<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಗುಜರಾತ್ ಗೋಶಾಲೆಗೆ ಸೋನು ಸೂದ್ ಸ್ಮರಣೀಯ ಕೊಡುಗೆ : 7000 ಹಸುಗಳಿಗೆ 22 ಲಕ್ಷ ರೂ. ನೆರವು

ಗುಜರಾತ್ ಗೋಶಾಲೆಗೆ ಸೋನು ಸೂದ್ ಸ್ಮರಣೀಯ ಕೊಡುಗೆ : 7000 ಹಸುಗಳಿಗೆ 22 ಲಕ್ಷ ರೂ. ನೆರವು
Summary: ಗುಜರಾತ್ ನಲ್ಲಿ 7,000 ಹಸುಗಳಿಗೆ ಆಶ್ರಯ ನೀಡುತ್ತಿರುವ ಬಾಲಿವುಡ್​ ನಟ ಸೋನು ಸೂದ್ 22 ಲಕ್ಷ ರೂ. ದೇಣಿಗೆ ನೀಡಿದರು . ಈ ಗೋಶಾಲೆಯಲ್ಲಿ ಗಾಯಗೊಂಡ, ಹಸುಗಳ ರಕ್ಷಣೆ ಮಾಡಲಾದ ಹಸುಗಳಿದ್ದು , ಅವುಗಳ ಆರೈಕೆಗೆ ಹಣಕಾಸಿನ ಸಹಾಯ ಮಾಡಲಾಗಿದೆ .
belagavi news:

ಗುಜರಾತ್‌ನ ವಾರಾಹಿಯಲ್ಲಿರುವ ಗೋಶಾಲೆಗೆ ಸಮಾಜ ಸೇವಕ, ಬಾಲಿವುಡ್​ ನಟ ಸೋನು ಸೂದ್ 22 ಲಕ್ಷ ರೂಪಾಯಿಗಳ ಧನ ಸಹಾಯ ನೀಡಿದ್ದಾರೆ. ಈ ಗೋಶಾಲೆ ಸರಿ - ಸುಮಾರು 7,000 ಹಸುಗಳಿಗೆ ನೆಲೆಯಾಗಿದೆ. ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಗೋಶಾಲೆ ಕೈಬಿಡಲಾದ, ಗಾಯಗೊಂಡ ಮತ್ತು ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ಆರೈಕೆ, ರಕ್ಷಣೆ ಮತ್ತು ಘನತೆಯನ್ನು ಒದಗಿಸುತ್ತದೆ.

"ನನಗೆ ದೊರೆತ ಪ್ರೀತಿ ನನಗೆ ತುಂಬಾ ಒಳ್ಳೆಯ ಭಾವನೆ ಮೂಡಿಸಿತು, ಜೊತೆಗೆ ಹೆಮ್ಮೆ ತಂದಿತು. ನಾನು ಇಲ್ಲಿಗೆ ಬರುತ್ತಲೇ ಇರುತ್ತೇನೆ. ಇಲ್ಲಿ ಗೋರಕ್ಷಣೆಯನ್ನು ಅದ್ಭುತ ರೀತಿಯಲ್ಲಿ ಮಾಡುವ ವಿಧಾನವನ್ನು ಭಾರತದಾದ್ಯಂತ ಜಾರಿಗೆ ತರಬೇಕು" ಎಂದು ಹೇಳಿದರು.
ತಮ್ಮ ವ್ಯಾಪಕ ಲೋಕೋಪಕಾರಿ ಕೆಲಸಗಳಿಗೆ ಹೆಸರುವಾಸಿಯಾಗಿದ್ದು, ಅವರ ಸೂದ್ ಚಾರಿಟಿ ಫೌಂಡೇಶನ್‌ ಭಾರತದಲ್ಲಿ ಸಾಕಷ್ಟು ಮನ್ನಣೆ ಗಳಿಸಿದೆ. ಜನಪ್ರಿಯ ನಟನ ಮಾನವೀಯ ಪ್ರಯತ್ನಗಳು ತೆಲಂಗಾಣದಲ್ಲಿ ನಡೆದ 72ನೇ ಮಿಸ್ ವರ್ಲ್ಡ್ ಫೆಸ್ಟಿವಲ್‌ನ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರತಿಷ್ಠಿತ 'ಮಾನವೀಯ ಪ್ರಶಸ್ತಿ'ಗೂ ಭಾಜನವಾಗಿದೆ.
"ಕೆಲವೇ ಹಸುಗಳಿಂದ ಪ್ರಾರಂಭವಾಗಿ ಈಗ ಏಳು ಸಾವಿರಕ್ಕೆ ತಲುಪಿರುವ ಈ ಪ್ರಯಾಣವನ್ನು ನೋಡಿದಾಗ, ನಮಗೆ ಮಾತ್ರವಲ್ಲದೇ ಪ್ರತೀ ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಹೆಮ್ಮೆಯ ವಿಷಯವಾಗಿದೆ" ಎಂದು ಸೂದ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸೂದ್, ಗೋಶಾಲೆಯ ಪ್ರಯಾಣ ಮತ್ತು ಪ್ರಾಣಿಗಳಿಗೆ ನಿರಂತರ ಸಹಾಯದ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದರು. ಸಂಸ್ಥೆಯನ್ನು ಬೆಂಬಲಿಸಲು 22 ಲಕ್ಷ ರೂ. ದೇಣಿಗೆ ನೀಡಿದ ಬಗ್ಗೆಯೂ ಸ್ವತಃ ನಟನೇ ಮಾಹಿತಿ ಹಂಚಿಕೊಂಡರು.

