<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಮುಂಬೈ ಹೊಸ ವರ್ಷ ಭದ್ರತೆ: 14 ಸಾವಿರಕ್ಕೂ ಹೆಚ್ಚು ಪೊಲೀಸರು

ಮುಂಬೈ ಹೊಸ ವರ್ಷ ಭದ್ರತೆ: 14 ಸಾವಿರಕ್ಕೂ ಹೆಚ್ಚು ಪೊಲೀಸರು
Summary: ಹೊಸ ವರ್ಷವನ್ನು ಸ್ವಾಗತಿಸಲು ಮುಂಬೈ ನಗರಿ ಸಜ್ಜಾಗಿದೆ. ಮೆಟ್ರೋ ರೈಲು ನಿರಂತರವಾಗಿ 40 ಗಂಟೆಗಳ ಕಾಲ ಸಂಚರಿಸಲಿದೆ.
ಮುಂಬೈ(ಮಹಾರಾಷ್ಟ್ರ): ಕ್ಯಾಲೆಂಡರ್ ವರ್ಷದ ಕೊನೆಯ ದಿನವಾದ ಡಿಸೆಂಬರ್ 31ರಂದು (ಇಂದು ರಾತ್ರಿ) ಸಾವಿರಾರು ಜನ ಹೊಸ ವರ್ಷಾಚರಣೆಗಳಿಗಾಗಿ ಮುಂಬೈ ಮಹಾನಗರಿಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಸುರಕ್ಷತೆಗಾಗಿ ಪೊಲೀಸರು ಈಗಾಗಲೇ ಬಂದೋಬಸ್ತ್ ಒದಗಿಸಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಜನರು ತಡರಾತ್ರಿಯವರೆಗೆ ಸಮಯ ಕಳೆಯಬಹುದು. ತಮ್ಮ ಕುಟುಂಬಗಳ ಜೊತೆಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ಲಾನ್ ಹಾಕಿಕೊಂಡಿರಬಹುದು. ಇದನ್ನು ಗಮನದಲ್ಲಿಟ್ಟುಕೊಂಡು, ಮುಂಬೈ ಪೊಲೀಸರು ಬೃಹತ್ ಭದ್ರತಾ ಪಡೆಯನ್ನು ನಿಯೋಜಿಸಿದ್ದಾರೆ.
ಹೊಸ ವರ್ಷ 2026ನ್ನು ಅದ್ಧೂರಿಯಾಗಿ ಸ್ವಾಗತಿಸಲು ಮಹಾರಾಷ್ಟ್ರ ರಾಜಧಾನಿ ಮುಂಬೈ ನಗರಿ ಸಜ್ಜಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ನಗರದಾದ್ಯಂತ 14,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ, ರೈಲ್ವೆ ಮತ್ತು ಬಸ್ ಸೇವೆಯನ್ನು ತಡರಾತ್ರಿಯವರೆಗೆ ವಿಸ್ತರಿಸಲಾಗಿದೆ.
ಕುಡಿದು ವಾಹನ ಚಲಾಯಿಸುವುದನ್ನು ತಡೆಗಟ್ಟಲು ಸಂಚಾರ ಪೊಲೀಸರು ವಿಶೇಷ ಗಮನ ಹರಿಸಲಿದ್ದಾರೆ ಎಂದು ಮುಂಬೈ ಪೊಲೀಸ್ ಉಪ ಆಯುಕ್ತ ಅಕ್ಬರ್ ಪಠಾಣ್ ಮಾಹಿತಿ ನೀಡಿದರು.
ಸ್ಥಳೀಯ ರೈಲು ಮತ್ತು ಮೆಟ್ರೋ ಕೂಡ ತಮ್ಮ ಸೇವೆಗಳನ್ನು ತಡರಾತ್ರಿಯವರೆಗೆ ವಿಸ್ತರಿಸಲು ನಿರ್ಧರಿಸಿವೆ. ನಗರದ ವಿವಿಧ ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದ್ದು, ಪ್ರತಿ ವಾಹನಗಳನ್ನೂ ಪರಿಶೀಲಿಸುತ್ತಿದ್ದಾರೆ. ಚುನಾವಣಾ ಸಮಯವಾಗಿರುವುದರಿಂದ ನೀತಿ ಸಂಹಿತೆಯನ್ನೂ ಸಹ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಇದರ ಜೊತೆಗೆ, ಪ್ರಮುಖ ಸ್ಥಳಗಳಲ್ಲಿ SRPF, QRT, ಗಲಭೆ ನಿಯಂತ್ರಣ ತಂಡಗಳು ಮತ್ತು ಗೃಹರಕ್ಷಕ ದಳಗಳನ್ನೂ ನಿಯೋಜಿಸಲಾಗಿದೆ. ಯಾವುದೇ ರೀತಿಯ ಸಹಾಯಕ್ಕಾಗಿ 100 ಮತ್ತು 112 ಸಹಾಯವಾಣಿಗಳು ಮುಂಬೈ ನಾಗರಿಕರಿಗೆ ಯಾವಾಗಲೂ ಲಭ್ಯವಿದೆ. ಆದ್ದರಿಂದ, ಮುಂಬೈ ಪೊಲೀಸರು ಎಲ್ಲ ನಿಯಮಗಳನ್ನು ಪಾಲಿಸುತ್ತಾ ಹೊಸ ವರ್ಷವನ್ನು ಶಾಂತಿಯುತವಾಗಿ ಮತ್ತು ಉತ್ಸಾಹದಿಂದ ಸ್ವಾಗತಿಸುವಂತೆ ಮುಂಬೈ ನಿವಾಸಿಗಳಿಗೆ ಮನವಿ ಮಾಡಿದ್ದಾರೆ. ಮುಂಬೈನ ವಿವಿಧ ಹೋಟೆಲ್ಗಳು, ಬೀಚ್ಗಳು, ಮಾಲ್ಗಳು ಮತ್ತು ಮೈದಾನಗಳಲ್ಲಿ ಹೊಸ ವರ್ಷವನ್ನು ಉತ್ಸಾಹದಿಂದ ಆಚರಿಸಲು ಹೆಚ್ಚಿನ ಸಂಖ್ಯೆಯ ಜನರು ಸೇರಬಹುದು. ಆದ್ದರಿಂದ, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ತಡೆಗಟ್ಟಲು ಬಿಗಿ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ 10 ಹೆಚ್ಚುವರಿ ಪೊಲೀಸ್ ಆಯುಕ್ತರು, 38 ಉಪ ಆಯುಕ್ತರು, 161 ಸಹಾಯಕ ಪೊಲೀಸ್ ಆಯುಕ್ತರು, 2790 ಪೊಲೀಸ್ ಅಧಿಕಾರಿಗಳು ಮತ್ತು 14,200 ಪೊಲೀಸ್ ಸಿಬ್ಬಂದಿಯ ನಿಯೋಜನೆ ಸೇರಿದೆ.

ಮೆಟ್ರೋ 3 ರಾತ್ರಿಯಿಡೀ ಸಂಚಾರ: ಹೊಸ ವರ್ಷದ ಆರಂಭವನ್ನು ಹೆಚ್ಚು ವಿಶೇಷ ಮತ್ತು ಅನುಕೂಲಕರವಾಗಿಸಲು, ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋದ 'ಆಕ್ವಾ ಲೈನ್' (ಮೆಟ್ರೋ-3) ಅನ್ನು ರಾತ್ರಿಯಿಡೀ ಓಡಿಸಲು MMRCL ನಿರ್ಧರಿಸಿದೆ. ಈ ವಿಶೇಷ ಸೇವೆ ಡಿ.31ರಂದು ರಾತ್ರಿ 10:30ರಿಂದ ಪ್ರಾರಂಭವಾಗಲಿದ್ದು, ಜ. 1ರಂದು ಬೆಳಿಗ್ಗೆ 5:55ರವರೆಗೆ ಅಡೆತಡೆಯಿಲ್ಲದೆ ಮುಂದುವರಿಯಲಿದೆ. ಅದರ ನಂತರ, ನಿಯಮಿತ ಮೆಟ್ರೋ ಸೇವೆ ಎಂದಿನಂತೆ ಪುನರಾರಂಭಗೊಳ್ಳುತ್ತದೆ. ಡಿ.31ರ ಬೆಳಿಗ್ಗೆ ಪ್ರಾರಂಭವಾಗಿರುವ ಸೇವೆ ಜ.1ರ ರಾತ್ರಿಯವರೆಗೆ ನಿರಂತರವಾಗಿ ಲಭ್ಯವಿರುತ್ತದೆ. ಅಕ್ವಾ ಲೈನ್ ಪ್ರಸ್ತುತ ಮುಂಬೈನಲ್ಲಿ ಅತ್ಯಂತ ಪ್ರಮುಖವಾದ ಮೆಟ್ರೋ ಮಾರ್ಗವಾಗಿದ್ದು, ನಗರದ ಹಲವು ಪ್ರಮುಖ ಭಾಗಗಳನ್ನು ಸಂಪರ್ಕಿಸುತ್ತದೆ.
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online