<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಎಕ್ಸಿಮ್ ಬ್ಯಾಂಕ್ : Management Trainee ಹುದ್ದೆಗಳು ನೇಮಕಾತಿ

ಎಕ್ಸಿಮ್ ಬ್ಯಾಂಕ್ : Management Trainee ಹುದ್ದೆಗಳು ನೇಮಕಾತಿ
Summary: ಎಕ್ಸಿಮ್ ಬ್ಯಾಂಕಿನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ ಪ್ರಕಟವಾಗಿದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 65,000 ಸ್ಟೈಫಂಡ್ ನೀಡಲಾಗುತ್ತದೆ. ಅರ್ಹತಮಾನದಂಡ ವಯಸ್ಸು ಮಿತಿ ಅರ್ಜಿ ಪ್ರಕ್ರಿಯೆ ಆಯ್ಕೆ ವಿಧಾನ ಹಾಗೂ ಕೊನೆಯ ದಿನ ಸೇರಿದಂತೆ ಸಂಪೂರ್ಣ ನೇಮಕಾತಿ ವಿವರಗಳನ್ನು ಇಲ್ಲಿ ತಿಳಿಯಿರಿ.
belagavi news:

ಎಕ್ಸಿಮ್ ಬ್ಯಾಂಕ್ 2026 ನೆ ಸಾಲಿಗೆ 40 ಮ್ಯಾನೇಜ್ಮೆಂಟ್ ಟ್ರೈನಿ MT ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 17 ರಿಂದ ಫೆಬ್ರುವರಿ 1ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿಗೆ ಯಾವುದೇ ಪದವಿ ಹೊಂದಿರುವವರು ಹಾಗೂ MBA / PGDBA / CA ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 65,000 ಸ್ಟೈಫಂಡ್ ನೊಂದಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರ ಅವರನ್ನು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ನೇಮಿಸಲಾಗುವುದು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಲು ಅಥವಾ ಬೆಳೆಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇಂದು ಅತ್ಯುತ್ತಮ ಅವಕಾಶವಾಗಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನಕ್ಕೆ ಸುವರ್ಣ ಅವಕಾಶ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ನೇಮಿಸಲು ಬಯಸುವ ಯುವ ಜನರಿಗೆ ಒಳ್ಳೆಯ ಸುದ್ದಿ ಇದೆ. ಎಕ್ಸ್ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ EXIM BANK 2026 ನೆ ಸಾಲಿನ ನೇಮಕಾತಿಯಾಗಿ ಮ್ಯಾನೇಜ್ಮೆಂಟ್ ಟ್ರೈನಿ MT ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 40 ಹುದ್ದೆಗಳು ಭರ್ತಿಯಾಗಲಿವೆ. ಆನ್ಲೈನ್ ಅರ್ಜಿ ಪ್ರಕ್ರಿಯೆ ಜನವರಿ 17 ರಿಂದ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 1ರವರೆಗೆ ಅರ್ಜಿಸಲ್ಲಿಸಬಹುದು.

EXIM BANK ನಲ್ಲಿ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆ ಬ್ಯಾಂಕಿಂಗ್ ವೃತ್ತಿ ಜೀವನಕ್ಕೆ ಭದ್ರವಾದ ಆರಾಮ ನೀಡುವ ಜೊತೆಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆ ಅವಕಾಶವನ್ನು ಒದಗಿಸುತ್ತದೆ.

ಎಕ್ಸಿಮ್ ಬ್ಯಾಂಕ್ MT ಅರ್ಜಿ ಪ್ರಕ್ರಿಯೆ ಮತ್ತು ಶುಲ್ಕ ವಿವರ

ಆಸಕ್ತ ಅಭ್ಯರ್ಥಿಗಳು ಎಕ್ಸಿಮ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಕೊನೆಯ ಕ್ಷಣದವರೆಗೆ ಕಾಯದ ಅರ್ಜಿ ಸಲ್ಲಿಸುವಂತೆ ಬ್ಯಾಂಕ್ ಸ್ಪಷ್ಟ ಸಲಹೆ ನೀಡಿದ್ದು ಇದರಿಂದ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಬಹುದು.

ಅರ್ಜಿ ಶುಲ್ಕ ವಿವರ:

ಸಾಮಾನ್ಯ/OBC ಅಭ್ಯರ್ಥಿಗಳು ₹ 600
SC / ST / ಅಂಗವಿಕಲ / EWS / ಮಹಿಳಾ ಅಭ್ಯರ್ಥಿಗಳು: ₹100

ಅರ್ಜಿ ಶುಲ್ಕವನ ಆನ್ಲೈನ್ ಮೂಲಕವೇ ಪಾವತಿಸಬೇಕು ಎಂದು ಎಕ್ಸಿಮ್ ಬ್ಯಾಂಕ್ ತಿಳಿಸಿದೆ.

