ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡರಾದ ಶ್ರೀ ರಾಜು ಡವರಿ.. ಅಥಣಿಯ ಸರ್ವಾಂಗಿನ ಅಭಿವೃದ್ಧಿ ಆಗಬೇಕಾದಲ್ಲಿ ಮಾಜಿ ಶಾಸಕರಾದ ಶ್ರೀ ಶಹಜಾನ್ ಡೊಂಗರಗಾಂವ ಅವರ ಪಾತ್ರ ಬಹಳ ಮುಖ್ಯವಾದದ್ದು ಇವರು ತಮ್ಮ ಆಡಳಿತ ಅವಧಿಯಲ್ಲಿ ಅಥಣಿ ಭಾಗವನ್ನು ಮಡ್ಡಿ ಜಾಗ ಅಂತ ಹೇಳಿ ಕರೀತಾ ಇದ್ದರು ಇಂಥ ಒಂದು ಜಾಗದಲ್ಲಿ ಮನುಷ್ಯರಿಗೆ ನೀರು ಸಿಗುವುದು ತುಂಬಾ ಕಷ್ಟಕರವಾಗಿತ್ತು ಅಂತಹದರಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರು ದೊರೆಯುವುದು ತುಂಬಾ ಕಷ್ಟಕರವಾಗಿತ್ತು ತಮ್ಮ ಅಧಿಕಾರಾವಧಿಯಲ್ಲಿ ಕೃಷ್ಣ ನದಿಗೆ ಹಿಪ್ಪರಗಿ ಬ್ಯಾರೇಜ್ ಅನ್ನು ನಿರ್ಮಿಸಿವುದರ ಮುಖಾಂತರ ಅಥಣಿ ಭಾಗದ ಸಮಸ್ತ ಜನರಿಗೆ ಯಾವತ್ತೂ ನೀರು ಸಿಗಬೇಕೆಂದು ಆಲೋಚಿಸಿ ಹಿಪ್ಪರಗಿ ಬ್ಯಾರೇಜ್ ಅನ್ನು ನಿರ್ಮಿಸಿದರು ಅದಲ್ಲದೆ ಅವರ ಆಡಳಿತದಲ್ಲಿ ಕರಿಮಸೂತಿ ನೀರಾವರಿ ಬಹು ಮುಖ್ಯವಾದದ್ದು ಮತ್ತು ಅಥಣಿಯ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿ ಎಂದು ಸಹಕಾರಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದರು.
ಬಡ ಜನರಿಗೆ ಅನುಕೂಲವಾಗಲೆಂದು ಅಥಣಿಯಲ್ಲಿ ಸರಕಾರಿ ದವಾಖಾನೆಯನ್ನು ಉನ್ನತಿಕರಣ ಮಾಡಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಥಣಿಯ ಮಾಜಿ ಶಾಸಕರಾದ ಶ್ರೀ ಶಹಜಾನ್ ಡೊಂಗರಗಾಂವ ಇವರ 70ನೇ ಹುಟ್ಟುಹಬ್ಬವನ್ನು ಅವರ ಅದ್ದೂರಿಯಿಂದ ಅಭಿಮಾನಿಗಳು ಆಚರಿಸಿದರು.
ಅಗ್ನಿಶಾಮಕ ದಳ ಹೊಸ ಕೋರ್ಟ್ ನಿರ್ಮಾಣ ಹೀಗೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು ನಾನು ಜಯ ಹೈ ಸ್ಕೂಲ್ ನಲ್ಲಿ ಅಂದಿನ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಬಂದಾಗ ಅವರು ಒಂದು ಮಾತನ್ನು ಹೇಳಿದ್ದನ್ನು ನೆನಪಿಸುತ್ತೇನೆ ಅಂತ ಹೇಳಿದರು ಅದು ಏನೆಂದರೆ ಎಸ್ಎಂ ಕೃಷ್ಣ ಅವರು ಶಹಜಾನ್ ಡೊಂಗರಗಾಂವ ನನ್ನ ಹತ್ತಿರ ಯಾವುದೇ ಕಾರ್ಯಗಳನ್ನು ಮಂಜೂರು ಮಾಡಿಕೊಳ್ಳಲು ಬಂದರೆ ನಾನು ಅವನಿಗೆ ನಾನು ಇಲ್ಲಿ ಇಲ್ಲ ..ನಾನು ಬರಲಿಕ್ಕೆ ತಡವಾಗುತ್ತಿದೆ ಅಂತ ಹೇಳಿದರೂ ಸಹ ನಾನು ಬರುವವರೆಗೆ ಕಾಯುತ್ತಾ ಕುಳಿತು ಎಲ್ಲಾ ಕೆಲಸಗಳನ್ನು ಮಂಜೂರು ಮಾಡಿಕೊಳ್ಳುತ್ತಿದ್ದನು ಹೀಗೆ ಹೇಳಿದ್ದನ್ನು ನೆನಪಿಸಿದರು.. ರಾಜು ಡೌರಿ ಅವರು ಹೇಳುತ್ತಾ ಶಾಸಕರು ಮಂತ್ರಿಗಳು ಎಲ್ಲರೂ ಮುಖ್ಯಮಂತ್ರಿಯನ್ನು ಅಂಜುತ್ತಾರೆ ಆದರೆ ಶಹಜಾನ್ ಡೊಂಗರಗಾಂವ ಸಾಹೇಬರಿಗೆ ಮುಖ್ಯಮಂತ್ರಿ ಅಂಜುತ್ತಿದ್ದರು ಅಂತ ನೆನಪಿಸಿದರು.. ಏಕೆಂದರೆ ಇವರು ಅಷ್ಟು ಕಾರ್ಯಗಳನ್ನು ಅವರ ಬಳಿ ಒಯ್ಯುತ್ತಿದ್ದರು.
