ವಿಟಮಿನ್ ಗಳು, ಮಿನರಲ್ಸ್, ಪ್ರೋಟೀನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಕೇವಲ ಆಹಾರಗಳು, ನೈಸರ್ಗಿಕ ಹೊಳ್ಪನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕೂದಲು ಉದುರುವುದು ಮತ್ತು ದುರ್ಬಲ ಉಗುರುಗಳು ಸಮಸ್ಯೆಗೆ ಪರಿಹಾರ ಸಿಗಬಹುದು.
ಬಯೋಟಿನ್ ಸಮೃದ್ಧ ಆಹಾರಗಳು;
ಪ್ರತಿನಿತ್ಯ ಬಯೋಟಿನ್ ಹೇರಳವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂದು ಸೌಂದರ್ ತಜ್ಞರು ತಿಳಿಸಿದ್ದಾರೆ ಬಯೋಟಿನ್ ಕೂದಲಿನ ಬೇರುಗಳನ್ನು ಬಳಪಡಿಸಿ ಹೊಸ ಕೂದಲು ಬೆಳವಣಿಗೆ ಉತ್ತೇಜನ ನೀಡುತ್ತದೆ.
ನಿಯಮಿತವಾಗಿ ಬಯೋಟಿನ್ ಸಮೃದ್ಧ ಆಹಾರ ಸೇವಿಸುವುದರಿಂದ ಕೂದಲು ದಟ್ಟವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯಲು ಸಹಾಯವಾಗುತ್ತದೆ, ಜೊತೆಗೆ ಇದು ತ್ವಚೆಯ ಆರೋಗ್ಯ ಮತ್ತು ಉಗುರುಗಳ ಬಲವರ್ಧನಕ್ಕೂ ಪ್ರಯೋಜನಕಾರಿಯಾಗಿದೆ, ಆದ್ದರಿಂದ ಕೂದಲು ಉದುರುವುದು ತೆಳ್ಳಗಾಗುತ್ತಿರುವ ಕೂದಲು ಅಥವಾ ಉಗುರು ಬಲಹೀನತೆ ಸಮಸ್ಯೆ ಎದುರಿಸುತ್ತಿರುವವರು ತಮ್ಮ ದಿನನಿತ್ಯದ ಆಹಾರದಲ್ಲಿ ಬಯೋಟಿನ್ ಇರುವ ಪದಾರ್ಥಗಳನ್ನು ಸೇವಿಸುವುದು ಅತ್ಯಂತ ನೀಡಿದ್ದಾರೆ.
ಬಹುತೇಕ ಜನರು ತಮ್ಮ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ, ಪ್ರತಿನಿತ್ಯ ವಿವಿಧ ಕ್ರೀಮ್ಗಳು ಶಾಂಪೂಗಳು ಮತ್ತು ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ ಆದರೆ ನಿಜವಾದ ಸೌಂದರ್ಯವು ನಾವು ಸೇವಿಸುವ ಆಹಾರದ ಪ್ರತಿಬಿಂಬವೇ ಹೊರತು ಬೇರೆ ಏನು ಅಲ್ಲ. ಒಳಗಿನಿಂದ ಆರೋಗ್ಯವಾಗಿದ್ದರೆ ಮಾತ್ರ ಹೊರಗಿನಿಂದ ತ್ವಚೆ, ಕೂದಲು ಮತ್ತು ಗುರುಗಳು ಹೊಳೆಯುತ್ತವೆ.
ಇಂದಿನ ಒತ್ತಡದ ಜೀವನ ಶೈಲಿ ನಿದ್ರೆಯ ಕೊರತೆ ಮತ್ತು ಸಂಸ್ಕರಿಸಿದ್ದ ಆಹಾರಗಳ ಹೆಚ್ಚಿನ ಬಳಕೆ ಕಾರಣ ಕೂದಲಿನ ಉದುರುವಿಕೆ ಕಳೆಗುಂದಿದ ಮುಖ ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಉಗುರುಗಳ ಸಮಸ್ಯೆಗಳಿಂದ ಬೆಳಯುತ್ತಿದ್ದಾರೆ. ಇದನ್ನು ತಡೆಯಲು ಪೌಷ್ಟಿಕಾಂಶ ತುಂಬಿದ ಆಹಾರವನ್ನು ಆಯ್ಕೆ ಮಾಡುವುದು ಅತ್ಯಂತ ಅಗತ್ಯ.
