ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರತಿಭಾವಂತ ಬ್ಯಾಟ್ಸ್ಮನ್ ಉಸ್ಮಾನ್ ಖವಾಜಾ ಅವರು ತಾನು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾಗಿ ತಿಳಿಸಿದ್ದಾರೆ. ತಮ್ಮ ಘೋಷಣೆಯಲ್ಲಿ ಅವರು “ಅವರಿಗೆ ಒಂದು ನ್ಯಾಯ, ನನಗೊಂದು ನ್ಯಾಯ” ಎಂಬ ತೀಕ್ಷ್ಣ ಹೇಳಿಕೆಯನ್ನು ಪ್ರಕಟಿಸಿದ್ದಾರೆ, ಇದು ಕ್ರಿಕೆಟ್ ವಿಶ್ವದಲ್ಲೇ ಶಾಕ್ ಉಂಟುಮಾಡಿದೆ. ಉಸ್ಮಾನ್ ಖವಾಜಾ ನಿವೃತ್ತಿ ಘೋಷಣೆ ಮತ್ತು ತಮ್ಮ ‘ನ್ಯಾಯ’ ಕುರಿತು ಹೇಳಿಕೆ Cricket World ನಲ್ಲಿ ಚರ್ಚೆ ಉಂಟುಮಾಡಿದೆ.
Fans, Sports Enthusiasts ಮತ್ತು Media ಇನ್ನು ಮುಂದೆ ಅವರ Career ಮತ್ತು Achievements ಅನ್ನು ಸ್ಮರಿಸುವುದರಲ್ಲಿ ಆಸಕ್ತಿ ತೋರುತ್ತಿದ್ದಾರೆ. ಹೊಸ ವರ್ಷದ ಮೊದಲ ದಿನ ಆಸ್ಟ್ರೇಲಿಯಾದ ದಿಗ್ಗಜ ಟೆಸ್ಟ್ ಆಟಗಾರ ಉಸ್ಮಾನ್ ಖವಾಜಾ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಆಶಸ್ ಸರಣಿ ನಡುವೆ ಈ ನಿರ್ಧಾರ ಪ್ರಕಟಿಸಿದ ಖವಾಜಾ, ಮಾಜಿ ಆಟಗಾರರು ಮತ್ತು ಮಾಧ್ಯಮದ ವಿರುದ್ಧ ಜನಾಂಗೀಯ ನಿಂದನೆ ಮತ್ತು ಸುಳ್ಳು ಆರೋಪಗಳ ಗಂಭೀರ ವಾಗ್ದಾಳಿ ನಡೆಸಿದರು. ಇತರ ಆಟಗಾರರಂತೆ ತನಗೂ ಸಮಾನತೆ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಹೊಸ ವರ್ಷದ ಮೊದಲ ದಿನವೇ ಕ್ರಿಕೆಟ್ ಲೋಕಕ್ಕೆ ದಿಗ್ಗಜ ಆಟಗಾರನೊಬ್ಬ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ (Usman Khawaja) ನಿವೃತ್ತಿ ಘೋಷಿಸಿದ್ದಾರೆ. ವಾಸ್ತವವಾಗಿ ಖವಾಜಾ ನಿವೃತ್ತಿಯ ಬಗ್ಗೆ ಬಹಳ ದಿನಗಳಿಂದಲೂ ವರದಿಗಳು ಹರಿದಾಡುತ್ತಿದ್ದವು. ಅದರಂತೆ ಈಗ ಖವಾಜಾ ಕ್ರಿಕೆಟ್ ಬದುಕಿನಿಂದ ದೂರ ಸರಿಯಲು ನಿರ್ಧರಿಸಿದ್ದಾರೆ.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆಶಸ್ ಸರಣಿಯ (Ashes series) ನಡುವೆ ಖವಾಜಾ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದರ ಜೊತೆಗೆ ಮಾಜಿನ ಕ್ರಿಕೆಟಿಗರ ವಿರುದ್ಧ ಗಡುಗಿರುವ ಖವಾಜಾ ಜನಾಂಗೀಯ ನಿಂದನೆಯಂತಯ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆಶಸ್ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯವು ಜನವರಿ 4 ರ ಭಾನುವಾರದಂದು ಸಿಡ್ನಿಯಲ್ಲಿ ಪ್ರಾರಂಭವಾಗಲಿದೆ.
ಈ ಟೆಸ್ಟ್ ಆರಂಭಕ್ಕೆ ಇನ್ನು 2 ದಿನ ಬಾಕಿ ಇರುವಾಗ ಈ ನಿರ್ಧಾರ ಪ್ರಕಟಿಸಿರುವ ಖವಾಜಾ, ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. 2011 ರಲ್ಲಿ ಖವಾಜಾ ಯಾವ ಸ್ಥಳದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರೋ ಅದೇ ಸ್ಥಳದಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸುತ್ತಿದ್ದಾರೆ.
