ಪ್ರಧಾನಿ ಮೋದಿ ಅಸ್ಸಾಂನಲ್ಲಿ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಷ್ಟ್ರೀಯ ರಾಜಕೀಯ ದೃಶ್ಯವನ್ನು ಪ್ರತಿಬಿಂಬಿಸುವ ಘೋಷಣೆಗಳನ್ನು ಮಾಡಿದರು. ಅವರು ಕಲಿಯಾಬೋರ್ ನಲ್ಲಿ 6,957 ಕೋಟಿ ರೂ. ವೆಚ್ಚದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಶಂಕು ಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಎರಡು ಅಮೃತ ಭಾರತ್ ರೈಲುಗಳಿಗೆ ಹಸಿರು ನಿಶಾನಿ ತೋರಿಸಿ ಪ್ರಯಾಣ ಆರಂಭವನ್ನು ಉಲ್ಲೇಖಿಸಿದರು.
ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಜನರ ಮೊದಲ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷವು ದೇಶಾದ್ಯಂತ ತನ್ನ ನಂಬಿಕೆ ಕಳೆದುಕೊಂಡಿದೆ ಎಂದು ಹೇಳಿದರು. " ದೇಶವು ಕಾಂಗ್ರೆಸ್ ಪಕ್ಷದ ನಕಾರಾತ್ಮಕ ರಾಜಕೀಯವನ್ನು ತಿರಸ್ಕರಿಸುತ್ತಿದೆ. ಜನರ ಅಭಿಪ್ರಾಯ ಸ್ಪಷ್ಟವಾಗಿದೆ. ನಮ್ಮ ಜನತೆಗೆ ಕೆಲಸ ಮಾಡುವ ಸರ್ಕಾರ ಬೇಕು ಕೇವಲ ಪ್ರಚಾರ ಅಥವಾ ನಿರ್ಲಕ್ಷ್ಯವಲ್ಲ " ಎಂದು ಮುಖ್ಯವಾಗಿ ಒತ್ತಿ ಹಚ್ಚಿದರು.
ಇದೊಂದಿಗೆ ಅವರು ಅಸ್ಸಾಂನಲ್ಲಿ ಅಭಿವೃದ್ಧಿ ಯೋಜನೆಗಳ ಬೆಳವಣಿಗೆ ಬಗ್ಗೆ ವಿವರ ನೀಡಿ, ಸ್ಥಳೀಯವರಿಗೆ ಅನುಕೂಲವಾದ ಮೂಲ ಸೌಕರ್ಯವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಪ್ರತಿ ಬದ್ಧವಾಗಿದೆ ಎಂದು ಹೇಳಿದ್ದಾರೆ. ಕಾರಿಡಾರ್ ನಿರ್ಮಾಣದಿಂದ ಸ್ಥಳೀಯ ವಾಸಿಗಳು ಮತ್ತು ಉದ್ಯಮಗಳಿಗೆ ಸಾರಿಗೆ ಸುಧಾರಣೆ, ಸುತ್ತೋಡುವ ವ್ಯವಸ್ಥೆ ಸುಗಮವಾಗುವಂತೆ ಯೋಜನೆ ರೂಪಿಸಲಾಗಿದೆ.
ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ಧಿ, ಉದ್ಯೋಗ, ಶುದ್ಧ ನೀರು,ಸಾರಿಗೆ ಮತ್ತು ಜಲ ಮಾಲಿನ್ಯ ನಿರ್ವಹಣೆಯಂತಹ ಮೂಲಭೂತ ಅಗತ್ಯಗಳಿಗೆ ವಿಶೇಷ ಗಮನ ಹರಿಸುತ್ತಿವೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಉದ್ದೇಶದ ಮಹತ್ವದ ಹಂತವಾಗಿದೆ.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಆಡಳಿತ ಅಧಿಕಾರಿಗಳು ರಾಜ್ಯದ ಗಣ್ಯರು ಮತ್ತು ವಾಸಿಗಳು ಉಪಸ್ಥಿತರಿದ್ದರು. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಪ್ರಾರಂಭಕ್ಕೆ ಉಲ್ಲಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ತಾಜಾ ಪ್ರತಿಕ್ರಿಯೆಯಲ್ಲಿ ಮುಂಬೈನಲ್ಲಿ ಕಾಂಗ್ರೆಸ್ ಪಕ್ಷ ಈಗ ನಾಲ್ಕನೇ ಅಥವಾ 5ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಕಳೆದ ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಆಳ್ವಿಕೆ ಸಂಪೂರ್ಣ ಹಾಳಾಗಿದೆ, ಹಾಗೂ ದೇಶದ ವಿಶ್ವಾಸವನ್ನು ಕಳೆದುಕೊಂಡಿದೆ. ಪ್ರಧಾನಿ ಮೋದಿ ಒತ್ತಿ ಹೇಳಿದರು. ಕಾಂಗ್ರೆಸ್ ಯಾವುದೇ ಪರಿಣಾಮಕಾರಿ ಅಭಿವೃದ್ಧಿ ಕಾರ್ಯಸೂಚಿ ಹೊಂದಿಲ್ಲ, ಆದ್ದರಿಂದ ಅಸ್ಸಾಂ ಅಥವಾ ಕಾಜಿರಂಗ್ ನಲ್ಲಿ ಉತ್ತಮ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಮೋದಿ ಅವರು ತಿಳಿಸಿದ್ದಾರೆ.
