<?= $pageTitle ?>
Logo
ಮುಖಪುಟ ಓದುವುದು ಕೇಳು
Politics

"ಗೃಹಲಕ್ಷ್ಮಿ ಹಣದ ಆರೋಪದ ಮೇಲೆ ಬಿಜೆಪಿ ವಿರುದ್ಧ ಸಚಿವ ಲಾಡ್ ವಾಗ್ದಾಳಿ"

"ಗೃಹಲಕ್ಷ್ಮಿ  ಹಣದ ಆರೋಪದ ಮೇಲೆ ಬಿಜೆಪಿ ವಿರುದ್ಧ ಸಚಿವ ಲಾಡ್ ವಾಗ್ದಾಳಿ"
Summary: ಗೃಹಲಕ್ಷ್ಮಿ ಹಣದ ಆರೋಪದ ವಿಚಾರದಲ್ಲಿ ಮುಖ್ಯಮಂತ್ರಿ ಅಥವಾ ಸಚಿವರ ವಾಗ್ದಾಳಿಯಂತೆ ರಾಜಕೀಯ ಬಿಸಿಲಿನಂತೆ ಸರ್ಕಾರ ಮತ್ತು ಬಿಜೆಪಿ ನಡುವೆ ಟकरಾವಣೆಗಳು ನಡೆಯುತ್ತಿವೆ. ಬಿಜೆಪಿ ವಿರುದ್ಧ ಸಚಿವ ಲಾಡ್ ಭರ್ಜರಿ ವಾಗ್ದಾಳಿಯನ್ನಿಡಿದ್ದಾರೆ.
BELAGAVI NEWS :

ಇತ್ತೀಚಿಗೆ ಬಳ್ಳಾರಿಯ ಸಂಡೂರು ತಾಲೂಕಿನ ವಿಠಲಾಪುರದಲ್ಲಿ ಮಾತನಾಡಿದ್ದ ಸಂತೋಷ್‌ ಲಾಡ್, "ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಉಪಹಾರಕ್ಕೆಂದು ಅವರವರ ಮನೆಗೆ ಹೋಗಿ ಬಂದಿದ್ದಾರೆ. ಪರಸ್ಪರರು ಮುಕ್ತವಾಗಿ ಮಾತನಾಡಿ ಚರ್ಚಿಸಿ ಸ್ಪಷ್ಟನೆ ಕೊಟ್ಟಿದ್ದಾರೆ. ಯಾರಿಗೇ ಆಗಲಿ ಅಧಿಕಾರ ಶಾಶ್ವತ ಅಲ್ಲ. ಈ ಫಿಲಾಸಫಿ ಎಲ್ಲರಿಗೂ ಗೊತ್ತಿದೆ. ನಾವು ಗೌತಮ ಬುದ್ಧನ ತತ್ವವನ್ನು ಪಾಲಿಸುತ್ತೇವೆ. ರಾಜಕೀಯ, ಅಧಿಕಾರ ಸೇರಿದಂತೆ ಯಾವುದೂ ಶಾಶ್ವತವಲ್ಲ" ಎಂದು ತಿಳಿಸಿದ್ದರು.

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲೆಸೆದಿರುವ ವಿಚಾರವಾಗಿ ಮಾತನಾಡಿ, "ಯಾರು ಕಲ್ಲೆಸೆದಿದ್ದಾರೆ ಎಂದು ಸರ್ಕಾರ ಪತ್ತೆ ಹಚ್ಚುತ್ತದೆ. ಗಲಾಟೆ ಆಗಿದ್ದು ನಿಜ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ" ಎಂದರು.

"ಜನಾರ್ದನ ರೆಡ್ಡಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಸಂಚು ಯಾರು ಮಾಡಿದ್ದಾರೆ ಅನ್ನೋದು ತನಿಖೆ ಬಳಿಕ ಗೊತ್ತಾಗಲಿದೆ" ಎಂದ ಅವರು, ಬಳ್ಳಾರಿ ರಿಪಬ್ಲಿಕ್ ವಿಚಾರವಾಗಿ ಮಾತನಾಡಿ, "ರಿಪಬ್ಲಿಕ್‌ಗೆ ರಿಪೋರ್ಟ್ ಕೊಟ್ಟವರು ಯಾರು, ರಿಪಬ್ಲಿಕ್ ಅಂತ ಕೊಟ್ಟಿದ್ದು ಸಂತೋಷ್ ಹೆಗ್ಡೆ ಸಾಹೇಬರು. ಅವರು ಅದರ ಬಗ್ಗೆ ಬರೆದಿದ್ದಾರೆ, ಅದನ್ನು ಓದಲು ಹೇಳಿ. ಆದರೆ ಘಟನೆ ಆಗಿದ್ದರ ಬಗ್ಗೆ ನಾನು ಒಪ್ಪಿಕೊಳ್ಳಲ್ಲ, ಸರ್ಕಾರವೂ ಒಪ್ಪಿಕೊಳ್ಳಲ್ಲ. ಗಲಾಟೆ ವಿಚಾರದಲ್ಲಿ ಯಾರ ತಪ್ಪಿದೆ ಎಂದು ತನಿಖೆ ಬಳಿಕ ಗೊತ್ತಾಗಲಿದೆ. ಯಾರು ತಪ್ಪಿತಸ್ಥರಿದ್ದಾರೆ ಎಂದು ಸತ್ಯಶೋಧನಾ ಸಮಿತಿ ತನಿಖೆ ಮಾಡಲಿದೆ. ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸುತ್ತದೆ. ಯಾರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತಾರೆ" ಎಂದು ಹೇಳಿದರು.

ಪ್ರಚೋದನಕಾರಿ ಭಾಷಣ ವಿಚಾರವಾಗಿ ಮಾತನಾಡಿ, "ಕಾಯ್ದೆಯನ್ನು ಈಗಾಗಲೇ ನಾವು ಜಾರಿಗೆ ತಂದಿದ್ದೇವೆ, ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ಆಗಲಿದೆ" ಎಂದರು. "ಎರಡು ತಿಂಗಳ ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಇಷ್ಟು ಮಾತನಾಡುತ್ತಾರೆ, 15 ಲಕ್ಷ ರೂಪಾಯಿ ಕೊಡುತ್ತೇವೆ ಎಂದು ಎದೆ ಬಡಿದುಕೊಂಡು ಇಡೀ ದೇಶ ತಿರುಗಾಡಿದರಲ್ಲ, ಇವರಿಗೆ ಈ ಬಗ್ಗೆ ಕೇಳಲು ಅರ್ಹತೆ ಇದೆಯಾ?" ಎಂದು ಸಚಿವ ಸಂತೋಷ್​ ಲಾಡ್​ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಇನ್ನಷ್ಟು ಓದಿರಿ :
ಅದಿಲಾಬಾದ್ ಹತ್ತಿರ ತೆಲಂಗಾಣದ ಮಿಸ್ಟಿ ಹಿಲ್ಸ್
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online