<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಟಿಎಂಸಿ ವಿರುದ್ಧ ಗುಡುಗಿದ ಪ್ರಧಾನಿ ಮೋದಿ ಸಾರ್ವಜನಿಕ ರ ರ‍್ಯಾಲಿ

ಟಿಎಂಸಿ ವಿರುದ್ಧ ಗುಡುಗಿದ ಪ್ರಧಾನಿ ಮೋದಿ ಸಾರ್ವಜನಿಕ ರ ರ‍್ಯಾಲಿ
Summary: ಭಾನುವಾರದಂದು ನಡೆದ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಟಿಎಂಸಿ ನುಸುಳುಕೋರರರಿಗೆ ಸಹಾಯಮಾಡುತ್ತಿದೆ ದೇಶದ ಭದ್ರತೆಯೊಂದಿಗೆ ಆಟವಾಡುತ್ತಿದೆ ಎಂದು ಮೋದಿಯವರು ಕಿಡಿಕಾರಿದರು.
belagavi news:

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ತೃಣಮೂಲ ಕಾಂಗ್ರೆಸ್ ಮತ ಬ್ಯಾಂಕ್ (ಟಿಎಂಸಿ) ಸರ್ಕಾರವನ್ನು ರಾಜಕೀಯಕ್ಕಾಗಿ ನುಸಿಲಿಕೋರರಿಗೆ ಸಹಾಯ ಮಾಡುವ ಮೂಲಕ ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ. ಭಾನುವಾರ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದರು ಪ್ರಧಾನಿ ಮೋದಿ ಟಿಎಂಸಿ ಸರಕಾರವನ್ನು ನುಸುಳುಕೋರರನ್ನು ತಮ್ಮ ಮತ ಬ್ಯಾಂಕ್ ಎಂಬ ಪರಿಗಣಿಸುತ್ತಿರುವ ಕಾರಣ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಭದ್ರತೆ ಮತ್ತು ಅಭಿವೃದ್ಧಿಯ ಮೇಲೆ ತೀವ್ರ ವಿರೋಧ ಇದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ಭಾನುವಾರ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಅವರು ಮಾತನಾಡಿದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ತಮ್ಮ "ಮಹಾ ಜಂಗಲ್ ರಾಜ್" ಪದ್ದತಿಯನ್ನು ಕೊನೆಗೊಳಿಸಿ ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕೆ ದಾರಿ ಮಾಡಿಕೊಡಲು ತಾವು ಬದ್ಧರಾಗಿರುವುದಾಗಿ ಹೇಳಿದರು.


ಪಶ್ಚಿಮ ಬಂಗಾಳದಲ್ಲಿ ಗಲಭೆಕೋರರು ಮತ್ತು ಟಿಎಂಸಿ “ಸಿಂಡಿಕೇಟ್ ರಾಜ್” ತೀವ್ರ ಟೀಕೆ : ಭಾರತೀಯ ರಾಜಕೀಯದಲ್ಲಿ ಪಶ್ಚಿಮ ಬಂಗಾಳದ ಸ್ಥಿತಿಯನ್ನು ಪ್ರಸ್ತಾಪಿಸಿ ಬಿಜೆಪಿ ಸರ್ಕಾರವನ್ನು ಗೆಲ್ಲಬೇಕು ಮತ್ತು ಟಿಎಂಸಿಎ ಸಿಂಡಿಕೇಟ್ ರಾಜ್ ಮುಕ್ತವಾಗಿ ನಡೆಯುತ್ತಿದೆ ಎಂದು ತೀವ್ರ ಟೀಕೆ ಮಾಡಿದ್ದಾರೆ. ಅವರ ಪ್ರಕಾರ ಕಾನೂನು ಸುವ್ಯವಸ್ಥೆ ಸುಧಾರಿಸಿದಾಗ ಮಾತ್ರ ಬಂಗಾಳದಲ್ಲಿ ಕೈಗಾರಿಕೆಗಳು ಮತ್ತು ಹೂಡಿಕೆಗಳು ಸುರಕ್ಷಿತವಾಗಿ ಬರುತ್ತವೆ ಮತ್ತು ರಾಜ್ಯದ ಅಭಿವೃದ್ಧಿಗೆ ದಾರಿ ತರುತ್ತವೆ. ಬಿಜೆಪಿ ಮುಖಂಡರು ಜನರಿಗೆ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ತಡೆಯಲು ಭದ್ರತೆಯನ್ನು ಸುಧಾರಿಸಲು ನಿಮ್ಮ ಮತ ಚಲಾಯಿಸಬೇಕೆಂದು ಕರೆ ನೀಡಿದ್ದಾರೆ.


