<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಬದರಿನಾಥ-ಕೇದಾರಿನಾಥ ದೇವಾಲಯದಲ್ಲಿ ಹೊಸ ನಿಯಮ

ಬದರಿನಾಥ-ಕೇದಾರಿನಾಥ ದೇವಾಲಯದಲ್ಲಿ ಹೊಸ ನಿಯಮ
Summary: ಉತ್ತರಾಖಂಡದ ಪವಿತ್ರ ಚಾರ ಧಾಮ ಕ್ಷೇತ್ರಗಳಾದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಹಿಂದೂಗಳಲ್ಲದವರಿಗೆ ಪ್ರವೇಶ ನಿಷೇಧ ಮಾಡುವ ಮಹತ್ವ ತೀರ್ಮಾನ ಕೈಗೊಳ್ಳಲಾಗಿದೆ. ಧಾರ್ಮಿಕ ಸಂಪ್ರದಾಯಗಳು, ದೇವಾಲಯದ ಪವಿತ್ರ ಹಾಗೂ ಆಚರಣೆಗಳ ಸಂರಕ್ಷಣೆಯ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
Belagavi News:
ಉತ್ತರಖಂಡದಲ್ಲಿರುವಂತಹ ಚಾರ್ ಧಾಮ ದೇವಾಲಯಗಳ ಪ್ರವೇಶ ನಿಯಮಗಳಲ್ಲಿ ಮಹತ್ವದ ಬದಲಾವಣೆ ಆಗುವ ಸಾಧ್ಯತೆ ಇದೆ. ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿಯು ಹಿಂದೂಯೇತರರು ಚಾರ್ ಧಾಮ ದೇವಾಲಯಗಳಿಗೆ ಪ್ರವೇಶಿಸುವುದನ್ನು ನಿಷೇಧಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿದೆ.

ಇದಕ್ಕೆ ಜೊತೆಗೆ, ಶ್ರೀ ಗಂಗೋತ್ರಿ ದೇವಾಲಯ ಸಮಿತಿಯು ಈಗಾಗಲೇ ನಿರ್ಧಾರ ಕೈಗೊಂಡಿದ್ದು, ಮುಂದಿನಿಂದ ಹಿಂದೂಯೇತರರಿಗೆ ಗಂಗೋತ್ರಿ ಧಾಮಕ್ಕೆ ಪ್ರವೇಶ ನೀಡಲೂ ಆಗುವುದಿಲ್ಲ ಎಂದು ಘೋಷಿಸಿದೆ. ಈ ತೀರ್ಮಾನವನ್ನು ಭಾನುವಾರ ನಡೆದ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ದೇವಾಲಯಗಳ ಪಾವಿತ್ರ್ಯ , ಧಾರ್ಮಿಕ ಸಂಪ್ರದಾಯಗಳ ರಕ್ಷಣೆ ಹಾಗೂ ಶತಮಾನಗಳಿಂದ ನಡೆದುಕೊಂಡು ಬಂದ ಆಚರಣೆಗಳನ್ನು ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮಿತಿಯ ಮೂಲಗಳು ತಿಳಿಸಿವೆ. ಚಾರ್ ಧಾಮ ಯಾತ್ರೆ ಆರಂಭಕ್ಕೂ ಮುನ್ನ ಈ ನಿಯಮಗಳನ್ನೂ ಜಾರಿಗೆ ತರುವ ಉದ್ದೇಶವಿದ್ದು, ಭಕ್ತರಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರದ ಅನುಮೋದನೆ ದೊರೆತರೆ, ಬದರಿನಾಥ, ಕೇದಾರನಾಥ , ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳ ಪ್ರವೇಶ ನಿಯಮಗಳಲ್ಲಿ ಜಾರಿಗೆ ತರುವ ಉದ್ದೇಶವಿದ್ದು, ಭಕ್ತರಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರದ ಅನುಮೋದನೆ ದೊರೆತರೆ, ಬದರಿನಾಥ, ಕೇದಾರನಾಥ , ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳ ಪ್ರವೇಶ ನಿಯಮಗಳಲ್ಲಿ ಅಧಿಕೃತ ಬದಲಾವಣೆ ಆಗಲಿದೆ. ಯಾತ್ರಾತ್ರಿಗಳಿಗೆ ಶೀಘ್ರದಲ್ಲೇ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸುವ ನಿರೀಕ್ಷೆ ಇದೆ.

