ಶನಿವಾರದ ಪಂಚಾಂಗ ಮತ್ತು ಭವಿಷ್ಯ ವಿವರಗಳು! ಈ ಶನಿವಾರ ಯಾವ ರಾಶಿಯವರಿಗೆ ಉದ್ಯೋಗ ವ್ಯಾಪಾರದಲ್ಲಿ ಭರ್ಜರಿ ಯಶಸ್ಸು ಸಾಧವಿದೆ ಎಂದು ತಿಳಿದುಕೊಳ್ಳಿ ಶುಭದಿನ ಶುಭವಸ್ತುಗಳು ದಿನದ ಸಲಹೆಗಳು ಆರೋಗ್ಯ ಮತ್ತು ಹಣಕಾಸು ವಿಚಾರಗಳು ಈ ರಾಶಿ ಚಕ್ರದ ಪ್ರಕಾರ ವಿವರಿಸಲಾಗಿದೆ.
ರಾಶಿ ಫಲಿತಾಂಶ ಶನಿವಾರದ ಲಘು ಪಂಚಾಂಗ ಶುಭ ಸಮಯ ವೈಯಕ್ತಿಕ ಮತ್ತು ವೃತ್ತಿಪರ ಬದುಕಿಗೆ ಮಾರ್ಗದರ್ಶನ ಪಡೆಯಲು ಈ ವಿಶೇಷ ಅಂಕಣವನ್ನು ಓದಿ ಇದು ಯಾವ ರಾಶಿಯವರಿಗೆ ಹಿತಕರ ಫಲ ಯಾವ ರಾಶಿ ಎಚ್ಚರಿಕೆ ಬೇಕು ಎಂದು ತಿಳಿಯಿರಿ.
ಪಂಚಾಂಗ:
ದಿನಾಂಕ: 31.01.2026
ವಾರ: ಶನಿವಾರ
ಸಂವತ್ಸರ: ವಿಶ್ವವಸು
ಆಯನ: ಉತ್ತರಾಯಣ
ಪಕ್ಷ: ಶುಕ್ಲ
ತಿಥಿ: ತ್ರಯೋದಶಿ
ನಕ್ಷತ್ರ: ಪುನರ್ವಸು
ಸೂರ್ಯೋದಯ: ಮುಂಜಾನೆ 06:45 ಗಂಟೆಗೆ
ಅಮೃತ ಕಾಲ: ಬೆಳಗ್ಗೆ 06:45 ರಿಂದ 08:11ರ ವರೆಗೆ
ದುರ್ಮುಹೂರ್ತ: ಬೆಳಿಗ್ಗೆ 08:21 ರಿಂದ 09:09 ರ ತನಕ
ರಾಹುಕಾಲ: ಬೆಳಗ್ಗೆ 09:38 ರಿಂದ 11:05ರ ವರೆಗೆ
ಸೂರ್ಯಾಸ್ತ: ಸಂಜೆ 06:17 ಗಂಟೆಗೆ
ಇಂದು ರಾಶಿ ಭವಿಷ್ಯ:
ಮೇಷ ರಾಶಿ: ಇಂದು ನಿಮಗೆ ಸುಂದರ ವಿದೇಶಿ ವಸ್ತುಗಳು ಮತ್ತು ಹೊಸ ಐಡಿಯಾಗಳ ಮೇಲೆ ಕಣ್ಣು ಇರುತ್ತದೆ. ಈ ವಿಷಯಗಳಲ್ಲಿ ವ್ಯಾಪಾರ ಅಥವಾ ಉದ್ಯೋಗ ಸಂಬಂಧಿ ಹೊಸ ಅವಕಾಶಗಳು ಮೂಡುವ ಸಾಧ್ಯತೆ ಇದೆ. ಆದಾಗ್ಯೂ, ನೀವು ಇನ್ನು ತೀರ್ಮಾನಕ್ಕೆ ಬರುವುದಿಲ್ಲ ಆದರೆ ನಿಮ್ಮ ಆಯ್ಕೆಯನ್ನು ಮುಕ್ತವಾಗಿ ಪರಿಶೀಲಿಸಬಹುದು ಹೊಸ ಪ್ರಯತ್ನಗಳಲ್ಲಿ ಆತಂಕ ತಗೊಳ್ಳದೆ ಧೈರ್ಯದಿಂದ ಮುಂದುವರೆಯಿರಿ.
ವೃಷಭ ರಾಶಿ: ನೀವು ಉದ್ಯೋಗದಲ್ಲಿ ಒತ್ತಡಕ್ಕೆ ಸಿಲುಕ ಬಹುದು ಹೆಚ್ಚು ಕೆಲಸ ನಿಮಗೆ ಆಂತಕ ತರುವ ಸಾಧ್ಯತೆ ಇದೆ ಆದರೆ ನೀವು ತುಂಬಾ ಕಾಳಜಿ ವಹಿಸುವವರೊಂದಿಗೆ ಹೊರಗೆ ಸುಲಭವಾಗಿ ಸಮಯ ಕಳೆಯುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ ಅಗತ್ಯ.