ತೃಣಮೂಲ ಕಾಂಗ್ರೆಸ್ ವಿರುದ್ಧ ಬಿಜೆಪಿ ಹೋರಾಟಕ್ಕೆ ಕರೆ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹವಾಮಾನವು ಇದೀಗ ತೀವ್ರವಾಗಿದೆ. ತೃಣಮೂಲ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವಂತೆ ಆರೋಪಿಸಲಾಗಿದೆ. ಬೃಹತ್ ಮಟ್ಟದ ವಲಸಿಗರ ಸಮಸ್ಯೆಯನ್ನು ನಿಯಂತ್ರಿಸಲು ಕೇಂದ್ರ ಬಿಜೆಪಿ ಸರ್ಕಾರವು ಕಾನೂನಿನ ಅನುಸಾರ ಕ್ರಮ ಕೈಗೊಳ್ಳುತ್ತಿದೆ ಅಧಿಕಾರದ ವೈಫಲ್ಯ ಮತ್ತು ಅಕ್ರಮ ವಲಸಿಗರನ್ನು ರಾಜ್ಯದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದೆ ಮತ್ತು ರಾಜ್ಯಮಟ್ಟದಲ್ಲಿ ಸಮನ್ವಹಿತ ಅಭಿಯಾನ ಮೂಲಕ ಅಭಿವೃದ್ಧಿ ಉದ್ಯೋಗ ಸೃಷ್ಟಿ ಮತ್ತು ಮೂಲಭೂತ ಸೌಕರ್ಯಗಳಿಗೆ ವೇಗವನ್ನು ನೀಡುತ್ತದೆ. ಬಿಜೆಪಿ ಪಾಲಿಸಿ ಮತ್ತು ಯೋಜನೆಗಳ ಮೂಲಕ ಬಂಗಾಳವು ತ್ವರಿತ ಬೆಳವಣಿಗೆ ಸುಧಾರಿಸಲು ಸಜ್ಜಾಗುತ್ತಿದೆ ಎಂದು ಅವರು ಭರವಸೆ ನೀಡಿದ್ದಾರೆ. ಬಿಜೆಪಿಗೆ ನಾವು ನೀಡುವ ಮತವು ಬಂಗಾಳದಿಂದ ಹೊರಹಾಕಲು ಸಹಾಯಮಾಡುತ್ತದೆ ಎಂದು ಜನರನ್ನು ಗಮನ ಸೆಳೆಯುತ್ತಿದ್ದಾರೆ. ಅವರು ತೃಣಮೂಲ ಕಾಂಗ್ರೆಸ್ ಆಡಳಿತ "ಮಹಾ ಜಂಗಲ್" ನಂತಹ ವ್ಯವಸ್ಥೆಯನ್ನು ಕೊನೆಗೊಳಿಸುವ ಮೂಲಕ ಪಶ್ಚಿಮ ಬಂಗಾಳಕ್ಕೆ ಡಬಲ್ ಇಂಜಿನ್ ಸರ್ಕಾರವನ್ನು ತರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿಗಾಗಿ ಡಬಲ್ ಎಂಜಿನ್ ಸರ್ಕಾರ ಅಗತ್ಯ :
ಪಶ್ಚಿಮ ಬಂಗಾಳದಲ್ಲಿ ನಕಲಿ ದಾಖಲೆಗಳನ್ನು ಸೂಚಿಸಿ ಅಕ್ರಮ ವಲಸಿಗರನ್ನು ಗುರುತಿಸಿ ವಾಪಸ್ ಕಳುಹಿಸುವುದು ಅತಿ ಅವಶ್ಯಕವಾಗಿದೆ. ಕಳೆದ ಹಲವಾರು ವರ್ಷಗಳಿಂದ ಕೇಂದ್ರ ಸರ್ಕಾರವು ಗಡಿ ಬೇಲಿಗಾಗಿ ಭೂಮಿಯನ್ನು ಕೋರಿ ತೃಣಮೂಲ ಕಾಂಗ್ರೆಸ್ ಸರ್ಕಾರಕ್ಕೆ ಪತ್ರ ಬರೆದಿದ್ದರೂ ರಾಜ್ಯ ಸರ್ಕಾರ ಯಾವ ರೀತಿಯ ಕ್ರಮವನ್ನು ಕೈ ತೆಗೆದುಕೊಳ್ಳುತ್ತಿಲ್ಲ ಎಂದು ಕೇಂದ್ರ ಸರ್ಕಾರ ತೀವ್ರವಾಗಿ ಕಿಡಿಕಾರಿದ್ದಾರೆ. ಅಕ್ರಮ ವಲಸಿಗರ ಸಮಸ್ಯೆ, ರಾಜ್ಯದ ಸುರಕ್ಷತೆ ಮತ್ತು ವಾಸ್ತವಿಕ ಅಭಿವೃದ್ಧಿಗೆ ದೊಡ್ಡ ಅಡ್ಡಿ ಆಗುತ್ತಿದೆ ನಕಲಿ ದಾಖಲೆಗಳನ್ನು ಬಳಸುವ ಮೂಲಕ ಇತರ ರಾಜ್ಯಗಳಿಗೆ ಅಕ್ರಮವಾಗಿ ಬಂಗಾಳಕ್ಕೆ ಬರುತ್ತಿರುವ ವಲಸಿಗರು ತಡೆಗಟ್ಟಲು ಕಾನೂನಾತ್ಮಕ ಕ್ರಮ ಅಗತ್ಯವಾಗಿದೆ ಎಂದು ಕೇಂದ್ರ ಬಿಜೆಪಿ ಹೇಳುತ್ತಿದೆ.


ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪಶ್ಚಿಮ ಬಂಗಾಳದಲ್ಲಿ 830 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ : ಭಾನುವಾರ ನಡೆದ ಪ್ರಧಾನಿ ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಕೇಂದ್ರ ರಾಜ್ಯ ಸಚಿವ ಶಾಂತನು ಠಾಕೂರ್ ಸಂಸದ ಸೌಮಿತ್ರ ಖಾನ್ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಉಪಸ್ಥಿತರಿದ್ದರು. ಈ ವೇದಿಕೆಯಲ್ಲಿ ಕಾರ್ಯಕ್ರಮವು ಪಶ್ಚಿಮ ಬಂಗಾಳದಲ್ಲಿ ವಿವಿಧ ಪ್ರಮುಖ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಆಯೋಜಿಸಲಾಗಿತ್ತು. ಪ್ರಧಾನಿ ಮೋದಿ 830 ಕೋಟಿ ಮೌಲ್ಯದ ಹಲವು ಯೋಜನೆಗಳ ಉದ್ಘಾಟನೆ ನಡೆಸಿದರು. ಈ ಯೋಜನೆಗಳು ರೈಲು ಸಂಪರ್ಕ, ಬಂದರು ಅಭಿವೃದ್ಧಿ, ಜಲಮಾರ್ಗ ಸಾರಿಗೆ ಸೇರಿದಂತೆ ಪ್ರಮುಖ ಮೂಲಭೂತ ಜಾಲಗಳ ಅಭಿವೃದ್ಧಿಗೆ ಮೀಸಲಾಗಿದೆ ಎಂದು ಸರ್ಕಾರ ಇವುಗಳನ್ನು ಅಭಿವೃದ್ಧಿ ಪರವಾಗಿ ಪೂರ್ಣಗೊಳಿಸುವ ಮೂಲಕ ಪಶ್ಚಿಮ ಬಂಗಾಳದ ಆರ್ಥಿಕ ಮತ್ತು ಮೂಲಭೂತ ಜಾಲ ಅಭಿವೃದ್ಧಿಗೆ ಉತ್ತೇಜನ ನೀಡಲು ಬದ್ಧವಾಗಿದೆ ಎಂದು ಪ್ರಧಾನಿ ಮೋದಿಯವರು ಭಾಷಣದಲ್ಲಿ ಹೇಳಿದರು.


ಇನ್ನಷ್ಟು ಓದಿರಿ:


ಶಾಲಾ ಮಕ್ಕಳಿಗೆ ಬದಲಾಗುವ ಸೌಲಭ್ಯ: ಶೂ ಬದಲು ಚಪ್ಪಲಿ ನೀಡುವ ಪ್ಲಾನ್?

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online