<?= $pageTitle ?>
Logo
ಮುಖಪುಟ ಓದುವುದು ಕೇಳು
Science

ಗರುಡ ಪಕ್ಷಿಯ ದೃಷ್ಟಿ ಶಕ್ತಿ: ನಿಗೂಢ ರಹಸ್ಯ!

ಗರುಡ ಪಕ್ಷಿಯ ದೃಷ್ಟಿ ಶಕ್ತಿ: ನಿಗೂಢ ರಹಸ್ಯ!
Summary: ಗರುಡ ಪಕ್ಷಿ ಹಿಂದೂಗಳು ಮಾತ್ರವಲ್ಲದೇ ಬೌದ್ಧ ಮತ್ತು ಜೈನ ಪುರಾಣಗಳಲ್ಲಿ ಬರುವ ದೈವಿಕ ಪಕ್ಷಯಾಗಿದೆ. ಇದು ಪಕ್ಷಿರಾಜ ಮತ್ತು ವಿಷ್ಣುವಿನ ವಾಹನವಾಗಿರುವ ಕಾರಣ ಇದನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಪೂಜಿಸಲಾಗುತ್ತದೆ. ಗರುಡವು ಶಕ್ತಿ, ವೇಗ ಮತ್ತು ಭಕ್ತಿಯ ಸಂಕೇತವೂ ಆಗಿದೆ.
BELAGAVI NEWS :

ಗರುಡ ಪಕ್ಷಿಯ (Eagle) ದೃಷ್ಟಿಶಕ್ತಿ ವಿಜ್ಞಾನಕ್ಕೂ ಸವಾಲು ಎಸೆಯುವಷ್ಟು ಅಚ್ಚರಿ ಮೂಡಿಸುವುದಾಗಿದೆ. ಇತ್ತೀಚೆಗೆ ವಿದೇಶಿಗರು ಬಿಡುಗಡೆ ಮಾಡಿದ ಒಂದು ವೈರಲ್ ವಿಡಿಯೋ ಗರುಡ ಪಕ್ಷಿಯ ಕಣ್ಣುಗಳ ಅಸಾಧಾರಣ ಸಾಮರ್ಥ್ಯವನ್ನು ಜಗತ್ತಿನ ಮುಂದಿಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹಿಂದೂ ಪುರಾಣಗಳಲ್ಲಿ ವಿಷ್ಣುವಿನ ವಾಹನವಾಗಿ ಪೂಜಿಸಲ್ಪಡುವ ಗರುಡ ಪಕ್ಷಿಯು ಕೇವಲ ದೈವಿಕ ಶಕ್ತಿಯ ಸಂಕೇತವಲ್ಲ. ಇದರ ಕಣ್ಣುಗಳ ರಚನೆ ವಿಜ್ಞಾನಕ್ಕೇ ಸವಾಲಾಗಿದ್ದು, ಕಣ್ಣು ಮುಚ್ಚದೆಯೇ ಸ್ವಚ್ಛಗೊಳಿಸುವ ವಿಶಿಷ್ಟ ಪೊರೆಯ ರಹಸ್ಯವನ್ನು ವಿಡಿಯೋವೊಂದು ಬಯಲು ಮಾಡಿದೆ.

ವಿಜ್ಞಾನಿಗಳ ಪ್ರಕಾರ ಗರುಡ ಪಕ್ಷಿಯ ಕಣ್ಣಿನ ರೆಟಿನಾದಲ್ಲಿ ಮನುಷ್ಯನಿಗಿಂತ ಹೆಚ್ಚಾದ ಫೋಟೊರಿಸೆಪ್ಟರ್ ಕೋಶಗಳಿರುತ್ತವೆ. ಇದರಿಂದ ಗರುಡ ಪಕ್ಷಿ ಅತೀ ದೂರದಲ್ಲಿರುವ ಸಣ್ಣ ಪ್ರಾಣಿಯನ್ನೂ ಕೂಡ ಸುಲಭವಾಗಿ ಗುರುತಿಸಬಲ್ಲದು. ಕೆಲವು ಅಧ್ಯಯನಗಳ ಪ್ರಕಾರ ಗರುಡ ಪಕ್ಷಿ ಸುಮಾರು 3 ರಿಂದ 5 ಕಿಲೋಮೀಟರ್ ದೂರದಲ್ಲಿರುವ ವಸ್ತುವನ್ನೂ ಸ್ಪಷ್ಟವಾಗಿ ಕಾಣಬಲ್ಲದು.

ವಿದೇಶಿ ಸಂಶೋಧಕರೊಬ್ಬರು ಡ್ರೋನ್ ಕ್ಯಾಮರಾ ಸಹಾಯದಿಂದ ಗರುಡ ಪಕ್ಷಿಯ ದೃಷ್ಟಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪ್ರದರ್ಶಿಸಿದ್ದಾರೆ. ವಿಡಿಯೋದಲ್ಲಿ ಗರುಡ ಪಕ್ಷಿ ಹಾರುವಾಗಲೇ ಭೂಮಿಯ ಮೇಲಿರುವ ಸಣ್ಣ ಎಲಿಯನ್ನು ಗುರುತಿಸಿ ನಿಖರವಾಗಿ ದಾಳಿ ಮಾಡುವ ದೃಶ್ಯ ಎಲ್ಲರನ್ನು ಬೆಚ್ಚಿಬೀಳಿಸಿದೆ.

