<?= $pageTitle ?>
Logo
ಮುಖಪುಟ ಓದುವುದು ಕೇಳು
Sports

ಅಂಧರ ಪಾಲಿನ ಸ್ಪೋರ್ಟ್ಸ್ ಇನ್‌ಸ್ಟ್ರಕ್ಟರ್ ಸುರೇಶ್

ಅಂಧರ ಪಾಲಿನ ಸ್ಪೋರ್ಟ್ಸ್ ಇನ್‌ಸ್ಟ್ರಕ್ಟರ್ ಸುರೇಶ್
Summary: ಕೋಚ್​ ಸುರೇಶ್​ ಅವರ ಗರಡಿಯಲ್ಲಿ ಬೆಳೆದ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೇಖರ್ ನಾಯ್ಕ್ ಅವರು ಭಾರತ ಕ್ರಿಕೆಟ್ ತಂಡ ನಾಯಕರಾಗಿದ್ದವರು.
BELAGAVI NEWS :

ಅಂಧರ ಕ್ರಿಕೆಟ್​ನಲ್ಲಿ ಚೆಂಡು ವಿಭಿನ್ನವಾಗಿರುತ್ತದೆ. ಈ ಚೆಂಡು ಶಬ್ದ ಮಾಡುತ್ತಿರುತ್ತದೆ. ಅಂದರೆ ಚೆಂಡಿನ ಒಳಗೆ ಗೆಜ್ಜೆ ಹಾಕಲಾಗಿರುತ್ತದೆ. ಈ ಶಬ್ದದ ಮೇಲೆಯೇ ಅವರು ಬೌಲ್ ಮಾಡುತ್ತಾರೆ. ಈ ಶಬ್ದಕ್ಕೆ‌ ಬ್ಯಾಟ್ ಬೀಸುತ್ತಾರೆ.‌ ಫೀಲ್ಡರ್ಸ್​ಗಳೂ ಸಹ ಶಬ್ದದ ಮೇಲೆಯೇ ಚೆಂಡು ಹಿಡಿದುಕೊಳ್ಳುತ್ತಾರೆ.‌ ದೃಷ್ಟಿದೋಷ‌ ಇರುವವರಿಗಾಗಿಯೇ ಈ‌ ಚೆಂಡು ತಯಾರು‌ ಮಾಡಿದ್ದಾರೆ.‌ ಸುರೇಶ್ ಕ್ರಿಕೆಟ್ ಜೊತೆ, ಫುಟ್​ಬಾಲ್, ಚೆಸ್, ಅಥ್ಲೆಟಿಕ್ಸ್ ಕೂಡ ಹೇಳಿ‌ಕೊಡುತ್ತಾರೆ.‌ ಸುರೇಶ್ ಅವರು 1-10 ನೇ ತರಗತಿ ತನಕದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತಿ‌ನಿತ್ಯ ಸಂಜೆ ಪ್ರಾಕ್ಟಿಸ್ ಮಾಡಿಸುತ್ತಾರೆ. ಇಲ್ಲಿ ಯಾವ ಕ್ರೀಡೆಯ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಾರೋ ಅವರು ಅದಕ್ಕೆ ಪ್ರತ್ಯೇಕ ಕೋಚಿಂಗ್ ನೀಡುತ್ತಾರೆ.

