ಗಾಜಾ-ಇಸ್ರೇಲ್ ಎರಡನೇ ಹಂತದ ಕದನ ವಿರಾಮ: ಶಾಶ್ವತ ಶಾಂತಿಯತ್ತ ಭಾರತಕ್ಕೆ ಆಹ್ವಾನ : ಗಾಜಾ ಮತ್ತು ಇಸ್ರೇಲ್ ನಡುವಿನ ಎರಡನೇ ಹಂತದ ಕದನ ವಿರಾಮ ಅಧಿಕೃತವಾಗಿ ಜಾರಿ ಮಾಡಲಾಗಿದೆ ಶಾಂತಿ ಸ್ಥಾಪನೆ ಮತ್ತು ಮಧ್ಯಸ್ಥಿಕೆಗಾಗಿ ಕಳೆದ ಎರಡು ದಿನಗಳ ಹಿಂದೆ ಶಾಶ್ವತ ಶಾಂತಿ ಮಂಡಳಿ ಘೋಷಿಸಿದರು. ಈ ಶಾಶ್ವತ ಶಾಂತಿ ಮಂಡಳಿ ಸದಸ್ಯರಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನುಆಹ್ವಾನಿಸಲಾಗಿದೆ. ಭಾರತಕ್ಕೆ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ ಪತ್ರವನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಈ ಆಹ್ವಾನವು ಭಾರತವನ್ನು ಪ್ರಾದೇಶಿಕ ಶಾಂತಿ ಮತ್ತು ಭದ್ರತೆ ಸಮಸ್ಯೆಗಳಲ್ಲಿ ಪ್ರಮುಖ ಪಾತ್ರ ವಹಿಸಲು ಇಸ್ರೇಲ್ ಶಾಂತಿ ಸಭೆಯಲ್ಲಿ ಭಾರತದ ಭಾಗವಹಿಸುವಿಕೆ ಬದಲಾವಣೆ ರಾಜಕೀಯ ಸಂಕೇತವಾಗಿದೆ. ಇದು ಭಾರತವನ್ನು ವಿಶ್ವ ಮಟ್ಟದಲ್ಲಿ ಶಾಂತಿ ಪ್ರಕ್ರಿಯೆಗಳಲ್ಲಿ ಪ್ರಮುಖ ಮೇಳಕ್ಕಾಗಿ ಗುರುತಿಸಿದೆ.
ಮೋದಿ ಅವರಿಗೆ ಟ್ರಂಪ್ ಆಹ್ವಾನ : ಶಾಶ್ವತ ಶಾಂತಿ ಮಂಡಳಿ ಕಳೆದೆರಡು ವರ್ಷಗಳಿಂದ ಯುದ್ಧದಲ್ಲಿ ಹಾನಿಕೊಂಡಿರುವ ಗಾಜಾ ಪುನರಾರಂಭ ಕಾರ್ಯವನ್ನು ಮೇಲ್ವಿಚಾರಣೆ ಮಾಡಲಿದೆ. ಈ ಮಂಡಳಿ, ಆಡಳಿತ ವ್ಯವಸ್ಥೆ ಮತ್ತು ಹಣಕಾಸಿನ ಸಂಘಟನೆಯ ಕಾರ್ಯಗಳನ್ನು ನೇರವಾಗಿ ನಿರೀಕ್ಷಿಸಿ ಗಾಜಾದ ಪುನರ ಅಭಿವೃದ್ಧಿಯನ್ನು ವಹಿಸುತ್ತದೆ ಎಂದು ಅಮೆರಿಕ ರಾಯಬಾರಿ ಸೆರ್ಗಿಯೋ ಗೋರ್ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಈ ಶಾಂತಿ ಮಂಡಳಿಯ ಅಧ್ಯಕ್ಷತೆ ಮತ್ತು ಮೇಲು ನೋಟವು ಗಾಜಾದ ಹಾನಿಗೊಂಡ ಪ್ರದೇಶಗಳಲ್ಲಿ ಆಧುನಿಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಣಕಾಸು ನಿರ್ವಹಣೆ, ಮತ್ತು ಶಾಂತಿಪರ ಪರಿಸರ ನಿರ್ಮಾಣದಲ್ಲಿ ಮುಖ್ಯ ಭಾಗವನ್ನು ವಹಿಸುತ್ತದೆ. ಭಾರತದ ಭಾಗವಹಿಸುವಿಕೆಯಿಂದ, ಅಂತರಾಷ್ಟ್ರೀಯ ಶಾಂತಿ ಪ್ರಕ್ರಿಯೆ ಮತ್ತು ಪ್ರಾದೇಶಿಕ ಭದ್ರತೆ ಹೆಚ್ಚು ಬಲವಾಗಿ ಸ್ಥಾಪನೆ ಆಗಬಹುದು ಮತ್ತಷ್ಟು ತಿಳಿಸಿರುವಂತೆ. ಶಾಂತಿ ಮಂಡಳಿಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷರು ಅಹ್ವಾನ ಪ್ರಧಾನಿ ನರೇಂದ್ರ ಮೋದಿಗೆ ನೀಡಿರುವುದು ಭಾರತಕ್ಕೆ ಗೌರವ ವರ ಸಂದರ್ಭವಾಗಿದೆ.
ಡೊನಾಲ್ಡ್ ಟ್ರಂಪ್ 20 ಅಂಶಗಳ ಶಾಂತಿ ಮಾರ್ಗಸೂಚಿ ಘೋಷಣೆ :ಇಸ್ರೇಲ್ ಮತ್ತು ಗಾಜಾ ನಡುವೆ ಯುದ್ಧ ಪರಿಣಾಮವಾಗಿ ಉಂಟಾದ ಹಾನಿಯ ಅಂತ್ಯ ಮಾಡುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ಸೆಪ್ಟಂಬರ್ 29ರಂದು ಕದನ ವಿರಾಮದ ಸಮಗ್ರ ಯೋಜನೆಯ ಘೋಷಣೆ ಮಾಡಿದರು. ಈ ಯೋಜನೆ ಶಾಂತಿ ಮರುಸ್ಥಾಪನೆಗಾಗಿ 20 ಅಂಶಗಳ ಮಾರ್ಗಸೂಚಿ ಹೊಂದಿದ್ದು, ಪ್ರಾದೇಶಿಕ ಸ್ಥಿರತೆ ಮತ್ತು ಭದ್ರತೆ ಸಾಧಿಸಲು ಮುಖ್ಯ ಪಾತ್ರ ವಹಿಸುತ್ತದೆ. ಅಂತರಾಷ್ಟ್ರೀಯ ರಾಜಕೀಯ ತಜ್ಞರು ಈ ಯೋಜನೆಯನ್ನು ಪ್ರಾದೇಶಿಕ ಶಾಂತಿ ಭದ್ರತೆ ಮತ್ತು ಮೂಲಭೂತ ವ್ಯವಸ್ಥೆಯ ಪುನರ್ ನಿರ್ಮಾಣಕ್ಕೆ ಮಾತ್ರ ವಿವರಿಸಿದ್ದಾರೆ. ಶಾಂತಿ ಮಾರ್ಗಸೂಚಿ ಯುದ್ಧ ಹಾನಿಗೊಂಡ ಪ್ರದೇಶಗಳ ಪುನರ್ ಅಭಿವೃದ್ಧಿ ವಾಸ್ತವಿಕ ಶಾಂತಿ ಸ್ಥಾಪನೆ ಹಣಕಾಸು ನಿರ್ವಹಣೆ ಮತ್ತು ಅಂತರಾಷ್ಟ್ರೀಯ ಮಧ್ಯಸ್ಥಿಕೆ ಮೇಲೆ ಜ್ಞಾನ ನೀಡುತ್ತದೆ ಗಾಜಾ ನಾಗರಿಕರು ಮತ್ತು ಇಸ್ರೇಲ್ ಪ್ರದೇಶದ ಸ್ಥಿತಿ ಗತಿಯು ಉತ್ಕ್ರಾಂತಿ ನಿಗದಿಪಡಿಸಲು ಈ ಮಾರ್ಗಸೂಚಿಯ ಪ್ರಮುಖ ಸಾಧನವಾಗಿದೆ.
