ಕರ್ನಾಟಕದಲ್ಲಿ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು 2024ರಲ್ಲಿ 5 ವರ್ಷಗಳ ನೀತಿಯನ್ನು ಘೋಷಣೆ ಮಾಡಿ ಜಾರಿಗೆ ತರುವ ಕೆಲಸ ಮಾಡಿದ್ದೇವೆ. ಇದರಲ್ಲಿ ಸರಕಾರ ಅನೇಕ ಸೌಕರ್ಯ, ಬೆಂಬಲ, ಸಹಕಾರ ನೀಡಿದೆ ಎಂದು ಸಿಎಂ ಹೇಳಿದರು.
ತೆರಿಗೆ ಕಟ್ಟುವಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ: 320ಕಿಮೀ ಉದ್ದದ ಕರಾವಳಿ ಪ್ರದೇಶದಲ್ಲಿ ಈವರೆಗೆ ಪ್ರವಾಸೋದ್ಯಮ ಅಭಿವೃದ್ಧಿ ಆಗಿರಲಿಲ್ಲ. ಯಾವ ಸರಕಾರವೂ ಅಭಿವೃದ್ಧಿ ಮಾಡಲು ಮುಂದೆ ಬಂದಿಲ್ಲ. ಇದೀಗ ಡಿಕೆಶಿ ಹಾಗೂ ಎಚ್.ಕೆ.ಪಾಟೀಲ್ ಅವರ ವಿಶೇಷ ಕಾಳಜಿಯಿಂದ ಅಭಿವೃದ್ಧಿ ಆಗಲಿದೆ. ಶಿಕ್ಷಣ, ಬ್ಯಾಂಕ್ ಆರೋಗ್ಯಕ್ಕೆ ಕರಾವಳಿಯಲ್ಲಿ ವಿಶೇಷ ಆದ್ಯತೆಯಿದೆ. ಇಲ್ಲಿ ರಾಜ್ಯದಲ್ಲಿಯೇ ಅಧಿಕ ಮಂದಿ ಸುಶಿಕ್ಷಿತರು ಇದ್ದಾರೆ.
ತೆರಿಗೆ ಕೊಡುವುದರಲ್ಲಿ ಕರಾವಳಿಗರು ಮುಂದಿದ್ದಾರೆ. ತೆರಿಗೆ ಸಂಗ್ರಹದಲ್ಲಿ ದೇಶದಲ್ಲಿಯೇ ಮಹಾರಾಷ್ಟ್ರ ಹೊರತುಪಡಿಸಿ ಕರ್ನಾಟಕ ನಂಬರ್ ಎರಡನೆ ಸ್ಥಾನದಲ್ಲಿದೆ. ಇದರಲ್ಲಿ ರಾಜ್ಯದಲ್ಲಿಯೇ ಬೆಂಗಳೂರು ಬಿಟ್ಟರೆ ಮಂಗಳೂರಿನ ಪಾತ್ರ ಹೆಚ್ಚಿದೆ. ಆದ್ದರಿಂದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಿದರೆ ಮಹಾರಾಷ್ಟ್ರವನ್ನು ಹಿಂದಕ್ಕಿ ರಾಜ್ಯ ಮುಂದೆ ಹೋಗಲಿದೆ ಎಂದರು.
ಮಂಗಳೂರು ಅತ್ತಾವರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಹೆಚ್ಚು ಪೂರಕವಾಗಿರುವ ಜಿಲ್ಲೆಗಳು. ಕರ್ನಾಟಕದಲ್ಲಿ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು 2024ರಲ್ಲಿ 5 ವರ್ಷಗಳ ನೀತಿಯನ್ನು ಘೋಷಣೆ ಮಾಡಿ ಜಾರಿಗೆ ತರುವ ಕೆಲಸ ಮಾಡಿದ್ದೇವೆ. ಇದರಲ್ಲಿ ಸರಕಾರ ಅನೇಕ ಸೌಕರ್ಯ, ಬೆಂಬಲ, ಸಹಕಾರ ನೀಡಿದೆ ಎಂದರು.
