<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಅಮೆರಿಕ -ಉಕ್ರೇನ್ ಸಂವಾದ: ಶಾಂತಿ ಒಪ್ಪಂದ ಹಾಗೂ ಭದ್ರತಾ ಖಾತರಿ ವಿಷಯ

ಅಮೆರಿಕ -ಉಕ್ರೇನ್ ಸಂವಾದ: ಶಾಂತಿ ಒಪ್ಪಂದ ಹಾಗೂ ಭದ್ರತಾ ಖಾತರಿ ವಿಷಯ
Summary: ೪ ವರ್ಷಗಳಿಂದ ನಡೆಸುತ್ತಿರುವ ರಷ್ಯಾ - ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಉಕ್ರೇನ್ ಅಮೆರಿಕದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಿದೆ.
belagavi news :


ಉಕ್ರೇನ್ ರಷ್ಯಾ ಯುದ್ಧವನ್ನು ಕೊನೆಗೊಳಿಸುವ ದಿಕ್ಕಿನಲ್ಲಿ ಉಕ್ರೇನ್ ಮತ್ತು ಅಮೆರಿಕ ನಡುವಿನ ಮಾತುಕತೆ ಮಹತ್ವದ ಹಂತವನ್ನು ತಲುಪಿದೆ ಯುದ್ಧ ಅಂತ್ಯಕ್ಕೆ ಸಂಬಂಧಿಸಿದ ಯೋಜನೆಯಲ್ಲಿ ಮುಂದಿನ ವಾರ ಅಮೆರಿಕದೊಂದಿಗೆ ಸಂಬಂಧಕ್ಕೆ ಸಿಹಿ ಹಾಕುವುದು ಎಂದು ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲನ್ಸ್ಕಿ ತಿಳಿಸಿದ್ದಾರೆ. ರಷ್ಯಾ ಜೊತೆಗಿನ ಯುದ್ಧಕ್ಕೆ ಅಂತ್ಯ ಹೇಳುವ ಉದ್ದೇಶದಿಂದ ಅಮೆರಿಕ ಉಕ್ರೇನ್ ಮೇಲೆ ಒತ್ತಡ ಹೇರುವುದು ಸ್ಪಷ್ಟವಾಗಿದೆ ಆದರೆ ಅದೇ ವೇಳೆ ಕೀವ್ ಮತ್ತು ವಾಷಿಂಗ್ಟನ್ ನಡುವೆ ಕೆಲವು ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಮುಂದುವರೆದಿವೆ.



ಈ ನಡುವೆ ವಿದೇಶಿಗಳಿಂದ ಉಕ್ರೇನ್ ಗೆ ತಲುಪುತ್ತಿರುವ ಶಸ್ತ್ರಾಸ್ತ್ರಗಳ ವಿತರಣೆಯಲ್ಲಿ ಉಂಟಾಗುತ್ತಿರುವ ವಿಳಂಬವನ್ನುವೊಲಿಡಿಮಿರ್ ಝೆಲನ್ಸ್ಕಿ ತೀವ್ರವಾಗಿ ಟೀಕಿಸಿದ್ದಾರೆ. ಯುದ್ಧ ಪರಿಸ್ಥಿತಿಯಲ್ಲಿ ಸಮಯ ಅತ್ಯಂತ ಮುಖ್ಯವಾದದ್ದು ನಿಧಾನಗತಿಯ ನೆರವು ಉಕ್ರೇನ್ಗೆ ಸಂಕಟ ಉಂಟಾಗುತ್ತಿದೆ ಎಂದು ಅವರ ಅಭಿಪ್ರಾಯಪಟ್ಟಿದ್ದಾರೆ. ಉಕ್ರೇನ್ ಶಾಂತಿ ಯೋಜನೆಯ ಭಾಗವಾಗಿ ಯುದ್ಧದ ನಂತರ ದೇಶಕ್ಕೆ ಯಾವ ರೀತಿಯ ಭದ್ರತೆ ಭರವಸೆ ದೊರೆಯಲಿದೆ ಎಂಬುದರ ಬಗ್ಗೆ ನೀಡಿದ್ದಾರೆ ಜೊತೆಗೆ ಭವಿಷ್ಯದಲ್ಲಿ ರಷ್ಯಾ ಮತ್ತೆ ಅಕ್ರಮಣ ನಡೆಸಿದಂತೆ ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುವುದರ ಕುರಿತು ಗಂಭೀರ ಚರ್ಚೆ ಬಯಸಿದೆ.



