<?= $pageTitle ?>
Logo
ಮುಖಪುಟ ಓದುವುದು ಕೇಳು
Business

ಭಾರತದ ಎಐ ಭವಿಷ್ಯ ರೂಪಿಸಲು ಪ್ರಧಾನ ಮೋದಿ - ಎಐ ಕಂಪನಿಗಳ ಸಿಇಒಗಳ ಸಭೆ

ಭಾರತದ ಎಐ ಭವಿಷ್ಯ ರೂಪಿಸಲು ಪ್ರಧಾನ ಮೋದಿ - ಎಐ ಕಂಪನಿಗಳ ಸಿಇಒಗಳ ಸಭೆ
Summary: ಕೃತಕ ಬುದ್ಧಿಮತ್ತೆ ಎಐ ಕ್ಷೇತ್ರದ ಬೆಳವಣಿಗೆ ಮತ್ತು ಭಾರತದ ಭವಿಷ್ಯ ಕುರಿತು ಚರ್ಚಿಸಲು ಭಾರತೀಯ ಕಂಪನಿಗಳ ಸಿಇಒ ಗಳ ಹಾಗೂ ಎಐ ಪರಿಣಿತ ರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು.
belagavi news:
ಎಐ ತಂತ್ರಜ್ಞಾನ ನಮೋದ್ಯಯ, ಸ್ಟಾರ್ಟ್ ಅಪ್ ಗಳು ಮತ್ತು ಡಿಜಿಟಲ್ ಭಾರತದ ಮುಂದಿನ ಹೆಜ್ಜೆಗಳ ಬಗ್ಗೆ ವಿವರವಾದ ಸಂವಾದ ನಡೆಯಿತು.

PM Modi interaction with CEOs and experts in AI field
ಎಚ್ ಸಿಎಲ್ ಟೆಕ್ ವಿಪ್ರೋ ಸೇರಿದಂತೆ ಎಐಕೇತ್ರದಲ್ಲಿ ತೊಡಗಿರುವ ಪ್ರಮುಖ ಭಾರತೀಯ ಟೇಕ್ ಕಂಪನಿಗಳ ಸಿಇಒಗಳು ಮತ್ತು ಪರಿಣಿತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು. ಮುಂದಿನ ತಿಂಗಳು ಅಂದರೆ 2026ರ ಫೆಬ್ರವರಿಯಲ್ಲಿ ನಡೆಲಿರುವ ಎಐ ಇಂಪ್ಯಾಕ್ಟ್ ಸಮಾವೇಶಕ್ಕೆ ಪೂರ್ವಭಾವಿಯಾಗಿ ಈ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಭೆಯಲ್ಲಿ ಕೃತಕ ಬುದ್ಧಿಮತ್ತೆ ಜ್ಞಾನದಲ್ಲಿ ಭಾರತದ ಭವಿಷ್ಯ , ನಮೋದ್ಯಮ, ಸ್ಮಾರ್ಟ್ಆಪ್ ಪರಿಸರ ಮತ್ತು ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಕುರಿತು ವಿವರವಾದ ಚರ್ಚೆ ನಡೆಯಿತು. ಭಾರತದ ಸ್ವಾವಲಂಬನೆ ಸಾಧಿಸಲು ಸರ್ಕಾರದ ಪ್ರಯತ್ನಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಟೇ ಕಂಪನಿಗಳ ಸಿಇಓಗಳು ಭರವಸೆ ನೀಡಿದರು.
ಪ್ರಧಾನಿ ಮೋದಿ ಅವರು ಭಾರತವನ್ನು ಜಾಗತೀಕರಣ ರೂಪಿಸುವ ದೃಷ್ಟಿಕೋನವನ್ನು ಹಂಚಿಕೊಂಡು ಉದ್ಯಮ ಸರ್ಕಾರ ಪರಿಣಿತರ ಸಹಕಾರದ ಮಹತ್ವವನ್ನು ಒತ್ತಿ ಹೇಳಿದರು.

