ನಿನ್ನೆ ಅಂದರೆ ಗುರುವಾರದಂದು ಹೈಕೋರ್ಟ್ ಮಹತ್ವದ ಸ್ಪಷ್ಟನೆಯನ್ನು ಪ್ರಕಟಿಸಿದೆ ಅದೇನೆಂದರೆ ಲೈಸನ್ಸ್ ಇಲ್ಲದೆ ವಾಹನವನ್ನು ಚಲಾಯಿಸುವುದು ಕಾನೂನುಬಾಹಿರ ಎಂದು ನಮಗೆ ತಿಳಿದಿದೆ , ಆದರೆ ಲೈಸನ್ಸ್ ಇಲ್ಲದೆ ವಾಹನವನ್ನು ಪಡೆದು ಯಾವುದಾದರೂ ಅಪಘಾತ ಸಂಭವಿಸಿದರೆ ಅದರ ಅಂದರೆ ಅಪಘಾತದ ಸಂಪೂರ್ಣ ಜವಾಬ್ದಾರಿಯನ್ನು ವಾಹನದ ಮಾಲೀಕನೇ ಅಥವಾ ಅವರ ಮಾಲೀಕನ ಸಂತ್ರಸ್ತರು ಸಂಪೂರ್ಣ ಜವಾಬ್ದಾರಿ ವಹಿಸಬೇಕೆಂದು ಸ್ಪಷ್ಟ ಮಾತನ್ನು ಹೈಕೋರ್ಟ್ ಪ್ರಕಟಿಸಿದೆ.
ಚಾಲಕ ಪರವಾನಿಗೆ ಹೊಂದಿಲ್ಲದ ಕಾರಣ ಶಾಲಾ ವಾಹನ ಅಪಘಾತದಲ್ಲಿ ನದಿಗೆ ಬಿದ್ದ ಚಾಲಕ ಕುಟುಂಬಕ್ಕೆ ಪರಿಹಾರ ಪಾವತಿಸಲು ಹೈಕೋರ್ಟ್ ಶಾಲೆಯ ಮುಖ್ಯಶಿಕ್ಷಕ ಹಾಗೂ ಮಾಲಿಕನಿಗೆ ಆದೇಶವನ್ನು ಹೊರಡಿಸಿದೆ.
ನ್ಯಾಯಮೂರ್ತಿ ಕೆ . ಮನ್ಮಥರಾವ್ ಅವರ ಪೀಠ ಮುಖ್ಯೋಪಾಧ್ಯಾಯ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿ , ವಾಹನ ಮಾಲೀಕರು ಚಾಲಕನ ಪರವಾನಗಿ ದೃಢಪಡಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಿದೆ.
ಈ ತೀರ್ಪು ಶಾಲಾವಾಹನ ನಿರ್ವಹಣೆ ಸಾರ್ವಜನಿಕ ಸುರಕ್ಷತೆ ಮತ್ತು ಚಾಲಕ ಪರವಾನಗಿ ನಿಯಮ ಪಾಲನೆಯ ಕುರಿತು ಎಚ್ಚರಿಕೆಯ ಗಂಟೆಯಾಗಿದ್ದು , ಎಲ್ಲಾ ಶಾಲೆಗಳಿಗೆ ಪಾಠವಾಗಲಿದೆ.
ಮಂಗಳೂರು ತಾಲೂಕಿನ ತೆಂಕುಲಿಪಾಡಿಯ ಬಲ್ಮಿ ಪ್ರಾಥಮಿಕ ಶಾಲೆಯಲ್ಲಿ ನಡೆದ ದುಃಖದ ಘಟನೆಯಲ್ಲಿ , ಶಾಲಾ ವಾಹನ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದಿತ್ತು. ಘಟನೆಯ ಸಮಯದಲ್ಲಿ ಚಾಲಕ ಪರವಾನಿಗೆ ಹೊಂದಿರದೆ ಚಾಲನೆ ಮಾಡುತ್ತಿದ್ದ ಕಾರಣ , ಹೈಕೋರ್ಟ್ ಮೃತ ಚಾಲಕನ ಕುಟುಂಬಕ್ಕೆ ಪರಿಹಾರ ಪಾವತಿಸಲು ಶಾಲಾ ಮುಖ್ಯಶಿಕ್ಷಕ ಮತ್ತು ವಾಹನ ಮಾಲೀಕರಿಗೆ ಆದೇಶ ನೀಡಿದೆ.