ಅಶ್ಚರ್ಯಕರ ಸಂಗತಿ ಎಂದರೆ, ತ್ವಚೆ, ಕೂದಲು ಮತ್ತು ಗುರುಗಳ ಆರೋಗ್ಯವನ್ನು ಸುಧಾರಿಸಲು ಬಾರಿ ಉತ್ಪನ್ನಗಳ ಅವಶ್ಯಕತೆ ಇಲ್ಲ ನಮ್ಮ ಅಡುಗೆ ಮನೆಯಲ್ಲಿ ಲಭ್ಯ ಇರುವ ನೈಸರ್ಗಿಕ ಪದಾರ್ಥಗಳನ್ನು ಸರಿಯಾಗಿ ಬಳಸುವುದರಿಂದ ಸಹಜವಾಗಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು, ಯಾವ ಆಹಾರಗಳು ತ್ವಚೆಗೆ ಕಾಂತಿ ನೀಡುತ್ತವೆ ಕೂದಲು ದಟ್ಟವಾಗಿಸುತ್ತವೆ ಮತ್ತು ಗುರುಗಳನ್ನು ಬಲಿಷ್ಠ ಗೊಳಿಸುತ್ತವೆ ಎಂಬುದು ಈಗ ತಿಳಿಯೋಣ.
ಫ್ಯಾಟಿ ಫಿಶ್: ಸಾರ್ಡೀನ್ , ಸಾಲ್ಮನ್ ಮತ್ತು ಮ್ಯಾಕೆರಿಲ್ ನಂತಹ ಫ್ಯಾಟಿ ಫಿಶ್ ಗಳಲ್ಲಿ ಓಮೆಗಾ - 3 ಕೊಬ್ಬಿನಾಮ್ಲಗಳು ಸಮೃದ್ಧಿಯಾಗಿ ಲಭ್ಯವಿದೆ ಇವು ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಚರ್ಮವನ್ನು ವಿರುದ್ಧವಾಗಿಸಿ ಆರೋಗ್ಯಕರವಾಗಿ ಕಾಣಲು ಸಹಾಯ ಮಾಡುತ್ತವೆ.
ಅಧ್ಯಯನಗಳ ಪ್ರಕಾರ ಮೀನಿನ ಎಣ್ಣೆ ಚರ್ಮದ ಉರಿಯುತವನ್ನು ಕಡಿಮೆ ಮಾಡುತ್ತದೆ ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಎಂಬ ಅಧ್ಯಾಯವು ಫಿಶ್ ಆಯಿಲ್ ನಲ್ಲಿರುವ ಕೊಬ್ಬಿನಾಮ್ಲಗಳು ಚರ್ಮದ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದೆ.
ನಟ್ಸ್ : ಬಾದಾಮಿ, ವಾಲ್ನಟ್ಸ್ ಮತ್ತು ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಇ ಮತ್ತು ಬಯೋಟಿನ್ ಅಧಿಕವಾಗಿ ಇರುತ್ತವೆ ಬಯೋಟಿನ್ ಕೊರತೆ ಇದ್ದರೆ ಉಗುರುಗಳು ಮುರಿಯುವುದು ಮತ್ತು ಕೂದಲು ತೆಳುವಾಗುವುದು ಸಾಮಾನ್ಯ ಸಮಸ್ಯೆ ಆಗುತ್ತದೆ.
ಅವಕಾಡೊ : ಅವಕಾಡೊ ಹಣ್ಣು ಆರೋಗ್ಯಕರ ಕೊಬ್ಬುಗಳಿಂದ ಕೂಡಿದೆ ಇದು ಚರ್ಮವನ್ನು ಒಳಗಿನಿಂದ ತೇವಾಂಶದಿಂದ ಸಮೃದ್ಧ ವಾಂಗಿಡಲು ಸಹಾಯ ಮಾಡುತ್ತದೆ ಇದರಲ್ಲಿ ವಿಟಮಿನ್ C ಮತ್ತು E ಸಮೃದ್ಧವಾಗಿದೆ, ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ ಚರ್ಮದನಯ ಮತ್ತು ಗಟ್ಟಿತನವನ್ನು ಸುಧಾರಿಸುತ್ತದೆ.