ಗಂಭೀರ ಆರೋಪ ಮಾಡಿದ ಖವಾಜಾ ನಿವೃತ್ತಿ ಘೋಷಣೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖವಾಜಾ, ಆಸ್ಟ್ರೇಲಿಯಾದ ಮಾಧ್ಯಮ ಮತ್ತು ಮಾಜಿ ಕ್ರಿಕೆಟಿಗರ ವಿರುದ್ಧ ವಾಗ್ದಾಳಿ ನಡೆಸಿದರು. ‘ನನ್ನ ಇಡೀ ವೃತ್ತಿಜೀವನದಂತೆಯೇ, ಈ ಸರಣಿಯ ಸಮಯದಲ್ಲಿಯೂ ನಾನು ಜನಾಂಗೀಯ ನಿಂದನೆಗೆ ಒಳಗಾಗಬೇಕಾಯಿತು.
ನನಗೆ ಬೆನ್ನು ನೋವು ಇತ್ತು (ಪರ್ತ್ ಟೆಸ್ಟ್ ಸಮಯದಲ್ಲಿ), ಅದು ನನ್ನ ನಿಯಂತ್ರಣಕ್ಕೆ ಮೀರಿತ್ತು. ಆದರೆ ಮಾಧ್ಯಮ ಮತ್ತು ಮಾಜಿ ಕ್ರಿಕೆಟಿಗರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದರು. ಟೆಸ್ಟ್ ಸರಣಿಗೆ ತಯಾರಿ ನಡೆಸುವುದನ್ನು ಬಿಟ್ಟು ಗಾಲ್ಫ್ ಆಡಲು ಹೋಗಿ ಗಾಯಗೊಂಡಿದ್ದಾರೆ ಎಂದು ನನ್ನ ಮೇಲೆ ಆರೋಪ ಹೊರಿಸಿದರು. ಇದು ಒಂದೆರಡು ದಿನದ ಕಥೆಯಾಗಿದ್ದರೆ ಸರಿ ಎನ್ನಬಹುದಿತ್ತು. ಆದರೆ ಟೆಸ್ಟ್ ಪಂದ್ಯ ಮುಗಿಯುವವೆಗೂ ನನ್ನ ಮೇಲೆ ವಾಗ್ದಾಳಿ ನಡೆಸಿದರು.
ವಾಸ್ತವವಾಗಿ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ, ಫೀಲ್ಡಿಂಗ್ ಮಾಡುವಾಗ ಬೆನ್ನು ನೋವಿನಿಂದಾಗಿ ಖವಾಜಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಪಂದ್ಯಕ್ಕೂ ಮೊದಲು ಅವರು ಗಾಲ್ಫ್ ಆಡಿದ್ದು ಮತ್ತು ಪಂದ್ಯಕ್ಕೆ ಸರಿಯಾಗಿ ತಯಾರಿ ನಡೆಸದೆ ಇರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದ ಮಾಜಿ ಕ್ರಿಕೆಟಿಗರು, ‘ಖವಾಜಾ ತಂಡಕ್ಕೆ ಬದ್ಧರಾಗಿಲ್ಲ, ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ, ಅವರು ಗಾಲ್ಫ್ ಆಡುತ್ತಾರೆ, ಅವರು ಸ್ವಾರ್ಥಿ, ಅವರು ಸಾಕಷ್ಟು ಅಭ್ಯಾಸ ಮಾಡುವುದಿಲ್ಲ, ಸೋಮಾರಿ ಎಂದು ದೂರಿದ್ದರು.
ಖವಾಜಾ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, 39 ವರ್ಷದ ಪಾಕಿಸ್ತಾನಿ ಮೂಲದ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಸಿಡ್ನಿ ಟೆಸ್ಟ್‌ಗೆ ಮೊದಲು ಆಸ್ಟ್ರೇಲಿಯಾ ಪರ 87 ಪಂದ್ಯಗಳಲ್ಲಿ 157 ಇನ್ನಿಂಗ್ಸ್‌ಗಳಲ್ಲಿ 43 ಸರಾಸರಿಯಲ್ಲಿ 6206 ರನ್ ಗಳಿಸಿದ್ದರು.
ಇದರಲ್ಲಿ 16 ಶತಕಗಳು ಮತ್ತು 28 ಅರ್ಧಶತಕಗಳು ಸೇರಿವೆ. 40 ಏಕದಿನ ಪಂದ್ಯಗಳಲ್ಲಿ, ಅವರು 2 ಶತಕಗಳು ಮತ್ತು 12 ಅರ್ಧಶತಕಗಳು ಸೇರಿದಂತೆ 1554 ರನ್ ಕಲೆಹಾಕಿದ್ದಾರೆ. ಅದೇ ರೀತಿ, ಅವರು 9 ಟಿ20ಪಂದ್ಯಗಳಲ್ಲಿ 241 ರನ್ ಬಾರಿಸಿದ್ದರು. ಪ್ರಸ್ತುತ ಆಶಸ್ ಸರಣಿಯಲ್ಲಿ ಆಡಿದ 5 ಇನ್ನಿಂಗ್ಸ್‌ಗಳಲ್ಲಿ 30.60 ಸರಾಸರಿಯಲ್ಲಿ 153 ರನ್ ಮಾತ್ರ ಕಲೆಹಾಕಿದ್ದು, ಇದರಲ್ಲಿ ಒಂದು ಅರ್ಧಶತಕವೂ ಸೇರಿತ್ತು.
ಇನ್ನಷ್ಟು ಓದಿರಿ :
EVM ಬಗ್ಗೆ Karnataka ಜನರ ವಿಶ್ವಾಸ : ಸಿಂ ಸಿದ್ದರಾಮಯ್ಯ, ಖರ್ಗೆ ಬೆಂಬಲ