ನವದೆಹಲಿ ಜನವರಿ 29ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಎಐ ಕ್ಷೇತ್ರದ ಪರಿಣಿತರು ಹಾಗೂ ಪ್ರಮುಖ ಕಂಪನಿಗಳ ಸಿಇಒಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಂವಾದ ಕಾರ್ಯಕ್ರಮವು ಲೋಕ ಕಲ್ಯಾಣ ಮಾರ್ಗ ರಸ್ತೆಯಲ್ಲಿರುವ ಪ್ರಧಾನಿ ನಿವಾಸದಲ್ಲಿ ನಡೆಯಿತು.

ಮುಂದಿನ ತಿಂಗಳು ಫೆಬ್ರವರಿಯಲ್ಲಿ ನಡೆಲಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿತಿ (India AI Impact summit ) ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಈ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಕೃತಕ ಬುದ್ಧಿಮತ್ತೆ ಜ್ಞಾನದಲ್ಲಿ ಭಾರತದ ಭವಿಷ್ಯ ಸ್ವದೇಶಿ ಅಭಿವೃದ್ಧಿ ಮತ್ತು ನಮೋದ್ಯಮ ಉತ್ತೇಜನ ಕುರಿತು ಚರ್ಚೆ ನಡೆಯಿತು.

ಎಐ ಟೆಕ್ನಾಲಜಿಯಲ್ಲಿ ಸ್ವಾವಸಾಧಿಸಬೇಕು ಎನ್ನುವ ಕೇಂದ್ರ ಸರ್ಕಾರದ ಗುರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಭೆಯಲ್ಲಿ ಭಾಗವಹಿಸಿದ ಸಿಇಓಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಯುಪಿಐ (UPI) ವ್ಯವಸ್ಥೆಯನ್ನು ಯಶಸ್ವಿಯಾಗಿ ರೂಪಿಸುವ ಮೂಲಕ ಭಾರತವು ತಾನು ತಾಂತ್ರಿಕ ನಾವೀನ್ಯತೆ ಮಾಡಬಲ್ಲ ದೇಶ ಎಂಬುದನ್ನು ವಿಶ್ವಕ್ಕೆ ಸಾಬೀತುಪಡಿಸಿದೆ. ಇದೇ ರೀತಿಯ ಯಶಸ್ಸು ಕೃತಕ ಬುದ್ಧಿಮತ್ತೆ ಎಐ ಕ್ಷೇತ್ರದಲ್ಲಿಯೂ ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ಜನಸಂಖ್ಯೆ ಬಲ, ಅಪಾರ ವೈವಿಧ್ಯತೆ ಮತ್ತು ದೃಢವಾದ ಪ್ರಜಾಸತ್ತಾತ್ಮಕ ವ್ಯವಸ್ಥೆ ಇರುವುದರಿಂದ ಈ ವಿಶಿಷ್ಟ ಸಂಯೋಜನೆಯ ದೇಶವನ್ನು ಡಿಜಿಟಲ್ ಕಾಂತ್ರಿಯಲ್ಲಿ ಮುಂಚೂಣಿಗೆ ತರುತ್ತಿದೆ ಎಂದು ಪ್ರಧಾನಿ ಹೇಳಿದರು.
ಈ ಅಂಶಗಳ ಸಮ್ಮಿಲನ ದಿಂದಾಗಿ ಭಾರತದ ಡಿಜಿಟಲ್ ಇನ್ ಪ್ರಾಸ್ಟ್ರಕ್ಚರ್ ಮೇಲೆ ಜಾಗತಿಕ ಮಟ್ಟದಲ್ಲಿ ನಂಬಿಕೆ ಹೆಚ್ಚುತ್ತಿದೆ ಎಂದು ಪ್ರಧಾನಿ ಮೋದಿ, ಬಣ್ಣಿಸಿದರು. ಯುಪಿಐ ಮಾದರಿ ಯಂತೆಯೇ ಭಾರತ ಜಾಗತಿಕ ನಾಯಕತ್ವ ಸಾಧಿಸುವ ಶಕ್ತಿ ಹೊಂದಿದೆ ಎಂದು ಅವರು ಸ್ಪಷ್ಟಪಡಿಸಿದರು.

