ಕನ್ನಡದ ಬಿಗ್ ಬಾಸ್ ಸೀಸನ್ 12ರ ವಿಜೇತರಾದ ಮತ್ತು ಕಾಮಿಡಿ ಮೂಲಕ ಎಲ್ಲರ ಮನ ಗೆದ್ದ ಈ ಬಾರಿಗೆ ಬಿಗ್ ಬಾಸ್ ಕನ್ನಡ ಸೀಸನ್ ನ ವಿಜೇತರಾಗಿ ಹೊರಹೊಮ್ಮಿದ್ದಾರೆ. ಫಿನಾಲೆ ಹಂತದ ಕಠಿಣ ಪೈಪೋಟಿಯಲ್ಲಿ ರಕ್ಷಿತಾ ಶೆಟ್ಟಿ ರನ್ನರ್ ಆಪ್ ಸ್ಥಾನ ಪಡೆದಿದ್ದಾರೆ. ಪ್ರೇಕ್ಷಕರ ಭಾರೀ ಬೆಂಬಲ,ಮನರಂಜನೆಯ ಆಟ ಮತ್ತು ಕಷ್ಟ ವ್ಯಕ್ತಿತ್ವದಿಂದ ಗಿಲ್ಲಿ ಗೆಲುವಿನ ಶಿಖರ ತಲುಪಿದ್ದು, ಅವರ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ. ಬಿಗ್ ಬಾಸ್ ಮನೆಯೊಳಗಿನ ಅವರ ಪ್ರಯಾಣ, ಕಾಮಿಡಿ ಟಾಸ್ಗಳು ಮತ್ತು ಭಾವನಾತ್ಮಕ ಕ್ಷಣಗಳು ಪ್ರೇಕ್ಷಕರ ಮನ ಗೆದ್ದಿದ್ದು, ಈ ಗೆಲವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಬಿಗ್ ಬಾಸ್ ಕನ್ನಡ ವಿನ್ನರ್ :
ಹಾಸ್ಯ ನಟ ಗಿಲ್ಲಿ ಗೆದ್ದರು ಸೀಸನ್ 12ನ್ನು ಕನ್ನಡ ಕಿರುತೆರೆಯ ಅತಿ ಜನಪ್ರಿಯ ರಿಯಾಲಿಟಿ ಶೋ ಆಗಿರುವಂತಹ ಬಿಗ್ ಬಾಸ್ ಸೀಸನ್ 12ರ ವಿಜೇತರಾಗಿ ಹಾಸ್ಯ ನಟ ಗಿಲ್ಲಿ ನಟರಾಜ ಹೊರಹೊಮ್ಮಿದ್ದಾರೆ. ಫಿನಾಲೆ ಹಂತದಲ್ಲಿ ರಕ್ಷಿತಾ ಶೆಟ್ಟಿ ಮೊದಲ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ಭಾನುವಾರ ನಡೆದ ಗ್ರಾಂಡ್ ಫಿನಾಲೆಯಲ್ಲಿ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ವಿಜೇತರ ಹೆಸರು ಘೋಷಿಸಿದರು. ಗಿಲ್ಲಿ 46 ಕೋಟಿ ವೊಟ್ಸ್ ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದು, ಬಿಗ್ ಬಾಸ್ ಟ್ರೋಫಿ ಜೊತೆಗೆ 50 ಲಕ್ಷ ರೂ ನಗದು ಬಹುಮಾನ ಮತ್ತು ಮಾರುತಿ ಸುಜುಕಿ ಎಸ್ ಯು ವಿ ವಿಕ್ಟೋರಿಯಸ್ ಕಾರು ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಇದೊಂದು ಭರ್ಜರಿ ಕ್ಷಣವಾಗಿದ್ದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಯ ಗೆಲುವಿನ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಟಾಪ್ ಸಿಕ್ಸ್ ಸ್ಪರ್ಧಿಗಳ ಪೈಕಿ ಗಿಲ್ಲಿ ವಿಜೇತರಾಗಿ ಹೊರಹೊಮ್ಮಿದರು :
