ಕಳೆದ ಸೀಸನ್ ಅಲ್ಲಿ ಹನುಮಂತ ಹಾಗೂ ಧನರಾಜ್ ಅವರ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ, ಅದು ಅವರ ಆಟದ ಮೇಲೆ ಎಂದಿಗೂ ಪರಿಣಾಮ ಬೀರಿಲ್ಲ. ಧನರಾಜ್ ಅವರನ್ನು ನಾಮಿನೇಟ್ ಮಾಡುವ ಪರಿಸ್ಥಿತಿ ಬಂದಾಗ ಹನುಮಂತ ಅವರು ಹೆದರದೇ ನಾಮಿನೇಟ್ ಮಾಡಿದ್ದರು. ಆದರೆ, ಗಿಲ್ಲಿ ಅವರು ಕಾವ್ಯಾ ಜೊತೆಗಿನ ಆಪ್ತತೆ ಕಾರಣಕ್ಕೆ ಅವರಿಗೆ ಫೇವರಿಸಂ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಮಾತನಾಡುವಾಗ ಗಿಲ್ಲಿ ಈ ವಿಷಯಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘ಕಳೆದ ವಾರ ಫ್ಯಾಮಿಲಿ ವೀಕ್ ಆಯಿತು. ಆಗ ಕಾವ್ಯಾಗೆ ಹೊರಗಿನ ವಿಷಯಗಳು ತಿಳಿದವು. ಈ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರೆ ನಾನು ಅವರನ್ನು ಸೇವ್ ಮಾಡುತ್ತಿರಲಿಲ್ಲ’ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.
ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಆಗಿದೆ. ಧನುಷ್ ಹಾಗೂ ಕಾವ್ಯಾ ಹೆಸರು ಬಂದಾಗ, ಕಾವ್ಯಾ ಅವರನ್ನು ಸೇವ್ ಮಾಡಿ ಧನುಷ್ನ ನಾಮಿನೇಟ್ ಮಾಡಿದರು. ಇದು ಅವರಿಗೆ ಸರಿ ಎನಿಸಿಲ್ಲ. ಗಿಲ್ಲಿ ನಡೆದುಕೊಂಡ ರೀತಿಯು ಅಶ್ವಿನಿಗೂ ಕೋಪ ತರಿಸಿದೆ. ಗಿಲ್ಲಿ ಫೇವರಿಸಂ ಮಾಡುತ್ತಿದ್ದಾರೆ ಎಂದು ಅವರಿಗೆ ಬಲವಾಗಿ ಅನಿಸಿದೆ. ವೀಕೆಂಡ್ನಲ್ಲಿ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ.