ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಜನರಿಗೆ ಶುದ್ಧ ಕುಡಿಯುವ ನೀರನ್ನು ನೀಡುವುದು ಮತ್ತು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಆದರೆ ರಾಜ್ಯ ಸರ್ಕಾರವು ಈ ಜವಾಬ್ದಾರಿಗಳನ್ನು ಪೂರ್ತಿಯಾಗಿ ನಿರ್ವಹಿಸುತ್ತಿಲ್ಲ. ಇಂದು ಕಲುಷಿತ ನೀರು ಕುಡಿಯುವ ಘಟನೆ ಇದಕ್ಕೆ ಸ್ಪಷ್ಟ ಉದಾಹರಣೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಪ್ರತಿಪಕ್ಷ ನಾಯಕರಾಗಿರುವಂತಹ ರಾಹುಲ್ ಗಾಂಧಿಯವರು ಇಂದು ಕಲುಷಿತ ಕುಡಿಯುವ ನೀರಿನ ಮರಣಾಂತಿಕ ಘಟನೆಯು ಸರ್ಕಾರದ ನಿರ್ಲಕ್ಷದ ಪರಿಣಾಮ ಎಂದು ಹೇಳಿದ್ದಾರೆ. ಜೊತೆಗೆ ಈ ಘಟನೆ ನಗರ ಮಾದರಿಯ ಬೆಳವಣಿಗೆಯನ್ನು ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಭಾಗಿರಥಪುರದಲ್ಲಿ ಕಲುಷಿತ ನೀರಿನಿಂದ ಅತಿಸಾರ ಮತ್ತು ವಾಂತಿಯಿಂದ ಮೃತರಾಗಿದ್ದವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಸಾಂತ್ವನ ನೀಡಿದರು. ಅವರು ಶುದ್ಧ ಕುಡಿಯುವ ನೀರು ಪ್ರತಿಯೊಬ್ಬ ನಾಗರಿಕರ ಹಕ್ಕು ಎಂದು ಒತ್ತಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಅವರು ಟೀಕೆಯೂ ಮಾಡಿ ಇಂಡೋರ್ ಹೊಸ ಮಾದರಿಯ ಸ್ಮಾರ್ಟ್ ಸಿಟಿ ಆಗಿದ್ದರು, ಶುದ್ಧ ಕುಡಿಯುವ ನೀರನ್ನು ಕೊರತೆ ಇರುವುದರಿಂದ ಜನರನ್ನು ಬೆದರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಗರ್ ಅವರೊಂದಿಗೆ, ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ವರು ರೋಗಿಗಳ ಆರೋಗ್ಯ ವಿಚಾರಣೆ ನಡೆಸಿ, ಇದರ ಜೊತೆಗೆ ಅವರ ಕುಟುಂಬ ಸದಸ್ಯರೊಂದಿಗೆ ಸಂವಾದ ನಡೆಸಿದರು.
ಇದಾದ ನಂತರ ರಾಹುಲ್ ಗಾಂಧಿ ಕಡಗತಿಗಳು ಕಾಣಿಸಿಕೊಂಡ ಭಾಗಿರಥಪುರ ಪ್ರದೇಶಕ್ಕೆ ಭೇಟಿ ನೀಡಿ ಮೃತರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದರು. ಜೊತೆಗೆ ಜನರಿಗೆ ಶುದ್ಧವ ನೀರನ್ನು ನೀಡುವುದು ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವುದು ಸರ್ಕಾರದ ಜವಾಬ್ದಾರಿ ಆದರೆ ಸರ್ಕಾರ ಈ ಜವಾಬ್ದಾರಿಗಳನ್ನು ಪೂರ್ಣಗೊಳಿಸುತ್ತಿಲ್ಲ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಮಾಡುತ್ತಿರುವ ಪ್ರಶ್ನೆ ಎಂದರೆ ನಗರದ ಮಾದರಿ ಹೇಗಿದೆ, ಶುದ್ಧ ಕುಡಿಯುವ ನೀರನ್ನು ಪಡೆಯಲು ಸಾಧ್ಯವಾಗದೆ ಇಂದೋರ್ ನ ಜನರು ಕಲುಷಿತ ನೀರು ಸೇವನೆಯ ನಂತರ ಸಾವನ್ನಪ್ಪಿದ್ದಾರೆ ಇದು ಕೇವಲ ಇಂದೋರ್ ಸ್ಥಿತಿ ಮಾತ್ರವಲ್ಲ ದೇಶಾದ್ಯಂತ ನಗರಗಳಲ್ಲಿಯೂ ಇದೇ ಸಮಸ್ಯೆ ಇದೆ ಎಂದು ರಾಹುಲ್ ಗಾಂಧಿ ಅವರು ತಿಳಿಸಿದ್ದಾರೆ.