111 ದಿನಗಳ ರಿಯಾಲಿಟಿ ಆಟದಲ್ಲಿ ಬಿಗ್ ಬಾಸ್ ಮನೆಗೆ 24 ಸ್ಪರ್ಧಿಗಳು ಪ್ರವೇಶಿಸಿದ್ದರು. ಆದರೆ ಫೈನಲ್ ಹಂತಕ್ಕೆ 6 ಮಂದಿ ಸ್ಪರ್ಧಿಗಳು ಉಳಿದರು. ಅವರುಗಳೆಂದರೆ ಗಿಲ್ಲಿ ನಟ, ಕಾವ್ಯ, ರಕ್ಷಿತಾ, ರಘು, ಅಶ್ವಿನಿ ಗೌಡ ಮತ್ತು ಧನುಷ್
ಫೈನಲ್ ನಲ್ಲಿ ಮೊದಲದಿಂದ ಕೊನೆಯ ರನ್ನರ್ ಅಪ್ ಕ್ರಮವಾಗಿ ಹೀಗಿತ್ತು :
1. ಧನುಷ್ : 5ನೇ ರನ್ನರ್ ಅಪ್
2. ರಘು : 4 ನೇ ರನ್ನರ್ ಅಪ್
3. ಕಾವ್ಯ : 3 ನೇ ರನ್ನರ್ ಅಪ್
4. ಅಶ್ವಿನಿ ಗೌಡ : 2 ನೇ ರನ್ನರ್ ಅಪ್
ಕೊನೆಯ ಟಾಪ್ 2 ಸ್ಪರ್ಧಿಗಳು ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಆಗಿದ್ದು, ಫಿನಾಲೆ ವೇಳೆ ಸುದೀಪ ಅವರ ಕೈ ಮೇಲೆತ್ತುವ ಮೂಲಕ ಗಿಲ್ಲಿಯವರನ್ನು ಬಿಗ್ ಬಾಸ್ ಕನ್ನಡ ಸೀಸನ್ 12 ವಿಜೇತ ಎಂದು ಘೋಷಿಸಿದರು. ಈ ಘೋಷಣೆಯೊಂದಿಗೆ ಗಿಲ್ಲಿಯ ಗೆಲುವು ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮೂಡಿಸಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ವಿಜೇತ ಗಿಲ್ಲಿ : ಅಭಿಮಾನಿಗಳ ಸಂಭ್ರಮ :
ಹಾಸ್ಯದಿಂದ ಎಲ್ಲರ ಮನ ಗೆದ್ದು ಗಿಲ್ಲಿ ನಟರಾಜ ಅವರ ಗೆಲುವು ಅಭಿಮಾನಿಗಳಲ್ಲಿ ಭಾರಿ ಸಂಭ್ರಮವನ್ನು ಮೂಡಿಸಿದೆ. ಬಿಗ್ ಬಾಸ್ ಫಿನಾಲೆ ವೇಳೆ ಸ್ಟುಡಿಯೋ ಬಳಿಯಲ್ಲಿನ ಸಂಖ್ಯಾತ ಅಭಿಮಾನಿಗಳು ಆಗಮಿಸಿ, ಗಿಲ್ಲಿಯ ಗೆಲುವನ್ನು ಪ್ರೋತ್ಸಾಹದಿಂದ ಆಚರಿಸಿದರು.
ಅಭಿಮಾನಿಗಳ ಬೆಂಬಲ ಹಾಗೂ ದಾಖಲೆ ಮತಗಳೊಂದಿಗೆ ಗಿಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಟ್ರೋಫಿಯನ್ನು, ನಗುದು ಬಹುಮಾನವನ್ನು ಮತ್ತು ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಫಿನಾಲೆ ಸಂದರ್ಭದಲ್ಲಿ ಅವರು ಪ್ರದರ್ಶಿಸಿದ ಕೌಟುಂಬಿಕತೆ ಹಾಸ್ಯ ಮತ್ತು ಸ್ಪಷ್ಟ ವ್ಯಕ್ತಿತ್ವ ಅಭಿಮಾನಿಗಳನ್ನು ಪ್ರಭಾವಿತಗೊಳಿಸಿದೆ.
