<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಬಳ್ಳಾರಿ ಗಲಭೆ ಪ್ರಕರಣ : 20 ಜನರ ಬಂಧನ

ಬಳ್ಳಾರಿ ಗಲಭೆ ಪ್ರಕರಣ  : 20 ಜನರ ಬಂಧನ
Summary: ಇದೀಗ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು, ಈ ನಡುವೆ ಬ್ರೂಸ್​ಪೇಟೆ ಪೊಲೀಸರು ಒಟ್ಟು 20 ಆರೋಪಿಗಳನ್ನು ಬಂಧಿಸಿದ್ದಾರೆ. ಅದರ ಮಾಹಿತಿ ಇಲ್ಲಿದೆ.
ಬಳ್ಳಾರಿ ಗಲಭೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಗಲಭೆಯ ವಿಡಿಯೋಗಳನ್ನ ಆಧಾರಿಸಿ ಖಾಕಿ ತನಿಖೆಗಿಳಿದಿದೆ. 20 ವಿಡಿಯೋಗಳನ್ನ ಸಂಗ್ರಹಿಸಿದ್ದ ಪೊಲೀಸರು, ನಿನ್ನೆ 45 ಮಂದಿಯ ವಿಚಾರಣೆ ನಡೆಸಿದ್ದರು. ಘಟನೆಯ ಇಂಚಿಂಚೂ ಮಾಹಿತಿ ಕಲೆಹಾಕಿ ಒಟ್ಟು 20 ಜನರನ್ನು ಬಂಧಿಸಿದ್ದಾರೆ. ಬಿ.ರವಿ, ರವಿಬಾಬು, ಪೋತಪ್ಪ, ಬಜ್ಜಪ್ಪ, ಜಿ.ಶ್ರೀನಿವಾಸ, ಷಡಕ್ಷರಿ, ರಂಗಸ್ವಾಮಿ, ಗುರುಪ್ರಸಾದ್, ಪಿ.ಶ್ರೀನಿವಾಸ ರೆಡ್ಡಿ, ಲಕ್ಷಣ, ತಿಮ್ಮಪ್ಪ ಬಂಧನಕ್ಕೆ ಒಳಗಾದವರ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ಗಲಾಟೆಯಲ್ಲಿ ಕೈ ಕಾರ್ಯಕರ್ತ ರಾಜಶೇಖರ್ ಪ್ರಾಣಬಿಟ್ಟಿದ್ದ. ಈತನ ಬೆನ್ನು ಹೊಕ್ಕಿದ್ದ 12 MM ಬುಲೆಟ್ ಯಾರ ಗನ್​ನಿಂದ ಬಂದಿದ್ದು ಎನ್ನುವುದು ನಿಗೂಢವಾಗಿಯೇ ಉಳಿದಿತ್ತು. ಆದ್ರೆ, ಇದೀಗ ರಾಜಶೇಖರನ ಜೀವ ಬಲಿ ಪಡೆದಿದ್ದು ಸತೀಶ್ ರೆಡ್ಡಿಯ ಅಂಗರಕ್ಷಕ ಗುರುಚರಣ್ ಸಿಂಗ್​ನನದ್ದು ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಗುರುಚರಣ್ ಸಿಂಗ್​ನನ್ನ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸತೀಶ್ ರೆಡ್ಡಿಯ ಇನ್ನುಳಿದ ಇಬ್ಬರು ಖಾಸಗಿ ಅಂಗರಕ್ಷಕರು, ಬಲ್ಜಿತ್‌ ಸಿಂಗ್, ಗುರುಚರಣ್​ ಸಿಂಗ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಪಂಜಾಬ್ ಮೂಲದ ಈ ಮೂವರು ಖಾಸಗಿ ಗನ್​ಮ್ಯಾನ್​ಗಳು, ಜನವರಿ 1ನೇ ತಾರೀಕು ಫೈರಿಂಗ್ ನಡೆಸಿದ್ದರು.
ಬ್ಯಾನರ್​ ಕಟ್ಟು ಸಂಬಂಧ ಜನವರಿ 1ರಂದು ಬಳ್ಳಾರಿ (Bellary) ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ಸಂಘರ್ಷದಲ್ಲಿ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದು, ಇದೀಗ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು, ಈ ನಡುವೆ ಬ್ರೂಸ್​ಪೇಟೆ ಪೊಲೀಸರು ಒಟ್ಟು 20 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಒಟ್ಟು ಆರು ಎಫ್​​ಐಆರ್ ದಾಖಲಾಗಿದ್ದು,ಒಟ್ಟು 20 ಜನರನ್ನು ಬಂಧಿಸಿದ್ದಾರೆ. 10 ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿಜೆಪಿ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಈ ನಡುವೆ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿಗೂ ಸಂಕಷ್ಟ ಶುರುವಾಗಿದೆ. ಗಲಾಟೆಗೆ ಕುಮ್ಮಕ್ಕು ಕೊಟ್ಟ ಆರೋಪದಲ್ಲಿ ಬಂಧನ ಮಾಡೋ ಸಾಧ್ಯತೆಯಿದೆ. ಪೊಲೀಸರು ಸುಮಟೋ ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ. ಈ ನಡುವೆ ಗಲಭೆಯ ಒಂದೊಂದೇ ದೃಶ್ಯಗಳು ಹೊರಬೀಳ್ತಿವೆ. ಸದ್ಯ ಟಿವಿ9ಗೆ ಸಿಕ್ಕ ವಿಡಿಯೋವೊಂದು, ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿಗೆ ಮೊದಲೇ ಪ್ಲ್ಯಾನ್ ಆಗಿತ್ತಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಯಾಕಂದ್ರೆ, ಈ ವಿಡಿಯೋದಲ್ಲಿ ಪುಂಡರ ಗುಂಪೊಂದು ಆಟೋದಲ್ಲಿ ಬಾಟಲ್ ಹಾಗೂ ಪೆಟ್ರೋಲ್ ಬಾಂಬ್ ತುಂಬಿಸಿಕೊಂಡು ಬಂದಿತ್ತು. ಜನವರಿ 1ರಂದು ನಡೆದ ಗಲಾಟೆ ವೇಳೆ ಕಲ್ಲು ತೂರಾಟ, ಬಡಿಗೆ ಬಡಿದಾಟದ ನಡುವೆ ಗುಂಡಿನ ಸುರಿಮಳೆಗೈಯಲಾಗಿತ್ತು. ಭರತ್ ಆಪ್ತ ಸತೀಶ್ ರೆಡ್ಡಿಯ ಖಾಸಗಿ ಅಂಗರಕ್ಷಕರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಪೊಲೀಸರು ಕೂಡ ಪರಿಸ್ಥಿತಿ ತಿಳಿಗೊಳಿಸಲು ಫೈರಿಂಗ್ ಮಾಡಿದ್ದರು. ಆದ್ರೆ ಇದೇ ಗಲಾಟೆಯಲ್ಲಿ ಕೈ ಕಾರ್ಯಕರ್ತ ರಾಜಶೇಖರ್ ಪ್ರಾಣಬಿಟ್ಟಿದ್ದ. ಈತನ ಬೆನ್ನು ಹೊಕ್ಕಿದ್ದ 12 MM ಬುಲೆಟ್ ಯಾರ ಗನ್​ನಿಂದ ಬಂದಿದ್ದು ಎನ್ನುವುದು ನಿಗೂಢವಾಗಿಯೇ ಉಳಿದಿತ್ತು. ಆದ್ರೆ, ಇದೀಗ ರಾಜಶೇಖರನ ಜೀವ ಬಲಿ ಪಡೆದಿದ್ದು ಸತೀಶ್ ರೆಡ್ಡಿಯ ಅಂಗರಕ್ಷಕ ಗುರುಚರಣ್ ಸಿಂಗ್​ನನದ್ದು ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಗುರುಚರಣ್ ಸಿಂಗ್​ನನ್ನ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸತೀಶ್ ರೆಡ್ಡಿಯ ಇನ್ನುಳಿದ ಇಬ್ಬರು ಖಾಸಗಿ ಅಂಗರಕ್ಷಕರು, ಬಲ್ಜಿತ್‌ ಸಿಂಗ್, ಗುರುಚರಣ್​ ಸಿಂಗ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಪಂಜಾಬ್ ಮೂಲದ ಈ ಮೂವರು ಖಾಸಗಿ ಗನ್​ಮ್ಯಾನ್​ಗಳು, ಜನವರಿ 1ನೇ ತಾರೀಕು ಫೈರಿಂಗ್ ನಡೆಸಿದ್ದರು.
ಇನ್ನಷ್ಟು ಓದಿರಿ : ಎಷ್ಯಾಕಪ್ ಟ್ರೋಫಿ : ಪತ್ರಕರ್ತರ ಪ್ರಶ್ನೆ ತಬ್ಬಿಬ್ಬಾದ ಮೊಹ್ಸಿನ್
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online