ಶಾಲೆಯ ಕಾರ್ಯದರ್ಶಿ ಎ.ಕೆ.ಪರಮೇಶ್ವರ ಭಟ್‌ ಮಾತನಾಡಿ, "ಶಾರದಾ ದೇವಿ ಅಂಧರ ವಿಕಾಸ ಕೇಂದ್ರ 1986ರಲ್ಲಿ ಪ್ರಾರಂಭವಾಯಿತು. ಮುಖ್ಯವಾಗಿ ಬಡ ಕುಟುಂಬದ ಅಂಧ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಇದೆ. ಇಲ್ಲಿ ಮಕ್ಕಳಿಗೆ ವಸತಿ ಇದೆ. ಮಕ್ಕಳಿಗೆ ಅನುಕಂಪ ನೀಡದೆ, ಅವರ ಕಾಲ ಮೇಲೆ ಅವರು ನಿಂತು ಜೀವಿಸುವ ವಾತಾವರಣವನ್ನು ಕಲ್ಪಿಸಬೇಕೆಂಬ ಉದ್ದೇಶದಿಂದ ವಿದ್ಯಾಭ್ಯಾಸ ನೀಡುತ್ತಿದ್ದೇವೆ. ಶಿಕ್ಷಣದ ಜೊತೆಗೆ ಯೋಗ, ಕ್ರೀಡೆ, ಧ್ಯಾನ ತರಗತಿ ಇದೆ. ಸಂಗೀತ ಕಲಿಸಿಕೊಡಲಾಗುತ್ತದೆ. ಒಟ್ಟಾರೆ, ಪರ್ಸನಲ್ ಡೆವಲಪ್ಮೆಂಟ್ ಮಾಡುತ್ತೇವೆ. ಹಲವಾರು ಸ್ಪೋರ್ಟ್ಸ್​ಗಳಲ್ಲಿ ಭಾಗವಹಿಸುತ್ತಿದ್ದಾರೆ. ಚೆಸ್, ಕ್ರಿಕೆಟ್ ಸೇರಿದಂತೆ ಬೇರೆ ಬೇರೆ ಕ್ರೀಡಾಕೂಟದಲ್ಲಿ ಭಾಗವಹಿಸಿ, ಸಾಧನೆ‌ ಮಾಡುತ್ತಿದ್ದಾರೆ. ಇಲ್ಲಿಗೆ ಬಂದ ಮಕ್ಕಳು ತುಂಬಾ ಸಂತೋಷವಾಗಿದ್ದಾರೆ. ಇಲ್ಲಿ ಕಲಿತವರು ಒಳ್ಳೆಯ ಹುದ್ದೆಯಲ್ಲಿದ್ದಾರೆ" ಎಂದು ಹೇಳಿದರು.‌

"ಶೇಖರ್ ನಾಯ್ಕ್ ಅವರು 2017ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿದ್ದಾರೆ. ಇತ್ತೀಚೆಗೆ ಕಾವ್ಯಾ ಅವರು ಭಾರತ ತಂಡವನ್ನು ಪ್ರತಿನಿಧಿಸಿ, ಭಾರತಕ್ಕೆ ವಿಶ್ವಕಪ್ ತಂದರು. ಶೇಖರ್ ನಾಯ್ಕ್, ವಿರೇಶ್, ರವಿ ಒಟ್ಟು ನಾಲ್ಕು ಜನ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ನಮ್ಮ‌ ಶಾಲೆಯ ಏಳು ಮಕ್ಕಳು ಇಂಟರ್​ನ್ಯಾಶನಲ್​ಗೆ ಆಯ್ಕೆಯಾಗಿದ್ದರೂ ಸಹ ಹಣಕಾಸಿನ ವಿಚಾರದಿಂದ ಅವರು ಹೋಗಲು ಆಗಲಿಲ್ಲ. ಅವರ ಫಿಟ್​ನೆಸ್​ಗಾಗಿ ನಾವು ಪ್ರಾಕ್ಟಿಸ್ ಮಾಡಿಸುತ್ತಿರುತ್ತೇವೆ. ನಮ್ಮ ಮಕ್ಕಳು ಸಹ ಕ್ರೀಡೆಯಲ್ಲಿ ಗೆದ್ದಾಗ ಹಣಕಾಸಿನ ಸಹಾಯ ಮಾಡಬೇಕು" ಎಂದು ವಿನಂತಿಸಿ‌ಕೊಂಡರು.‌

"ನಮ್ಮ‌ ಮಕ್ಕಳಿಗೆ ಕಣ್ಣು ಕಾಣಿಸದೆ ಹೋದರೂ ಚೆನ್ನಾಗಿ ಆಲಿಸುವ ಶಕ್ತಿ ಇದೆ.‌ ಇದರಿಂದ ನಾವು ಅವರ ಕೈ ಕಾಲು ಹಿಡಿದು ಕ್ರಿಕೆಟ್ ಹೇಳಿ ಕೊಡುತ್ತೇವೆ. ಅದೇ ರೀತಿ ಅಥ್ಲೆಟಿಕ್ಸ್​ನಲ್ಲೂ ನಮ್ಮ ಮಕ್ಕಳು ಉತ್ತಮ‌ ಪ್ರದರ್ಶನ ನೀಡುತ್ತಿದ್ದಾರೆ.‌ ಇಲ್ಲಿಗೆ ಬರುವವರು ತುಂಬಾ ಬಡತನದಲ್ಲಿ‌ ಇರುವವರೆ, ಕಾವ್ಯಾ ಅವರು ಮೊದಲು ಅಥ್ಲೆಟಿಕ್ಸ್​​ನಲ್ಲಿ ಇದ್ದವರು. ನಾಲ್ಕೈದು ಬಾರಿ ದೆಹಲಿಗೆ ಹೋಗಿ ಚಿನ್ನದ‌ ಪದಕ ಗೆದ್ದು ತಂದಿದ್ದಾರೆ. ಇವರಿಗೆ ಚಿನ್ನದ ಹುಡುಗಿ ಎಂದೇ ಕರೆಯುತ್ತಿದ್ದರು" ಎಂದು ಹೆಮ್ಮೆ ವ್ಯಕ್ತಪಡಿಸಿದರು.

