ಕರ್ನಾಟಕ ಕ್ರೀಡಾಕೂಟ 2025 26 ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ. ತುಮಕೂರಿನಿಂದ ವಿಶ್ವ ಮಟ್ಟದ ಕ್ರೀಡಾಕೂಟಗಳು ಹೊರಹೊಮ್ಮಬೇಕು ಎಂಬ ಆಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದರು. ಅವರು ಶುಕ್ರವಾರ ನಗರದಲ್ಲಿ ಆಯೋಜಿಸಿದ ಕರ್ನಾಟಕ ಕ್ರೀಡಾಕೂಟ 2025 26ರಂದು ಉದ್ಘಾಟಿಸಿ ಮಾತನಾಡುತ್ತಿರುವ ಈ ವೇಳೆ ತಮ್ಮ ವೈಯಕ್ತಿಕ ಆಸಕ್ತಿಯನ್ನು ಹಂಚಿಕೊಂಡರು. ಕೆಲಸದ ಒತ್ತಡದ ನಡುವೆಯೂ ನಾನು ಎಂದಿಗೂ ಅಂತರಾಷ್ಟ್ರೀಯ ಫುಟ್ಬಾಲ್, ಏಕದಿನ ಕ್ರಿಕೆಟ್ ಮತ್ತು ಟಿ 20 ಪಂದ್ಯಗಳನ್ನು ವೀಕ್ಷಿಸುವುದು ಅಭ್ಯಾಸವನ್ನು ಉಳಿಸಿಕೊಂಡಿದ್ದೇನೆ ಎಂದು ಹೇಳಿದರು. ಕ್ರೀಡಾಪಟುಗಳಿಗೆ ಶುಭ ಹಾರೈಸಿ ಮುಖ್ಯಮಂತ್ರಿಯವರು ಯುವ ಕ್ರೀಡೆಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂಬ ಭರವಸೆಯನ್ನು ನೀಡಿ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಇನ್ನಷ್ಟು ಬಲಪಡಿಸಲು ಹೆಚ್ಚಿನ ಅನುದಾನವನ್ನು ಒದಗಿಸುವುದಾಗಿ ತೀರ್ಮಾನವನ್ನು ತೆಗೆದುಕೊಂಡರು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಕರ್ನಾಟಕ ಕ್ರೀಡಾಕೂಟವು ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ ವೇದಿಕೆಯಾಗಲಿದೆ ಎಂದು ಹೇಳಿದರು. ಕ್ರೀಡೆಯು ಶಿಸ್ತು ಸಂಯಮ ಮತ್ತು ಸಮಯ ಪ್ರಜ್ಞೆ ಪಾಲನೆ ಅತ್ಯಂತ ಸಹಾಯಕಾರಿಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು. ಉಸ್ತುವಾರಿಯಾಗಿ ಗ್ರಹ ಸಚಿವ ಜಿ.ಪರಮೇಶ್ವರ್ ಇವರನ್ನು ಅಭಿನಂದಿಸಿದರು ಸಿಎಂ ಸಿದ್ದರಾಮಯ್ಯ .ಅವರು ತಾವು ಬಾಲ್ಯದಲ್ಲಿ ಕ್ರೀಡೆಗಳೊಂದಿಗೆ ತಮ್ಮ ಆಸಕ್ತಿಯನ್ನು ಹಂಚಿಕೊಂಡರು ನಾನು ಫುಟ್ಬಾಲ್ ಮತ್ತು ಕ್ರಿಕೆಟ್ ಕ್ರೀಡೆಯಲ್ಲಿ ನನಗೂ ಆಸಕ್ತಿ ಇತ್ತು ಎಂದು ಹಂಚಿಕೊಂಡರು. ರಾಜ್ಯದಲ್ಲಿ ನಡೆಯುತ್ತಿರುವ ಕ್ರೀಡಾಕೂಟಗಳು ಯುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ರೂಪಿಸಲು ಸಹಾಯಕರಿಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು ಅವರು ತಮ್ಮ ಬಿಜಿ ಕಾರ್ಯನಿರ್ವಹಣೆಯ ನಡುವೆಯೂ ಕ್ರೀಡೆಗಳನ್ನು ನೋಡುತ್ತಾರೆ. ಅದರಲ್ಲೂ ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ವೀಕ್ಷಿಸುವುದು ತಪ್ಪಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದರು .ಕ್ರೀಡಾಪಟ್ಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸರ್ಕಾರಿ ಉದ್ಯೋಗಗಳಿಗೆ ವಿಶೇಷ ಮೀಸಲಾತಿ ನಿಯಮವನ್ನು ಜಾರಿಗೊಳಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆಯಿಂದ ಆರಕ್ಷಕ ಉಪಾಧ್ಯಕ್ಷ ಹುದ್ದೆಯವರಿಗೆ ಶೇಕಡ ಶೇ.2 ಮೀಸಲಾತಿಯನ್ನು ಕ್ರೀಡಾಪಟುಗಳಿಗೆ ನೀಡಲಾಗುತ್ತದೆ. ಈ ಕ್ರಮವು ರಾಜ್ಯದ ಯುವ ಕ್ರೀಡೆಗಳಿಗೆ ಭವಿಷ್ಯದ ಭದ್ರತೆಯ ಒದಗಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ರಾಜ್ಯದ ವಿವಿಧ ಸರಕಾರಿ ಇಲಾಖೆಗಳಲ್ಲಿ ಉದ್ಯೋಗ ಮೀಸಲಾತಿ ಕ್ರೀಡಾಪಟುಗಳಿಗೆ ಒದಗಿಸಲಾಗುವುದು ಎಂದು ತಿಳಿಸಿದರು. ಒಲಂಪಿಕ್ಸ್ ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುವ ಮೂಲಕ ಸರ್ಕಾರಿ ಕ್ರೀಡಾಪಟ್ಟುವನ್ನು ಇನ್ನಷ್ಟು ಪ್ರೋತ್ಸಾಹಿಸುತ್ತಿದೆ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು ಮತ್ತು ಮೀಸಲಾತಿ ಸೌಲಭ್ಯವು ಒಲಿಂಪಿಕ್ಸ್, ಪಾರಾ ಒಲಿಂಪಿಕ್ಸ್, ಏಷಿಯನ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್, ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಷಯ ವಿಜೇತರಾದ ಹಾಗೂ ಭಾಗವಹಿಸಿದ ಕ್ರೀಡಾಪಟುಗಳಿಗೆ ಅನ್ವಯಿಸಲಾಗಿದೆ ಎಂದು ಅವರು ತಿಳಿಸಿದರು. ಈ ನಿರ್ಧಾರದಿಂದ ರಾಜ್ಯದಲ್ಲಿ ಕ್ರೀಡಾಕ್ಷೇತ್ರಕ್ಕೆ ಹೊಸ ಉತ್ತೇಜನ ದೊರೆಯಲಿದ್ದು ಯುವ ಪ್ರತಿಭೆಗಳು ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಣೆಯಾಗಲಿದೆ, ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಗೆ ಹಾಕಿ ಕ್ರೀಡಾಂಗಣ, ವಿಶ್ವ ದರ್ಜೆಯ, ಈಜುಕೊಳ ಸೇವೆ ಅಂತ ಕ್ರೀಡಾ ಮೂಲ ಸೌಕರ್ಯಗಳ ಅಭಿವೃದ್ಧಿ ಹೆಚ್ಚಿನ ಸಿದ್ದರಾಮಯ್ಯ ಭಾಷಣದಲ್ಲಿ ಜಿಲ್ಲೆಯಲ್ಲಿ ಉತ್ತಮ ಕ್ರೀಡಾಪಟುಗಳು ಬಂದು ವಿಶ್ವ ಮಟ್ಟದಲ್ಲಿ ನಾಡಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು. ಸಂಚಲನದ ಕಲಾತಂಡಗಳು ಸುಂದರ ಪ್ರದರ್ಶನದ ಮೂಲಕ ಮತ್ತಷ್ಟು ಮೆರಗು ತಂದು ಕೊಟ್ಟರು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಕ್ರೀಡಾಕೂಟಗಳ್ ಕ್ರೀಡಾಪಟುಗಳು ಶಿಸ್ತುಬದ್ಧ ನಡಿಗೆ ಧೈರ್ಯ ಮತ್ತು ಕ್ರೀಡಾಪಟು ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿ ಕ್ರೀಡಾ ಪ್ರೇಮವನ್ನು ಮರೆದರು. ತುಮಕೂರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಯುವ ಕ್ರೀಡೆಗಳಿಗೆ ಪ್ರೇರಣೆಯಾಗಿ ಮತ್ತು ಜಿಲ್ಲೆ ಕ್ರೀಡಾ ಮೂಲಕ ಮತ್ತು ದಾರಿ, ಸಿಎಂ ಸಿದ್ದರಾಮಯ್ಯ ಈ ಸಂದರ್ಭ ಕ್ರೀಡಾಪಟುಗಳಿಗೆ ಭವಿಷ್ಯದಲ್ಲಿ ಹೆಚ್ಚಿನ ಸಾಧನೆ ಮಾಡುವ ಮತ್ತು ದೇಶದ ಹೆಮ್ಮೆ ಹೆಚ್ಚಿಸುವಲ್ಲಿ ಶುಭ ಕೋರಿ ಅಭಿನಂದನೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಮೊದಲಾದ ಜನಪ್ರಿಯ ಜನಪ್ರತಿನಿಧಿಗಳೊಂದಿಗೆ ಸಂಪರ್ಕ ಬೆಳೆಸಿದ ಭಾಗವಾಗಿ ಅವರು ಮಾಜಿ ಸಚಿವ ಕೆ.ಎನ್ ರಾಜಣ್ಣ ಅವರ ಮನೆಯ ಎಲ್ಲಿ ಊಟ ಮಾಡಿದ ನಂತರ ಪರ್ತಕರ್ತರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು. ತುಮಕೂರಿನಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಆರೋಗ್ಯ ಸ್ಥಿತಿಯನ್ನು ಹಚ್ಚಿಕೊಂಡರು. ಅವರು ಹೇಳಿದಂತೆ ಈ ಸಂದರ್ಭದಲ್ಲಿ ಅವರು ಮಾಂಸಹಾರ ಸೇವಿಸಿದ್ದು ಕೋಳಿ ಸಾರು, ಇಡ್ಲಿ, ಕಾಲುಸೊಪ್ಪು, ನಾಟಿ ಚಿಕನ್ ಸೇರಿದಂತೆ ಎಲ್ಲವನ್ನು ಚೆನ್ನಾಗಿ ಊಟ ಮಾಡಿಕೊಂಡು ಬಂದರು ಮತ್ತು ರಾಜಣ್ಣನವರನ್ನು ಯಾವಾಗ ಭೇಟಿಯಾದರು ಯಾವಾಗಲೂ ಸಿಹಿ ಸುದ್ದಿಗಳೇ ಇರುತ್ತವೆ ಎಂದು ಖುಷಿ ವ್ಯಕ್ತಪಡಿಸಿದರು. ಪತ್ರಕರ್ತರ ಪ್ರಶ್ನೆಗೆ ರಾಜಣ್ಣರಿಗೆ ಸಚಿವ ಸ್ಥಾನ ದೊರೆಯುವ ಸಂಬಂಧಿಸಿದಂತೆ ನಾನು ಅದನ್ನು ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯನವರು ಸ್ಪಷ್ಟವಾಗಿ ಹೇಳಿದರು .ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರವರು ರಾಜ್ಯದ ಕ್ರೀಡಾ ಕ್ರೀಡಾಪಟುಗಳಿಗೆ ಅಗತ್ಯ ಇರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರ ಬದ್ಧವಾಗಿದೆ. ಏಷ್ಯಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದೇ ಗುರಿಯಾಗಿದೆ ಎಂದು ಹೇಳಿದರು ಕರ್ನಾಟಕ ಸರ್ಕಾರವು ಯುವ ಜನರಿಗೆ ಕ್ರೀಡೆಯ ಮೂಲಕ ನಸ್ಯೆ ಮುಕ್ತ ಜೀವನ ಕಲಿಸುವ ಉದ್ದೇಶದಿಂದ ರಾಜ್ಯ ಮಟ್ಟದ ಕ್ರೀಡಾ ಕೂಟವನ್ನು ಆಯೋಜಿಸಿತು. ರಾಜ್ಯದಲ್ಲಿ ಕ್ರೀಡಾ ಮೂಲಕ 600 ಕೋಟಿ ವೆಚ್ಚವನ್ನು ಮಹಾತ್ಮ ಗಾಂಧೀಜಿ ಎಲ್ಲ ಕ್ರೀಡಾಂಗಣವನ್ನು ಸ್ಮಾರ್ಟ್ ಸಿಟಿ ಯೋಜನೆ ಮತ್ತು ಕರ್ನಾಟಕ ಸರ್ಕಾರ ಸಂಯೋಗದಲ್ಲಿ ನಿರ್ಮಿಸಲಾಗಿದೆ ಅದರಲ್ಲಿ ಬೆಂಗಳೂರು ಕಟ್ಟಿದ ಸ್ಟುಡಿಯೋಗೆ ಸಮವಾದ ಟ್ರ್ಯಾಕ್ ಮತ್ತು ಕ್ರೀಡಾಪಟುಗಳಿಗೆ ಉಳಿಸಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಎಲ್ಲಾ ಆಟಗಳಲ್ಲಿ ಗೆಲುವು ಮುಖ್ಯ ಒಲಂಪಿಕ್ಸ್ ಕೂಟದಲ್ಲಿ ಭಾಗವಹಿಸುವುದೇ ಮುಖ್ಯ ಎಂಬ ನಿಟ್ಟಿನಲ್ಲಿ ಯುವಕರಿಗೆ ಕ್ರೀಡೆಯ ಶಕ್ತಿ ಹೆಚ್ಚಿಸಲು ಕೈಗೊಳ್ಳಲಾಗಿದೆ ಎಂದು ಜಿ. ಪರಮೇಶ್ವರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ರೀಡ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಭೂಮಿ ನೀಡಲಾಗಿದೆ ಮತ್ತು ನಿರ್ಮಾಣ ಕೈಗಾರಿಕಾ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಜಿಲ್ಲೆಯಲ್ಲಿ ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಆಸಕ್ತಿ ನೀಡಲು ಅಂತರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಂಗಣ ಮತ್ತು ಈಜುಕೊಳ ನಿರ್ಮಿಸಲು 25 ಕೋಟಿ ಅನುದಾನ ನೀಡಬೇಕು ಎಂದು ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ತಮಗೆ ಕ್ರೀಡೆಯಲ್ಲಿ ಎಷ್ಟು ಆಸಕ್ತಿ ಇದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.
ಇನ್ನಷ್ಟು ಓದಿರಿ:
2028ಕ್ಕೆ ಮಾಜಿ ಸ್ಥಾನ ಪಿಕ್ಸ್ ? ಸಹೋದರ ರಮೇಶ್ ನುಡಿದ ಭವಿಷ್ಯಕ್ಕೆ ಸತೀಶ್ ಜಾರಕಿಹೊಳಿ ನೀಡಿದ ಪ್ರತಿಕ್ರಿಯೆ