ಸೋಮನಾಥ ಸ್ವಾಭಿಮಾನ ಪರ್ವದ ಭಾಗವಾಗಿ ಆಯೋಜಿಸಲಾದ ಈ ಯಾತ್ರೆಯಲ್ಲಿ ಶೌರ್ಯ ಮತ್ತು ತ್ಯಾಗವನ್ನು ಪ್ರತಿಬಿಂಬಿಸುವ 108 ಕುದುರೆಗಳ ಮೆರವಣಿಗೆ ನಡೆಯಿತು.
ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಯಾತ್ರೆಯ ಮಾರ್ಗದ ಎರಡೂ ಬದಿಗಳಲ್ಲಿ ಭಾರೀ ಸಂಖ್ಯೆಯ ಜನ ಮತ್ತು ಭಕ್ತರು ಸೇರಿದ್ದರು.
ವಿಶೇಷವಾಗಿ, ವಿನ್ಯಾಸಗೊಳಿಸಲಾದ ವಾಹನದ ಮೇಲೆ ಪ್ರಧಾನಿ ಮೋದಿ ನಿಂತಿದ್ದರು. ಅವರೊಂದಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಇದ್ದರು. ಯಾತ್ರೆ ಒಂದು ಕಿ.ಮೀ. ದೂರ ಸಾಗಿತು. ಇಬ್ಬರೂ ಜನರತ್ತ ಕೈಬೀಸುತ್ತಾ ಸಾಗಿದರು.
ಭವಿಷ್ಯದ ಪೀಳಿಗೆಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಪ್ರೇರೇಪಿಸುತ್ತಿರುವ ಸೋಮನಾಥ ದೇವಾಲಯವನ್ನು ರಕ್ಷಿಸಲು ತ್ಯಾಗ ಮಾಡಿರುವ ಭಾರತದ ಅಸಂಖ್ಯಾತ ನಾಗರಿಕರನ್ನು ಸ್ಮರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇಲ್ಲಿನ ಗಿರ್ ಸೋಮನಾಥ ಜಿಲ್ಲೆಯ ಪ್ರಸಿದ್ಧ ಶ್ರೀ ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸುವ ಉದ್ದೇಶದಿಂದ ಇಂದು ಆಯೋಜಿಸಲಾಗಿರುವ ವಿಧ್ಯುಕ್ತ ಮೆರವಣಿಗೆ 'ಶೌರ್ಯ ಯಾತ್ರೆ'ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು.
1026ರಲ್ಲಿ ದಾಳಿಕೋರ ಘಜ್ನಿ ಮಹಮ್ಮದ್ ಸೋಮನಾಥ ದೇವಾಲಯದ ಮೇಲೆ ಆಕ್ರಮಣ ಮಾಡಿ 1,000 ವರ್ಷಗಳನ್ನು ಪೂರೈಸಿದ ನಂತರ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ.
ಶತಮಾನಗಳಿಂದ ದೇಗುಲದ ನಾಶಕ್ಕೆ ಪದೇ ಪದೇ ಪ್ರಯತ್ನಗಳು ನಡೆದಿದ್ದರೂ ಸೋಮನಾಥ ದೇವಾಲಯ ಇಂದು ಸ್ಥಿತಿಸ್ಥಾಪಕತ್ವ, ನಂಬಿಕೆ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರಬಲ ಸಂಕೇತವಾಗಿ ನಿಂತಿದೆ. ಸಾಮೂಹಿಕ ಸಂಕಲ್ಪ ಮತ್ತು ಅದರ ಪ್ರಾಚೀನ ವೈಭವವನ್ನು ಮರುಸ್ಥಾಪಿಸುವ ಪ್ರಯತ್ನಗಳಿಂದಾಗಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನಷ್ಟು ಓದಿರಿ:
ನಟ ವಿಜಯರ ಪ್ರಚಾರ ವಾಹನ : ವಿಧಿ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