ಇಂದೋರ್ ಕುಡಿಯುವ ನೀರಿನ ದುರಂತಕ್ಕೆ ಸರ್ಕಾರವೇ ಜವಾಬ್ದಾರಿ ಹೊರಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಸರ್ಕಾರ ತನ್ನ ಹೊಣೆಗಾರಿಕೆಯನ್ನು ಸ್ವೀಕರಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸರ್ಕಾರದ ನಿರ್ಲಕ್ಷದಿಂದ ಜನರು ಕಲುಷಿತ ನೀರು ಸೇವಿಸಬೇಕಾಗಿದೆ ಸೇವಿಸಿ ಸಾವನ್ನಪ್ಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಂತ್ರಸ್ತರಿಗೆ ಸಂಪೂರ್ಣ ಬೆಂಬಲ ಮತ್ತು ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ ರಾಹುಲ್ ಗಾಂಧಿ.
ಬಿಜೆಪಿ ಸರ್ಕಾರ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಲು ವಿಫಲವಾಗಿದೆ. ಜನರು ದುಃಖದಲ್ಲಿದ್ದರೆ ಸರ್ಕಾರದ ಗಮನ ಕೇವಲ ಅಧಿಕಾರಿಗಳ ಮೇಲಿನ ಜವಾಬ್ದಾರಿ ತಪ್ಪಿಸಲು ಕೇಂದ್ರೀತವಾಗಿದೆ. ಇದು ಅತ್ಯಂತ ಅಸಂವೇದನಾಶೀಲ ವರ್ತನೆಯನ್ನು ರಾಹುಲ್ ಗಾಂಧಿ ಖಂಡಿಸಿದ್ದಾರೆ.
ಬಿಜೆಪಿ ಆರೋಪದಂತೆ ರಾಜಕೀಯ ಉದ್ದೇಶವಲ್ಲ , ನಾವು ವಿಪಕ್ಷದ ನಾಯಕನಾಗಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ನಮ್ಮ ಜವಾಬ್ದಾರಿ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಭಾಗೀರಥ ಪುರದ ಜನರ ಜೊತೆ ನಿಂತು ಸಂತ್ರಸ್ತರಿಗೆ ನ್ಯಾಯ ದೊರೆಯುವವರೆಗೆ ಮತ್ತು ಕಾರಣಕರ್ತರಿಗೆ ಶಿಕ್ಷೆ ವಿಧಿಸಲಾಗುವವರೆಗೆ ಹೋರಾಡುತ್ತಿವೆ ಎಂದು ಕಾಂಗ್ರೆಸ್ ಶಾಸಕರ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಇಂದೋರ್ ಕಲುಷಿತ ನೀರಿನ ಘಟನೆಗೆ ಸರ್ಕಾರವೇ ಜವಾಬ್ದಾರಿ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಓದಿರಿ:
ಕೊರಗಜ್ಜ ಆದಿಸ್ಥಳ ಕುತ್ತಾರಿಗೆ ಸುನಿಲ್ ಶೆಟ್ಟಿ ಭೇಟಿ