ಈ ವಿಡಿಯೋ ನೋಡಿ ಅನೇಕರು “ಇದು ವಿಜ್ಞಾನಕ್ಕಿಂತಲೂ ಮೀರಿದ ಸಾಮರ್ಥ್ಯ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ಪ್ರಕೃತಿಯ ಅದ್ಭುತವೆಂದು ಕರೆದಿದ್ದಾರೆ. ಜೈವ ವಿಜ್ಞಾನಿಗಳು ಹೇಳುವಂತೆ, ಇದು ಅತೀ ಉನ್ನತ ಮಟ್ಟದ ಜೈವಿಕ ಅಭಿವೃದ್ಧಿಯ ಫಲ. ಗರುಡ ಪಕ್ಷಿಯ ಕಣ್ಣುಗಳು ಕೇವಲ ದೂರ ನೋಡುವುದಲ್ಲ, ಚಲನೆಯ ವೇಗ, ಗಾತ್ರ ಮತ್ತು ದಿಕ್ಕನ್ನು ಕೂಡ ಕ್ಷಣಾರ್ಧದಲ್ಲಿ ಅಂದಾಜಿಸಬಲ್ಲುವು.

ಇದೇ ಕಾರಣದಿಂದ ಗರುಡ ಪಕ್ಷಿ ತನ್ನ ಬೇಟೆಯನ್ನು ಬಹಳ ನಿಖರವಾಗಿ ಹಿಡಿಯುತ್ತದೆ.ಪಕ್ಷಿರಾಜ ಎಂದು ಬಿರುದು ಹೊತ್ತಿರುವ ಗರುಡನ ಬಗ್ಗೆ ಪೌರಾಣಿಕ ಕಥೆ ಹೇಳುವುದಾದರೆ, ಕಶ್ಯಪ ಋಷಿಯ ಮಗ ಈ ಗರುಡ. ತನ್ನ ತಾಯಿ ವಿನತೆಯನ್ನು ನಾಗರಾಜನ ದಾಸ್ಯದಿಂದ ವಿಮೋಚನೆಗೊಳಿಸಲು ಅಮೃತವನ್ನು ತರಲು ಸ್ವರ್ಗಕ್ಕೆ ಹೋಗಿ, ಅಮರತ್ವದ ಪಾನೀಯವನ್ನು ತಂದು, ನಂತರ ವಿಷ್ಣುವಿಗೆ ತನ್ನ ಸೇವೆಯನ್ನು ಅರ್ಪಿಸಿ, ಅವನ ವಾಹನವಾದ ಎಂದು ಹೇಳಲಾಗುತ್ತದೆ.

ಇದೇ ಕಾರಣಕ್ಕೆ, ವಿಷ್ಣುವಿನ ಧ್ವಜದ ಲಾಂಛನವಾಗಿ ಗರುಡನ ಚಿತ್ರವನ್ನು ಬಳಸಲಾಗುತ್ತದೆ. ಶಿಲ್ಪಕಲೆಯಲ್ಲಿ ಗರುಡನ ಆಕೃತಿ ಮನುಷ್ಯನಂತಿದ್ದು ಬಾಗಿದ ಕೊಕ್ಕು ಮತ್ತು ರೆಕ್ಕೆಗಳಿಂದ ಕೂಡಿರುತ್ತದೆ. ಇಂಥ ವಿಗ್ರಹಗಳನ್ನು ಹಲವು ವೈಷ್ಣವ ದೇವಾಲಯಗಳಲ್ಲಿ ಕಾಣಬಹುದು.

ಪುರಾಣ ಯಾರಿಗೆ ಬೇಕ್ರೀ... ಏನೇನೋ ಹೇಳುತ್ತಾರೆ ಎನ್ನುವವರು ಕೆಲವರು. ಅದನ್ನು ಬದಿಗಿಟ್ಟು ಈಗ ವಿಜ್ಞಾನಕ್ಕೆ ಬರುವುದಾದರೆ, ಗರುಡನ ಕಣ್ಣು ವಿಜ್ಞಾನಕ್ಕೇ ಸವಾಲು ಆಗಿದೆ. ಏಕೆಂದರೆ, ಈ ಗರುಡ ತನ್ನ ಕಣ್ಣುಗಳನ್ನು ನಾವು ಅಥವಾ ಬೇರೆ ಯಾವುದೇ ಜೀವಿ ಮುಚ್ಚಿದಂತೆ ಮುಚ್ಚುವುದಿಲ್ಲ. ಬದಲಿಗೆ, ಬೇರೊಂದು ಕಣ್ಣಿನ ಪೊರೆ ಬಂದು ಕಣ್ಣುಗಳನ್ನು ಸ್ವಚ್ಛಗೊಳಿಸಿ ಹೋಗುತ್ತವೆ! ಒಮ್ಮೊಮ್ಮೆ ಒಂದೊಂದೇ ಕಣ್ಣುಗಳು ಈ ವ್ಯವಸ್ಥೆ ಅಡಿ ಮುಚ್ಚುತ್ತವೆ.

ಇನ್ನಷ್ಟು ಓದಿರಿ :
ಹೊಟ್ಟೆಯ ಕೊಬ್ಬಿಗೆ ಗುಡ್‌ಬೈ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online