ಅಧ್ಯಯನಗಳ ಪ್ರಕಾರ ಅವಕಾಡೊ ಸೇವನೆಯಿಂದ ಮಹಿಳೆಯರಲ್ಲಿ ಚರ್ಮದ ಸ್ಥಿತಿಸ್ಥಾಪಕತ್ವ ಆರೈಕೆ ಉತ್ತಮವಾಗಿರುತ್ತದೆ ಅಧ್ಯಯನವು ಅವಕಾಡೊ ಚರ್ಮದ ರಚನೆಯನ್ನು ಕಾಪಾಡುವಲ್ಲಿ ಸೋಂಕುಗಳನ್ನು ಕಡಿಮೆ ಮಾಡಲು ಮತ್ತು ಗಾಯ ಗುಣಮುಖ ಮಾಡಲು ಸಹಾಯ ಮಾಡುತ್ತದೆ ಎಂದು ತೋರಿಸುತ್ತದೆ.
ಗೆಣಸು:
ಗೆಣಸಿನಲ್ಲಿರುವ ಬೀಟಾ ಕ್ಯಾರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ ಇದು ಚರ್ಮದ ಕೋಶ ನವೀಕರಣ ಮತ್ತು ಕೂದಲಿನ ಬೆಳವಣಿಗೆ ಅತ್ಯಂತ ಮುಖ್ಯ ಅದಕ್ಕಾಗಿ ಗೆಣಸು ಸೇವನೆಯು ಚರ್ಮದ ವಯಸ್ಸಾಗುವುದನ್ನು ತಡೆಯಲು ಯೌವನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು NCBI ಅಧ್ಯಯನ ತಿಳಿಸಿದೆ.
ಗೆಣಸು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಎ ಒಳಗೊಂಡಿರುವುದರಿಂದ ಚರ್ಮದ ಆರೋಗ್ಯ ಬೆಳಕು ಮತ್ತು ಕೂದಲು ಬಲವನ್ನು ಉತ್ತಮಗೊಳಿಸುತ್ತದೆ.
ಹಸಿರು ತರಕಾರಿಗಳು: ಪಾಲಕ್ ಮತ್ತು ಇತರ ರೀತಿಯ ಹಸಿರು ತರಕಾರಿಗಳಲ್ಲಿ ಕಬ್ಬಿನ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ ಕಬಿನವರ ರಕ್ತದ ಹರಿಯವನ್ನು ನಿಯಂತ್ರಿಸುತ್ತದೆ, ಕೂದಲಿನ ಬೇರುಗಳಿಗೆ ಅಗತ್ಯವಾದ ಆಮ್ಲಜನಕವನ್ನು ಒದಗಿಸುತ್ತದೆ ಇದು ಕೂದಲು ಉದುರುಕೆಯನ್ನು ಗಮ ವಾಗಿ ಕಡಿಮೆ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಚಿಪ್ಪು ಮೀನು: ನಮ್ಮ ದೇಹದಲ್ಲಿ ಅಂಗಾಂಶ ದುರಸ್ತಿಗೆ ಸತುವು ಅತ್ಯಗತ್ಯ. ಟಿಪ್ಪು ಮೀನುಗಳಲ್ಲಿ ಸತುವು ಬಹಳ ಸಮೃದ್ಧವಾಗಿದೆ. ಸತುವಿನ ಕೊರತೆಯು ಕೂದಲು ಉದುರುವಿಕೆ ಚರ್ಮದ ಕಿರಿಕಿರಿಯನ್ನು ಉಂಟುಮಾಡುತ್ತದೆ ಇದನ್ನು ನಿಮ್ಮ ಆಹಾರದಲ್ಲಿ ಸೇವಿಸುವುದು ಉತ್ತಮ ಪರಿಹಾರವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಮೊಟ್ಟೆ: ಕೂದಲು ಮತ್ತು ಉಗುರುಗಳ ಕೆರಾಟಿನ ಪ್ರೋಟೀನ್ ಇಂದ ಮಾಡಲ್ಪಟ್ಟಿವೆ ಮೊಟ್ಟೆಗಳು ಈ ಪ್ರೊಟೀನ್ ತಯಾರಿಸಲು ಅಗತ್ಯವಿರುವ ಎಲ್ಲಾ ಅಮೈನೋ ಆಮ್ಲಗಳನ್ನು ಹೊಂದಿವೆ.
