<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಮೆಡಿಕಲ್ ಕಾಲೇಜು ಲೋಕಾರ್ಪಣೆ : ಸಿಎಂ ಸಿದ್ದರಾಮಯ್ಯ

ಮೆಡಿಕಲ್ ಕಾಲೇಜು ಲೋಕಾರ್ಪಣೆ : ಸಿಎಂ ಸಿದ್ದರಾಮಯ್ಯ
Summary: ಕಳೆದ ವಾರವಷ್ಟೇ ಜಾತ್ರಾ ಮಹೋತ್ಸವ ನಡೆದ ಹುಕ್ಕೇರಿಮಠಕ್ಕೂ ಭೇಟಿ ನೀಡಲಿರುವ ಸಿಎಂ, ಲಿಂಗೈಕ್ಯ ಶಿವಬಸವ ಮತ್ತು ಶಿವಲಿಂಗಶ್ರೀಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಹಾವೇರಿಯಲ್ಲಿ ನೂತನ ಸರ್ಕ್ಯೂಟ್ ಹೌಸ್ ಉದ್ಘಾಟನೆಯನ್ನೂ ಮಾಡಲಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾದ ದಾಖಲೆ ಬರೆದಿದ್ದಾರೆ.
BELAGAVI NEWS :

ಹಾವೇರಿ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಾತ್ರಾ ಮಹೋತ್ಸವ ನಡೆದ ಹುಕ್ಕೇರಿಮಠಕ್ಕೂ ಭೇಟಿ ನೀಡಲಿರುವ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿರುವ ಸಿಎಂ, ಅಲ್ಲಿಂದ ಹೆಲಿಕಾಪ್ಟರ್​ ಮೂಲಕ 11.45ಕ್ಕೆ ಹಾವೇರಿಗೆ ಆಗಮಿಸುವರು.

ಸಿಎಂ ಜೊತೆಗೆ ಡಿಸಿಎಂ ಡಿ.ಕೆ.ಶಿವಕುಮಾರ್​ ಹಾಗೂ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಇರಲಿದ್ದಾರೆ. ಇಂದು ಹಾವೇರಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಹಾವೇರಿಯಲ್ಲಿ ನೂತನ ಸರ್ಕ್ಯೂಟ್ ಹೌಸ್ ಉದ್ಘಾಟನೆಯನ್ನೂ ಮಾಡಲಿದ್ದಾರೆ. ಬಳಿಕ ಹಾವೇರಿ ಮೆಡಿಕಲ್ ಕಾಲೇಜು ಉದ್ಘಾಟಿಸಲಿರುವ ಸಿಎಂ ಸಿದ್ದರಾಮಯ್ಯ ಬೃಹತ್ ವೇದಿಕೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಹಾವೇರಿಯಿಂದ ಹುಬ್ಬಳ್ಳಿಗೆ ಹೆಲಿಕಾಪ್ಟರ್​ನಲ್ಲಿ ತೆರಳಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಸಿಎಂ ಬೆಂಗಳೂರಿನತ್ತ ಪಯಣ ಆರಂಭಿಸಲಿದ್ದಾರೆ.

ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿದ್ದರಾಮಯ್ಯ ಅವರು ಇಂದು ದೇವರಾಜ ಅರಸು ಅವರ ದಾಖಲೆಯನ್ನು ಮುರಿದಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾದ ದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ಬಜೆಟ್ ಮಂಡನೆಯ ಹೆಗ್ಗಳಿಕೆ ಪಡೆದಿರುವ ಸಿದ್ದರಾಮಯ್ಯ ಇದೀಗ ಸುದೀರ್ಘ ಅವಧಿ ಮುಖ್ಯಮಂತ್ರಿ ಎಂಬ ದಾಖಲೆ ಬರೆದಿದ್ದಾರೆ.

ನಂತರ ಮಠಾಧೀಶರಾದ ಸದಾಶಿವ ಶ್ರೀಗಳನ್ನು ಭೇಟಿ ಮಾಡಿ, ಹಾವೇರಿ ಹೊರವಲಯದಲ್ಲಿರುವ ನೇಲೂಗಲ್ ಬಳಿಯ ಸರ್ಕ್ಯೂಟ್ ಹೌಸ್​ಗೆ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ದೇವರಾಜ ಅರಸು ಅವರು 7 ವರ್ಷ 239 ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ದಾಖಲೆಯನ್ನು ಸಿದ್ದರಾಮಯ್ಯ ಇಂದು ಸರಿಗಟ್ಟಿದ್ದಾರೆ. ದೇವರಾಜು ಅರಸು ಅವರು ಈವರೆಗೆ ಕರ್ನಾಟಕದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆ ಪಡೆದಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಆ ಮೈಲಿಗಲ್ಲನ್ನು ದಾಟಿದ್ದಾರೆ. ಈ ಇಬ್ಬರು ನಾಯಕರು ಮೈಸೂರಿನವರೇ ಆಗಿರುವುದು ವಿಶೇಷ.

ಹಾವೇರಿ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಜೊತೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಸತೀಶ್ ಜಾರಕಿಹೊಳಿ, ಹಾವೇರಿ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಸಚಿವ ಹೆಚ್.ಕೆ.ಪಾಟೀಲ್, ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಇನ್ನಷ್ಟು ಓದಿರಿ :
ಬಿಹಾರದಲ್ಲಿ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗ ಪ್ರತಿಷ್ಠಾಪನೆ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online