ತೆಂಗಿನ ಹಾಲಿನ ಆರೋಗ್ಯ ಪ್ರಯೋಜನಗಳು ನಿಮಗೂ ಗೊತ್ತಿರಬಹುದು ಕೆಲವು ವಿಶೇಷತೆಗಳು:
ತೆಂಗಿನ ಎಣ್ಣೆಯ ಆರೋಗ್ಯ ಲಾಭಗಳ ಬಗ್ಗೆ ಬಹಳ ಮಂದಿ ಅರಿತಿದ್ದರೂ, ತೆಂಗಿನಹಾಲಿನ ಅನುಪಮ ಪ್ರಯೋಜನಗಳು ಹಲವರಿಗೆ ತಿಳಿದಿಲ್ಲ. ಆರೋಗ್ಯ ತಜ್ಞರ ಪ್ರಕಾರ ನಿಯಮಿತವಾಗಿ ತಂಗಿನ ಹಾಲ ಸೇವಿಸುವುದರಿಂದ ಶರೀರಕ್ಕೆ ಹಲವಾರು ರೀತಿಯ ಪೋಷಕಾಂಶ ಮತ್ತು ಲಾಭಗಳು ದೊರೆಯುತ್ತವೆ.
ತೆಂಗಿನ ಹಾಲಿನ ಆರೋಗ್ಯ ಲಾಭಗಳು:
ಹೃದಯ ಚರ್ಮ ಕೂದಲು ಹಜಮಾ ಮತ್ತು ಇಮ್ಯುನಿಟಿ ಸುಧಾರಣೆ ನೈಸರ್ಗಿಕವಾಗಿ ಆರೋಗ್ಯ ಕಾಪಾಡೋದು ಮನೆ ಮದ್ದು.
ತೆಂಗಿನ ಹಾಲು ಸೇವಿಸಿದರೆ ಮತ್ತು ತ್ವಚೆಗೆ ಅನ್ವಯಿಸಿದರೆ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಎಳನೀರಿನಿಂದ ಕುಡಿದು ತೆಂಗಿನ ಎಣ್ಣೆಯವರೆಗೆ ವಿವಿಧ ರೂಪಗಳಲ್ಲಿ ಉಪಯೋಗಿಸುತ್ತಾರೆ. ಎಳನೀರು ಮತ್ತು ತೆಂಗಿನ ಎಣ್ಣೆಯಷ್ಟೇ ತೆಂಗಿನಹಾಲು ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞ ತಿಳಿಸಿದ್ದಾರೆ . ಮತ್ತು ಜನರು ದೈನಂದಿನ ಆರೋಗ್ಯ ಕಾಪಾಡಿಕೊಳ್ಳಲು ಎಳನೀರು ತೆಂಗಿನ ಎಣ್ಣೆ ಸೇರಿದಂತೆ ತೆಂಗಿನ ಉತ್ಪನ್ನಗಳನ್ನು ವಿವಿಧ ರೂಪಗಳಲ್ಲಿ ಉಪಯೋಗಿಸುತ್ತಾರೆ. ಆರೋಗ್ಯ ತಜ್ಞರು ಹೇಳಿದ್ದಾರೆ.
ಎಳನೀರು ಮತ್ತು ತೆಂಗಿನ ಎಣ್ಣೆ ಅಷ್ಟೇ ಅಲ್ಲ ತೆಂಗಿನಕಾಯಿ ಪ್ರಯೋಜನಕಾರಿ. ನಿಯಮಿತವಾಗಿ ತೆಂಗಿನ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮವು ದೋಷರಹಿತ ಮೃದುವಾಗಿದು ಹೊಳೆಯುವಂತೆ ಆಗುತ್ತದೆ ತೆಂಗಿನ ಹಾಲು ಕಪ್ಪು ಕಲೆಗಳು ,ಮೊಡವೆಗಳು, ಸುಕ್ಕು ,ರೇಖೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಈ ನೈಸರ್ಗಿಕ ಫೇಸ್ ಮಾಸ್ಕ್ ಚರ್ಮವನ್ನು ಹೈಡ್ರೇಟ್ ಮಾಡಿ ಪಳ ಪಳ ಹೊಳೆಯುವ ತ್ವಚೆಯನ್ನು ಒದಗಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ತೆಂಗಿನ ಹಾಲಿನ ಬಳಕೆ ಕೇವಲ ಅಡುಗೆ ಮಾತ್ರವಲ್ಲ ಚರ್ಮ ಆರೈಕೆಯಲ್ಲಿಯೂ ಜನಪ್ರಿಯತೆ ಹೆಚ್ಚಿಸಿದೆ. ಮುಖದ ಚರ್ಮದ ಹೈಪರ್ಪಿಗ್ಮೆಂಟೇಷನ್ ಕಾಸ್ಮೆಟಿಕ ಘಟಕಾಂಶವಾಗಿ ತೆಂಗಿನ ಹಾಲು ಎಂಬ ಶೀರ್ಷಿಕೆಯ ೨೦೨೦ ರಲ್ಲಿ ಪ್ರಕಟವಾಗಿ ಸಂಶೋಧನೆಯಲ್ಲಿ ತೆಂಗಿನಹಾಲು ಮುಖದ ಹೈಪರ್ಪಿಗ್ಮೆಂಟೇಷನ್ ಅನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿದು ಬರುತ್ತದೆ.