ಶಾಲಾ ವಾಹನ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದಿತ್ತು ಘಟನೆ ಸಂಭವಿಸಿದ ವೇಳೆ ಬದ್ರುದ್ದೀನ್ ಅಪಘಾತಕ್ಕೆ ಒಳಗಾದ ಬಸ್ (7,500 ಕೆ.ಜಿಗಿಂತ ಕಡಿಮೆ ತೂಕದ ವಾಹನ) ಚಲಾಯಿಸಲು ಮಾನ್ಯತೆ ಹೊಂದಿರುವ (ಅಧಿಕೃತ) ಚಾಲನಾ ಪರವಾನಗಿ ಹೊಂದಿರಲಿಲ್ಲ.ಬದ್ರುದ್ದೀನ್ ಕುಟುಂಬದವರಿಗೆ ಪರಿಹಾರ ಪಾವತಿಸುವ ಹೊಣೆಯನ್ನು ಶಾಲಾ ಮುಖ್ಯೋಪಾಧ್ಯಾಯರ ಹೆಗಲಿಗೆ ಹೊರಿಸಿ ಅಧೀನ ನ್ಯಾಯಾಲಯ ಹೊರಡಿಸಿದ ಆದೇಶ ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿ, ಮೇಲ್ಮನವಿಯನ್ನು ವಜಾಗೊಳಿಸಿತು. ಎಂದು ತಿಳಿಸಲಾಗಿದೆ. ಬದ್ರುದ್ದೀನ್ ಅಧಿಕೃತ ಚಾಲನಾ ಪರವಾನಗಿ ಹೊಂದಿದ್ದರು ಎಂದು ಬಸ್ ಮಾಲೀಕರಾದ ಶಾಲಾ ಮುಖ್ಯೋಪಾಧ್ಯಾಯರು ವಾದಿಸಿದರೂ, ಅದನ್ನು ನಂಬಲು ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ. ಎಂದು ತಿಳಿಸಲಾಗಿದೆ.
ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ : ವಾಹನ ಮಾಲೀಕರ ಜವಾಬ್ದಾರಿಯು ಅವರ ಚಾಲಕರು ಮಾನ್ಯ ಚಾಲಕರ ಪರವಾನಿಗೆ ಹೊಂದಿದ್ದಾರೆ ಎಂಬುವುದು ಖಚಿತ ಪಡಿಸಿಕೊಳ್ಳುವುದಾಗಿದೆ.
ಚಾಲಕನ ಅಧಿಕೃತ ಚಾಲನಾ ಪರವಾನಿಗೆ ಇಲ್ಲದಿದ್ದರೆ ಮತ್ತು ಮಾಲೀಕರು ಈ ಜವಾಬ್ದಾರಿಯನ್ನು ನಿರ್ವಹಿಸದಿದ್ದರೆ ಅದು ವಿಮಾ ಪಾಲಿಸಿದ ಷರತ್ತುಗಳನ್ನು ಉಲ್ಲಂಘನೆಗೊಳಿಸುತ್ತದೆ. ಈ ಸಂದರ್ಭದಲ್ಲಿ , ವಾಹನವು ವಿಮಾ ಸೌಲಭ್ಯ ಹೊಂದಿದ್ದರೂ , ಅಪಘಾತದಲ್ಲಿ ಸಂತ್ರಸ್ತರಿಗೆ ಪರಿಹಾರ ಪಾವತಿಸುವ ಹೊಣೆ ವಿಮಾ ಕಂಪನಿಗೆ ಇರದು , ಸಕಲ ಹೊಣೆ ಮಾಲೀಕನ ಮೇಲೆ ಬರುತ್ತದೆ ಎಂದು ನ್ಯಾಯಪೀಠ ಹೇಳಿದರು.
ಈ ತೀರ್ಪು ವಾಹನ ಮಾಲೀಕರಿಗೆ ಎಚ್ಚರಿಕೆ ಹಾಗೂ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಮಹತ್ವದ ಪಾಠವಾಗಿದೆ.
ಇನ್ನಷ್ಟು ಓದಿರಿ:
ಅಂಡರ್-19 ವಿಶ್ವಕಪ್: ಭಾರತ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕವನ್ನು 6 ವಿಕೆಟ್ಗಳಿಂದ ಸೋಲಿಸಿತು