ಶೈಕ್ಷಣಿಕ ಅರ್ಹತೆ ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಯಾವುದೇ ಸ್ಟ್ರೀಮ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಮೂರು ವರ್ಷಗಳ ಪೂರ್ಣಕಾಲಿಕ ಪದವಿ ಹೊಂದಿರಬೇಕು. ಜೊತೆಗೆ ಹಣಕಾಸು ಅಂತರಾಷ್ಟ್ರೀಯ ವ್ಯವಹಾರ ಅಥವಾ ವಿದೇಶಿ ವ್ಯಾಪಾರದಲ್ಲಿ ವಿಶೇಷತೆಯೊಂದಿಗೆ ಕೆಳಗಿನ ಯಾವುದೇ ಎರಡು ವರ್ಷಗಳ ಪೂರ್ಣಕಾಲಿಕ ಕೋರ್ಸ್ ಪೂರ್ಣಗೊಳಿಸಿರುವವರು ಅರ್ಹರಾಗಿರುತ್ತಾರೆ:
MBA / PGDBA / PGDBM / MMS
CA

ಸೂಚನೆ: ಜನವರಿ 2026ರಲ್ಲಿ ಅಂತಿಮ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ:
ಕನಿಷ್ಠ ವಯಸ್ಸು; 21 ವರ್ಷ
ಗರಿಷ್ಠ ವಯಸ್ಸು ;28 ವರ್ಷ
(ಡಿಸೆಂಬರ್ 31 2025ರ ವೇಳೆಗೆ)
ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಎಕ್ಸಿಮ್ ಬ್ಯಾಂಕ್ ನೇಮಕಾತಿ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯಲಿದೆ.
ಲಿಖಿತ ಪರೀಕ್ಷೆ
ಸಂದರ್ಶನ

ಲಿಖಿತ ಪರೀಕ್ಷೆಯನ್ನು ಫೆಬ್ರವರಿ 2026ರಲ್ಲಿ ನಡೆಸುವ ಸಾಧ್ಯತೆ ಇದೆ ಪರೀಕ್ಷೆಯ ಮಾದರಿ ಮತ್ತು ಪಠ್ಯಕ್ರಮವನ್ನು ಎಕ್ಸಿಮ್ ಬ್ಯಾಂಕ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಶೀಘ್ರದಲ್ಲಿ ಪ್ರಕಟಿಸಿಲಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿ ನೀಡಲಾಗುತ್ತದೆ ಈ ತರ ವ್ಯಕ್ತಿ ಅವಧಿಯಲ್ಲಿ ಅವರಿಗೆ ತಿಂಗಳಿಗೆ 65,000 ರೂ. ಸ್ಟ್ರೈಫಂಡ್ ನೀಡಲಾಗುತ್ತದೆ ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ ಅಭ್ಯರ್ಥಿಗಳನ್ನು ಡೆಪ್ಯೂಟಿ ಮ್ಯಾನೇಜರ್ (JM-I) ಹುದ್ದೆಗೆ ನೇಮಿಸಲಾಗುತ್ತದೆ.

ಈ ಹುದ್ದೆಗೆ 48,480 ರಿಂದ 85,920 ರೂ. ವರೆಗೆ ವೇತನದ ಜೊತೆಗೆ ಇತರ ಭತ್ಯೆಗಳು ಮತ್ತು ಸೌಲಭ್ಯಗಳು ದೊರೆಯುತ್ತವೆ. ಒಟ್ಟಿನಲ್ಲಿ ಭದ್ರ ಮತ್ತು ಗೌರವಯುತ ಬ್ಯಾಂಕಿಂಗ್ ವೃತ್ತಿ ಜೀವನವನ್ನು ಬಯಸುವ ಯುವಜನರಿಗೆ ಎಕ್ಸಿಮ್ ಬ್ಯಾಂಕ್ ನೇಮಕಾತಿ ಅತ್ಯುತ್ತಮಾವಕಾಶವಾಗಿದ್ದು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಕೈ ತಪ್ಪಿಸಿಕೊಳ್ಳಬೇಡಿ

ಇನ್ನಷ್ಟು ಓದಿರಿ:

ಶೇಖ್ ಹಸೀನಾ ಆಕ್ರೋಶ : ಬಾಂಗ್ಲಾ ಸಾರ್ವತ್ರಿಕ ಚುನಾವಣೆ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online