ಇರಬಾರದು. ಕಾಂಗ್ರೆಸ್, ಕೇಸರಿ ಅಥವಾ ಹಸಿರು–ಯಾವುದೇ ಧ್ವಜವು ದೇಗುಲಗಳಲ್ಲಿ ಹಾರಿಸಬಾರದು" ಎಂದು ಸ್ಪಷ್ಟವಾಗಿ ಹೇಳಿದ್ದಾರೆ.



ದೇಗುಲಗಳಲ್ಲಿ ನಡೆಯುವ ಉತ್ಸವಗಳು ಸಾರ್ವಜನಿಕ ಮತ್ತು ಧಾರ್ಮಿಕ ಸ್ವರೂಪದವು. ಇಂತಹ ಸಂದರ್ಭಗಳಲ್ಲಿ ಭಗವಾದ್ವಜ ಸೇರಿದಂತೆ ಯಾವುದೇ ರಾಜಕೀಯ ಗುರುತಿನ ಧ್ವಜ ಹಾರಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೇಗುಲಗಳು ತಟಸ್ಥವಾಗಿರಬೇಕು ಮತ್ತು ಎಲ್ಲ ಧರ್ಮ, ರಾಜಕೀಯ ನಿಲುವಿನ ಜನರು ಒಂದೇ ರೀತಿಯಲ್ಲಿ ಗೌರವಿಸುವ ಸ್ಥಳಗಳಾಗಬೇಕು ಎಂದು ಹೇಳಿದರು.



ರಾಮನಾಥ್ ರೈ ಹೇಳಿಕೆ ಆಕ್ರೋಶ:
ಮಾಜಿ ಸಚಿವ ರಾಮನಾಥ ರೈ ಅವರು ದೇವಾಲಯಗಳಲ್ಲಿ ಕೇಸರಿ ಧ್ವಜ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ಪರ ಸಂಘಟನೆಗಳು ಮತ್ತು ನಾಯಕರು ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.



ನೆಟ್ಟಿಗರು ಟ್ವಿಟ್ಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ " ಜವಾಬ್ದಾರಿಯ ಯುದ್ಧ ಸ್ಥಾನದಲ್ಲಿರುವ ನೀವು ಇಂತಹ ಹೇಳಿಕೆ ನೀಡಬಾರದು", "ನೀವು ದೈವರಾಧಕರು ಅಲ್ಲವೇ, ಒಂದು ಗುತ್ತಿನ ಮನೆಯವರಾಗಿ ಹೀಗೆ ಅವಮಾನ ಮಾಡುವುದು ಸರಿಯೇ"? ಎಂಬುದಾಗಿ ಪ್ರಶ್ನಿಸಿದ್ದಾರೆ.



ಕೆಲವರು "ಹಿಂದೂ ದೇವಾಲಯದಲ್ಲಿ ಕೇಸರಿ ಧ್ವಜ ಹಾರಿಸದೆ ಬೇರೆ ಯಾವ ಧ್ವಜ ಹಾರಿಸಬೇಕು?"ಎಂದು ಸವಾಲು ಎತ್ತಿದ್ದಾರೆ. ಇಲ್ಲಿಬ್ಬರು "ದೇವಾಲಯದ ವಿಚಾರದಲ್ಲಿ ರಾಜಕೀಯ ಮಾಡಬೇಡಿ"ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.



ಈ ಘಟನೆಯು ದಕ್ಷಿಣ ಕನ್ನಡದ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಹೊಸ ಚರ್ಚೆ ಹುಟ್ಟಿಸಿರುವುದು, ಭವಿಷ್ಯದಲ್ಲಿ ದೇವಾಲಯ–ರಾಜಕೀಯ ಸಂಬಂಧಿತ ಸಂಘರ್ಷಗಳು ಮತ್ತಷ್ಟು ತೀವ್ರಗೊಳ್ಳಬಹುದೆಂದು ಸೂಚಿಸುತ್ತದೆ.



ಕೃಷ್ಣ ಮಠದ ಪರ್ಯಾಯದಲ್ಲಿ ಕೇಸರಿ ಧ್ವಜ ಹಾರಿಸಿದ ಡಿಸಿ :
ಜನವರಿ 18ರಂದು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪಾ ಅವರು ಕೃಷ್ಣಮಠದ ಪರ್ಯಾಯ ಮೆರವಣಿಗೆ ಕಾರ್ಯಕ್ರಮದಲ್ಲಿ ಕೇಸರಿ ಧ್ವಜ ಹಾರಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ, ಟೀಕೆಗಳಿಗೆ ಪ್ರೇರಣೆ ನೀಡಿದೆ.



ಕಾಂಗ್ರೆಸ್ ನಾಯಕರು ಒಬ್ಬ ಸರ್ಕಾರಿ ಅಧಿಕಾರಿಯೊಬ್ಬನು ಏಕ ಧರ್ಮದ ಧ್ವಜವನ್ನು ಹಾರಿಸುವುದು ತಪ್ಪು ಎಂದು ಖಂಡಿಸಿ, ಸಂಬಂಧಿತ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ. ಆದರೆ ಭಾಜಪಾ ಸಂಘಟನೆ ಈ ವಿವಾದಕ್ಕೆ ಕಿಡಿಕಾರಿದ್ದು, ಕಾಂಗ್ರೆಸ್ ವಿರುದ್ಧ ಹಲ್ಲೆ ನಡೆಸಿದೆ.



ಸಮಾಜದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಉಂಟಾದ ವಾಗ್ವಾದದಲ್ಲಿ "ಭಗವಾ ಧ್ವಜದ ಮೇಲೆ ನಿಷೇಧವಿದೆಯೇ? ಅಥವಾ ಅದು ಪಾಕಿಸ್ತಾನದ ಧ್ವಜವೇ?"ಎಂಬ ಪ್ರಶ್ನೆಯು ತೋರಿಸಲಾಗಿತ್ತು. ಒಬ್ಬ ವಿಲಕ್ಷಣ ವಿಶ್ಲೇಷಕ ಸಿಟಿ ರವಿ ಹೇಳಿದ್ದಾರೆ, ಈ ಧ್ವಜವು ಕೋಟ್ಯಂತರ ಜನರಿಗೆ ಸ್ಪೂರ್ತಿಯ ಕಾರಣವಾಗುತ್ತದೆ.



ಜಿಲ್ಲಾಧಿಕಾರಿ ಟಿ.ಕೆ .ಸ್ವರೂಪಾ ಕೂಡ ವಿವಾದಕ್ಕೆ ಸ್ಪಷ್ಟನೆ ನೀಡಿದರು. ಅವರು ತಮ್ಮ ಅಧಿಕೃತ ಕರ್ತವ್ಯದ ಭಾಗವಾಗಿ ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು ಮತ್ತು ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂದು ತಿಳಿಸಿದ್ದಾರೆ.


ಇನ್ನಷ್ಟು ಓದಿರಿ:


SIR ವಿವಾದ : ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘಿಸಬೇಡಿ; ಡಿಸಿಗಳಿಗೆ ಸಿಎಂ ಮಮತಾ ಎಚ್ಚರಿಕೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online