ಕಣಿವೆಯ ಇತರ ಹವಾಮಾನ ಕೇಂದ್ರಗಳಲ್ಲಿ ವಾರ್ಷಿಕ ಅಮರನಾಥ ಯಾತ್ರೆಯ ಮೂಲ ಶಿಬಿರವಾದ ಪಹಲ್ಗಾಮ್‌ನಲ್ಲಿ ಕನಿಷ್ಠ -6.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಾಶ್ಮೀರದ ಪ್ರಮುಖ ಹೆಬ್ಬಾಗಿಲು ಪಟ್ಟಣವಾದ ಖಾಜಿಗುಂಡ್‌ನಲ್ಲಿ -1.2 ಡಿಗ್ರಿ ತಾಪಮಾನವಿದ್ದರೆ, ಉತ್ತರ ಕಾಶ್ಮೀರದ ಕುಪ್ವಾರಾದಲ್ಲಿ 0.8 ಡಿಗ್ರಿ ತಾಪಮಾನ ದಾಖಲಾಗಿದೆ. ದಕ್ಷಿಣ ಕಾಶ್ಮೀರದ ಕೊಕರ್ನಾಗ್‌ನಲ್ಲಿ ಕನಿಷ್ಠ ಮೈನಸ್ 0.5 ಡಿಗ್ರಿ ತಾಪಮಾನವಿದೆ. ಕಳೆದ ಕೆಲವು ದಿನಗಳಿಂದ ಗುಲ್ಮಾರ್ಗ್ನಲ್ಲಿ ತಾಪಮಾನ ಕಡಿಮೆಯಾಗಿದ್ದು, -7°C ಗೆ ತಲುಪಿದೆ.
ಹಿಮದ ಅಡಿಯಲ್ಲಿ ಪ್ರವಾಸಿಗರಿಗೆ ಸ್ಕೀಯಿಂಗ್, ಹಿಮದ ಆಟಗಳು ಮತ್ತು ಫೋಟೋಶೂಟ್ ಮಾಡಲು ಉತ್ತಮ ಅವಕಾಶ ಸಿಗುತ್ತಿದೆ.
ಹಿಮಪಾತ ಮತ್ತು ತಣ್ಣನೆಯ ವಾತಾವರಣ ಪ್ರವಾಸಿಗರ ಅನುಭವವನ್ನು ಸ್ಮರಣೀಯಗೊಳಿಸಿದೆ. ಪ್ರವಾಸಿಗರು Social Media ನಲ್ಲಿ ಹಿಮಪಾತದ ದೃಶ್ಯಗಳನ್ನು ಹಂಚಿಕೊಂಡು, “Winter Wonderland” ಎಂದು ವರ್ಣಿಸಿದ್ದಾರೆ.
ಹಿಮದ ನಡುವೆ ಸ್ಕೀಯಿಂಗ್, Snowboarding, ಮತ್ತು ಫೋಟೋಶೂಟ ಮಾಡುವ ಅವಕಾಶಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಜಮ್ಮು ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಶೀತ ವಾತಾವರಣವಿತ್ತು. ಭದೇರ್ವಾ ಎಂಬಲ್ಲಿ ಕನಿಷ್ಠ ತಾಪಮಾನ -2.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಬಟೋಟ್ 2.8 ಡಿಗ್ರಿ ಸೆಲ್ಸಿಯಸ್‌ನಲ್ಲಿತ್ತು. ಜಮ್ಮು ನಗರದಲ್ಲಿ ಕನಿಷ್ಠ 6 ಡಿಗ್ರಿ ಸೆಲ್ಸಿಯಸ್ ಮತ್ತು ಮಾತಾ ವೈಷ್ಣೋ ದೇವಿ ದೇವಾಲಯದ ಮೂಲ ಪಟ್ಟಣ ಕತ್ರಾದಲ್ಲಿ 6.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುಲ್ಮಾರ್ಗ್‌ನಲ್ಲಿ ಸುಮಾರು 5 ಮಿಲಿಮೀಟರ್ ಮಳೆ ಅಥವಾ ಹಿಮಪಾತವಾಗಿದೆ. ಆದರೆ ಶ್ರೀನಗರ, ಬನಿಹಾಲ್, ಖಾಜಿಗುಂಡ್, ಕುಪ್ವಾರಾ ಮತ್ತು ಇತರ ಹಲವು ಕೇಂದ್ರಗಳಿಂದ ಸಣ್ಣ ಪ್ರಮಾಣ ಮಳೆಯಾದ ವರದಿಯಾಗಿದೆ.
ಇನ್ನಷ್ಟು ಓದಿರಿ : ನಿಂಬೆ ಅಥವಾ ಕಿತ್ತಳೆ ಬೀಜ ನುಂಗಿದರೆ : ವೈದ್ಯರ ಸಲಹೆ