<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಶಕ್ತಿ ನಗರಕ್ಕೆ ವೇಗದೂತ ಬಸ್ ಸಂಚಾರ ಆರಂಭ: ಎಚ್.ರಾಮನಗೌಡರ್

ಶಕ್ತಿ ನಗರಕ್ಕೆ ವೇಗದೂತ ಬಸ್ ಸಂಚಾರ ಆರಂಭ: ಎಚ್.ರಾಮನಗೌಡರ್
Summary: ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿಯಿಂದ ಹೈದರಾಬಾದ್, ಸೊಲ್ಲಾಪುರ ಹಾಗೂ ಶಕ್ತಿನಗರಕ್ಕೆ ರಾತ್ರಿ ಸಾರಿಗೆ ವೇಗದೂತ ಬಸ್​ಗಳ ಸಂಚಾರವನ್ನು ಆರಂಭಿಸಲಾಗಿದೆ.
BELAGAVI NEWS:
ಸಂಕ್ರಾಂತಿ ಹಬ್ಬದ ಪ್ರಯುಕ್ತ ಯಶವಂತಪುರ - ತಾಳಗುಪ್ಪ ನಡುವೆ ವಿಶೇಷ ರೈಲುಗಳ ಸಂಚಾರ: ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡಲು, ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ತಾಳಗುಪ್ಪ ನಿಲ್ದಾಣಗಳ ನಡುವೆ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ತಮ್ಮ ಕೆಲಸ ಕಾರ್ಯಗಳಿಗಾಗಿ ನಿಯಮಿತವಾಗಿ ಪ್ರಯಾಣ ಮಾಡುವವರ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ ನೆರೆಯ ರಾಜ್ಯಗಳ ಪ್ರಮುಖ ಸ್ಥಳಗಳಿಗೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದಿದ್ದವು. ಅದರಂತೆ ಇಲ್ಲಿಂದ ಹೈದರಾಬಾದ್, ಸೊಲ್ಲಾಪುರ ಹಾಗೂ ಶಕ್ತಿನಗರಕ್ಕೆ ರಾತ್ರಿ ಸಮಯದಲ್ಲಿ ವೇಗದೂತ ಸಾರಿಗೆ ಬಸ್​​ಗಳ ಸಂಚಾರ ಆರಂಭಿಸಲಾಗಿದೆ. ಈ ಬಸ್​ಗಳು ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಆರಂಭಗೊಂದು, ಬಳಿಕ ಹೊಸೂರು ಬಸ್ ನಿಲ್ದಾಣದ ಮೂಲಕ ಸಂಚರಿಸುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ - ಸೊಲ್ಲಾಪುರ: ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ರಾತ್ರಿ 8-30ಕ್ಕೆ ಹೊರಡುತ್ತದೆ. ಧಾರವಾಡ, ಸವದತ್ತಿ, ರಾಮದುರ್ಗ, ಲೋಕಾಪುರ, ಮುಧೋಳ, ಜಮಖಂಡಿ, ವಿಜಯಪುರ ಮಾರ್ಗವಾಗಿ ಸೊಲ್ಲಾಪುರಕ್ಕೆ ಮರುದಿನ ಬೆಳಗ್ಗೆ 6 ಗಂಟೆಗೆ ತಲುಪುತ್ತದೆ. ಸೊಲ್ಲಾಪುರದಿಂದ ರಾತ್ರಿ 8-30ಕ್ಕೆ ಅಲ್ಲಿಂದ ಹೊರಡಲಿದ್ದು, ಹುಬ್ಬಳ್ಳಿಗೆ ಮರುದಿನ ಬೆಳಗ್ಗೆ 6 ಗಂಟೆಗೆ ಆಗಮಿಸುತ್ತದೆ. ಒಟ್ಟು ಪ್ರಯಾಣ ದರ ರೂ. 491 ನಿಗದಿಪಡಿಸಲಾಗಿದೆ.