PM Modi urges AI CEOs to build impartial and secure ecosystem
ಪ್ರಧಾನಿ ನರೇಂದ್ರ ಮೋದಿ ತಂತ್ರಜ್ಞಾನದ ಹಂಚಿಕೆ ಮತ್ತು ಡಾಟಾ ಸೆಕ್ಯೂರಿಟಿ ಮಹತ್ವವನ್ನು ಒತ್ತಿ ಹೇಳಿದರು. ನಿಷ್ಪಕ್ಷಪಾತ ಸುಭದ್ರ ಮತ್ತು ಪಾರದರ್ಶಕ ಎ ಇಕೋಸಿಸ್ಟಮ್ ನಿರ್ಮಾಣಕ್ಕೆ ತಾವುಲ್ಲರೂ ಶ್ರಮಿಸಬೇಕೆಂದು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸಿಇಓ ಗಳಿಗೆ ಕರೆ ನೀಡಿದರು.

ಈ ಸಭೆಯಲ್ಲಿ ವಿಪ್ರೋ, ಸಿಎಸ್, ಎಚ್ ಸಿಎಲ್ ಟೇಕ್, ಝೋಹೋ ಕಾರ್ಪೊರೇಷನ್ , ಎಲ್ ಟಿಐ, ಮೈಂಡ್ ಟ್ರೀ, ಜಿಯೋ ಫ್ಲ್ಯಾಟ್ ಫಾರ್ಮ್ , ಅದಾನಿ ಕಾನೆಕ್ಸ, ಎನ್ ಎಕ್ಸ್ಟ್ರಾ ಡಾಟಾ, ನೆಟ್ವೆಬ್ ಟೆಕ್ನಾಲಜೀಸ್ ಸೇರಿದಂತೆ ಎಐ ಕ್ಷೇತ್ರದಲ್ಲಿ ತೊಡಗಿರುವ ಪ್ರಮುಖ ಭಾರತೀಯ ಕಂಪನಿಗಳ ಸಿಇಒಗಳು ಭಾಗವಹಿಸಿದರು.

ಹಾಗೆಯೇ ಐಐಐಟಿ ಹೈದರಾಬಾದ್, ಐಐಟಿ ಮದ್ರಾಸ್, ಐಐಟಿ ಬಾಂಬೆ ಇತ್ಯಾದಿ ಸಂಸ್ಥೆಗಳ ಪರಿನಿತರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಸರ್ಕಾರದ ಪರವಾಗಿ ಅಶ್ವಿನಿ ವೈಷ್ಣವ್ ಮತ್ತು ಜಿತಿನ್ ಪ್ರಸಾದ್ ಮಂತ್ರಿಗಳು ಪ್ರಧಾನಿಯೊಂದಿಗೆ ಸಭೆಯಲ್ಲಿ ಇದ್ದರು.

ಪ್ರಧಾನಿ ಮೋದಿ ಸಭೆಯ ಮೂಲಕ ಭಾರತವನ್ನು ಸುರಕ್ಷಿತ ನಿಷ್ಪಕ್ಷಪಾತ ಮತ್ತು ವಿಶ್ವಾಸಾರ್ಹ AI ನಾಯಕತ್ವಕ್ಕೆ ದಾರಿ ಮಾಡಬೇಕು ಎಂಬ ಸಂದೇಶ ನೀಡಿದ್ದಾರೆ.

ಇನ್ನಷ್ಟು ಓದಿರಿ:
Gold Rate Today: ಚಿನ್ನದ ಬೆಲೆ ಇಳಿಕೆ, 755 ರೂ ಕಳವು; ಇಲ್ಲಿದೆ ದರಪಟ್ಟಿ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online