ಇಂಡಿಗೋ ಸಂಸ್ಥೆಯು ಕಳೆದ ಡಿಸೆಂಬರ್ ನಲ್ಲಿ ಇಂಡಿಗೋ ವಿಮಾನ ಸೇವೆಗಳಲ್ಲಿ ಸಂಬಂಧಿಸಿದ ವ್ಯಾಪಕ ಅಡಚಣೆ ಲಕ್ಷಾಂತರ ಪ್ರಯಾಣಿಕರಿಗೆ ದೇಶಾದ್ಯಂತ ತೊಂದರೆ ನೀಡಿತು. ಈ ಸಂದರ್ಭದ ಬಗ್ಗೆ ಡಿಜಿಸಿಎ ನಡೆದ ತನಿಖೆ ಇದೀಗ ಬಹಿರಂಗವಾಗಿದೆ. ಡಿಜಿಸಿಎ ಇಂಡಿಗೋಗೆ ₹22.2 ಕೋಟಿ ದಂಡವನ್ನು ವಿಧಿಸಿದೆ. ಮತ್ತು CEO ಎಲ್ಬರ್ಸ್ ಗೆ ಕಠಿಣ ಎಚ್ಚರಿಕೆ ನೀಡಿದೆ. ಈ ಕ್ರಮದಿಂದ ವಿಮಾನಯಾನ ಉದ್ಯಮದಲ್ಲಿ ನಿಶ್ಚಿತತೆ ನಿಯಮ ಪಾಲನೆ ಮತ್ತು ಭದ್ರತೆ ಬಗ್ಗೆ ಸಂದೇಶ ನೀಡಲಾಗಿದೆ. ನಮಗೆ ದೊರೆತಿರುವ ಮಾಹಿತಿ ಪ್ರಕಾರ ಡಿಸೆಂಬರ್ ನಲ್ಲಿ ಸಂಭವಿಸಿದ ಇಂಡಿಗೋ ಕಾರ್ಯಾಚರಣೆ ಅಡಚಣೆ, ಡಿಜಿಸಿಎ ತನಿಖೆ ಫಲಿತಾಂಶ ಮತ್ತು ಕಾರಣಗಳು,₹೨೨.೨ ಕೋಟಿ ದಂಡದ ವಿವರ, CEO ಎಲ್ಬರ್ಸ್ ಗೆ ನೀಡಲಾದ ಎಚ್ಚರಿಕೆಯ ಅರ್ಥ, ವಿಮಾನಯಾನ ಉದ್ಯಮಕ್ಕೆ ಸಂಭವನೀಯ ಪರಿಣಾಮಗಳು. ಇವೆಲ್ಲವೂ ಕೂಡ ನಮಗೆ ದೊರೆತಿರುವಂತಹ ಮಾಹಿತಿಗಳು.
ಇಂಡಿಗೋ ವಿಮಾನ ಹಾರಾಟದಲ್ಲಿ ಸಂಭವಿಸಿದ ಭಾರಿ ಅಡಚಣೆಗೆ ಸಂಬಂಧಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಅಂದರೆ ಡಿಜಿಸಿಎ ಇಂಡಿಗೋ ವಿಮಾನಯಾನ ಸಂಸ್ಥೆಗೆ ₹೨೨.೨ ಕೋಟಿ ದಂಡ ವಿಧಿಸಿದೆ. ದೀರ್ಘಾವಧಿಯ ವ್ಯವಸ್ಥಿತ ತಿದ್ದುಪಡಿಗಳನ್ನು ಖಾತ್ರಿಪಡಿಸಲು ಸಂಸ್ಥೆಗೆ ₹೫೦ ಕೋಟಿ ಬ್ಯಾಂಕ್ ಗ್ಯಾರಂಟಿ ನೀಡುವಂತೆ ನಿರ್ದೇಶನ ಮಾಡಲಾಗಿದೆ.
ಇದರ ಜೊತೆಗೆ ವಿಮಾನಕಾರ್ಯಚರಣೆಗಳು ಮತ್ತು ಬಿಕ್ಕಟ್ಟು ನಿರ್ವಹಣೆಯಲ್ಲಿ ಅಸಮರ್ಪಕ ಮೇಲ್ವಿಚಾರಣೆ ನಡೆಸಿದ ಕಾರಣ CEO ಪೀಟರ್ ಎಲ್ಬರ್ಸ್ ಮತ್ತು ಇಬ್ಬರು ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಬಿಜಿಸಿಎ ಮಾಹಿತಿ ಪ್ರಕಾರ 2025ರ ಡಿಸೆಂಬರ್ 3 ಮತ್ತು 5ರ ನಡುವೆ 2,057 ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು 1,852 ವಿಮಾನಗಳ ಹಾರಾಟ ವಿಳಂಬವಾಯಿತು. ಇದರಿಂದ ದೇಶಾದ್ಯಂತ 3 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತೀವ್ರ ತೊಂದರೆಯನ್ನು ಅನುಭವಿಸಬೇಕಾಯಿತು.
DGCA ನಿಯಮಿತ ತನಿಖೆಯ ನಂತರ ಇಂಡಿಗೋ ವಿಮಾನಯಾನದಲ್ಲಿ ಸಂಭವಿಸಿದ ಭಾರಿ ಅಡಚಣೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದೆ. ಸಮರ್ಪಕ ಸಿದ್ಧತೆ ಸಿಸ್ಟಮ್ ಸಾಫ್ಟ್ವೇರ್ ಬೆಂಬಲದ ಕೊರತೆಗಳು ಹಾಗೂ ನಿರ್ವಹಣಾ ನಿಯಂತ್ರಣದಲ್ಲಿ ಉಂಟಾದ ಸಮಸ್ಯೆಗಳು ವಿಮಾನ ಹಾರಾಟದಲ್ಲಿ ಅಡಚಣೆ ಉಂಟಾಗಲು ಪ್ರಾಥಮಿಕ ಕಾರಣಗಳಾಗಿ ಕಂಡುಬಂದಿವೆ.
