ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆಯುತ್ತಿರುವ ಐಸಿಸಿ ಸರಣಿ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ನಾಳೆ ಇಂದೋರ್ ನಲ್ಲಿ ನಡೆಯಲಿದ್ದು ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಈಗಾಗಲೇ ಇಂದೋರ್ ತೆರಳಿದ್ದಾರೆ ಅಭ್ಯಾಸ ನಡೆಸುತ್ತಿದ್ದಾರೆ ಮತ್ತು ಪಂದ್ಯಕ್ಕಾಗಿ ತಯಾರಿ ನಡೆಯುತ್ತಿದೆ. ಟೀಮ್ ಇಂಡಿಯಾದ ಮಾಜಿ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಉಜ್ಜಯನಿಯ ಪ್ರಸಿದ್ಧ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದು ಶಕ್ತಿಯನ್ನು ಪಡೆದಿದ್ದಾರೆ. ಕೊಹ್ಲಿ ಜೊತೆಗೆ ಕುಲದೀಪ ಯಾದವ್ ಕೂಡ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು ಶಿವನ ಆಶೀರ್ವಾದವನ್ನು ಪಡೆದುಕೊಂಡರು. ಇಂದೋರ್ ನಲ್ಲಿ ನಡೆಯಲಿರುವ ಈ ನಿರ್ಣಾಯಕ ಏಕದಿನ ಪಂದ್ಯದಲ್ಲಿ ತಂಡಗಳ ನಡುವೆ ಕಠಿಣ ಸ್ಪರ್ಧೆ ನಡೆಯಲಿದೆ. ಫ್ಯಾನ್ಸ್ ಗಳು ಟೀಮ್ ಇಂಡಿಯಾ ಆಟಗಾರರ ಶಕ್ತಿ, ತಂತ್ರ ಮತ್ತು ಸ್ಪರ್ಧಾತ್ಮಕ ಆಟವನ್ನು ಎದುರು ನೋಡುತ್ತಿದ್ದಾರೆ, ಕುಲದೀಪ್ ಯಾದವ್ ಅವರು ತಮ್ಮ ಹಳೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದು ನನ್ನ ಜೀವನದ ಒಂದು ಉತ್ತಮ ಅನುಭವ ಮೊದಲ ಬಾರಿಗೆ ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದ್ದು ನನಗೆ ಸಂತೋಷವನ್ನು ತಂದುಕೊಟ್ಟಿದೆ. ದೇವರ ಕೃಪೆಯಿಂದ ನಮ್ಮ ತಂಡದ ಕಾರ್ಯಕ್ಷಮತೆ ಸದಾ ಉತ್ತಮವಾಗಿರುತ್ತದೆ ಮತ್ತು ಮುಂಬರುವ ಟೀಮ್ ಇಂಡಿಯ ವಿಶ್ವಕಪ್ ನಲ್ಲಿ ನಾವು ಅತ್ಯುತ್ತಮ ಪ್ರದರ್ಶನ ನೀಡಲು ಸಿದ್ದರಾಗಿದ್ದೇವೆ ಎಂದು ಹೇಳಿದರು. ಈ ಸರಣಿಯ ಪ್ರಾರಂಭದಲ್ಲಿ ಭಾರತ ತಂಡ ಮೊದಲ ಪಂದ್ಯವನ್ನು ನಾಲ್ಕು ವಿಕೆಟ್ ಗಳಿಂದ ಗೆದ್ದಿದೆ, ಎರಡನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಏಳು ವಿಕೆಟ್ ಗಳಿಂದ ಗೆಲುವನ್ನು ಸಾಧಿಸಿ ಸರಣಿಯನ್ನು ಜೀವಂತ ಉಳಿಸಿಕೊಂಡಿದೆ. ಆದ್ದರಿಂದ ಮೂರನೇ ಪಂದ್ಯದಲ್ಲಿ ಎರಡು ತಂಡಗಳ ಪೈಪೋಟಿ ತುಂಬಾ ಕಷ್ಟಕರವಾಗಿರುವುದುವಾಗಿರುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಮೂರನೇ ಪಂದ್ಯಕ್ಕೆ ಅಭಿಮಾನಿಗಳ ನಿರೀಕ್ಷೆಯು ತುಂಬಾ ಇದೆ ಟೀಮ್ ಇಂಡಿಯಾದ ಪ್ರತಿಯೊಬ್ಬ ಆಟಗಾರರ ಪ್ರದರ್ಶನ ಮಹತ್ವ ಹೊಂದಿದೆ .ಕೊಹ್ಲಿ, ರೋಹಿತ್ ಶರ್ಮ, ಶ್ರೇಯಸ್ ಮುಂತಾದ ಮುಖ್ಯ ಆಟಗಾರರ ತಂತ್ರ ಶಕ್ತಿ ಮತ್ತು ಬ್ಯಾಟಿಂಗ್ ಫಾರ್ಮ್ ಭಾರತದ ಗೆಲುವಿನ ಮುಖ್ಯ ಅಂಶವಾಗಲಿದೆ. ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸತತ ಶತಕಗಳನ್ನು ಭರ್ಜರಿ ಪ್ರದರ್ಶನ ನೀಡಿದರು. ಅವರ ಉತ್ತಮ ಫಾರ್ಮ್ ಮತ್ತು ಅನುಭವದಿಂದ ಪ್ರಸ್ತುತ ಏಕದಿನ ಮಾದರಿಯ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ಅವರು ಮುನ್ನಡೆಸಿದ್ದಾರೆ. ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಪ್ರಸ್ತುತ ಅತ್ಯುತ್ತಮ ಫಾರ್ಮ್ ನಲ್ಲಿದ್ದ ಕಾರಣ ಅಭಿಮಾನಿಗಳು ಅವರ ಮೇಲೆ ಹೆಚ್ಚಿನ ನಂಬಿಕೆ ಹೊಂದಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ 93 ರನ್ ಗಳು ಮತ್ತು ಪಂದ್ಯ ಎರಡರಲ್ಲಿ 23 ಗಂಟೆಗೆ ಔಟ್ ಆಗಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡಿ ವಿರಾಟ್ ಕೊಹ್ಲಿ ಅವರು ಪ್ರಸ್ತುತ ಏಕದಿನ ಮಾದರಿಯ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ತಲುಪಿದ್ದಾರೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಈ ಸ್ಥಾನವನ್ನು ಅವರು ಅಲಂಕರಿಸಿದ್ದಾರೆ. ಕೊಹ್ಲಿ ಈ ಹಿಂದಿನ 5 ಪಂದ್ಯಗಳಲ್ಲಿ ಎರಡು ಶತಕ ಮತ್ತು ಮೂರು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ .ಅವರ ಸ್ಥಿರತೆ ಮತ್ತು ಬ್ಯಾಟಿಂಗ್ ಶ್ರೇಯಾಂಕವನ್ನು ಮತ್ತಷ್ಟು ಶಕ್ತಿ ನೀಡಿದೆ. ಕಳೆದ ಆರು ಇನಿಂಗ್ಸ್ ಗಳಿಂದ 5 ಬಾರಿ 50+ ರನ್ ಗಳನ್ನು ಕಲೆ ಹಾಕಿ ಕ್ರಿಕೆಟ್ ಪ್ರೇಮಿಗಳನ್ನೇ ಮೆಚ್ಚಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯಿಂದ ಆರಂಭವಾದ ಅದ್ಭುತ ಫಾರಂ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ಪ್ರಸ್ತುತ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಶತಕಗಳ ಮೇಲೆ ಶತಕ ಗಳಿಸಿ ತಂಡವನ್ನು ಬಲವರ್ಧನೆ ಮಾಡುತ್ತದೆ. ಈ ಮೂಲಕ ಕೊಹ್ಲಿ ಪ್ರಸ್ತುತ ಏಕದಿನ ಕ್ರಿಕೆಟ್ ನ ನಂಬರ್ ಒನ್ ಬ್ಯಾಟ್ಸ್ಮನ್ ಸ್ಥಾನವನ್ನು ಪಡೆದಿದ್ದಾರೆ. ಕೊಹ್ಲಿ ಅವರು ಹೊಸ ಬಾಲರ್ಸ್ ವಿರುದ್ಧ ತಮ್ಮ ಅನುಭವ ಮತ್ತು ತಂತ್ರವನ್ನು ಉಪಯೋಗಿಸಿ ತಂಡವನ್ನು ನಿರ್ಣಾಯಕ ಸಂದರ್ಭದಲ್ಲಿ ಮುನ್ನಡೆಸುತ್ತಿದ್ದಾರೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಕ್ರಮವಾಗಿ 135,102 ಮತ್ತು 65 ರನ್ ಗಳಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇವರ ಶ್ರೇಷ್ಠ ಬ್ಯಾಟಿಂಗ್ ಫಾರ್ ತಂಡಕ್ಕೆ ಗೆಲುವನ್ನು ತಂದಿದೆ ವಿರಾಟ್ ಕೊಹ್ಲಿ ಈಗಾಗಲೇ ಟಿ20ಮತ್ತು ಟೆಸ್ಟ್ ಕ್ರಿಕೆಟ್ ಗಾಗಿ ವಿದಾಯ ಘೋಷಿಸಿರುವುದರಿಂದ ಅವರು ತಮ್ಮ ಒಟ್ಟು ಗಮನವನ್ನು ಏಕದಿನ ಕ್ರಿಕೆಟ್ ಮೇಲೆ ಕೇಂದ್ರೀಕರಿಸಿದ್ದಾರೆ, ಇದರಿಂದಾಗಿ ಅವರು ನಿರಂತರ ಮತ್ತು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ 91 ಎಸೆತಗಳಲ್ಲಿ 93 ರನ್ ಗಳಿಸಿ ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದಾರೆ. ಈ ಗುರಿ ಸಾಧಿಸಲು ಅವರು ತಮ್ಮ ಬ್ಯಾಟಿಂಗ್ ಶೈಲಿ ಮತ್ತು ತಂತ್ರವನ್ನು ನಿರಂತರವಾಗಿ ಉತ್ತೇಜಿಸುತ್ತಿದ್ದಾರೆ ಇದರ ಪರಿಣಾಮವಾಗಿ ಅವರು 2027ರ ಏಕದಿನ ವಿಶ್ವ ಕಪ್ ನಲ್ಲಿ ಪಾಲ್ಗೊಳ್ಳುವ ಗುರಿಯನ್ನು ಹೊಂದಿದ್ದಾರೆ. ಈ ಮೂರನೇ ಏಕದಿನದ ಪಂದ್ಯವನ್ನು ಗೆಲ್ಲುವ ಸಲುವಾಗಿ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಇಂಡಿಯಾ ಕ್ರಿಕೆಟ್ ಆಟಗಾರರಾದ ವಿರಾಟ ಕೊಹ್ಲಿ ಮತ್ತು ಕುಲದೀಪ ಯಾದವರವರು ಭೇಟಿ ನೀಡಿದ್ದಾರೆ.
ಇನ್ನಷ್ಟು ಓದಿರಿ:
NEP ಹೋರಾಟದಲ್ಲಿ ರಾಜ್ಯಗಳು ಒಗ್ಗೂಡುತ್ತಿವೆ : ಸಚಿವ ಮಧು ಬಂಗಾರಪ್ಪ