ಮಿಥುನ ರಾಶಿ: ಈ ದಿನ ಶಕ್ತಿ ಮತ್ತು ಉತ್ಸಾಹ ನಿಮ್ಮಲ್ಲಿ ತುಂಬಿದೆ. ಜೀವನದ ಬಗ್ಗೆ ಭರವಸೆಯ ನೋಟ ಹೊಂದಿರುವುದರಿಂದ ನೀವು ಯಶಸ್ಸಿನ ಕಡೆ ತಿರುಗುತ್ತಿರಿ. ನಿಮ್ಮ ಮುಕ್ತ ಇಚ್ಛಾ ಶಕ್ತಿ ಬಳಸಿ ನೀವು ಇಷ್ಟಪಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ದಿನದ ಒತ್ತಡಗಳು ಸಹ ನಿಮ್ಮ ಪರಿಶ್ರಮಕ್ಕೆ ಪುರಸ್ಕಾರ ತರುತ್ತವೆ.
ಕರ್ಕಾಟಕ ರಾಶಿ: ನೀವು ಇಂದು ಅವಿಶ್ರಾಂತ ಮತ್ತು ಕಿರಿಕಿರಿಯ ಮನಸ್ಥಿತಿಯಿಂದ ಭರಿತವಾಗಿರಬಹುದು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಸಹ ಶಾಂತ ಮತ್ತು ಸಮಚಿತ್ತತೆಯಿಂದ ನಡೆದುಕೊಳ್ಳುವುದು ಮುಖ್ಯ. ಈ ರೀತಿಯ ದೃಢ ನಿಲುವಿನಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಆದರೆ ನೀವು ಕೋಪಗೊಳ್ಳುತ್ತಿದ್ದರೆ, ಪ್ರತಿಕೂಲತೆಯನ್ನು ನಿವಾರಿಸುವುದು ಕಷ್ಟವಾಗಬಹುದು.
ಸಿಂಹ ರಾಶಿ: ಇಂದು ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತಿರಿ. ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ದೃಢ ನಿರ್ಧಾರಗಳನ್ನು ಕೈಗೊಳ್ಳಲು ಶಕ್ತರಾಗಿರುತ್ತಿರಿ. ದಿನದ ಕೆಲಸಗಳನ್ನು ಪೂರೈಸುವಲ್ಲಿ ಯಾವುದೇ ಅಡೆತಡೆಗಳಿಲ್ಲ, ಮತ್ತು ಯಶಸ್ಸು ನಿಮ್ಮ ಬಳಿ ಬರುತ್ತದೆ.
ಕನ್ಯಾ ರಾಶಿ: ಇಂದು ಸ್ವಲ್ಪ ಬಿಡು ತೆಗೆದು ನಿಮ್ಮನ್ನು ನೋಡಿಕೊಳ್ಳಲು ಸಮಯ ತೆಗೆದುಕೊಳ್ಳಿ, ಕಚೇರಿಯಲಿ ಚಿಕ್ಕ ಜಗಳಗಳು ಅಥವಾ ಕಹಿ ಮಾತುಗಳು ನಡೆಯಬಹುದು, ಆದ್ದರಿಂದ ಎಚ್ಚರಿಕೆವಹಿಸಿ ಪ್ರೀತಿಯ ವಿಷಯದಲ್ಲಿ ಹೊಸ ಪ್ರಣಯ ಸಂಬಂಧ ರೂಪುಗೊಳ್ಳುವ ಸಾಧ್ಯತೆ ಇದೆ.
ತುಲಾ ರಾಶಿ: ಸಣ್ಣ ಸಮಸ್ಯೆಗಳಿಗೆ ಅಥವಾ ಕೌಟುಂಬಿಕ ವಿಷಯಗಳಿಗೆ ಒತ್ತಡ ತರುವುದನ್ನು ತಪ್ಪಿಸಿ. ಮಾನಸಿಕ ಶಾಂತಿಗಾಗಿ ಯೋಗ ಮತ್ತು ಧ್ಯಾನ ಪ್ರಯೋಜನಕಾರಿ. ಕೆಲಸದಲ್ಲಿ ಕೆಲ ತೊಂದರೆಗಳು ಉಂಟಾಗಬಹುದು. ಆದರೆ ಸಂಕೀರ್ಣ ವಿಷಯಗಳಲ್ಲಿ ಎಲ್ಲಾ ಆಯ್ಕೆಗಳ ಪರಿಶೀಲನೆ ಮಾಡಿದ ಮೇಲೆ ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳಿ.