ಅಥಣಿಯ ಕ್ಷೇತ್ರ ನೆನಪಾದಾಗ ಸಹಜವಾಗಿ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿಗಳನ್ನ ನೆನಪಿಸುತ್ತಾರೆ.. ಹೀಗೆ ರಾಜಕೀಯ ಕ್ಷೇತ್ರದಲ್ಲಿ ಅಥಣಿಯ ಹೆಸರು ಬಂದಾಗ ನಿಜವಾದ ಹಸಿರು ಕ್ರಾಂತಿಯ ಹರಿಕಾರರಾಗಿರ್ತಕ್ಕಂತ ಶ್ರೀ ಶಹಜಾನ್ ಡೊಂಗರಗಾಂವ ನೆನಪಾಗುವುದು ಖಂಡಿತಾ ಅಂತ ಹೇಳಿದರು... ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶಹಜಾನ್ ಡೊಂಗರಗಾವ್ ಮಾತನಾಡುತ್ತಾ ನನಗೆ ಹುಟ್ಟುಹಬ್ಬವನ್ನು ಆಚರಿಸಿರುವುದು ಬೇಸರವಾಗುತ್ತಿದೆ ಆದರೂ ತಾವು ಅಭಿಮಾನಿಗಳು ಹಾಗೂ ಹಿತೈಷಿಗಳು ನನಗೆ ಅಭಿನಂದನೆಗಳನ್ನು ಸಲ್ಲಿಸಲು ಬಂದಿದ್ದೀರಿ ನಾನು ಕಟ್ಟಿರತಕ್ಕಂತಹ ಹಿಪ್ಪರಗಿ ಬ್ಯಾರಿಜದ ಒಂದು ಗೇಟ್ ಮುರಿದು ಸುಮಾರು ಕಿಸೆಕ್ಸ್ ನೀರು ಹರಿದು ಹೋಗುತ್ತಿದ್ದು ಇದನ್ನು ಬೇಗನೆ ತಡೆಯಲಿಲ್ಲ ಅಂದರೆ ಮುಂದಿನ ದಿನಮಾನಗಳಲ್ಲಿ ಜನಜಾನುವಾರುಗಳಿಗೆ ನೀರು ಸಿಗುವುದು ತುಂಬಾ ಕಷ್ಟಕರವಾಗಬಹುದು ಇದು ನನ್ನನ್ನು ಕಾಡುತ್ತಿದೆ ಅಂತ ಅವರಿಗೆ ಇರತಕ್ಕಂತಹ ಕಾಳಜಿಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ರಾಜು ಡೌರಿ ಮುತ್ತಣ್ಣ ಸಂತಿ ಶಬ್ಬಿರ್ ಗೌಡ ಪಾಟೀಲ್ ಲಿಂಗರೆಡ್ಡಿ ಬಾಬಾಲಾಲ್ ಸುತಗಂಡಿ ಇಮ್ಮಿಯಾಜ ಹಿಪ್ಪರಗಿ ಇನ್ನೂ ಅನೇಕರು ಮುಖಂಡರು ಉಪಸ್ಥಿತರಿದ್ದರು.
ಇನ್ನಷ್ಟು ಓದಿರಿ:
ಗೋಕಾಕ ಪಾಮಲದಿನ್ನಿ ಶಾಲಾ ವಿವಾದ : ಕರವೇ ಉಪ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