ಒಣದ್ರಾಕ್ಷಿಯಲ್ಲಿರುವ ನೈಸರ್ಗಿಕ ಬೋರಾನ್ ಏಕಾಗ್ರತೆ ಮತ್ತು ಗಮನವನ್ನು ಹೆಚ್ಚಿಸುತ್ತದೆ. ಅಧ್ಯಯನಗಳ ಪ್ರಕಾರ, ಒಣದ್ರಾಕ್ಷಿಯ ಆಂಟಿಆಕ್ಸಿಡೆಂಟ್ ಗುಣಗಳು ಮೆದುಳಿನ ನರಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಿ, ವಯಸ್ಸಿಗೆ ಸಂಬಂಧಿಸಿದ ಅರಿವಿನ ಕುಸಿತವನ್ನು ತಡೆಯಲು ಸಹಕಾರಿಯಾಗಿದೆ. ನಮ್ಮ ದಿನವನ್ನು ಆರೋಗ್ಯಕರವಾಗಿ (healthy) ಪ್ರಾರಂಭಿಸುವುದು ಉತ್ತಮ ಆರೋಗ್ಯಯುತ ಭವಿಷ್ಯಕ್ಕೆ ಅಡಿಪಾಯ. ಅಂಥದ್ದೇ ಒಂದು ಅದ್ಭುತ ಅಭ್ಯಾಸವೆಂದರೆ ನೆನೆಸಿದ ವಾಲ್‌ನಟ್ಸ್ (ಆಕ್ರೋಟ್) (soaked walnuts) ಮತ್ತು ಒಣದ್ರಾಕ್ಷಿಯನ್ನು (raisins) ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು. ಈ ಎರಡೂ ಪೋಷಕಾಂಶಗಳ ಆಗರವಾಗಿದ್ದು, ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿನ್ನುವುದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ, ದಿನವಿಡೀ ಚೈತನ್ಯದಿಂದಿರಲು ಸಹಾಯ ಮಾಡುತ್ತದೆ. ವಾಲ್‌ನಟ್ಸ್ ಅನ್ನು ನೆನೆಸುವುದರಿಂದ ಅದರಲ್ಲಿರುವ ಟ್ಯಾನಿನ್ ಅಂಶ ಕಡಿಮೆಯಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆ ಹೆಚ್ಚುತ್ತದೆ. ಅಧ್ಯಯನದ ಪ್ರಕಾರ, ವಾಲ್‌ನಟ್ಸ್ ಸೇವನೆಯು ಫೀಕಲಿಬ್ಯಾಕ್ಟೀರಿಯಂ ಮತ್ತು ರೋಸ್‌ಬ್ಯೂರಿಯಾ ನಂತಹ ಉರಿಯೂತ ನಿವಾರಕ ಕರುಳಿನ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುತ್ತದೆ. ಒಣದ್ರಾಕ್ಷಿ ನೈಸರ್ಗಿಕ ಪ್ರಿಬಯಾಟಿಕ್ ಆಗಿ ಕಾರ್ಯನಿರ್ವಹಿಸಿ, ಕರುಳಿನ ಸ್ನೇಹಿ ಬ್ಯಾಕ್ಟೀರಿಯಾಗಳನ್ನು ಬೆಂಬಲಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
ಇನ್ನಷ್ಟು ಓದಿರಿ : ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ನೇಮಕಾತಿ ; ಅರ್ಜಿ ಅಹ್ವಾನ