ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ತಮ್ಮ ಒಂಬತ್ತನೇ ಸತತ ಬಜೆಟ್ ಮಂಡಿಸಲಿದ್ದಾರೆ. ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಭೌಗೋಳಿಕ ರಾಜಕೀಯ ಉತ್ಥಾನಗಳ ನಡುವೆ ಸೀತಾರಾಮನ್ ತಮ್ಮ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆ ಉತ್ತೇಜನ ನೀಡುವ ಸುಧಾರಣಾ ಕಾರ್ಯಕ್ರಮಗಳನ್ನು ಒಳಗೊಂಡಂತೆ ಮಂಡಿಸಲು ಸಿದ್ಧರಾಗಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ ಈ ಬಜೆಟ್ 2026 - 27 ಉದ್ಯೋಗ ಉದ್ಯಮ ತೆರಿಗೆ ನೀತಿ ಮತ್ತು ಆರ್ಥಿಕ ನವೀನತೆಯನ್ನು ಉತ್ತೇಜಿಸುವತ್ತ ಕೇಂದ್ರಿತ ವಾಗಿರುವುದು ನಿರೀಕ್ಷಿಸಲಾಗಿದೆ. ಸತತ ಒಂಭತ್ತನೆ ಬಜೆಟ್ ಮಂಡಿಸುವ ಸಾಧನೆ ಯೊಂದಿಗೆ ಸೀತಾರಾಮನ್ ಭಾರತೀಯ ಹಣಕಾಸು ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಳ್ಳಲಿದ್ದಾರೆ.
ನಿರ್ಮಲ ಸೀತಾರಾಮನ್ ಇತಿಹಾಸ ಸತತ 9ನೇ ಬಜೆಟ್ ಮೂಲಕ ದಾಖಲೆ ನಿರ್ಮಿಸುತ್ತಿದ್ದಾರೆ.
ಹತ್ತು ಬಜೆಟ್ ದಾಖಲೆಯಲ್ಲಿಯ ಮೊರಾರ್ಜಿ ದೇಸಾಯಿ
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ತಮ್ಮ ಅವಧಿಯಲ್ಲಿ ಒಟ್ಟು 10 ಬಜೆಟ್ ಗಳನ್ನು ಮಂಡಿಸಿದ್ದರು.
ಅವರ ಹಿಸ್ಸೆ ಹೀಗಿದೆ;
1959-1964: 6 ಬಜೆಟ್ ಗಳು
1967-1969: 4 ಬಜೆಟ್ ಗಳು
ಮಾಜಿ ಹಣಕಾಸು ಸಚಿವರು
ಪಿ ಚಿದಂಬರಂ : 9 ಬಜೆಟ್ ಗಳು
ಪ್ರಣಬ್ ಮುಖರ್ಜಿ :4 ಬಜೆಟ್ ಗಳು
ಈ ದಾಖಲೆಗಳಲ್ಲಿ ಸೀತಾರಾಮನ್ ಅವರನ್ನು ಹತ್ತಿರ ತರುತ್ತದೆ. ಸೀತಾರಾಮನ್ ನರೇಂದ್ರ ಮೋದಿ ಅವರ ಅಡಿಯಲ್ಲಿ ಸತತ ಒಂಬತ್ತು ಬಜೆಟ್ ಗಳನ್ನು ಮಂಡಿಸಿದ ದಾಖಲೆ ನಿರ್ಮಿಸುತ್ತಿದ್ದಾರೆ ಇದುವರೆಗೆ ಯಾರು 9 ಬಜೆಟ್ ಗಳನ್ನು ಮಂಡಿಸಿರಲಿಲ್ಲ, ಇದರಿಂದ ಅವರು ಭಾರತೀಯ ಹಣಕಾಸು ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಮಹತ್ವದ ಪೂರ್ಣ ಹಿನ್ನೆಲೆ;
2019 ರಲ್ಲಿ ಮೋದಿ ಅವರ ಎರಡನೇ ಅವಧಿಯಲ್ಲಿ ಸೀತಾರಾಮನ್ ಭಾರತದಲ್ಲಿನ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವೆ ಆಗಿ ನೇಮಕಗೊಂಡರು. 2024 ರಲ್ಲಿ ಮೋದಿ ಮೂರನೇ ಅವಧಿಗೆ ಬಂದ ಬಳಿಕವೂ ಅವರ ಹಣಕಾಸು ಸಚಿವೆ ಆಗಿದ್ದಾರೆ. ಫೆಬ್ರವರಿ 2024 ಮಧ್ಯಂತರ ಬಜೆಟ್ ಸೇರಿ ಅವರು ಒಟ್ಟು 8 ನೇರ ಬಜೆಟ್ ಗಳನ್ನು ಮಂಡಿಸಿದ್ದಾರೆ.
