ಕಳ್ಳತನ, ದರೋಡೆಯನ್ನು ನಿಯಂತ್ರಿಸಲು ಬಿಹಾರದ ಆಭರಣ ವ್ಯಾಪಾರಿಗಳು ಮತ್ತು ಚಿನ್ನದ ವ್ಯಾಪಾರಿಗಳ ಒಕ್ಕೂಟ (ಎಐಜೆಜಿಎಫ್) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. "ಚಿನ್ನ ಮತ್ತು ಬೆಳ್ಳಿಯ ದರ ಗಗನಕ್ಕೇರಿದೆ. ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ, ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ತಿಳಿಸಿದರು.
"10 ಗ್ರಾಂ ಚಿನ್ನದ ಬೆಲೆ 1.40 ಲಕ್ಷ ರೂಪಾಯಿ ಮತ್ತು ಒಂದು ಕೇಜಿ ಬೆಳ್ಳಿಯು 2.50 ಲಕ್ಷ ರೂಪಾಯಿ ಇದೆ. ಗ್ರಾಹಕರಂತೆ ಗುಂಪುಗಳಲ್ಲಿ ಬರುವ ಜನರು ತಮ್ಮ ಮುಖ ಮುಚ್ಚಿಕೊಂಡು ಅಂಗಡಿಗಳಿಗೆ ಪ್ರವೇಶಿಸಿ ದರೋಡೆ ಮಾಡುತ್ತಿರುವ ಪ್ರಕರಣಗಳು ನಡೆದಿವೆ. ಇದರಿಂದ ಆರೋಪಿಗಳು ಯಾರು ಎಂಬುದು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಯಾವುದೇ ವಸ್ತ್ರ, ಹೆಲ್ಮೆಟ್ ಅಥವಾ ಮುಸುಕುಗಳನ್ನು ಧರಿಸಿ ಅಂಗಡಿ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ" ಎಂದು ಹೇಳಿದರು.
"ಹಿಜಾಬ್ ವಿವಾದ ಉಂಟಾಗುವ ಪ್ರಶ್ನೆಗೆ ಉತ್ತರಿಸಿದ ವರ್ಮಾ ಅವರು, ಮುಸ್ಲಿಮ್ ಮಹಿಳೆಯರು ಧರಿಸುವ ಹಿಜಾಬ್ ಅನ್ನು ನಾವು ವಿರೋಧಿಸುವುದಿಲ್ಲ. ಹಿಂದು ಮಹಿಳೆಯರು ಧರಿಸುವ ಗಾಮ್ಚಾಗೂ ನಿಷೇಧ ಇದೆ. ಯಾವುದೇ ನಿರ್ದಿಷ್ಟ ಸಮುದಾಯವನ್ನು ಮಾತ್ರ ನಾವು ನಿಷೇಧಿಸಿಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರಿಳೊಂದಿಗೆ ಚರ್ಚಿಸಿ, ಅವರ ಒಪ್ಪಿಗೆ ಪಡೆದು ತೀರ್ಮಾನಿಸಿದ್ದೇವೆ. ಇತರ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಈ ಕ್ರಮವಿದೆ" ಎಂದು ಅವರು ಹೇಳಿದರು.
ಡಿಸೆಂಬರ್ 15 ರಂದು ಪಾಟ್ನಾದಲ್ಲಿ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸುವಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಸ್ಲಿಮ್ ಮಹಿಳಾ ವೈದ್ಯೆಯೊಬ್ಬರ ಹಿಜಾಬ್ ಅನ್ನು ತೆಗೆದಿದ್ದಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು. ಇದರ ವೀಡಿಯೊ ವೈರಲ್ ಆಗಿತ್ತು. ರಾಷ್ಟ್ರೀಯವಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿ, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಕಳ್ಳತನ, ದರೋಡೆಯನ್ನು ನಿಯಂತ್ರಿಸಲು ಬಿಹಾರದ ಆಭರಣ ವ್ಯಾಪಾರಿಗಳು ಮತ್ತು ಚಿನ್ನದ ವ್ಯಾಪಾರಿಗಳ ಒಕ್ಕೂಟ (ಎಐಜೆಜಿಎಫ್) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಅದೇನೆಂದರೆ, ಹಿಜಾಬ್, ನಖಾಬ್, ಗಾಮ್ಚಾ, ಹೆಲ್ಮೆಟ್ ಅಥವಾ ಇತರ ವಸ್ತುಗಳಿಂದ ಮುಖ ಮುಚ್ಚಿಕೊಂಡ ಗ್ರಾಹಕರಿಗೆ ಆಭರಣದ ಅಂಗಡಿಗಳಿಗೆ ಪ್ರವೇಶ ಮತ್ತು ಮಾರಾಟ ನಿಷೇಧಿಸಿದೆ.
ಇನ್ನಷ್ಟು ಓದಿರಿ :
ಶಾಂಪೂ ಬದಲಿಸದ ಮೊದಲು ಈ ಸುಲಭ ಪರಿಹಾರ