ಪ್ರವಾಸೋದ್ಯಮ ಬೆಳೆಯಬೇಕಾದರೆ ಕಾನೂನು ಸುವ್ಯವಸ್ಥೆ ಚೆನ್ನಾಗಿರಬೇಕು. ಸದ್ಯ ಈಗ ಶಾಂತ ವಾತಾವರಣ ಇರುವುದು ಅತ್ಯಂತ ಸ್ವಾಗತಾರ್ಹ. ಇದೇ ರೀತಿ ಮುಂದುವರಿಯಬೇಕು. ಕಾನೂನು ಕೈಗೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಸಮಾಜ ಒಡೆಯುವ ಕೆಲಸ ಮಾಡಬಾರದು. ದೇಶಭಕ್ತಿ ಸಮಾಜ ಒಡೆಯುವುದರಿಂದ, ಇನ್ನೊಂದು ಧರ್ಮದವರಿಗೆ ತೊಂದರೆ ಕೊಡುವುದರಿಂದ ಬರುವುದಿಲ್ಲ. ಎಲ್ಲಾ ಧರ್ಮಗಳು ದ್ವೇಷ ಬಿತ್ತುವ ಕೆಲಸ ಮಾಡಲ್ಲ ಎಂದರು.
ಇಲ್ಲೆ ಉದ್ಯಮ ಸ್ಥಾಪಿಸಿ, ಕರಾವಳಿ ಯುವಕರಿಗೆ ಸಿಎಂ ಕರೆ: ವಿಷಾದವೆಂದರೆ ದೇಶ - ವಿದೇಶಿಗರು ಉನ್ನತ ಶಿಕ್ಷಣಕ್ಕೆ ಕರಾವಳಿಗೆ ಬರುತ್ತಾರೆ. ಆದರೆ ಇಲ್ಲಿನ ಸ್ಥಳೀಯ ಯುವಕರು ಕೆಲಸ ಹುಡುಕಿಕೊಂಡು ಬೆಂಗಳೂರು, ವಿದೇಶಕ್ಕೆ ಹೋಗುತ್ತಾರೆ. ಆದ್ದರಿಂದ ಇಲ್ಲೇ ಇರಲು ಪ್ರಯತ್ನ ಅತ್ಯಂತ ಅವಶ್ಯಕ. ಇಲ್ಲೇ ಉದ್ದಿಮೆ ಮಾಡಿದರೆ ಇನ್ನೊಬ್ಬರಿಗೆ ಕೆಲಸ ಕೊಡಲು ಸಾಧ್ಯ. ಇಷ್ಟೆಲ್ಲಾ ಬೆಳವಣಿಗೆ ಆದರೂ ಇಲ್ಲೊಂದು ಫೈವ್ ಸ್ಟಾರ್ ಹೊಟೇಲ್ ಇಲ್ಲ. ಇದೀಗ ಮುಂದೆ ಬಂದಿದ್ದಾರೆ. ಇಲ್ಲಿನ ಸ್ಥಳೀಯರು ಸಾಹಸ ಸ್ವರೂಪಿಗಳು. ದುಬೈ, ಪೂನಾ,ಲಂಡನ್ ಗೆ ಹೋಗಿ ಉದ್ದಿಮೆ ಸ್ಥಾಪನೆ ಮಾಡಿದವರು. ಅಲ್ಲಿ ಮಾಡುವ ಉದ್ದಿಮೆಯನ್ನು ಇಲ್ಲಿಯೇ ಮಾಡಿ ಎಂದರು.
ಪ್ರವಾಸೋದ್ಯಮದ ಅಭಿವೃದ್ಧಿಗೆ ಹೂಡಿಕೆ ಮಾಡಲು ಮುಂದೆ ಬರುವವರಿಗೆ ನಮ್ಮ ಸರಕಾರ ಸಹಕಾರ ನೀಡುತ್ತದೆ. ಇದು ಬರೀ ಭರವಸೆಯಲ್ಲ. ನಮ್ಮದು ನುಡಿದಂತೆ ನಡೆದ ಸರಕಾರ ಹೇಳಿದ್ದನ್ನು ಮಾಡಿಯೇ ಮಾಡುತ್ತೇವೆ ಎಂದು ವಾಗ್ದಾನ ಮಾಡಿದರು.
ಇನ್ನಷ್ಟು ಓದಿರಿ:
ಟಾಪ್ ಕಾರ್ ಗಳ ಪೈಪೋಟಿ : 2026 ವರ್ಲ್ಡ್ ಕಾರ್ ಅವಾರ್ಡ್ಸ್ ಫೈನಲ್ ಲಿಸ್ಟ್ ಪ್ರಕಟ