ಸುಂದರ ಕುತೂಹಲಕಾರಿ ಸಂಗತಿಗಳು;
ಸ್ವಾತಂತ್ರ ಭಾರತದಲ್ಲಿ ಬಜೆಟ್ ಮಂಡನೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಮತ್ತು ಸ್ತ್ರೀಶಕ್ತಿ ಭಾಗವಹಿಸುವ ದಾಖಲೆಗಳು ಈ ಸಂದರ್ಭ ದಲ್ಲಿ ಗಮನಾರ್ಹವಾಗಿದೆ.
ಸ್ವಾತಂತ್ರ ಭಾರತದ ಮೊದಲ ಬಜೆಟ್ ಮತ್ತು ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ:
ಮೊದಲ ಬಜೆಟ್ ಮಂಡಿಸಿದ್ದು ಯಾರು?
ಸ್ವಾತಂತ್ರ ಭಾರತದ ಮೊದಲ ಕೇಂದ್ರ ಬಜೆಟ್ ಅನ್ನು ನವಂಬರ್ 26 ,1947 ರಂದು ದೇಶದ ಮೊದಲ ಹಣಕಾಸು ಸಚಿವೆ ಆರ್ ಕೆ ಷಣ್ಮುಖಂ ಚೆಟ್ಟಿ ಮಂಡಿಸಿದರು. ಇದು ಭಾರತದ ಆರ್ಥಿಕ ವ್ಯವಸ್ಥೆಯ ಮೊದಲ ಮಹತ್ವಪೂರ್ಣವಾಗಿದೆ.
ಅತಿ ಹೆಚ್ಚು ಬಜೆಟ್ ಮಂಡಿಸಿದವರು:
ಭಾರತದ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಮಾಜಿ ಪ್ರಧಾನಿ ಮೋರಾರ್ಜಿ ದೇಸಾಯಿ ಅವರ ಹೆಸರಲ್ಲಿದೆ. ಅವರು ಪ್ರಧಾನಿ ಜವಾಹರಲಾಲ್ ನೆಹರು ಮತ್ತು ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಡಳಿತದಲ್ಲಿ ಹಣಕಾಸು ಸಚಿವರಾಗಿದ್ದರು. ಒಟ್ಟು ಹತ್ತು ಬಜೆಟ್ಗಳನ್ನು ಅವರು ಮಂಡಿಸಿದರು.
ಮೊರಾರ್ಜಿ ದೇಸಾಯಿ ಬಜೆಟ್ ವಿವರಗಳು:
ಫೆಬ್ರವರಿ 28, 1959 ರಂದು ತಮ್ಮ ಮೊದಲ ಬಜೆಟ್ ಮಂಡಿಸಿದರು 1962ರಲ್ಲಿ ಮಧ್ಯಂತರ ಬಜೆಟ್ ಮಂಡಿಸುವ ಮೊದಲು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣ ಬಜೆಟ್ ಗಳನ್ನು ಮಂಡಿಸಿದರು ನಾಲ್ಕು ವರ್ಷಗಳ ನಂತರ ಅವರು 1967 ರಲ್ಲಿ ಮತ್ತೊಂದು ಮಧ್ಯಂತರ ಬಜೆಟ್ ಕೂಡ ಮಂಡಿಸಿದರು ನಂತರ 1967 , 1968 ಮತ್ತು 1969 ರಲ್ಲಿ ಮೂರು ಪೂರ್ಣ ಬಜೆಟ್ ಭಾಷಣಗಳನ್ನು ಮಾಡಿದ್ದಾರೆ ಒಟ್ಟು 10 ಬಜೆಟ್ ಗಳನ್ನು ಮಂಡಿಸಿದ ದಾಖಲೆ ಅವರ ಹೆಸರಲ್ಲಿದೆ.
ಎರಡನೇ ಅತಿ ಹೆಚ್ಚು ಬಜೆಟ್ ಮಂಡಿಸಿದವರು- ಪಿ . ಚಿದಂಬರಂ:
ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ 9 ಬಾರಿ ಬಜೆಟ್ ಮಂಡಿಸಿದ್ದಾರೆ ಅವರು ಮಾರ್ಚ್ 19, 1996 ರಂದು ಪ್ರಧಾನಿ ಎಚ್ ಡಿ ದೇವೇಗೌಡ ನೇತೃತ್ವದ ಯುನೈಟೆಡ್ ಫ್ರೆಂಟ ಸರ್ಕಾರದ ಅವಧಿಯಲ್ಲಿ ಮೊದಲ ಬಜೆಟ್ ಮಂಡಿಸಿದರು ಮುಂದಿನ ವರ್ಷ ಅದೇ ಸರ್ಕಾರದ ಅವಧಿಯಲ್ಲಿ ಮತ್ತೊಂದು ಬಜೆಟ್ ಮಂಡಿಸಿದರು
.