10ನೇ ತರಗತಿಯ ತೀಪ್ಪೆಸ್ವಾಮಿ ಮಾತನಾಡಿ, "ಕಳೆದ ಹತ್ತು ವರ್ಷಗಳಲ್ಲಿ ಮೊದಲು ಮೂರು ವರ್ಷ ನಾನು ನಮ್ಮ ಹಿರಿಯರು ಆಟ ಆಡುವುದನ್ನು ನೋಡುತ್ತಿದ್ದೆ.‌ ಅಥ್ಲೆಟಿಕ್ಸ್​ನಲ್ಲಿ ಭಾಗಿಯಾಗುತ್ತಿದ್ದೆ‌. ಇಲ್ಲಿ ಮೊದಲು ಯಾವ ರೀತಿ ಶಾಟ್ ಪುಟ್, ಜಾವೆ​ಲಿನ್ ಹಿಡಿದುಕೊಳ್ಳಬೇಕು, ಎಸೆಯಬೇಕು ಎಂಬುದನ್ನು ಹೇಳಿಕೊಡುತ್ತಿದ್ದಾರೆ.‌ ನಮ್ಮ ಸುರೇಶ್ ಸರ್ ನಮ್ಮ‌ಕೈ ಕಾಲು ಹಿಡಿದು ಟಚ್ ಮಾಡಿ ಆಟ ಆಡುವುದನ್ನು ಹೇಳಿಕೊಡುತ್ತಿದ್ದರು.‌ ನಾವು ಏನೇ ತಪ್ಪು ಮಾಡಿದ್ರು ಸಹ ಸರಿ ಮಾಡಿ ಹೇಳಿ‌‌ ಕೊಡುತ್ತಿದ್ದರು.‌ ನಾವು ಕ್ರಿಕೆಟ್ ಆಡುವಾಗ ತಪ್ಪು‌ ಮಾಡಿದಾಗ ಅವರು ಕೋಪ‌ ಮಾಡಿಕೊಳ್ಳದೆ ತಾಳ್ಮೆಯಿಂದ ಹೇಳಿ‌ಕೊಡುತ್ತಿದ್ದರು.‌

ನಾವು ಅವರು ಹೇಳಿ‌ಕೊಟ್ಟ ರೀತಿ ಕಲಿಯುತ್ತಿದ್ದೇವೆ.‌ ಅಲ್ಲದೆ ಬಾಲ್ ಯಾವ ಕಡೆ ಬರುತ್ತದೆಯೋ ಆ ಕಡೆ ಬ್ಯಾಟ್ ಬೀಸಬೇಕೆಂದು ನಮ್ಮ‌ ಕೈ ಹಿಡಿದು ಹೇಳಿ‌ ಕೊಡುತ್ತಾರೆ. ನಾನು ಕ್ರಿಕೆಟ್ ಜೊತೆ ಫುಟ್​ಬಾಲ್ ಸಹ ಆಡುತ್ತೇನೆ. ಕರ್ನಾಟಕ ತಂಡ ಕ್ಯಾಪ್ಟನ್ ಆಗಿ ಆಯ್ಕೆಯಾದೆ. ನಾನು ಕ್ರಿಕೆಟ್​ನಲ್ಲಿ ನಮ್ಮ ಶಾಲೆಯ ನಾಯಕನಾಗಿದ್ದೇನೆ. ನಮ್ಮ ಶಾಲೆಯ ಸುರೇಶ್ ಸರ್​ ನಮಗೆ ತುಂಬಾ ಹೇಳಿ‌ಕೊಡುತ್ತಿದ್ದಾರೆ‌‌. ನನಗೆ ಕ್ರಿಕೆಟ್​ನಲ್ಲಿ ಕಾವ್ಯ ಅವರ ರೀತಿ ರಾಷ್ಟ್ರೀಯ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್​ನಲ್ಲಿ ಭಾಗವಹಿಸಬೇಕೆಂಬ ಆಸೆ ಇದೆ" ಎಂದು ಕನಸು ಹಂಚಿಕೊಂಡರು.

ಇನ್ನಷ್ಟು ಓದಿರಿ :
ಕೃತಕ ಬುದ್ಧಿಮತ್ತೆ (AI) ಪಾರಮ್ಯ : ಸಂಪೂರ್ಣ ಮಾಹಿತಿ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online