ನಟ ಭಾನುವಾರ ತಮ್ಮ ಎಕ್ಸ್​ ಖಾತೆಯಲ್ಲಿ, ಹಸುಗಳ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್​​ಗೆ, "ಅವು ಏನನ್ನೂ ಕೇಳುವುದಿಲ್ಲ, ಕೇವಲ ಕಾಳಜಿಯನ್ನು ಮಾತ್ರ ಕೇಳುತ್ತವೆ. ನಮ್ಮ ಹಸುಗಳು ಮತ್ತು ಹಸು ಆಶ್ರಯ ತಾಣದೊಂದಿಗೆ" ಎಂದು ಬರೆದುಕೊಂಡಿದ್ದಾರೆ.

ಸೋನು ಸೂದ್ ಅವರ ಇತ್ತೀಚಿನ ಸಿನಿಮಾ "ಫತೇಹ್". ಇದು ಜನವರಿ 2025ರಲ್ಲಿ ಬಿಡುಗಡೆಯಾಯಿತು. ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ನಟಿಸಿರುವ ಈ ಚಿತ್ರವು ಸೂದ್ ನಿರ್ದೇಶನದ ಚೊಚ್ಚಲ ಚಿತ್ರ. ನಾಸಿರುದ್ದೀನ್ ಶಾ, ವಿಜಯ್ ರಾಝ್ ಮತ್ತು ದಿಬ್ಯೇಂದು ಭಟ್ಟಾಚಾರ್ಯ ತಾರಾಗಣದಲ್ಲಿದ್ದಾರೆ.
ನಟ ಸೋನು ಸೂದ್​ ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ, ದೊಡ್ಡ ಮಟ್ಟದ ಸಮಾಜ ಸೇವೆಯಿಂದಲೂ ಗುರುತಿಸಿಕೊಂಡಿದ್ದಾರೆ. ಕೋವಿಡ್​ ಸಂಕಷ್ಟದ ಸಮಯ ವ್ಯಾಪಕ ಕೆಲಸಗಳಿಂದ ಹೆಚ್ಚು ಸುದ್ದಿಯಾದ ಇವರು ತಮ್ಮ ಮಾನವೀಯ ಕಾರ್ಯಗಳನ್ನು ಮುಂದುವರಿಸಿದ್ದಾರೆ. ಕಳೆದ ವರ್ಷಾಂತ್ಯ ಮೈಸೂರಿನಲ್ಲಿ ಆಯೋಜನೆಗೊಂಡಿದ್ದ ರಾಷ್ಟ್ರೀಯ ಮಹಿಳಾ ಉಡಾನ್ 2.0 ಸಮಾವೇಶಕ್ಕೆ ಆಗಮಿಸಿದ್ದ ಬಾಲಿವುಡ್​ ಸ್ಟಾರ್, ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕು ಎಂದರೆ ರಸ್ತೆಯಲ್ಲಿ ಹೇಗೆ ಸ್ಪೀಡ್ ಬ್ರೇಕರ್ ಬರುತ್ತದೋ ಹಾಗೇ ನಮಗೆ ಸಾಕಷ್ಟು ಸವಾಲುಗಳು ಸಹ ಎದುರಾಗುತ್ತವೆ. ಚಾಲೆಂಜಸ್​ಗಳನ್ನು ನಾವು ಫೇಸ್​​ ಮಾಡಬೇಕು. ಆಗ ಮಾತ್ರವೇ ನಮ್ಮ ಸಮಾಜಕ್ಕೆ ನಾವು ಏನಾದರೂ ಕೊಡುಗೆ ನೀಡಬಹುದು. ಅವಮಾನ, ನಿಂದನೆಗಳು, ಮಾನಸಿಕವಾಗಿ ಕುಗ್ಗಿಸುವಂತಹ ಮಾತುಗಳು ಸಹಜವಾಗಿ ಕೇಳಿಬರುತ್ತವೆ.

ಇನ್ನಷ್ಟು ಓದಿರಿ:
ಕಬ್ಬಿನ ಜ್ಯೂಸ್ ವ್ಯಾಪಾರಿಯಿಂದ ಅಂತಾರಾಷ್ಟ್ರೀಯ ಪ್ರವಾಸಿ - ಚೀನಾ ಮುಂದಿನ ಗುರಿ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online