ದಕ್ಷಿಣ ಕನ್ನಡದ ಈ ದೇವಾಲಯ ಮೊದಲ ಸ್ಥಾನದಲ್ಲಿ, ಜನಸಾಮಾನ್ಯರು, ಭಕ್ತರು ಮತ್ತು ಪ್ರವಾಸಿಗರಿಂದ ಬಂದ ದೇಣಿಗೆಗಳಿಂದ ಈ ಸಾಧನೆ ಸಾಧ್ಯವಾಗಿದೆ.
Temple Revenue 2026 ಡೇಟಾ ಪ್ರಕಾರ, ದಕ್ಷಿಣ ಕನ್ನಡದ ದೇವಾಲಯವು ರಾಜ್ಯದ ಎಲ್ಲಾ ದೇವಾಲಯಗಳಿಗಿಂತ ಮುಂಚೂಣಿಯಲ್ಲಿ ಇದೆ. ಈ ದೇವಾಲಯವು ಭಕ್ತಪ್ರಿಯ ಮತ್ತು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ಪ್ರತಿವರ್ಷ ಹಬ್ಬಗಳು, ಉತ್ಸವಗಳು, ಮತ್ತು ವಿಶೇಷ ಪೂಜೆ ಕಾರ್ಯಕ್ರಮಗಳು ಸಾವಿರಾರು ಭಕ್ತರನ್ನು ಆಕರ್ಷಿಸುತ್ತವೆ. ಕರ್ನಾಟಕ ಎಲ್ಲದರಲ್ಲೂ ಶ್ರೀಮಂತಿಕೆಯನ್ನು ಪಡೆದುಕೊಂಡಿದೆ. ಸಂಸ್ಕೃತಿ, ಪರಂಪರೆ, ಆದಾಯದಲ್ಲೂ ಕೂಡ ಶ್ರೀಮಂತ ರಾಜ್ಯ, (Karnataka richest temples) ಇದೀಗ ದೇವಾಲಯದಲ್ಲೂ ಕೂಡ ಕರ್ನಾಟಕ ಶ್ರೀಮಂತಿಕೆಯನ್ನು ಪಡೆದುಕೊಂಡಿದೆ. ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯವಾಗಿ ಹೊರಹೊಮ್ಮಿದೆ. ಹಣಕಾಸು ದತ್ತಾಂಶದ ಪ್ರಕಾರ ಈ ವರದಿಯನ್ನು ನೀಡಲಾಗಿದೆ. ಈ ವರದಿ ಪ್ರಕಾರ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, 2024–25ರಲ್ಲಿ 155 ಕೋಟಿ ರೂ. ತಲುಪಿದೆ. 2023–24ರಲ್ಲಿ ದೇವಾಲಯದ ಆದಾಯ 146 ಕೋಟಿ ರೂ. ಮತ್ತು 2022–23ರಲ್ಲಿ 123 ಕೋಟಿ ರೂ. ಇತ್ತು. ಈ ಬೆಳವಣಿಗೆ ಕಾರಣ, ಹೆಚ್ಚು ಭಕ್ತ ಸಮೂಹ ಇಲ್ಲಿಗೆ ಬರುತ್ತಿರವುದು. ಹಾಗೂ ವಿಶೇಷ ಪೂಜೆಗಳನ್ನು ಮಾಡಿಸಿಕೊಳ್ಳುವುದು, ಜತೆಗೆ ಧಾರ್ಮಿಕ ಪ್ರವಾಸೋದ್ಯಮವಾಗಿ ಹೊಂದಿಕೊಂಡಿರುವುದು ಎಂದು ಹೇಳಲಾಗಿದೆ. ಇದರ ನಂತರದ ಸಾಲಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಇದೆ ಎಂದು ಹೇಳಲಾಗಿದೆ.
ಇನ್ನಷ್ಟು ಓದಿರಿ : ಹೊಸ ವರ್ಷ 2026: ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಉತ್ಸವ ಮತ್ತು ಸೆಲೆಬ್ರೇಷನ್