<?= $pageTitle ?>
Logo
ಮುಖಪುಟ ಓದುವುದು ಕೇಳು
Sports

ಟಿ-20 ಸರಣಿಯಿಂದ ಹೊರಗುಳಿದ ಸ್ಟಾರ್ ಬ್ಯಾಟ್ಸ್‌ಮನ್

ಟಿ-20 ಸರಣಿಯಿಂದ ಹೊರಗುಳಿದ ಸ್ಟಾರ್ ಬ್ಯಾಟ್ಸ್‌ಮನ್
Summary: ಭಾರತದ ಬ್ಯಾಟ್ಸ್‌ಮನ್ ಆಗಿರುವ ತಿಲಕ್ ವರ್ಮಾರವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಕಾರಣದಿಂದ ಅವರು ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳನ್ನು ತಿಲಕ್ ವರ್ಮಾರವರಿಗೆ ಆಡಲು ಆಗುವುದಿಲ್ಲ.
belagavi news :

23 ವರ್ಷದ ಆಟಗಾರ ವಿಜಯ್ ಹಜಾರೆ ಟ್ರೋಫಿ ಏಕದಿನ ಚಾಂಪಿಯನ್‌ಶಿಪ್‌ಗಾಗಿ ಹೈದರಾಬಾದ್ ತಂಡದೊಂದಿಗೆ ರಾಜ್‌ಕೋಟ್‌ನಲ್ಲಿ ಆಡುವಾಗ ತೀವ್ರ ನೋವಿನಿಂದ ಬಳಲುತ್ತಿದ್ದ ಕಾರಣ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು . ಸ್ಟಾರ್ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ, 2025ರ ಐಸಿಸಿ ಪುರುಷರ ಟಿ 20 ವಿಶ್ವಕಪ್‌ನಲ್ಲಿ ಆಡುವುದು ಅನುಮಾನವಾಗಿದೆ. ಅಲ್ಲದೇ, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದಲೂ ಹೊರಗುಳಿದಿದ್ದಾರೆ. ಕಳೆದ ವರ್ಷದಿಂದ ಟಿ-20 ಪಂದ್ಯದಲ್ಲಿ ಭಾರತ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿ ವರ್ಮಾ ಗುರುತಿಸಿಕೊಂಡಿದ್ದಾರೆ. ಸ್ಟೈಲಿಶ್ ಎಡಗೈ ಬ್ಯಾಟ್ಸ್‌ಮನ್ 2025ರ ಏಷ್ಯಾಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅಲ್ಲಿ ಅವರು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಅಜೇಯ 69 ರನ್​ಗಳಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

23 ವರ್ಷದ ಆಟಗಾರ ಆಗಸ್ಟ್ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ T20 ಪಂದ್ಯದೊಂದಿಗೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಅಂದಿನಿಂದ, ಅವರು 40 ಪಂದ್ಯಗಳ 37 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. 144.09 ಸ್ಟ್ರೈಕ್ ರೇಟ್‌ನೊಂದಿಗೆ 49.29 ರ ಅದ್ಭುತ ಸರಾಸರಿಯಲ್ಲಿ 1183 ರನ್‌ಗಳನ್ನು ಗಳಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಎರಡು ಶತಕಗಳು ಮತ್ತು ಆರು ಅರ್ಧಶತಕಗಳನ್ನು ಬಾರಿಸಿದ್ದಾರೆ.ಮೊದಲಿಗೆ ಅವರನ್ನು ಗೋಕುಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರನ್ನು ಸ್ಕ್ಯಾನ್​ಗೆ ಒಳಪಡಿಸಲಾಯಿತು. ಈ ವೇಳೆ ಅವರಿಗೆ ವೃಷಣ ತಿರುಚುವಿಕೆ (ಹಠಾತ್, ತೀವ್ರವಾದ ನೋವು) ಇರುವುದು ಪತ್ತೆಯಾಯಿತು. ಹೀಗಾಗಿ ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಲಾಯಿತು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಎರಡೂ ದೇಶಗಳ ನಡುವಿನ ಟಿ20 ಸರಣಿಯು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂಬರುವ ಐಸಿಸಿ ಟಿ20 ವಿಶ್ವಕಪ್ 2026ಕ್ಕೆ ಸಿದ್ಧತೆ ನಡೆಸಲು ಸಹಾಯ ಮಾಡುತ್ತದೆ. ಹಾಲಿ ಚಾಂಪಿಯನ್ ಭಾರತ ತಂಡವು ನಮೀಬಿಯಾ, ನೆದರ್ಲ್ಯಾಂಡ್ಸ್, ಪಾಕಿಸ್ತಾನ ಮತ್ತು ಅಮೆರಿಕ ತಂಡಗಳೊಂದಿಗೆ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ.

ಮೆನ್ ಇನ್ ಬ್ಲೂ ತಂಡವು ಫೆಬ್ರವರಿ 7 ರಂದು ಯುಎಸ್ಎ ವಿರುದ್ಧ ಟಿ20 ವಿಶ್ವಕಪ್ 2026 ರ ಗುಂಪು ಹಂತದ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಫೆಬ್ರವರಿ 12 ರಂದು ನಮೀಬಿಯಾ ವಿರುದ್ಧ, ಫೆಬ್ರವರಿ 15 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮತ್ತು ಫೆಬ್ರವರಿ 18 ರಂದು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಗಳನ್ನು ಆಡಲಿದೆ.ಏತನ್ಮಧ್ಯೆ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ-20 ಸರಣಿಯು ಜನವರಿ 21 ರಿಂದ ಜನವರಿ 31 ರವರೆಗೆ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಐದು ಟಿ-20 ಪಂದ್ಯಗಳನ್ನು ನಾಗ್ಪುರ, ರಾಯ್‌ಪುರ, ಗುವಾಹಟಿ, ವಿಶಾಖಪಟ್ಟಣ ಮತ್ತು ತಿರುವನಂತಪುರಂ ಆಯೋಜಿಸಲಿವೆ.

ಇನ್ನಷ್ಟು ಓದಿರಿ:
ಕೋಗಿಲು ನಿವಾಸಿಗಳಿಗೆ 26 ಮನೆಗಳನ್ನು ಒದಗಿಸುವ ನಿರ್ಧಾರ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online