ಇದಲ್ಲದೆ ಮೊಟ್ಟೆಯಲ್ಲಿರುವ ಬಯೋಟಿನ್ ಕೂದಲು ಉದುರಿಕೆಯನ್ನು ತಡೆಯಲು ಮತ್ತು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ ಅದೇನ ಪ್ರಕಾರ ಒಂದು ಮೊಟ್ಟೆಯಲ್ಲಿ ಸುಮಾರು ಏಳು ಗ್ರಾಂ ಪ್ರೊಟೀನ್ ಇರುತ್ತದೆ ಇದು ಅಂಗಾಂಶ ದುರಸ್ತಿ ಮತ್ತು ಬೆಳವಣಿಗೆಯ ಮೂಲವಾಗಿದೆ.
ನೀರಿನ ಅಂಶವಿರುವ ತರಕಾರಿಗಳು ಮತ್ತು ಹಣ್ಣುಗಳು: ಸೌತೆಕಾಯಿಗಳು, ಕಲ್ಲಂಗಡಿ ಗಳು, ಸ್ಟ್ರಾಬೆರಿಗಳು, ಟೊಮೆಟೊಗಳು ದೇಹವನ್ನು ಹೈಡ್ರಿಕರಿ ಸಿಟ್ಟುಕೊಳ್ಳಲು ಬಹಳ ಉಪಯುಕ್ತ.
ಸಕ್ಕರೆ ಕಡಿಮೆ ಮಾಡಿ ಪ್ರತಿದಿನ ಸಾಕಷ್ಟು ನೀರು ಕುಡಿಯುವುದರಿಂದ ಚರ್ಮವನ್ನು ಹೊಳೆಯುವಂತೆ ಪ್ರಬಲ ಆರೋಗ್ಯವನ್ನು ಕಾಪಾಡಬಹುದು ಎಂದು ಸೌಂದರ್ಯ ತಜ್ಞರು ಶಿಫಾರಸು ಮಾಡುತ್ತಾರೆ.
ಓದುವರೆಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನೀಡಲಾದ ಆರೋಗ್ಯ ಸಂಬಂಧಿತ ಎಲ್ಲ ಮಾಹಿತಿ ಮತ್ತು ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ ಅಧ್ಯಯನಗಳು ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಗಳ ಆಧಾರದ ಮೇಲೆ ಒದಗಿಸುತ್ತಿದ್ದೇವೆ.
ಗಂಭೀರ ಸೂಚನೆ;
ನೀವು ಈ ಮಾಹಿತಿಯನ್ನು ವೈಯಕ್ತಿಕ ಚಿಕಿತ್ಸೆಯ ಪರಿಗಣತೆಗಾಗಿ ಬಳಸಬಾರದು.
ಯಾವುದೇ ವಿಧಾನ ಅಥವಾ ಆರೋಗ್ಯ ಕ್ರಮವನ್ನು ಅನುಸರಿಸುವ ಮೊದಲು ಪರಿಣತ ವೈದ್ಯರನ್ನು ಅಥವಾ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.
ವೈಯಕ್ತಿಕ ಶಾರಿರಿಕ ಪರಿಸ್ಥಿತಿ ದೈಹಿಕ ಆರೋಗ್ಯ, ಮೆಡಿಕಲ್ ಹಿಸ್ಟರಿ ಪ್ರಕಾರ ಸಲಹೆಗಳು ಬೇರೆಯಾಗಬಹುದು
ಈ ಮಾಹಿತಿ ನಿಮ್ಮ ಆರೋಗ್ಯ ಜ್ಞಾನವನ್ನು ಹೆಚ್ಚಿಸಲು ಉಪಯುಕ್ತವಾಗಿದೆ ಆದರೆ ವೈದ್ಯಕೀಯ ನಿರ್ಧಾರಕಾಗಿದ್ದು ಇದು ಪರ್ಯಾಯವಲ್ಲ.
ಇನ್ನಷ್ಟು ಓದಿರಿ:
ಭಾರತ - ಯುರೋಪ್ ಒಪ್ಪಂದಕ್ಕೆ ಅಮೆರಿಕಾ ಆಕ್ರೋಶ