ಮತ್ತೊಂದೆಡೆ, ಬಿಜೆಪಿ ಜನರ ಮೊದಲ ಆಯ್ಕೆಯಾಗಿದೆ. ಕಳೆದ 1.5 ವರ್ಷಗಳಲ್ಲಿ ದೇಶದಲ್ಲಿ ಬಿಜೆಪಿಯ ಮೇಲಿನ ನಂಬಿಕೆ ಸ್ಥಿರವಾಗಿ ಹೆಚ್ಚಾಗಿದೆ. ಇತ್ತೀಚಿಗೆ ಬಿಹಾರದಲ್ಲಿ ನಡೆದ ಚುನಾವಣೆಗಳಲ್ಲಿ, 20 ವರ್ಷಗಳ ನಂತರವೂ ಜನರು ಬಿಜೆಪಿಗೆ ಹೆಚ್ಚಿನ ಮತಗಳನ್ನು ನೀಡಿದ್ದು, ದಾಖಲೆ ಸ್ಥಾನಗಳನ್ನು ಗೆದ್ದಿದ್ದಾರೆ. ಪ್ರಧಾನಿ ಮೋದಿ ಭಾರತೀಯ ಜನತಾ ಪಕ್ಷ ಜನರ ಮೊದಲ ಆಯ್ಕೆಯಾಗಿದೆ ಎಂದು ಭರವಸೆ ನೀಡಿದರು. ಅವರ ಮುಂದುವರಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಉದ್ದೇಶಗಳ ಕುರಿತಂತೆ ವಿವರಣೆ ನೀಡಿದರು ತಮ್ಮ ಆಡಳಿತದಲ್ಲಿ ಮೂಲಸೌಕರ್ಯ,ಉದ್ಯೋಗ, ಶುದ್ಧ ನೀರು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿರುವುದನ್ನು ಪ್ರಕಟಿಸಿದರು. ಈ ರೀತಿಯ ಅಭಿವೃದ್ಧಿ ಕಾರ್ಯಗಳು ಜನರ ಕಲ್ಯಾಣ ಮತ್ತು ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ಬದ್ಧತೆಯನ್ನು ತೋರಿಸುತ್ತವೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ರೀತಿಯಾಗಿ ಹೇಳಿದರು, ಕಾಜಿರಂಗ್ ಕೇವಲ ರಾಷ್ಟ್ರೀಯ ಉದ್ಯಾನವಲ್ಲ, ಅದು ಅಸ್ಸಾಂನ ಆತ್ಮ. ಇದು ಭಾರತ ಜೀವ ವೈವಿಧ್ಯದ ಅಮೂಲ್ಯ ರತ್ನ, ಮತ್ತು ಯುನೆಸ್ಕೊ ಇದನ್ನು ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.
ಇತ್ತೀಚಿಗೆ ಕಾಜಿರಂಗ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೋಡೋ ಸಮುದಾಯದ ಪ್ರತಿಭಾನ್ವಿತ ಹೆಣ್ಣು ಮಕ್ಕಳು ತಮ್ಮ ಬಾಗೂರುಂಬಾ ಪ್ರದರ್ಶನ ಮೂಲಕ ಹೊಸ ದಾಖಲೆ ಸ್ಥಾಪಿಸಿದರು. ಈ ವಿಶಿಷ್ಟ ಮತ್ತು ಉತ್ಸಾಹರಿತ ಪ್ರದರ್ಶನದಲ್ಲಿ 10000ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು ಮತ್ತು ಹಾಜರಿದ್ದ ಎಲ್ಲರನ್ನು ಆಕರ್ಷಿಸಿತು.
ಪ್ರಧಾನಿ ಮೋದಿ ಈ ಸಂದೇಶದ ಮೂಲಕ ಭಾರತದ ಪರಂಪರೆ, ಪ್ರಾಕೃತಿಕ ಸಂಪತ್ತು ಮತ್ತು ಯುವ ಪ್ರತಿಭೆಗಳ ಪ್ರತಿಭಾವಂತರ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದಕ್ಕೆ ಬದ್ಧತೆಯನ್ನು ತೋರಿಸಿದ್ದಾರೆ.
ಇನ್ನಷ್ಟು ಓದಿರಿ:
ಗ್ರೀನ್ಲ್ಯಾಂಡ್ ವಿಷಯದಲ್ಲಿ ವಿರೋಧಿಸಿದ ಯೂರೋಪಿನ ದೇಶಗಳಿಗೆ ೧೦%ಸುಂಕ :ಟ್ರಂಪ್