<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಗವರ್ನರ್ vs ಸರ್ಕಾರ್ : ಭಾಷಣದ ಸಾಲುಗಳ ಬದಲಾವಣೆಗೆ ತ್ರೀವ್ರ ವಿರೋಧ

ಗವರ್ನರ್ vs ಸರ್ಕಾರ್ : ಭಾಷಣದ ಸಾಲುಗಳ ಬದಲಾವಣೆಗೆ ತ್ರೀವ್ರ ವಿರೋಧ
Summary: ಇಂದು ವಿಶೇಷ ಅಧಿವೇಶನಕ್ಕಾಗಿ ಮಂಡಿಸಬೇಕಾದ ಭಾಷಣದಲ್ಲಿ ಕೆಲ ಸಾಲುಗಳ ಬದಲಾವಣೆಗೆ ನಿರ್ಧಾರವನ್ನು ರಾಜ್ಯಪಾಲರು ಒಪ್ಪದಿದ್ದರೆ ಸರ್ಕಾರ ಕಾನೂನು ಹೋರಾಟ ಮಾಡುವುದಾಗಿ ಸ್ಪಷ್ಟಪಡಿಸಿದೆ. ಇದರಿಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ರಾಜ್ಯ ಸರ್ಕಾರದ ನಡುವೆ ಸಂಘರ್ಷ ಶುರುವಾದ ಹಾಗೇ ಕಾಣುತ್ತಿದೆ.
belagavi news :

ರಾಜ್ಯ ಸರ್ಕಾರ ಮತ್ತು ರಾಜ್ಯಪಾಲ ನಡುವೆ ಬಿರುಕು : ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡುವೆ ಸಂಘರ್ಷ ಶುರುವಾದಂತಿದೆ. ಇಂದು ನಡೆಯಲಿರುವ ವಿಶೇಷ ಅಧಿವೇಶನಕ್ಕೆ ಸಂಬಂಧಿಸಿದಂತೆ ಸರಕಾರ ಸಿದ್ಧಪಡಿಸಿದ ಭಾಷಣದಲ್ಲಿ ಕೆಲವು ಆಕ್ಷೇಪಾರ್ಹ ಅಂಶಗಳನ್ನು ಕೈ ಬಿಡುವಂತೆ ರಾಜಪಾಲರು ಸೂಚನೆ ನೀಡಿದ್ದು, ಆ ಸೂಚನೆಯನ್ನು ಸರಕಾರ ತಿರಸ್ಕರಿಸುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧೋರಣೆ ಹೊಂದಿರುವ 11 ಪ್ಯಾರಾಗಳನ್ನು ಬಿಡಬೇಕು ಎಂದು ರಾಜ್ಯಪಾಲರು ಸಲಹೆ ನೀಡಿದ್ದು, ಆದರೆ ಈ ಅಂಶಗಳನ್ನು ತೆಗೆದುಹಾಕಲು ಸರ್ಕಾರ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಅಸಮಾಧಾನ ಭಹಿರಂಗವಾಗಿದೆ. ವಿಶೇಷ ಅಧಿವೇಶನಕ್ಕೆ ರಾಜಪಾಲರು ಹಾಜರಾಗದೇ ಇದ್ದರೆ ಕಾನೂನು ಹೋರಾಟಕ್ಕೆ ಮುಂದಾಗುವ ಬಗ್ಗೆ ಸರ್ಕಾರ ಸಜ್ಜಾಗಿದೆ ಎಂದು ಮಾಹಿತಿ ಲಭ್ಯವಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಹೊಸ ತಿರುವು ಪಡೆಯುವ ಸಾಧ್ಯತೆಗಳು ಸೂಚಿಸುತ್ತದೆ. ಈ ವಿಚಾರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಮನವರಿಕೆ ಮಾಡಲು ಯತ್ನಿಸಿತು, ಆದರೆ ಆ ಸಭೆಯು ಫಲಕಾರಿಯಾಗಲಿಲ್ಲ ಎನ್ನಲಾಗಿದೆ, ನಂತರ ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದು ಎಂದು ಕಾನೂನು ಸಚಿವರು ಮಾಹಿತಿ ನೀಡಿದರು.




ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ : ರಾಜ್ಯಪಾಲರ ಇತ್ತೀಚಿನ ನಿರ್ಧಾರ ವಿರುದ್ಧ ರಾಜ್ಯ ಸರ್ಕಾರ ಕಾನೂನು ಹೋರಾಟಕ್ಕೆ ಮುಂದಾಗಿದೆ. ಗುರುವಾರ ಬೆಳಿಗ್ಗೆ 11:15ರ ವರೆಗೆ ರಾಜ್ಯಪಾಲರು ಅಧಿವೇಶನಕ್ಕೆ ಹಾಜರಾಗದಿದ್ದರೆ ತಕ್ಷಣವೇ ಸುಪ್ರೀಂ ಕೋರ್ಟ್ ಮೊರೆ ಹೋಗುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇದೇ ವೇಳೆ ಕಾನೂನು ಹೋರಾಟದ ಸಂಪೂರ್ಣ ರೂಪ ಎಸೆ ತಯಾರಿಸಲು ಪೊಮ್ಮಣ್ಣ ಅವರಿಗೆ ಡ್ರಾಫ್ಟ್ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ರಾಜಪಾಲರ ಕ್ರಮದ ವಿರುದ್ಧ ಯಾವ ಅಂಶಗಳನ್ನು ಆಧಾರವಾಗಿ ಮುಂದೆ ಇಡಬೇಕು ಎಂಬುದರ ಕುರಿತು ಉನ್ನತ ಮಟ್ಟದ ಚರ್ಚೆಗಳು ನಡೆಯುತ್ತಿವೆ. ವಿಶೇಷ ಅಧಿವೇಶನಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತೆಗೆದುಕೊಂಡಿರುವ ನಿರ್ಧಾರವು ಸಂವಿಧಾನಾತ್ಮಕ ಮಿತಿಗಳನ್ನು ಮೀರುವುದಾಗಿ ಸರ್ಕಾರ ಅಭಿಪ್ರಾಯಪಟ್ಟಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಹೋರಾಟಕ್ಕೆ ಸಜ್ಜಾಗಿದೆ ಎನ್ನಲಾಗಿದೆ. ಈ ವಿಷಯ ರಾಜ್ಯದ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಅಗತ್ಯವಾದ ಪೂರ್ವ ಸಿದ್ಧತೆಗಳನ್ನು ಅವರು ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯಪಾಲರು ಅಧಿವೇಶಕ್ಕೆ ಹಾಜರಾಗುವವರೆ? ಅಥವಾ ರಾಜ್ಯ ಸರ್ಕಾರ ನೇರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ? ಎಂಬುವುದು ಮುಂದಿನ ಕೆಲ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ. ಈ ಬೆಳವಣಿಗೆಗಳು ರಾಜ್ಯಪಾಲರ ಸಂಬಂಧ ಹಾಗೂ ಸಂವಿಧಾನಾತ್ಮಕ ಅಧಿಕಾರಗಳ ಬಗ್ಗೆ ಹೊಸ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.





ರಾಜ್ಯಪಾಲರು ಸೂಚಿಸಿದ 11 ಪ್ಯಾರಾಗಳ ಕುರಿತಾಗಿ ಸಿಎಂ ನಿವಾಸದಲ್ಲಿ ನಡೆದ ಮಹತ್ವದ ಚರ್ಚೆ ವೇಳೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜಪಾಲರು ಅಕ್ಷೇಪ ವ್ಯಕ್ತಪಡಿಸಿದ ಅಂಶಗಳಲ್ಲಿ ಕೆಲವೊಂದು ಸಾಲುಗಳನ್ನು ಮಾತ್ರ ಬದಲಾಯಿಸಲು ಸರ್ಕಾರ ಸಹಮತಿ ವ್ಯಕ್ತಪಡಿಸಿದೆ. ಆದರೆ ವಿಬಿ ರಾಮ್ ಜಿ ಯೋಜನೆಯ ವಿರುದ್ಧದ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ಮುಂದೆ ಸರ್ಕಾರ ಸ್ಪಷ್ಟಪಡಿಸಿದೆ. ಸಭೆ ಮುಗಿದ ಬಳಿಕ ಮಾತನಾಡಿದ ಕಾನೂನು ಸಚಿವ ಎಸ್.ಕೆ.ಪಾಟೀಲ್ ಕೆಲವು ವಿಷಯಗಳಲ್ಲಿ ಭಾಷೆಯ ತಿದ್ದುಪಡಿ ಮಾಡುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ, ಆದರೆ ಸರ್ಕಾರದ ಮೂಲ ಧೋರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು. ಅದಲ್ಲದೆ ಈ ಭಾಷಣವನ್ನೇ ರಾಜಪಾಲರು ಓದಬೇಕು ಎನ್ನುವುದು ಕ್ಯಾಬಿನೆಟ್ ಸ್ಪಷ್ಟ ನಿರ್ಧಾರ.ಜಂಟಿ ಅಧಿವೇಶನಕ್ಕೆ ರಾಜ್ಯಪಾಲರು ಖಚಿತವಾಗಿಯೂ ಬರುವ ವಿಶ್ವಾಸವಿದೆ. ಬೆಳಗ್ಗೆ ಅವರನ್ನು ಕರೆದೊಯ್ಯಲು ನಾನು ನಾನು ಲೋಕ ಭವನಕ್ಕೆ ಬರುತ್ತೇನೆ ಎಂದು ಪೊಣ್ಣನ ಹೇಳಿದರು. ಈ ವಿಚಾರವಾಗಿ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ರಾಜಪಾಲರನ್ನು ಭೇಟಿ ಮಾಡಿ ಕೈಗೊಂಡಿರುವ ನಿರ್ಧಾರಗಳ ಬಗ್ಗೆ ವಿವರಿಸಿದ್ದರು. ನಂತರ ಮಾಧ್ಯಮಗಳಿಂದ ಮಾತನಾಡಿ ಅವರು ಮನೆರೇಗಾ ವಿಷಯವನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ, ರಾಜ್ಯದ ಹಿತ ಕಾಪಾಡುವ ಅಂಶಗಳನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಈ ಕುರಿತು ಸಿಎಂ ಜೊತೆ ಸಂಪೂರ್ಣವಾಗಿ ಚರ್ಚಿಸಲಾಗಿದೆ ಎಂದು ತಿಳಿಸಿದರು.