ಉಕ್ರೇನ್- ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಅಮೆರಿಕದಿಂದ ಭದ್ರತಾ ಖಾತರಿಗಳು ಮತ್ತು ಯುದ್ಧದ ನಂತರದ ಪುನರ್ ನಿರ್ಮಾಣದ ಕುರಿತು ಚರ್ಚೆ ನಡೆಸಬೇಕಿದೆ ಎಂದು ವಾಷಿಂಗ್ಟನ್ ನಲ್ಲಿರೋ ಉಕ್ರೇನ್ ರಾಯಭಾರಿ ಓಲ್ಗಾ ಸ್ಟೆಫಾನಿಶಿನಾ ತಿಳಿಸಿದ್ದಾರೆ. ಗಂಭೀರ ಸಮಸ್ಯೆಗಳನ್ನು ಎದುರಿಸಿದೆ ಎಂಬುದನ್ನು ಅಧ್ಯಕ್ಷ ವೊಲಿಡಿಮಿರ್ ಝೆಲನ್ಸ್ಕಿ ಒಪ್ಪಿಕೊಂಡಿದ್ದಾರೆ ಉಕ್ರೇನ್ ಗೆ ಸರಬರಾಜು ಆಗಿದ್ದ ಕೇವಲ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಮದ್ದು ಗುಂಡುಗಳು ತೀವ್ರ ಕೊರತೆ ಉಂಟಾಗಿತ್ತು ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಪ್ರಮುಖ ಪಾಲುದಾರರೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸುವುದೇ ಉಕ್ರೇನ ನಿಯೋಗದ ಅಮೆರಿಕ ಭೇಟಿ ಉದ್ದೇಶವಾಗಿದೆ ಎಂದು ಉಕ್ರೇನ್ ರಾಯಭಾರಿ ಓಲ್ಗಾ ಸ್ಟೆಫಾನಿಶಿನಾರವರು ಸ್ಪಷ್ಟಪಡಿಸಿದರು.ಈ ಕೊರತೆಯ ಪ್ರಮುಖ ಗುರಿಯಾಗಿದೆ ಈ ಕೊರತೆಯ ಪರಿಣಾಮವಾಗಿ ದೇಶದ ಇಂಧನ ಮೂಲಸೌಕರ್ಯಕ್ಕೆ ಬಾರಿ ಹಾನಿ ಸಂಭವಿಸಿದೆ ರಷ್ಯಾದ ದಾಳಿಯಿಂದ ಪರಿಣಾಮಕಾರಿಯಾಗಿ ತಡೆಯಲು ಅಗತ್ಯ ಸಂಪನ್ಮೂಲಗಳ ಕೊರತೆ ಉಕ್ರೇನ್ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಜಲಂತಿ ತಿಳಿಸಿದ್ದಾರೆ.




ಇತ್ತೀಚಿಗೆ ರಷ್ಯಾ ನೂರಾರು ಡ್ರೋನ್ ಗಳು ಮತ್ತು ಕ್ಷಿಪಣಿಗಳ ಮೂಲಕ ಅತಿ ದೊಡ್ಡ ದಾಳಿಯನ್ನು ನಡೆಸಿದ್ದು. ಇದರ ಪರಿಣಾಮವಾಗಿ ಉಕ್ರೇನ್ ನಾತ್ಯಂತ ವಿದ್ಯುತ್ ಸ್ಥಾವರಗಳು ಮತ್ತು ಸಬ್ ಸ್ಟೇಷನ್ ಗಳಿಗೆ ಭಾರಿ ಹಾನಿ ಉಂಟಾಗಿದೆ. ನಾಲ್ಕು ವರ್ಷಗಳಿಂದ ಮುಂದುವರಿದ ರಷ್ಯಾ - ಉಕ್ರೇನ್
ಯುದ್ಧದಲ್ಲಿ ಉಕ್ರೇನ್ ಹಲವು ಪ್ರಮುಖ ನಗರಗಳು ಭಾರಿ ಹಾನಿಗಳಾಗಿವೆ. ಯುದ್ಧದ ಪರಿಣಾಮ ನಾಗರಿಕ ಜೀವನ ಮತ್ತು ಮೂಲಸೌಕರ್ಯ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಈ ಹಾನಿಗೊಳಗಾದ ಇಂಧನ ಮೂಲ ಸೌಕರ್ಯವನ್ನು ಪುನಃ ಸ್ಥಾಪಿಸಲು 15 ಸಾವಿರಕ್ಕೂ ಹೆಚ್ಚು ಇಂಧನ ಕಾರ್ಮಿಕರು ಶೂನ್ಯಕಿಂತ ಕಡಿಮೆ ತಾಪಮಾನವನ್ನು ಕೆಲಸ ಮಾಡುತ್ತಾರೆ ಎಂಬ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲನ್ಸ್ಕಿ ಮಾಹಿತಿ ಹಂಚಿಕೊಂಡಿದ್ದಾರೆ. ಕಠಿಣ ಹವಾಮಾನ ಮತ್ತು ನಿಯಂತ್ರಣದ ದಾಳಿಗಳ ನಡುವೆಯೂ ಅಗತ್ಯ ಸೇವೆಗಳನ್ನು ಪುನಃ ಸ್ಥಾಪಿಸಲು ಕಾರ್ಮಿಕರು ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು. ಈ ವೇಳೆ ರಷ್ಯಾ ರಕ್ಷಣಾ ಸಚಿವಾಲಯ ಪೂರ್ವ ಉಕ್ರೇನ್ನ ಡೊನೆಟ್ಸ್ಕ್ ಮತ್ತು ಜಪೋರಿಝಿಯಾ ಪ್ರದೇಶಗಳಲ್ಲಿ ಇನ್ನೂ ಎರಡು ಹಳ್ಳಿಗಳನ್ನು ವಶಪಡಿಸಿಕೊಂಡಿರುವುದಾಗಿ ಘೋಷಿಸಿದೆ. ಈ ಪ್ರದೇಶಗಳಲ್ಲಿ ಸಂಘರ್ಷ ತೀವ್ರಗೊಂಡಿದ್ದು ಮುಂದಿನ ದಿನಗಳಲ್ಲಿ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.



