ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವಂತೆ ಜನರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ರೈತರು ಮತ್ತು ಬಡವರ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೋದಿ ಸರ್ಕಾರ ರೈತರು ಮತ್ತು ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಮತ್ತು MGNREGAದ ಹೆಸರು ಬದಲಾವಣೆ ಹಾಗೂ ಮಾರ್ಪಾಡುಗಳ ವಿರುದ್ಧ ಪ್ರತಿಭಟಿಸಲು ಜನರು ಸಿದ್ಧರಾಗಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು VB G RAM G ಕಾಯ್ದೆಯನ್ನು ವಿರೋಧಿಸಿ ಜನವರಿ 10 ರಿಂದ ಫೆಬ್ರವರಿ 25 ರವರೆಗೆ ರಾಷ್ಟ್ರವ್ಯಾಪಿ 'MGNREGA ಬಚಾವೊ ಸಂಗ್ರಾಮ್ ಘೋಷಿಸಿದೆ. ರಾಜ್ಯಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರುವ ಹೊಸ ನಿಯಮಗಳು, ಇತರ ಬದಲಾವಣೆಗಳ ಜೊತೆಗೆ, ಕೇಂದ್ರ ಸರ್ಕಾರವು ಬಡವರಿಗೆ ಸಹಾಯ ಮಾಡುವ ಕಾನೂನನ್ನು ತೆಗೆದುಹಾಕಲು ಮತ್ತು ದೇಶದಲ್ಲಿ ಇದೇ ರೀತಿಯ ಯೋಜನೆಗಳನ್ನು ಕೊನೆಗೊಳಿಸಲು ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಎಐಸಿಸಿ ಅಧ್ಯಕ್ಷರು ಕಳವಳ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಸೋಮವಾರ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ಖರ್ಗೆ, ಸೋಮನಾಥ ದೇವಾಲಯದ ಮೇಲೆ ಪ್ರಧಾನಿ ಮೋದಿ ಇತ್ತೀಚೆಗೆ ಗಮನಹರಿಸುತ್ತಿದ್ದಾರೆ. ಇದು ಮುಂಬರುವ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಚುನಾವಣೆಗಳಲ್ಲಿ ಮತಗಳನ್ನು ಗಳಿಸುವ ಲೆಕ್ಕಾಚಾರದ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.ಬಿಜೆಪಿಯನ್ನು ಜನವಿರೋಧಿ ಎಂದು ಕರೆದ ಕಾಂಗ್ರೆಸ್ ಅಧ್ಯಕ್ಷರು, ಬಡವರಿಗೆ ಸಹಾಯ ಮಾಡುವ ಬದಲು ಮೋದಿ ಕಾರ್ಪೊರೇಟ್‌ಗಳಿಗೆ ಸಹಾಯ ಮಾಡುವತ್ತ ಸಾಗುತ್ತಿದ್ದಾರೆ. MNREGA ಗೆ ಹಣವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ. ಈ ಹೋರಾಟ ಕೊನೆಯವರೆಗೂ ಮುಂದುವರಿಯುತ್ತದೆ. ನಾವು ಇದನ್ನು ಬಿಡುವುದಿಲ್ಲ.
ಹೆಚ್ಚುವರಿಯಾಗಿ ಯೋಜನೆಯ ದುರುಪಯೋಗ ಅಥವಾ ಯೋಜನೆ ಪರಿಣಾಮಕಾರಿಯಾಗದಿರುವ ಬಗ್ಗೆ ಸಂದೇಹವಿದ್ದರೆ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯು ಗ್ರಾಮೀಣ ಉದ್ಯೋಗ ಯೋಜನೆಯು ದೇಶಕ್ಕೂ ಆಸ್ತಿಗಳನ್ನು ಹೇಗೆ ಸೃಷ್ಟಿಸಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳುವ ಮೂಲಕ ಯೋಜನೆಯ ಸಂಪೂರ್ಣ ಲೆಕ್ಕಪರಿಶೋಧನೆಗೆ ಖರ್ಗೆ ಕರೆ ನೀಡಿದ್ದಾರೆ.
ಸ್ಥಳೀಯ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವ ಗ್ರಾಮ ಪಂಚಾಯಿತಿಗಳ ಹಕ್ಕನ್ನು ಮೋದಿ ಕಸಿದುಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಒಂದು ದಿನ ತಮ್ಮ ಕ್ರಮಗಳಿಗೆ ವಿಷಾದಿಸುತ್ತಾರೆ. ಜನರು ಒಗ್ಗೂಡಿ ಮೋದಿಗೆ ಪಾಠ ಕಲಿಸದಿದ್ದರೆ, ಅವರು ದೇಶದ ಕಾನೂನುಗಳು ಮತ್ತು ಸಂವಿಧಾನವನ್ನು ನಾಶಪಡಿಸುತ್ತಾರೆ. ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಮುಂಬರುವ ಚುನಾವಣೆಗಳಲ್ಲಿ ಮತಗಳನ್ನು ಗೆಲ್ಲಲು ಮೋದಿ ಈಗ ಸೋಮನಾಥ ದೇವಾಲಯದ ನೆನಪಾಗಿದೆ ಎಂದು ಇದೇ ವೇಳೆ ಖರ್ಗೆ ಲೇವಡಿ ಮಾಡಿದರು.
ಕಾನೂನಿನ ಸೆಕ್ಷನ್ 22ರ ಪ್ರಕಾರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ನಿಧಿ ಹಂಚಿಕೆ ಮಾದರಿಯು 60:40 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ. ಈಶಾನ್ಯ ರಾಜ್ಯಗಳು, ಹಿಮಾಲಯನ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಉತ್ತರಾಖಂಡ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರಗಳಿಗೆ ಇದು 90:10ರ ಅನುಪಾತದಲ್ಲಿ ಇರಲಿದೆ.
ಇನ್ನಷ್ಟು ಓದಿರಿ:
ಜೈಲಿನಲ್ಲಿದ್ದ ಮಗನ ಭೇಟಿಗೆ ಬಂದ ತಾಯಿಯಿಂದ ಮೊಬೈಲ್ ವಶಕ್ಕೆ