ಡೊನಾಲ್ಡ್ ಟ್ರಂಪ್ ಘೋಷಿಸಿರುವ ಶಾಶ್ವತ ಶಾಂತಿ ಮಂಡಳಿ:ಕಳೆದ ವಾರ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಎರಡನೆಯ ಹಂತದ ಭಾಗವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಶ್ವತ ಶಾಂತಿ ಮಂಡಳಿ ಘೋಷಣೆ ಮಾಡಿದ್ದಾರೆ. ಈ ಮಂಡಳಿಯ ಸದಸ್ಯರ ಬಗ್ಗೆ ಶೀಘ್ರದಲ್ಲಿ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಶಾಂತಿ ಮಂಡಳಿ ಗಾಂಜಾ ಮತ್ತು ಅದರ ಆಚೆಗೆ ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸಲು ವಾಷಿಂಗ್ಟನ್ ನಿಂದ ರೂಪಿಸಲಾದ ಹೊಸ ಅಂತರಾಷ್ಟ್ರೀಯ ಸಂಸ್ಥೆ ಎಂಬ ಬಿಂಬವನ್ನುನೀಡುತ್ತದೆ.ಈಗಾಗಲೇ ಇಸ್ರೇಲ್ ಮತ್ತು ಉಗ್ರಗಾಮಿ ಗುಂಪು ಹಮಾಸ್ ಕಳೆದ ಅಕ್ಟೋಬರ್ ನಲ್ಲಿ ಪ್ರಮುಖ ಕದನ ವಿರಾಮ ಶಾಂತಿ ಯೋಜನೆಗೆ ಒಪ್ಪಂದ ಒಪ್ಪಿಕೊಂಡು ಈ ಒಪ್ಪಂದದ ಪರಿಣಾಮವಾಗಿ ಟ್ರಂಪ್ ಹಲವು ಜಾಗತಿಕ ನಾಯಕರಿಗೆ ಅಧಿಕೃತ ಪತ್ರಗಳು ಕಳುಹಿಸಿ ಶಾಂತಿ ದೃಢೀಕರಿಸಲು ತಂತ್ರ ಪ್ರವೃತ್ತಿ ಅನುಸರಿಸಿದ್ದಾರೆ. ಇದರಿಂದಾಗಿ ಗಾಜಾದ ನಾಗರಿಕರು ಮತ್ತು ಇಸ್ರೇಲ್ ಪ್ರದೇಶದ ಜನತೆಗೆ ಆರ್ಥಿಕ, ಸಾಮಾಜಿಕ ಮತ್ತು ಭದ್ರತೆಯ ಕ್ಷೇತ್ರದಲ್ಲಿ ಸುಧಾರಣೆ ಸಾಧ್ಯವಾಗುತ್ತದೆ. ಆದ್ದರಿಂದ ಈ ಶಾಶ್ವತ ಶಾಂತಿ ಒಪ್ಪಂದಕ್ಕೆ ಡೊನಾಲ್ಡ್ ಟ್ರಂಪ್ ರವರು ಭಾರತದ ಪ್ರಧಾನಿಯವರನ್ನು ಆಹ್ವಾನಿಸಿದ್ದಾರೆ.
ಇನ್ನಷ್ಟು ಓದಿರಿ:
ಟಿಎಂಸಿ ವಿರುದ್ಧ ಗುಡುಗಿದ ಪ್ರಧಾನಿ ಮೋದಿ ಸಾರ್ವಜನಿಕ ರ ರ‍್ಯಾಲಿ