ಕಿಚ್ಚ ಸುದೀಪ್ ಅವರು ಪ್ರೀತಿಯಿಂದ ಗಿಲ್ಲಿಗೆ ಕೊಟ್ಟ ವಿಶೇಷ ಗಿಫ್ಟ್ :
ಬಿಗ್ ಬಾಸ್ ಕನ್ನಡ ಸೀಸನ್ 12 ವಿಜೇತ ಗಿಲ್ಲಿ ನಟರಾಜ ಅವರ ಆಟ ಮತ್ತು ಹಾಸ್ಯ ಅಭಿಮಾನಿಗಳನ್ನು ಮೆಚ್ಚಿಸಿದಂತೆ, ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಕೂಡ ತಮ್ಮ ವೈಯಕ್ತಿಕ ಗೌರವವನ್ನು ವ್ಯಕ್ತಪಡಿಸಿದರು. ಫಿನಾಲೆ ವೇದಿಕೆಯಲ್ಲಿ ಅವರು ಪ್ರೀತಿಯಿಂದ ಗಿಲ್ಲಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದರು. ಇದು ಅಭಿಮಾನಿಗಳಿಗೆ ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಪೂರ್ತಿ ದಾಯಕ ಸುದ್ದಿ ಆಗಿ ವೈರಲಾಯಿತು. ಕಿಚ್ಚನಿಂದ ಸಿಕ್ಕ ಈ ಭರ್ಜರಿ ಉಡುಗೊರೆ ಗಿಲ್ಲಿಯ ಗೆಲುವಿನ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತು.
ಮೊದಲನೇ ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಗೆ ಸಿಕ್ಕ ಬಹುಮಾನ :
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಯಲ್ಲಿ ಮೊದಲ ರನ್ನರ್ ಅಪ್ ಸ್ಥಾನಪಡಿದ ರಕ್ಷಿತಾ ಶೆಟ್ಟಿ ಅವರಿಗೆ 25 ಲಕ್ಷ ರೂ ನಗದು ಬಹುಮಾನ ಸಿಕ್ಕಿದೆ. ಜೊತೆಗೆ ಫಿನಾಲೆ ಸಮಯದಲ್ಲಿ ಅವರ ಸಾಧನೆ ಮತ್ತು ಪ್ರತಿಯೊಬ್ಬ ಸ್ಪರ್ಧಿಯೊಡನೆ ತೋರಿದ್ದ ವೈಯಕ್ತಿಕತೆ ಅಭಿಮಾನಿಗಳ ಮನ ಗೆದ್ದಿದ್ದು, ರನ್ನರ್ ಅಪ್ ಸ್ಥಾನಕ್ಕೆ ಪಾತ್ರವಾಯಿತು. ರಕ್ಷಿತಾ ಶೆಟ್ಟಿ ಗೆಲುವಿನ ಘೋಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬಿಗ್ ಬಾಸ್ ಸೀಸನ್ 12 ವೋಟಿಂಗ್ ಗಳ ಬಗ್ಗೆ ವಿವರ :
ವೋಟಿಂಗ್ ಗಿಲ್ಲಿ ಗೆಲುವಿನೊಂದಿಗೆ ಹೊಸ ದಾಖಲೆಯನ್ನು ಮೂಡಿಸಿದೆ. ಹೌದು ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 ಅಭಿಮಾನಿಗಳಲ್ಲಿ ಭಾರೀ ಉತ್ಸಾಹ ಮತ್ತು ಸದ್ದು ಮೂಡಿಸದೆ. ರಾಜ್ಯದ ಹೊರಗೂ, ಪಕ್ಕದ ರಾಜ್ಯಗಳು ಮತ್ತು ವಿದೇಶಗಳಲ್ಲಿಯೂ ಶೋ ಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ.
ಫಿನಾಲೆ ವೇಳೆ ವಿಜೇತ ಗಿಲ್ಲಿ ನಟ 46 ಕೋಟಿ ವೊಟ್ಸ್ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಕಳೆದ ಸೀಸನ್ 11 ಟ್ರೋಫಿ ವಿಜೇತರಾದ ಹಳ್ಳಿ ಹೈದ ಹನುಮಂತು 5, 23,89,318 ಮತಗಳನ್ನು ಪಡೆದಿದ್ದರೆ, ಈ ಬಾರಿ ಗಿಲ್ಲಿಯ ಗೆಲುವು ವಿಭಿನ್ನ ಮಟ್ಟದ ಅಭಿಮಾನಿಗಳ ಬೆಂಬಲ ತೋರಿಸಿದೆ.
ಈ ದಾಖಲೆಯ ಮತಗಳೊಂದಿಗೆ ಗಿಲ್ಲಿಯ ಗೆಲುವು ಮತ್ತಷ್ಟು ವಿಶೇಷವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.
ಇನ್ನಷ್ಟು ಓದಿರಿ:
ವಿನಯ್, ಮೇಘಾ ಶೆಟ್ಟಿ ಜೊತೆ ‘ಬೆಂಕಿ’ ಡ್ಯಾನ್ಸ್ ಮಾಡಿದ 'ಸೆಂಚುರಿ ಸ್ಟಾರ್'