ಉತ್ತರಖಂಡದ ಹಿಮಾಲಯ ಪರ್ವತದಲ್ಲಿ ನೆಲೆಗೊಂಡಿರುವ ಶತಮಾನಗಳಷ್ಟು ಹಳೆಯದಾದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಶೀಘ್ರದಲ್ಲೇ ಹಿಂದೂಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಹಿಂದುಗಳನ್ನು ಹೊರತುಪಡಿಸಿ ಬೆರೆ ಧರ್ಮದವರಿಗೆ ಈ ದೇವಾಲಯಗಳಿಗೆ ಪ್ರವೇಶ ನಿಷೇಧಿಸಲು ತೀರ್ಮಾನಿಸಲಾಗಿದೆ. ಉತ್ತರಖಂಡದ ಹಿಮಾಲಯ ಪರ್ವತಗಳಲ್ಲಿ ನೆಲಗೊಂಡಿರುವ ಶತಮಾನಗಳಷ್ಟು ಹಳೆಯ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಶೀಘ್ರದಲ್ಲೇ ಹಿಂದೂಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುವ ನಿರ್ಧಾರ ಸಾಧ್ಯತೆ ಇದೆ. ಹಿಂದುಗಳನ್ನು ಹೊರತುಪಡಿಸಿ ಬೇರೆ ಧರ್ಮದವರಿಗೆ ಈ ದೇವಾಲಯಗಳಿಗೆ ಪ್ರವೇಶ ನಿಷೇಧಿಸಲು ತೀರ್ಮಾನಿಸಲಾಗಿದೆ.

ಚಾರ್ ಧಾಮ ಯಾತ್ರೆಯ ಭಾಗವಾಗಿರುವ ಈ ಎರಡು ದೇವಾಲಯಗಳಿಗೆ ಹಿಂದೂಯೇತರರನ್ನು ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ದೇವಾಲಯಗಳನ್ನು ನಿರ್ಮಿಸುವ ಬದರಿನಾಥ - ಕೇದಾರನಾಥ ದೇವಾಲಯದ ಸಮಿತಿ ಘೋಷಿಸಿದೆ.

BKTC ನಿಯಂತ್ರಣದಲ್ಲಿರುವ ಎಲ್ಲಾ ದೇವಾಲಯಗಳಿಗೆ ಈ ನಿಷೇಧ ಅನ್ವಯವಾಗಲಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದೇವಾಲಯ ಸಮಿತಿ ಮಂಡಳಿ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಅಂಗೀಕರಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ತೀರ್ಮಾನವೂ ದೇವಾಲಯಗಳ ಪಾವಿತ್ರ್ಯ ಮತ್ತು ಶತಮಾನಗಳಿಂದ ನೆಲೆಸಿರುವ ಧಾರ್ಮಿಕ ಆಚರಣೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ. ಯಾತ್ರಾರ್ಥಿಗಳು ಮತ್ತು ಭಕ್ತರು ಈ ನಿಷೇಧದ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ.

ಪ್ರಮುಖ ಅಂಶಗಳು :
1. ಬದರಿನಾಥ-ಕೇದಾರನಾಥ ದೇವಾಲಯಗಳಿಗೆ ಹಿಂದುಗಳಿಗೆ ಮಾತ್ರ ಪ್ರವೇಶ
2. ಹಿಂದೂ ಏತರರಿಗೆ ಪ್ರವೇಶ ನಿಷೇಧ
3. BKTC ನಿಯಂತ್ರಣದಲ್ಲಿರುವ ಎಲ್ಲಾ ದೇವಾಲಯಗಳಿಗೆ ಅನ್ವಯ
4. ಚಾರ್ ಧಾಮ ಯಾತ್ರೆಯ ಭಾಗವಾದ ಪ್ರಮುಖ ತೀರ್ಮಾನ
5. ಮುಂದಿನ ದೇವಾಲಯ ಸಮಿತಿ ಮಂಡಳಿ ಸಭೆಯಲ್ಲಿ ಅಧಿಕೃತ ಅಂಗೀಕಾರ

ಉತ್ತರಖಂಡದ ಗಂಗೋತ್ರಿ ಧಾಮಕ್ಕೆ ಹಿಂದೂ ಎತರರಿಗೆ ಪ್ರವೇಶ ನಿಷೇಧ ಕೇವಲ ಧಾಮಕ್ಕೆ ಮಾತ್ರ ಸೀಮಿತವಿಲ್ಲ. ಇದು ಮಾ ಗಂಗೆಯ ಚಳಿಗಾಲದ ವಾಸಸ್ಥಾನ ಎಂದು ಪ್ರದೇಶಕ್ಕೂ ಅನ್ವಯಿಸುತ್ತದೆ. ಶ್ರೀ ಗಂಗೋತ್ರಿ ದೇವಾಲಯ ಸಮಿತಿಯ ಅಧ್ಯಕ್ಷ ಸುರೇಶ್ ಸೆಮ್ವಾಲ್ ತಿಳಿಸಿದ್ದಾರೆ, ಹಿಂದೂ ಏತರರು ಧಾಮಕ್ಕೆ ಪ್ರವೇಶ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಸಮಿತಿ ನಿರ್ಧರಿಸಿದೆ. ಚಳಿಗಾಲದ ತಿಂಗಳುಗಳಲ್ಲಿ ಮುಕ್ಬಾದಲ್ಲಿಯೂ ಅದೇ ನಿಯಮ ಜಾರಿಯಲ್ಲಿರುತ್ತದೆ ಎಂದು ಅವರು ದೃಢಪಡಿಸಿದ್ದಾರೆ.

ಪ್ರಸ್ತುತ ಗಂಗೋತ್ರಿ ಧಾಮದ ದ್ವಾರಗಳು ಭಕ್ತರಿಗೆ ಮುಚ್ಚಲ್ಪಟ್ಟಿವೆ, ಏಕೆಂದರೆ ಚಳಿಗಾಲದಲ್ಲಿ ಭಾರಿ ಹಿಮಪಾತ ಮತ್ತು ತೀವ್ರ ಶೀತ ಕಂಡುಬರುತ್ತದೆ. ಎಲ್ಲಾ ನಾಲ್ಕು ಚಾರ್ ಧಾಮಗಳ ದ್ವಾರಗಳನ್ನು ವಾರ್ಷಿಕವಾಗಿ ಅಕ್ಟೋಬರ್ ಮತ್ತು ನವೆಂಬರ್ ನಡುವೆ ಮುಚ್ಚಲಾಗುತ್ತದೆ. ಮತ್ತು ಅವು ಮತ್ತೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಕರೆಯಲಾಗುತ್ತವೆ.

ಚಳಿಗಾಲದ ಸಮಯದಲ್ಲಿ ಧರ್ಮಾಚರಣೆ :
ಭಕ್ತರು ಚಳಿಗಾಲದ ಆರು ತಿಂಗಳುಗಳಲ್ಲಿ ಗಂಗೋತ್ರಿ ಧಾಮಕ್ಕೆ ಪ್ರವೇಶಿಸದೆ, ಮುಕ್ಬಾ ಗ್ರಾಮದಲ್ಲಿರುವ ಮಾ ಗಂಗೆಯ ಚಳಿಗಾಲದ ವಾಸಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದು ಧಾರ್ಮಿಕ ಆಚರಣೆಗಳನ್ನು ಮುಂದುವರೆಸಲು ಒಂದು ಪರ್ಯಾಯ ವ್ಯವಸ್ಥೆಯಾಗಿದ್ದು, ಭಕ್ತರಲ್ಲಿ ಧಾರ್ಮಿಕ ಸಂಬಂಧವನ್ನು ಕಾಪಾಡುತ್ತದೆ.


ಇನ್ನಷ್ಟು ಓದಿರಿ:


ಮಂಗಳವಾರದ ಪಂಚಾಂಗ: ಶುಭ ಸುದ್ದಿಯೊಂದಿಗೆ ದಿನವನ್ನು ಪ್ರೇರಣಾದಾಯಕವಾಗಿಸಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online