ವಿರೋಧ ಪಕ್ಷಗ ನಾಯಕ ಆರ್ ಅಶೋಕ ಸರ್ಕಾರದ ವಿರುದ್ಧ ವಾಗ್ದಾಳಿ : ಅಭಿವೃದ್ಧಿ ಶೂನ್ಯ ಆಡಳಿತ, ಸಾಲು ಸಾಲು ಭ್ರಷ್ಟಾಚಾರ ಹಗರಣಗಳು ಹಾಗೂ ಆಡಳಿತಾತ್ಮಕ ವೈಫಲ್ಯಗಳನ್ನು ಮರೆಮಾಚಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣವನ್ನೇ ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತೀವ್ರವಾಗಿ ಆರೋಪಿಸಿದ್ದಾರೆ. ಕುರಿತು ಎಕ್ಸ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯ ಹಿತಾಶೆಯಿಂದ ಮಾಡುತ್ತಿರುವ ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ನೇರದಾಳಿ. ರಾಜ್ಯಪಾಲರ ಘನತೆಗೆ ಧಕ್ಕೆ ತರುವ ದುಸ್ಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಕಿಡಿ ಕಾರಿದ್ದಾರೆ. ರಾಜ್ಯಪಾಲರ ಭಾಷಣದ ವಿಚಾರವಾಗಿ ಈಗಾಗಲೇ ರಾಜ್ಯ ರಾಜಕೀಯ ಕುದಿಯುತ್ತಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ಸಂಬಂಧ ಸಂವಿಧಾನಾತ್ಮಕ ಮೌಲ್ಯಗಳನ್ನು ಮತ್ತು ಆಡಳಿತದ ಪಾರದರ್ಶಕತೆ ಕುರಿತು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಆರ್. ಅಶೋಕ್ ಅವರ ಪ್ರಕಾರ ರಾಜ್ಯಪಾಲರು ಯಾವುದೇ ಪಕ್ಷದ ಪ್ರತಿನಿಧಿಗಳಲ್ಲ ಅವರು ಸಂವಿಧಾನದ ಘನತೆಯನ್ನು ಹಾಗೂ ಭಾರತದ ಒಕ್ಕೂಟ ವ್ಯವಸ್ಥೆಯ ಸಮತೋಲನವನ್ನು ಕಾಪಾಡುವ ಉನ್ನತ ಸಂವಿಧಾನಾತ್ಮಕ ಸಂಸ್ಥೆ ಅಂತಹ ಸಂಸ್ಥೆಯ ಮೇಲೆ ರಾಜಕೀಯ ಒತ್ತಡ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ಚ್ಯುತಿ ತರುವ ಅಪಾಯಕಾರಿ ದಾರಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.


ಇನ್ನಷ್ಟು ಓದಿರಿ:


ಇಂದಿನಿಂದ ವಿಧಾನ ಮಂಡಲದ ಜಂಟಿ ಅಧಿವೇಶನ ಆರಂಭ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online