ತೆಂಗಿನ ಹಾಲಿನಲ್ಲಿರುವ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಲಾರಿಕ್ ಆಮ್ಲವು ಕಪ್ಪು ಕಲೆಗಳಿಗೆ ಕಾರಣವಾಗುವ ವರ್ಣ ದ್ರವ್ಯವಾದ ಮೇಲಿನ ಉತ್ಪಾದನೆ ನಿಯಮಿಸುತ್ತದೆ .
ತೆಂಗಿನಹಾಲ: ನೈಸರ್ಗಿಕ ಚರ್ಮ ಆರೈಕೆ ಶ್ರೇಷ್ಠ ಆಯ್ಕೆ
ತೆಂಗಿನ ಹಾಲು ಸೌಮ್ಯ ,ಘೋಷಣೆ ,ಜಲ, ಜಲಸಂಚಯನ ಮತ್ತು ಆರೋಗ್ಯಕರ ಪ್ರಯೋಜನಗಳು ಒದಗಿಸುತ್ತದೆ. ನೈಸರ್ಗಿಕವಾಗಿ ಚರ್ಮವನ್ನು ಹೈಡ್ರೇಟ್ ಮಾಡಿ. ತ್ವಚೆಯ ನಾಶವನ್ನು ಕಾಪಾಡಲು ಇದ್ದು ಅತ್ಯುತ್ತಮ ರಾಸಾಯನಿಕಚಿಕಿತ್ಸೆಗಳಿಲ್ಲದೆ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಚರ್ಮದ ಟೋನ್ ಸುಧಾರಣೆ ಮಾಡಲು ಸಹಕಾರಿ.
ನಿಯಮಿತ ಬಳಕೆ ಮುಖದ ಕಪ್ಪು ,ಕಲೆಗಳು, ಮೊಡವೆಗಳು ಮತ್ತು ಸುಕ್ಕು ರೇಖೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ ಇದರಿಂದ ಚರ್ಮ ಪಳಪಳ ಹೊಡೆಯುವ ಮೃದವಾಗಿರುವ ಮತ್ತು ಆರೋಗ್ಯಕರವಾಗಿರುವಂತೆ ಕಾಣುತ್ತದೆ. ನೈಸರ್ಗಿಕ ಸೌಮ್ಯ ಮತ್ತು ಸುಲಭ ಉಪಯೋಗದ ಕಾರಣ ತೆಂಗಿನ ಹಾಲು ಪ್ರತಿಯೊಬ್ಬರ ಚರ್ಮ ಆರೈಕೆಯ ರೂಟೀನ್ ಸೇರಿಸಿಕೊಳ್ಳಲು ಸೂಕ್ತವಾಗಿದೆ.
ತ್ವಚೆಗೆ ತೆಂಗಿನ ಹಾಲಿನ ಪ್ರಯೋಜನಗಳೇನು?:
ತೆಂಗಿನ ಹಾಲಿನಲ್ಲಿ ವಿಟಮಿನ್ ಸಿ ಹಾಗೂ ಇ, ಕೊಬ್ಬಿನಾಮ್ಲಗಳು, ಖನಿಜಗಳಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಇವು ಆರೋಗ್ಯಕರ ಚರ್ಮಕ್ಕೆ ಅವಶ್ಯಕವಾಗಿವೆ. ಈ ಅಂಶಗಳು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಉರಿಯೂತ ಕಡಿಮೆ ಮಾಡುತ್ತದೆ. ಅಕಾಲಿಕ ವಯಸ್ಸಾಗುವಿಕೆ, ಅಸಮ ಚರ್ಮದ ಟೋನ್ಗೆ ಕಾರಣವಾಗುವ ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ.
ಲಾರಿಕ್ ಆಮ್ಲವು ಮೊಡವೆಗಳನ್ನು ತಡೆಯಲು ಸಹಾಯ ಮಾಡುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಉತ್ಕರ್ಷಣ ನಿರೋಧಕಗಳು ಕಾಲಾನಂತರದಲ್ಲಿ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಯಮಿತ ಬಳಕೆಯು ಚರ್ಮದ ವಿನ್ಯಾಸವನ್ನು ಸುಧಾರಿಸುತ್ತದೆ. ನೈಸರ್ಗಿಕ ಹೊಳಪನ್ನು ನೀಡುತ್ತದೆ.
ತೆಂಗಿನ ಹಾಲು ಬಿಸಿಲಿನ ಬೇಗೆಯನ್ನು ಶಮನಗೊಳಿಸುತ್ತದೆ, ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ, ದೀರ್ಘ ಕಾಲದವರೆಗೆ ತೇವಾಂಶ ಉಳಿಸಿಕೊಳ್ಳಲು ಚರ್ಮದ ನೈಸರ್ಗಿಕ ತಡೆಗೋಡೆ ಕಾರ್ಯ ಬೆಂಬಲಿಸುತ್ತದೆ.
ಇನ್ನಷ್ಟು ಓದಿರಿ:
ಭಾರತ - ಅಮೆರಿಕ : ಜೈಶಂಕರ್ - ರುಬಿಯೋ ಮಾತುಕತೆ