<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

2೦೦ ವರ್ಷಗಳಿಂದ ಬೀಗ ತಯಾರಿಸುತ್ತಿರುವ ಅದ್ಬುತ ಕುಟುಂಬದ ಕಥೆ

2೦೦ ವರ್ಷಗಳಿಂದ ಬೀಗ ತಯಾರಿಸುತ್ತಿರುವ ಅದ್ಬುತ ಕುಟುಂಬದ ಕಥೆ
Summary: ೨೦೦ ವರ್ಷಗಳಿಂದ ಬೀಗ ತಯಾರಿಕಾ ಪರಂಪರೆ, ಕೈ ಬೀಗ ತಂತ್ರಜ್ಞಾನ , ನಕಲಿ ಕೀ ಅಸಾಧ್ಯ ಬೀಗಗಳು , ಕುಟುಂಬ ಉದ್ಯಮ ಕಥೆ ಇಲ್ಲಿದೆ ನೋಡಿ
Belagavi News :

ಸಂಪೂರ್ಣವಾಗಿ ಕೈಗಳಿಂದಲೇ ನಿರ್ಮಾಣ ಮಾಡುವ ಈ ಬೀಗವನ್ನು ನಕಲಿ ಕೀಲಿ ಬಳಕೆ ಮಾಡಿ ತೆಗೆಯಲು ಸಾಧ್ಯವಿಲ್ಲ. ಮುರಿಯಲು ಸಾಧ್ಯವಿಲ್ಲ ಎಂಬುದು ಇದರ ವಿಶೇಷತೆ
ಬೀಗದ ಕೈ ಎಂದಾಕ್ಷಣ ಜನರ ಮನಸಿಗೆ ಬರುವುದು ಆಲಿಗಢ. ಆದರೆ, ಇಲ್ಲಿನ ಐತಿಹಾಸಿಕ ರತ್ಲಂ ಅರಮನೆಯ ಹಿಂದೆ ಇರುವ ಶೀತ್ಲಾ ಮಾತಾ ಗಲ್ಲಿಯ ಕಿರಿದಾದ ಓಣಿಗಳಲ್ಲಿ ಒಂದು ಕುಟುಂಬವು ರಾಜರ ಕಾಲದಿಂದಲೂ ಅತ್ಯಂತ ವಿಶ್ವಾಸಾರ್ಹ ಬೀಗಗಳು ಮತ್ತು ತಿಜೋರಿಗಳನ್ನು ತಯಾರಿಸಿಕೊಂಡು ಬರುತ್ತಿದೆ.
ಚಿನ್ನ, ಸೀರೆಗಳು ಮತ್ತು ಬೀದಿಬದಿಯ ಆಹಾರಕ್ಕೆ ಮಾತ್ರ ಈ ನಗರ ಹೆಸರಾಗಿಲ್ಲ. ಇಲ್ಲೊಂದು ಕುಟುಂಬ ಕಳೆದ ಎರಡು ಶತಮಾನಗಳಿಂದ ರಾಜರ ಸಂಪತ್ತು ಮತ್ತು ವ್ಯಾಪಾರಿಗಳ ಉದ್ಯಮವನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿತ್ತು. ಈ ಕುಟುಂಬ ತಯಾರಿಸುವ ಬೀಗದ ಕೀಲಿಗಳು ರಾಜರ ಕಾಲದಿಂದಲೂ ಪ್ರಖ್ಯಾತಿ ಪಡೆದಿದ್ದು, ಇಂದಿಗೂ ತಮ್ಮದೇ ಬೇಡಿಕೆ ಉಳಿಸಿಕೊಂಡಿವೆ ಎಂಬುದು ವಿಶೇಷ. ಶೀಘ್ರಲದಲ್ಲೇ ಆಭರಣ ಮತ್ತು ಸಂಪತ್ತಿನ ವರ್ತಕರು ಅವರ ಮನೆ ಮತ್ತು ಅಂಗಡಿಗಳನ್ನು ಸುರಕ್ಷಿತವಾಗಿಸಲು ಅವರಿಗೆ ತಿಜೋರಿ ಮಾಡಿಕೊಡುವಂತೆ ಕೋರಿದರು. ಕೈಯಿಂದ ಮಾಡಿದ ಈ ಬೀಗಗಳ ಖ್ಯಾತಿಯು ಈ ಪ್ರದೇಶದಾದ್ಯಂತ ಹರಡಿತು. ಈ ಬೀಗಗಳನ್ನು ಅವುಗಳ ತೂಕ ಅಥವಾ ಬಲದ ಹೊರತಾಗಿ ಅವುಗಳು ಹೆಚ್ಚು ಸುರಕ್ಷಿತವಾಗಿರಿಸುವುದರಿಂದ ಅತ್ಯಂತ ಜನಮನ್ನಣೆ ಗಳಿಸಿಕೊಂಡಿದೆ ಅಂತಾರೆ ವಿನಯ್​ ಪಂಚಲ್​.
ಅದುವೇ ಪಂಚಾಲ್​ ಕುಟುಂಬ. ಸೇವಾ ರಾಮ್​ ಅಂಡ್​ ಸನ್ಸ್​ ಬ್ರಾಂಡ್​ ಎಂಬುದರ ಅಡಿ ಅವರು ಕಳೆದ ಆರು ಪೀಳಿಗೆಗಳಿಂದ ಈ ವ್ಯಾಪಾರ ಮಾಡುತ್ತಿದ್ದಾರೆ. ರತ್ಲಾಂ ಬೆಳ್ಳಿ ಮಾರುಕಟ್ಟೆಯ ಈ ವರ್ತಕರು ಅರಮನೆಯನ್ನು ರಕ್ಷಿಸುತ್ತಿದ್ದಾರೆ. ಸುಮಾರು 200 ವರ್ಷಗಳ ಹಿಂದೆ ಈ ಕಥೆ ಪ್ರಾರಂಭವಾಯಿತು ಎಂದು ಮಾತಿಗಿಳಿದ ಐದನೇ ಪೀಳಿಗೆಯ ಕುಶಲಕರ್ಮಿ ವಿನಯ್​ ಪಂಚಲ್​, ನನ್ನ ಮುತ್ತಜ್ಜ ಶೋಭಾರಾಮ್ ಮೇಸ್ತಿಯಾಗಿ ಕಾರ್ಯ ಆರಂಭಿಸಿದರು. ರಾಜರ ಕಾಲದಲ್ಲಿ ರತ್ಲಂ ಅರಮನೆಗೆ ಬೀಗಗಳು ಮತ್ತು ತಿಜೋರಿಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು. ಆಗ ಭದ್ರತೆ ಬಹಳ ಮುಖ್ಯವಾಗಿತ್ತು. ನನ್ನ ಮುತ್ತಜ್ಜ ಮತ್ತು ಅವರ ಮಗ ಸೇವಾರಾಮ್ ತಮ್ಮದೇ ಆದ ಕೀಲಿಗಳಿಂದ ಮಾತ್ರ ತೆರೆಯಬಹುದಾದ ಬೀಗಗಳನ್ನು ವಿನ್ಯಾಸಗೊಳಿಸಿದರು. ಪ್ರತಿದಿನ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುವ ರತ್ಲಂನ ಚಿನ್ನದ ಗಟ್ಟಿ ಮಾರುಕಟ್ಟೆಯಲ್ಲಿ ಆಧುನಿಕ ಬ್ರಾಂಡೆಡ್ ಬೀಗಗಳಿಗಿಂತ ಈ ಸಾಂಪ್ರದಾಯಿಕ ಬೀಗಗಳು ಹೆಚ್ಚು ನಂಬಿಕೆ ಹೊಂದಿವೆ ಎಂಬುದು ಇನ್ನೂ ವಿಶೇಷ.