ವೃಶ್ಚಿಕ ರಾಶಿ: ಇಂದು ನೀವು ಸಂಪೂರ್ಣವಾಗಿ ಕೆಲಸದಲ್ಲಿ ಮುಳುಗಿ ಹೋಗುವ ದಿನವಾಗಿರುತ್ತದೆ. ಹಗಲು ಸಮಯದಲ್ಲಿ ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಹೆಚ್ಚಾಗುತ್ತವೆ. ಆದರೆ ಸಂಜೆಯ ವೇಳೆಗೆ ಮನಸ್ಥಿತಿ ಬದಲಾಗುತ್ತದೆ ಎಂದಿನಂತೆ ಉತ್ಸಾಹದಿಂದ ತುಂಬಿದ್ದು ಮಿತ್ರರೊಂದಿಗೆ ಹೊರಗೆ ಹೋಗಿ ಆರಾಮವಾಗಿ ಕಾಲ ಕಳೆಯುವ ಅವಕಾಶ ದೊರೆಯುತ್ತದೆ.
ಧನು ರಾಶಿ: ಹಾರುವ ಮುನ್ನ ಒಮ್ಮೆ ನೋಡಿ! ಪ್ರೀತಿ ಮತ್ತು ಆಕರ್ಷಣೆ ಇಂದು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಾಮನು ಬಿಲ್ಲು ಬಾಗಿಸಿ ಬಾಣವನ್ನು ನಿಮ್ಮತ್ತ ನೆಟ್ಟಂತೆ ಅನುಭವವಾಗಬಹುದು. ಪ್ರೀತಿಯ ಪರಿಶ್ರಮದಿಂದ ಯುವ ಮತ್ತು ನವಿರಾದ ಹೃದಯ ಗೆಲ್ಲುವ ಅವಕಾಶ ಇದೆ. ಆದರೆ ಸುಲಭದ ಆಸೆಗಳಿಗೆ ಬಲಿಯಾಗದೆ ನಿಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ.
ಮಕರ ರಾಶಿ: ಇಂದು ನೀವು ಬೆನ್ನು ಬಾಗುವಷ್ಟು ಕೆಲಸದ ಒತ್ತಡದಲ್ಲಿ ಸಿಲುಕಬಹುದು ದಿನದ ಅಂತ್ಯಕ್ಕೆ ದೈಹಿಕ ಮತ್ತು ಮಾನಸಿಕ ಆಯಾಸ ಹೆಚ್ಚಾಗುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ತೀವ್ರ ಪರದೆ ಇದೆ ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ವ್ಯಾಪಾರ ಮತ್ತು ಪ್ರತಿಷ್ಠೆಗೆ ದಕ್ಕೆ ತರುವ ಅವಕಾಶ ಕಾಯುತ್ತಿದ್ದಾರೆ ಆದರೂ ನಿಮ್ಮ ಸಾಮರ್ಥ್ಯ ಮತ್ತು ತಂತ್ರಜ್ಞಾನದಿಂದ ನೀವು ಎಲ್ಲವನ್ನು ಸಮರ್ಥವಾಗಿ ಎದುರಿಸುತ್ತಿರಿ.
ಕುಂಭ ರಾಶಿ: ಶೈಕ್ಷಣಿಕವಾಗಿ ಇಂದು ನೀವು ಅತ್ಯುತ್ತಮ ಸಾಧನೆ ಮಾಡುವ ದಿನವಾಗಿದೆ ನಿಮ್ಮ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಸಾಕಷ್ಟು ಜನರಿಗೆ ಸ್ಪೂರ್ತಿ ನೀಡುತ್ತೀರಿ. ಜೊತೆಗೆ ಅಭಿಮಾನಿಗಳನ್ನು ಗಳಿಸುತ್ತೀರಿ ಆದರೆ ಈ ಯಶಸ್ಸಿನ ಕಾರಣಕ್ಕೆ ಅಹಂಕಾರ ತೋರಿಸುವುದು ಸೂಕ್ತವಲ್ಲ ಇತರರೊಂದಿಗೆ ವಿನಯ ಮತ್ತು ಸೌಜನ್ಯ ಕಾಯ್ದುಕೊಂಡರೆ ನಿಮ್ಮ ಗೌರವ ಮತ್ತಷ್ಟು ಹೆಚ್ಚಾಗುತ್ತದೆ.
ಮೀನ ರಾಶಿ: ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಕಠಿಣ ಪರಿಶ್ರಮ ಪಡುವವರಿಗೆ ಇಂದು ಉತ್ತಮ ಫಲಿತಾಂಶ ದೊರೆಯುತ್ತದೆ ವ್ಯಾಪಾರಕ್ಕೆ ಇಂದು ಶುಭದಿನ ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಪ್ರಯತ್ನಗಳು ಹಾಗೂ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಶಕ್ತರಾಗುತ್ತಿರಿ ದೇವರ ಕೃಪೆಯಿಂದ ಯಶಸ್ಸು ಸಾಧ್ಯವಾದರೂ ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸ ಅಗತ್ಯ.
ಇನ್ನಷ್ಟು ಓದಿರಿ:
ಗುಜರಾತ್ ಜೈಂಟ್ಸ್ ಪ್ಲೇ ಆಫ್ ಪ್ರವೇಶ:ಮುಂಬೈಗೆ ಇನ್ನೂ ಒಂದು ಚಾನ್ಸ್