ಅಧಿಕಾರದಲ್ಲಿ ಎಷ್ಟು ದಿನ ಇರುತ್ತಿನೋ ಗೊತ್ತಿಲ್ಲ, ಆದರೆ ನನ್ನ ಆಡಳಿತದ ಬಗ್ಗೆ ತೃಪ್ತಿ ಇದೆ. ಹಾವೇರಿಯಲ್ಲಿ ನಾನೇ ಘೋಷಣೆ ಮಾಡಿ ನಾನೇ ಕಾಲೇಜು ಉದ್ಘಾಟಿಸುತ್ತಿರುವೆ ಎಂದು ಸಿಎಂ ಸಂತಸ ವ್ಯಕ್ತಪಡಿಸಿದರು.
ಹಾವೇರಿಯಲ್ಲಿ ಮೆಡಿಕಲ್ ಕಾಲೇಜ್ ಉದ್ಘಾಟಿಸಿದ ಬಳಿಕ ಮಾತನಾಡಿದ ಸಿಎಂ, ಪ್ರತಿ ಜಿಲ್ಲೆಯಲ್ಲಿ ಒಂದೊಂದು ಮೆಡಿಕಲ್ ಕಾಲೇಜ್ ಆಗಬೇಕು. ನಾನೇ ಮುಖ್ಯಮಂತ್ರಿ ಇದ್ದಾಗ ಹಾವೇರಿಗೆ ಮೆಡಿಕಲ್ ಕಾಲೇಜ್ ಘೋಷಣೆ ಮಾಡಿದ್ದೇ, ಈಗ ನಾನೇ ಮೆಡಿಕಲ್ ಕಾಲೇಜ್ ಉದ್ಘಾಟನೆ ಮಾಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಅನ್ನ ಭಾಗ್ಯ ಕೊಟ್ಟವರು ಯಾರು?, ಕೃಷಿ ಭಾಗ್ಯ ಮಾಡಿದವರು ಯಾರು?, ರೈತರಿಗೆ ಮನಸ್ವಿನಿ ಮಾಡಿದವರು? ಶಕ್ತಿ ಯೋಜನೆ ಮಾಡಿದವರು ಯಾರು?
ಗೃಹ ಲಕ್ಷ್ಮಿ, ಗೃಹ ಜ್ಯೋತಿ ಮಾಡಿದವರು ಯಾರು? ಪ್ರತಿ ವರ್ಷ 3 ಲಕ್ಷ ಮನೆ ಕಟುತ್ತೇವೆ ಅಂತ ಹೇಳಿದ್ದೆವು. 14,52,000 ಮನೆ ಕಟ್ಟಿದ್ದೇವೆ ಎಂದು ಬಿಜೆಪಿಗೆ ಸಿಎಂ ಟಾಂಗ್ ನೀಡಿದರು.
ನಾವು ಯಾವುದೇ ಬೇಧ ಭಾವ ಮಾಡಲ್ಲ. ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಪಕ್ಷ, ಜಾತಿ ಇಲ್ಲ. ಎಲ್ಲ ಜಾತಿ, ಪಕ್ಷದಲ್ಲಿರುವ ಬಡವರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬೋದು ಅವಶ್ಯವಾಗಿದೆ. ಗ್ಯಾರಂಟಿ ಯೋಜನೆ ಜಾರಿ ಮಾಡಿದರೆ ಸರ್ಕಾರ ದಿವಾಳಿ ಆಗುತ್ತೆ ಅಂತ ಪ್ರತಿಪಕ್ಷಗಳು ಹುಯಿಲು ಹಬ್ಬಿಸಿದ್ದವು. ಆದರೆ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಎರಡೂವರೆ ವರ್ಷ ಆಯಿತು. ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ 12 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಅರಸು ದಾಖಲೆ ಮುರಿದ ವಿಚಾರ ಕುರಿತಂತೆ ಮಾತನಾಡಿದ ಅವರು, ಜನರ ಆಶೀರ್ವಾದದಿಂದ ಇಲ್ಲಿವರೆಗೂ ಬಂದಿದ್ದೇನೆ. ಇನ್ನೂ ಎಷ್ಟು ದಿನ ಅಧಿಕಾರದಲ್ಲಿ ಇರುತ್ತಿನೋ ಗೊತ್ತಿಲ್ಲ. ಆದರೆ ನನ್ನ ಆಡಳಿತ ಬಗ್ಗೆ ತೃಪ್ತಿಯಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಹಾವೇರಿಯಲ್ಲಿ ವೈದ್ಯಕೀಯ ಕಾಲೇಜು ಉದ್ಘಾಟನೆಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಾವೇರಿಗೆ ನಾನೇ ಮೆಡಿಕಲ್ ಕಾಲೇಜು ಘೋಷಣೆ ಮಾಡಿ ನಾನೇ ಉದ್ಘಾಟನೆ ಮಾಡುತ್ತಿದ್ದೇನೆ. ಈ ಮೆಡಿಕಲ್ ಕಾಲೇಜಿಗೆ ಸುಮಾರು 500 ಕೋಟಿ ಖರ್ಚು ಮಾಡಿದ್ದೇವೆ ಎಂದರು.
ಪ್ರತಿಯೊಂದು ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆಗಬೇಕು ಎಂದು ಘೋಷಣೆ ಮಾಡಿದ್ದೆ. ಕರ್ನಾಟಕದಲ್ಲಿ 71 ಮೆಡಿಕಲ್ ಕಾಲೇಜು ಇದ್ದು, 22 ಸರ್ಕಾರಿ ಮೆಡಿಕಲ್ ಕಾಲೇಜು ಇವೆ. ಉಳಿದ ಜಿಲ್ಲೆಯಲ್ಲಿಯೂ ಮೆಡಿಕಲ್ ಕಾಲೇಜು ಮಾಡುತ್ತೇವೆ. ಹಾವೇರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇವೆ. ಹಾಗೆಯೇ ಕ್ಯಾನ್ಸರ್ ಆಸ್ಪತ್ರೆ ಕೂಡ ಮಾಡೋಣ. ಇನ್ನು ವಿಜಯಪುರದಲ್ಲೂ ಸರ್ಕಾರಿ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.
ಪೂರ್ಣಾವಧಿ ಅಧಿಕಾರ ಪೂರೈಸ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಸಿಎಂ ಪುನರುಚ್ಚರಿಸಿದರು.
ಇನ್ನಷ್ಟು ಓದಿರಿ :
ವೆನೆಜುವೆಲಾ–ಭಾರತ ಸಂಪರ್ಕದಲ್ಲಿ ಆಸಕ್ತಿಕೆಯ ವಿಷಯ