ವಿದ್ಯುತ್ ಸ್ಥಾವರಗಳು ಇಂಧನ ಸೌಕರ್ಯಗಳು ಮತ್ತು ನಾಗರಿಕ ಕೇಂದ್ರಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಡೆಯಲು ಪರಿಣಾಮಕಾರಿ ವಾಯು ರಕ್ಷಣಾ ವ್ಯವಸ್ಥೆ ಅತ್ಯಗತ್ಯ ಎಂದು ಝೆಲನ್ಸ್ಕಿ ಸ್ಪಷ್ಟಪಡಿಸಿದ್ದಾರೆ. ಯುದ್ಧ ಪರಿಸ್ಥಿತಿಯಲ್ಲಿ ನಾಗರಿಕ ಸುರಕ್ಷತೆ ಕಾಪಾಡುವುದು ಸರ್ಕಾರದ ಮೂಲ ಆದ್ಯತೆಯಾಗಿದೆ ಎಂದಿದ್ದಾರೆ, ರಷ್ಯಾದ ನಿರಂತರ ಬಾಂಬ್ ಮತ್ತು ಕ್ಷಿಪಣಿ ದಾಳಿಗಳಿಂದ ಉಕ್ರೇನ್ ಪ್ರಮುಖ ನಾಗರಿಕ ಮೂಲ ಸೌಕರ್ಯಗಳನ್ನು ರಕ್ಷಿಸುವ ಅಗತ್ಯ ತೀವ್ರವಾಗಿ ಇದೆ ಎಂದು ಅಧ್ಯಕ್ಷ ಹೇಳಿದ್ದಾರೆ. ಅವರು ನಮ್ಮ ಬಳಿ ಸಾಕಷ್ಟು ಕ್ಷಿಪಣಿಗಳಿವೆ ಎಂದು ಮುಕ್ತವಾಗಿ ಹೇಳಬಲ್ಲೆ ಎಂದು ವಿಶ್ವಾಸದಿಂದ ಹೇಳಬಲ್ಲೆ ಎಂದು ಝೆಲನ್ಸ್ಕಿ ಹೇಳಿದ್ದಾರೆ .ಈ ಹಿನ್ನೆಲೆಯಲ್ಲಿ ಉಕ್ರೇನನ ವಾಯು ರಕ್ಷಣಾ ವ್ಯವಸ್ಥೆಯಗಳನ್ನು ಬಲಪಡಿಸಲು ಮಿತ್ರ ರಾಷ್ಟ್ರಗಳ ಝೆಲನ್ಸ್ಕಿ ಅವರು ಪದೇ ಪದೇ ಮನವಿ ಮಾಡಿಕೊಳ್ಳುತ್ತಿದ್ದಾರೆ.



ಇನ್ನಷ್ಟು ಓದಿರಿ:


ಮೋದಿ ಟ್ರಂಪ್ ಗೆ ನಿರ್ವಹಣಾತ್ಮಕ ತಿರುಗೇಟು

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online