ಅದ್ಯಾಕೋ ಸಿನಿ ಪ್ರಿಯರು ಊಹಿಸಿದಂತೆ ಈ ಚಿತ್ರವು ಯಶಸ್ಸು ಕಾಣದೆ ಅಲ್ಪ ಕಾಲಕ್ಕೆ ಸೀಮಿತವಾಯಿತು. ಭಲೇ ಭಲೇ ಮಗಡಿವೋಯ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ಮಾರುತಿ ದಾಸರು ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ.
ಗುರುವಾರದ ಪ್ರಿವ್ಯೂವ್ಸ್ ನಿಂದ ತೆಲುಗಿನಲ್ಲಿ 9.15 ಕೋಟಿ ಗಳಿಸಿದ ದಿ ರಾಜ ಸಾಬ್ ಚಿತ್ರವು ಭಾರತದಲ್ಲಿ ಮೊದಲ ದಿನ 53.75 ಕೋಟಿ ಕಲೆಕ್ಷನ್ ಮಾಡಿತ್ತು. ತೆಲುಗುನಲ್ಲಿ ನಾವು 47 ಕೋಟಿ , ಹಿಂದಿಯಲ್ಲಿ 6 ಕೋಟಿ ರೂ. ಮತ್ತು ಕನ್ನಡ, ಮಲಯಾಳಂ ದಲ್ಲಿ ಆರಂಭದಿಂದಲೂ ತುಂಬಾ ಕಡಿಮೆ ಗಳಿಸಿದೆ.
ಚಿತ್ರತಂಡ ನೀಡಿದ ಮಾಹಿತಿ ಪ್ರಕಾರ ಮೊದಲ ದಿನ 112 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ದಿ ರಾಜಸಾಬ್ ಚಿತ್ರವು 2ನೇ ದಿನದಿಂದಲೇ ಕುಸಿತ ಕಂಡಿತು. ಶನಿವಾರ 26 ಕೋಟಿ ಗಳಿಸಿದ್ದು, ಶುಕ್ರವಾರದ ಗಳಿಕೆಗೆ ಹೋಲಿಸಿದರೆ ಶೇಕಡ 50 ಕ್ಕೂ ಹೆಚ್ಚು ಕುಸಿತ ಕಂಡಿದೆ. ಒಟ್ಟಾರೆಯಾಗಿ ಈ ಚಿತ್ರವು ನಾಲ್ಕು ದಿನಗಳಲ್ಲಿ ಸುಮಾರು 2501 ಕೋಟಿ ರೂ. ಗಳಿಸಿದ್ದು , ಸಾಧಾರಣ ಪ್ರದರ್ಶನ ಮುಂದುವರಿಸಿದೆ.
ಇನ್ನಷ್ಟು ಓದಿರಿ:
ಕುತೂಹಲ ಮೂಡಿಸಿದ ಡಿಕೆ ಶಿವಕುಮಾರ ಎಕ್ಸ್ ಪೋಸ್ಟ್