ರೈಲು ಸಂಖ್ಯೆ 06585 ಯಶವಂತಪುರ - ತಾಳಗುಪ್ಪ ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 13.01.2026 ರಂದು (ಮಂಗಳವಾರ) ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗಿನ ಜಾವ 04:45ಕ್ಕೆ ತಾಳಗುಪ್ಪ ತಲುಪಲಿದೆ. ಇದರ ಜೋಡಿ ರೈಲು, ಸಂಖ್ಯೆ 06586 ತಾಳಗುಪ್ಪ - ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 14.01.2026 ರಂದು (ಬುಧವಾರ) ಬೆಳಗ್ಗೆ 10:00ಕ್ಕೆ ತಾಳಗುಪ್ಪದಿಂದ ಹೊರಟು, ಅಂದೇ ಸಂಜೆ 05:15ಕ್ಕೆ ಯಶವಂತಪುರ ತಲುಪಲಿದೆ.

ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ಸಂಚರಿಸುವಾಗ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.

ಹುಬ್ಬಳ್ಳಿ - ಹೈದರಾಬಾದ್: ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಸಂಜೆ 7-00 ಗಂಟೆಗೆ ಹೊರಡಲಿದೆ. ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ರಾಯಚೂರು, ಮೆಹಬೂಬ ನಗರ ಮೂಲಕ ಹೈದರಾಬಾದ್ ಮಹಾತ್ಮ ಗಾಂಧಿ ಬಸ್ ನಿಲ್ದಾಣಕ್ಕೆ ಮರುದಿನ ಬೆಳಗ್ಗೆ 6 -30ಗಂಟೆಗೆ ತಲುಪಲಿದೆ. ಹೈದರಾಬಾದ್ MG ಬಸ್ ನಿಲ್ದಾಣದಿಂದ ಸಂಜೆ 7 -15ಕ್ಕೆ ಹೊರಡಲಿದ್ದು, ಹುಬ್ಬಳ್ಳಿಗೆ ಮರುದಿನ ಬೆಳಗ್ಗೆ 6-30 ಗಂಟೆಗೆ ಆಗಮಿಸಲಿದೆ. ಅಪಘಾತ ಪರಿಹಾರ ವಿಮೆ, ಟೋಲ್ ಫೀ ಸೇರಿ ಒಟ್ಟು ಪ್ರಯಾಣ ದರ ಹೈದರಾಬಾದ್​ಗೆ ರೂ.709 ಹಾಗೂ ರಾಯಚೂರಿಗೆ ರೂ.408 ನಿಗದಿಪಡಿಸಲಾಗಿದೆ.

ಮುಂಗಡ ಬುಕ್ಕಿಂಗ್​ಗೆ ರಿಯಾಯಿತಿ: ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ www.ksrtc.in ವೆಬ್​ಸೈಟ್ ಹಾಗೂ KSRTC Mobile Booking App ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ.

ಒಂದೇ ಟಿಕೆಟ್​ನಲ್ಲಿ 4 ಅಥವಾ ಹೆಚ್ಚು ಆಸನಗಳನ್ನು ಕಾಯ್ದಿರಿಸಿದರೆ ಪ್ರಯಾಣದಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಖರೀದಿಸಿದರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಪ್ರಯಾಣಿಕರು ಈ ವಿಶೇಷ ರೈಲು ಸೇವೆಯ ಲಾಭವನ್ನು ಪಡೆದುಕೊಳ್ಳಲು ಹಾಗೂ ಮುಂಚಿತವಾಗಿ ತಮ್ಮ ಪ್ರಯಾಣವನ್ನು ಯೋಜಿಸಲು ಕೋರಲಾಗಿದೆ.

ಇನ್ನಷ್ಟು ಓದಿರಿ :
ಚಾಲನ ಪರವಾನಿಗೆಯಲ್ಲಿ ಏನಾದರೂ ತಪ್ಪಾಗಿದ್ದರೆ ತಿದ್ದುಪಡಿ ಮಾಡಲು ಉತ್ತಮ ಅವಕಾಶ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online