<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಇರಾನ್​ನಲ್ಲಿ ಫೋನ್​, ಇಂಟರ್ನೆಟ್​ ಸಂಪರ್ಕ ಕಡಿತ

ಇರಾನ್​ನಲ್ಲಿ ಫೋನ್​, ಇಂಟರ್ನೆಟ್​ ಸಂಪರ್ಕ ಕಡಿತ
Summary: ಇರಾನ್‌ನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಗಡಿಪಾರುಗೊಂಡಿರುವ ಯುವರಾಜ ರೇಜಾ ಪಹ್ಲವಿ ಸಾಮೂಹಿಕ ಪ್ರತಿಭಟನೆಗೆ ಕರೆಯಿಂದಾಗಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
BELAGAVI NEWS:

ಪ್ರತಿಭಟನೆಗಳು ಪ್ರಾರಂಭವಾದ ತಕ್ಷಣ ಇರಾನ್‌ನಲ್ಲಿ ಇಂಟರ್​ನೆಟ್​ ಸೇವೆ ಮತ್ತು ದೂರವಾಣಿ ಸಂಪರ್ಕಗಳು ಕಡಿತಗೊಂಡವು. ಇರಾನ್‌ನ ದುರ್ಬಲ ಆರ್ಥಿಕತೆಯ ಬಗ್ಗೆ ಪ್ರಾರಂಭವಾದ ಪ್ರತಿಭಟನೆಗಳು ಇದೀಗ ತೀವ್ರ ಸ್ವರೂಪ ಪಡೆದಿದೆ.

ಪಹ್ಲವಿ ಪ್ರತಿಭಟನೆ ಕರೆಗಳು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಇನ್ನು ಸ್ಪಷ್ಟವಾಗಿಲ್ಲ. ಜಗತ್ತಿನ ಕಣ್ಣು ಇರಾನ್​ ಮೇಲೆ ಇದ್ದು, ಜನರು ಬೀದಿಗಿಳಿದು ಒಗ್ಗಟ್ಟಿನಿಂದ ತಮ್ಮ ಬೇಡಿಕೆಗಳನ್ನು ಕೂಗಬೇಕು. ಇಸ್ಲಾಮಿಕ್​ ಗಣರಾಜ್ಯದ ನಾಯಕ ಮತ್ತು ಟ್ರಂಪ್​ ನಿಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜನರ ದಮಕ್ಕೆ ಉತ್ತರ ಸಿಗದೆ ಹೋಗುವುದಿಲ್ಲ ಎಂದು ಪಹ್ಲವಿ ಕರೆ ನೀಡಿದರು.

ಪ್ರತಿಭಟನೆ ಕರೆ ಬೆನ್ನಲ್ಲೇ ಟೆಹ್ರಾನ್‌ನಾದ್ಯಂತ ಘೋಷಣೆಗಳಲ್ಲಿ ಮೊಳಗಿದವು. ಸರ್ವಾಧಿಕಾರಿಗೆ ಸಾವು ಮತ್ತು ಇಸ್ಲಾಮಿಕ್ ಗಣರಾಜ್ಯಕ್ಕೆ ಸಾವು ಎಂಬ ಘೋಷಣೆಗಳು ಕೇಳಿ ಬಂದವು. ಇದು ಕೊನೆಯ ಯುದ್ಧ ಪಹ್ಲವಿ ಹಿಂತಿರುಗುತ್ತಾರೆ ಎಂದು ಸಾವಿರರು ಜನರು ಬೀದಿಗಳಲ್ಲಿ ಕೂಗಿದರು.

ನಗರಗಳು ಮತ್ತು ಗ್ರಾಮೀಣ ಪ್ರದೇಶಗಳು ಸೇರಿ ಇರಾನ್‌ನಾದ್ಯಂತ ನಡೆದ ಪ್ರತಿಭಟನೆಗಳು ಗುರುವಾರವೂ ಮುಂದುವರೆದವು. ಪ್ರತಿಭಟನಾಕಾರರಿಗೆ ಬೆಂಬಲ ನೀಡಲು ಮಾರುಕಟ್ಟೆಗಳು ಮತ್ತು ಬಜಾರ್‌ಗಳನ್ನು ಮುಚ್ಚಲಾಯಿತು. ಇಲ್ಲಿಯವರೆಗೆ ನಡೆದ ಪ್ರತಿಭಟನಾ ಹಿಂಸಾಚಾರದಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿದ್ದು, 2,270 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ತಿಳಿಸಿದೆ.

ಪ್ರತಿಭಟನೆಗಳ ಪ್ರಮಾಣದ ಬಗ್ಗೆ ಇರಾನಿನ ಅಧಿಕಾರಿಗಳು ಯಾವುದೇ ಒಪ್ಪಿಗೆಯನ್ನು ನೀಡಿಲ್ಲ. ಆದಾಗ್ಯೂ, ಭದ್ರತಾ ಅಧಿಕಾರಿಗಳು ಗಾಯಗೊಂಡಿದ್ದಾರೆ ಅಥವಾ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಬಂದಿವೆ.

ಇನ್ನಷ್ಟು ಓದಿರಿ:


ಟಿ20 ಆಡಲು ಭಾರತಕ್ಕೆ ಪ್ರಯಾಣ ಬೆಳೆಸಲ್ಲ ಬಾಂಗ್ಲಾ ಕ್ರಿಕೆಟ್​ ಮಂಡಳಿ ಹೇಳಿಕೆ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online