2004 - 2008 ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಬಂದಾಗ ಅವರು ಮತ್ತೆ ಹಣಕಾಸು ಸಚಿವೆ ಸ್ಥಾನಕ್ಕೆ ಮರಳಿ ಐದು ಬಜೆಟ್ ಗಳನ್ನು ಮಂಡಿಸಿದರು ನಂತರ ಕೇಂದ್ರ ಗ್ರಹ ಸಚಿವೆ ಆಗಿ ಸೇವೆ ಸಲ್ಲಿಸಿದ ಬಳಿಕ 2013 ಮತ್ತು 2014ರಲ್ಲಿ ಬಜೆಟ್ ಮಂಡನೆ ಮೂಲಕ ತಮ್ಮ ಹೆಗ್ಗಳಿಕೆ ಹೆಚ್ಚಿಸಿಕೊಂಡಿದ್ದಾರೆ.
ಮೂರನೇ ಅತಿ ಹೆಚ್ಚು ಬಜೆಟ್ ಮಂಡಿಸಿದವರು- ಪ್ರಣಬ್ ಮುಖರ್ಜಿ:
ಮಾಜಿ ಅಧ್ಯಕ್ಷ ಮತ್ತು ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ತಮ್ಮ ಹಣಕಾಸು ಸಚಿವ ಅವಧಿಯಲ್ಲಿ ಎಂಟು ಬಜೆಟ್ ಗಳನ್ನು ಮಂಡಿಸಿದ್ದಾರೆ ಮುಖರ್ಜಿಯವರು 1982, 1983 ಮತ್ತು 1984 ರಲ್ಲಿ ಬಜೆಟ್ ಮಂಡಿಸಿದರು ನಂತರ ಯುಪಿಎ ಸರ್ಕಾರದಲ್ಲಿ ಫೆಬ್ರವರಿ 2009 ಮತ್ತು ಮಾರ್ಚ್ 2012ರ ನಡುವೆ ಸತತ 5 ಬಜೆಟ್ ಗಳನ್ನು ಮಂಡಿಸಿದ್ದಾರೆ.
ಮನಮೋಹನ್ ಸಿಂಗ್ ಮಂಡಿಸಿದ ಬಜೆಟ್ ಗಳು:
ಮಾಜಿ ಪ್ರಧಾನಿ ಮನೋ ಮೋಹನ್ ಸಿಂಗ್ ಅವರು 1991, 1995ರಲ್ಲಿ ಟಿ.ವಿ ನರಸಿಂಹರಾವ್ ಸರ್ಕಾರದ ಹಣಕಾಸು ಸಚಿವೆ ಯಾಗಿದಾಗ ಇದು ನೇರ ಬಜೆಟ್ ಗಳನ್ನು ಮಂಡಿಸಿದ್ದು ಭಾರತೀಯ ಹಣಕಾಸು ಇತಿಹಾಸದಲ್ಲಿ ಮಹತ್ವಪೂರ್ಣ ಸಾಧನೆ ಎಂದು ಪರಿಗಣಿಸಲಾಗಿದೆ.
ಅತಿ ದೀರ್ಘಾವಧಿ ಬಜೆಟ್ ಭಾಷಣ- ನಿರ್ಮಲ ಸೀತಾರಾಮನ್;
ಫೆಬ್ರವರಿ ಒಂದು 2020 ರಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು 8 ಗಂಟೆ 4 ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡುವ ಮೂಲಕ ಅತಿ ಹೆಚ್ಚು ಅವಧಿಯ ಬಜೆಟ್ ಭಾಷಣ ದಾಖಲೆಯನ್ನು ನಿರ್ಮಿಸಿದರು. ಈ ಸಂದರ್ಭದಲ್ಲಿ ಬಾಕಿ ಉಳಿದ ಎರಡು ಪುಟಗಳನ್ನು ಓದಲು ಮುಂದಾಗ ತಮ್ಮ ಭಾಷಣವನ್ನು ಮೊಟಕುಗೊಳಿಸಿದರು.