DGCA ಅಧಿಕಾರಿಗಳ ನಾಲ್ವರು ಸದಸ್ಯರ ಸಮಿತಿ ನಡೆಸಿದ ತನಿಖೆಯ ವರದಿ ಕಳೆದ ತಿಂಗಳಂತ್ಯದಲ್ಲಿ ಸಲ್ಲಿಸಲಾಗಿತ್ತು. ಇದರ ಆಧಾರದ ಮೇಲೆ ಇಂಡಿಗೋಗೆ ₹೨೨.೨ ಕೋಟಿ ದಂಡ ವಿಧಿಸುವ ಹಾಗೂ CEO ಪೀಟರ್ ಎಲ್ಬರ್ಸ್ ಸೇರಿದಂತೆ ಇಬ್ಬರು ಹಿರಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಕ್ರಮ ಕೈಗೊಳ್ಳಲಾಗಿದೆ.
ಇಂಡಿಗೋ ವಿಮಾನಯಾನ ಸಂಸ್ಥೆ ಪೈಲೆಟ್ಗಳ ಭತ್ಯೆ ಏರಿಸಿದೆ. 2026ರ ಜನವರಿ ೧ ರಿಂದ ಜಾರಿಗೆ ಬರುವಂತೆ ಪೈಲೆಟ್ ಗಳಿಗೆ ನೀಡುವ ವಿವಿಧ ಭತ್ಯೆಗಳನ್ನು 25 ರೂ. ದಿಂದ 2000 ರೂ.ವರೆಗೆ ಹೆಚ್ಚಿಸಲಾಗಿದೆ. ಈ ಭತ್ಯೆ ಹೆಚ್ಚಳವು ದೇಶಿಯ ಲೇಓವರ್, ಡೆಡ್ ಹೆಡ್, ನೈಟ್ ಹಾಗೂ ಟೈಲ್ ಸ್ಟಾಪ್ BHATYE ಸೇರಿದಂತೆ ವಿವಿಧ ವಿಭಾಗಗಳಿಗೆ ಅನ್ವಯಿಸುತ್ತದೆ.
ಇದು ವಿಶೇಷವಾಗಿ ರಾತ್ರಿ ಕಾರ್ಯಾಚರಣೆಗಳಿಗೆ ಹೆಚ್ಚಿನ ಪೈಲೆಟ್ ಗಳನ್ನು ನಿಯೋಜಿಸಲು ಹೊಸ ನಿಯಮಗಳ ಅನುಸಾರವಾಗಿ ಕೈಗೊಂಡ ತಿದ್ದುಪಡಿ ಎಂದು ತಿಳಿಸಿದ್ದಾರೆ.
ಈ ಇಂಡಿಗೋ ವಿಮಾನಯಾನ ಸಂಸ್ಥೆ DGCA ಆದೇಶಗಳನ್ನು ಸಂಪೂರ್ಣವಾಗಿ ಪಾಲಿಸಲು ಬದ್ಧತೆ ವ್ಯಕ್ತಪಡಿಸಿದೆ. ಮಂಡಳಿ ಮತ್ತು ಆಡಳಿತ ಮಂಡಳಿಯು ಸಮಯೋಚಿತವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕೃತ ಹೇಳಿಕೆಯಲ್ಲಿ ಭರವಸೆ ನೀಡಿದೆ. ಜೊತೆಗೆ ಪೈಲೆಟ್ ಗಳಿಗೆ ಹೊಸ ಮಾನದಂಡಗಳನ್ನು ಜಾರಿಗೆ ತರಲು ಸಿದ್ಧತೆ ಕೊರತೆ ಕಾರಣದಿಂದ ದೇಶಾದ್ಯಂತ ನೂರಾರು ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಹೊಸ ಪ್ಲೈಟ್ ಡ್ಯೂಟಿ ಟೈಮ್ ಲಿಮಿಟ್ (FTDL) ಮಾನದಂಡಗಳನ್ನು ಅನುಸರಿಸಲು ಇಂಡಿಗೋಗೆ ಫೆಬ್ರವರಿ ಹತ್ತರವರೆಗೆ ಸಡಲಿಕ್ಕೆ ನೀಡಲಾಗಿತ್ತು.
ನಾಗರಿಕ ವಿಮಾನಯಾನ ನಿರ್ದೇಶನಾಲಯವು ಇಂಡಿಗೋ ವಿಮಾನಯಾನ ಸಂಸ್ಥೆಗೆ ವಿಮಾನ ಕಾರ್ಯಾಚರಣೆಗಳಲ್ಲಿ ಸಂಭವಿಸಿದ ಭಾರಿ ಅಡಚಣೆಗಳಿಗಾಗಿ ₹೨೨.೨ ಕೋಟಿ ದಂಡ ವಿಧಿಸಿದೆ. CEO ಪೀಟರ್ ಎಲ್ಬರ್ಸ್ ಮತ್ತು ಇಬ್ಬರು ಹಿರಿಯ ಕಾರ್ಯನಿರ್ವಾಹಕರಿಗೆ ಹೆಚ್ಚಿನ ಮೇಲ್ವಿಚಾರಣೆ ಕೊರತೆಯ ಕಾರಣ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಇನ್ನಷ್ಟು ಓದಿರಿ:
ಉಡುಪಿ:ಶ್ರೀಗಳ ಪರ್ಯಾಯ ಮಹೋತ್ಸವ : ಅದ್ದೂರಿ ಶೋಭಾಯಾತ್ರೆ