ಆಭರಣ ವ್ಯಾಪಾರಿ ಅಶೋಕ್ ರಾಜೇಶ್ ಮೂನತ್ ಅವರ ಕುಟುಂಬವು ಐದು ತಲೆಮಾರುಗಳಿಂದ ಸೇವಾ ರಾಮ್ ಅಂಡ್​ ಸನ್ಸ್ ಅವರ ಮೇಲೆ ನಂಬಿಕೆ ಹೊಂದಿರುವುದಾಗಿ ತಿಳಿಸಿದ್ದಾರೆ. ಅವರ ಬೀಗಗಳು ಬೇರೆ ಯಾವುದೇ ಕೀಲಿಯಿಂದ ತೆರೆಯುವುದಿಲ್ಲ. ಅವುಗಳನ್ನು ಮುರಿಯುವುದು ಸುಲಭವಲ್ಲ. ಇದೇ ಕಾರಣದಿಂದ ವ್ಯಾಪಾರಿಗಳು ಇನ್ನು ಅವರ ಕೀಲಿಗಳ ಮೇಲೆ ಅವಲಂಬಿತಗೊಂಡಿದ್ದಾರೆ ಎಂದಿದ್ದಾರೆ.

ಐದನೇ ಪೀಳಿಗೆಯ ವರ್ತಕರಾಗಿರುವ ಯುವರಾಜ್​ ಪಂಚಲ್​ ಮಾತು ಮುಂದುವರೆಸಿ, ಪ್ರತಿ ಕೀಲಿ ಕೈ ಕೂಡ ವಿಶಿಷ್ಟವಾಗಿದ್ದು, ಕೇವಲ ಒಂದು ಕೀಲಿಯಿಂದ ಮಾತ್ರ ತೆರೆಯಲು ಸಾಧ್ಯ. ನಕಲಿ ಕೀ ಅಥವಾ ಬೀಗ ಮುರಿಯುವುದು ಕೂಡ ಸಾಧ್ಯ ಇಲ್ಲ. ಇವು ಕಾರ್ಖಾನೆಯಲ್ಲಿ ತಯಾರಿಸಿದ ಕೀಲಿಗಳಲ್ಲ. ಇವುಗಳನ್ನು ಸಂಪೂರ್ಣವಾಗಿ ಕೈಗಳಿಂದ ಮಾಡಲಾಗುತ್ತದೆ. ಆಂತರಿಕ ಕಾರ್ಯವಿಧಾನವನ್ನು ರೂಪಿಸುವುದರಿಂದ ಹಿಡಿದು ಕೀಲಿಯನ್ನು ರೂಪಿಸುವುದು, ದಪ್ಪ ಉಕ್ಕಿನ ತಟ್ಟೆಗಳ ನಡುವೆ ಮುಚ್ಚುವವರೆಗೆ ಪ್ರತಿಯೊಂದು ಹಂತವನ್ನು ಕೈಯಾರೆ ಶ್ರದ್ಧೆಯಿಂದ ಮಾಡಲಾಗುತ್ತದೆ. ಒಂದೇ ಗಟ್ಟಿಮುಟ್ಟಾದ ಬೀಗವನ್ನು ರಚಿಸಲು ಐದರಿಂದ ಏಳು ದಿನಗಳು ಬೇಕಾಗುತ್ತದೆ. ಸರಳ ಕಟ್ಟಿಂಗ್​ ಮತ್ತು ಜೋಡಣೆಗೆ ಮಷಿನ್​ ಬಳಕೆ ಮಾಡಿದರೂ, ನಿಜವಾದ ಕೆಲವನ್ನು ಕೈಯಲ್ಲಿ ಮತ್ತು ಅನುಭವದಿಂದ ಮಾಡಲಾಗುತ್ತದೆ ಎಂದರು.

ಇಂದಿನ ಪೀಳಿಗೆಯ ಧ್ರುವ್ ಪಾಂಚಾಲ್, ಇದೀಗ ಅವರ ಸಂಪ್ರದಾಯಿಕ ವಿಧಾನಕ್ಕೆ ಆಧುನಿಕ ಅಗತ್ಯಗಳನ್ನು ಅಳವಡಿಸುತ್ತಿದ್ದಾರೆ. ಕ್ಲಾಸಿಕ್ ಕೈಯಿಂದ ತಯಾರಿಸಿದ ಲಾಕ್‌ಗಳ ಜೊತೆಗೆ, ಅವರು ಆಧುನಿಕ ಸೇಫ್‌ಗಳು, ಡೋರ್ ಲಾಕ್‌ಗಳು, ಚಾನೆಲ್ ಲಾಕ್‌ಗಳು ಮತ್ತು ಭದ್ರತಾ ವ್ಯವಸ್ಥೆಗಳನ್ನು ಕೂಡಾ ತಯಾರಿಸುತ್ತಿದ್ದಾರೆ.

ಜೈಪುರ, ಸೂರತ್​ ಮತ್ತು ಮುಂಬೈ ವ್ಯಾಪಾರಿಗಳಿಂದ ನಿಯಮಿತವಾಗಿ ನಮಗೆ ಆರ್ಡರ್​ ಸಿಗುತ್ತಿದೆ. ವಜ್ರದ ಉದ್ಯಮಿದಾತರು ನಮ್ಮ ಕೆಲಸದ ಮೇಲೆ ನಂಬಿಕೆ ಹೊಂದಿದ್ದಾರೆ. ಮಾರುಕಟ್ಟೆಯಲ್ಲಿ ಕೀಲಿಗಳ ಸಾಮೂಹಿಕ ಉತ್ಪಾದನೆ ಲಭ್ಯವಾಗುತ್ತದೆ. ಆದರೆ, ಕೈಯಲ್ಲಿ ನಿರ್ಮಿಸಿದ ತಿಜೋರಿಗಳಿಗೆ ಇವು ಸಾಟಿಯಾಗುತ್ತಿಲ್ಲ ಎನ್ನುತ್ತಾರೆ ಯುವರಾಜ್​ ಪಂಚಲ್​.ವರ್ಷಗಳು ಉರುಳಿದಂತೆ ರತ್ಲಂನಲ್ಲಿ ಮಾತ್ರವಲ್ಲದೇ, ಸೂರತ್, ಮುಂಬೈ, ಜೈಪುರ ಮತ್ತು ಪಾಕಿಸ್ತಾನದ ಕರಾಚಿಯಂತಹ ನಗರಗಳಲ್ಲಿಯೂ ಈ ಕುಟುಂಬದ ಬೀಗ ಮನೆಮಾತನಾಗಿದೆ. ಇದೇ ಕಾರಣದಿಂದ ಈ ಕಸುಬು ಇದೀಗ ಕುಟುಂಬದ ಪರಂಪರೆ ಆರನೇ ಪೀಳಿಗೆಗೆ ಮುಂದುವರೆದಿದೆ.

ಇನ್ನಷ್ಟು ಓದಿರಿ:
ಈ ಗ್ರಾಮದಲ್ಲಿ ಮದ್ಯ , ಮಟ್ಕಾ , ಇಸ್ಪೀಟ್ ಮತ್ತು ಗುಟ್ಕಾ ಮಾರಾಟವನ್ನು ಸಂಪೂರ್ಣ ನಿಷೇಧ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online