ಅತಿ ಚಿಕ್ಕ ಬಜೆಟ್ ಭಾಷಣ್ ಹಿರುಭಾಯಿ ಮುಲ್ಜಿಭಾಯ್ ಪಟೇಲ್:
1977ರಲ್ಲಿ ಹೀರುಬಾಯಿ ಮುಲ್ಜಿಭಾಯ್ ಪಟೇಲ್ ಅವರ ಮಧ್ಯಂತರ ಬಜೆಟ್ ವಾಷಿಂಗ್ ಕೇವಲ 800 ಪದಗಳಲ್ಲಿ ಪೂರ್ಣಗೊಂಡು ಸ್ವಾತಂತ್ರ ಭಾರತದ ಇತಿಹಾಸದಲ್ಲಿ ಅತಿ ಚಿಕ್ಕ ಬಜೆಟ್ ಭಾಷಣ ಎಂದು ದಾಖಲಾಗಿದೆ.
ಬಜೆಟ್ ಭಾಷಣದ ಸಮಯ: ಸಾಂಪ್ರದಾಯಿಕವಾಗಿ ಫೆಬ್ರವರಿ ಕೊನೆಯ ದಿನದಂದು ಸಂಜೆ 5:00 ಗಂಟೆಗೆ ಬಜೆಟ್ ಅನ್ನು ಮಂಡಿಸಲಾಗುತ್ತಿತ್ತು ವಸಾಹತುಶಾಹಿ ಯುಗದ ಪದ್ಧತಿಯಂತೆ ಲಂಡನ್ ಮತ್ತು ಭಾರತದಲ್ಲಿ ಒಂದೇ ಸಮಯದಲ್ಲಿ ಬಜೆಟ್ ಘೋಷಣೆಗಳು ನಡೆಯಬಹುದೆಂದು ಈ ಸಮಯ ನಿಗದಿಯಾಗಿತ್ತು ಭಾರತವು ಬ್ರಿಟಿಷ್ ಬೇಸಿಗೆ ಸಮಯಕ್ಕಿಂತ 4:00 30 ನಿಮಿಷ ಮುಂದಾಗಿದೆ ಆದ್ದರಿಂದ ಸಂಜೆ ಐದು ಗಂಟೆಗೆ ಬಜೆಟ್ ಮಂಡನೆ, ಯುನೈಟೆಡ್ ಕಿಂಗ್ ಡಮ್ ನಲ್ಲಿ ಹಗಲಿನ ಸಮಯಕ್ಕೆ ಸಮಾನವಾಗುತ್ತಿತ್ತು.
ಬಜೆಟ್ ಸಮಯದಲ್ಲಿ ಬದಲಾವಣೆ ಬೆಳಗ್ಗೆ 11 ಗಂಟೆಗೆ :
1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಆಗಿನ ಹಣಕಾಸು ಸಚಿವೆ ಯಶವಂತ್ ಸಿನ್ಹಾ ಬೆಳಗ್ಗೆ 11:00 ಗಂಟೆಗೆ ಬಜೆಟ್ ಮಂಡಿಸಲು ಪ್ರಾರಂಭಿಸಿದಾಗ ಸಂಜೆಯ ಬದಲು ಬೆಳಗಿಗೆ ಬಜೆಟ್ ಘೋಷಣೆ ನಡೆಯಲು ಪ್ರಾರಂಭ ವಾಗಿತ್ತು ಅದರಿಂದ ಇದು ಬಜೆಟ್ಗಳನ್ನು ಬೆಳಗ್ಗೆ 11 ಗಂಟೆಗೆ ಮಂಡಿಸಲಾಗುತ್ತಿದೆ.
ಬಜೆಟ್ ಮಂಡನೆ ದಿನಾಂಕ:
2017ರಲ್ಲಿ ಬಜೆಟ್ ಪ್ರಸ್ತುತಿ ದಿನಾಂಕವನ್ನು ಫೆಬ್ರವರಿ 1ಕ್ಕೆ ಮುಂದ ಮುಂದುಡಲಾಗಿದೆ. ಈ ಬದಲಾವಣೆಯಿಂದ ಸರ್ಕಾರವು ಮಾರ್ಚ್ ಅಂತ ಒಳಗೆ ಸಂಸತ್ತಿನ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳಿಸಲು ಹಾಗೂ ಏಪ್ರಿಲ್ ಒಂದರಿಂದ ಹೊಸ ಹಣಕಾಸು ವರ್ಷದ ಬಜೆಟ್ ಅನುಷ್ಠಾನಗೊಳಿಸುವ ಅವಕಾಶ ಕಲ್ಪಿಸಿದೆ ಮೊದಲ ಬಜೆಟ್ ಫೆಬ್ರವರಿ 28ರಂದು ಮಂಡಿಸಲಾಗುತ್ತಿತ್ತು.
ಇನ್ನಷ್ಟು ಓದಿರಿ:
“ಅರಿಜಿತ್ ಸಿಂಗ್" 38 ವಯಸ್ಸಿನಲ್ಲಿಯೇ ಹಿನ್ನೆಲೆ ಗಾಯನಕ್ಕೆ ವಿದಾಯ