<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಕುಸಿದ ತಾಪಮಾನ: ಉತ್ತರ ಭಾರತದಲ್ಲಿ ಚಳಿಯಲ್ಲೂ ಮಾಘ ಮೇಳದಲ್ಲಿ ಪವಿತ್ರ ಸ್ನಾನ

ಕುಸಿದ ತಾಪಮಾನ: ಉತ್ತರ ಭಾರತದಲ್ಲಿ ಚಳಿಯಲ್ಲೂ ಮಾಘ ಮೇಳದಲ್ಲಿ ಪವಿತ್ರ ಸ್ನಾನ
Summary: ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ತೀವ್ರವಾಗಿ ಚಳಿ ಹೆಚ್ಚಾಗುತ್ತಿದ್ದು , ತಾಪಮಾನ ಕುಸಿಯುತ್ತಿದೆ. ಇಂತಹ ಸಂಧರ್ಭದಲ್ಲಿ ಪವಿತ್ರ ಸ್ಥಾನ ಮಾಡಿದ ಭಕ್ತ ಸಮೂಹ.
belagavi news :


ಆಗ್ರಾ: ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ಮುಂಜಾನೆಯ ದಟ್ಟ ಮಂಜಿನ ವಾತಾವರಣದಿಂದಾಗಿ ವೀಕ್ಷಣಾ ಸಾಮರ್ಥ್ಯ ಕುಸಿದಿದೆ. ಈ ಥರಗುಟ್ಟುವ ಚಳಿಯಲ್ಲೂ ಸಾವಿರಾರು ಭಕ್ತರು ಮಾಘ ಮೇಳದ ಹಿನ್ನೆಲೆಯಲ್ಲಿ ಪ್ರಯಾಗ್​ರಾಜ್​ನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಆಗ್ರಾದಲ್ಲೂ ಚಳಿಯ ತೀವ್ರತೆಯಿಂದಾಗಿ ಮುಂಜಾನೆ ದಟ್ಟ ಮಂಜು ತಾಜ್ ಮಹಲ್ ಆವರಿಸಿದ್ದು, ತಾಜ್ ವ್ಯೂ ಪಾಯಿಂಟ್ ಪ್ರದೇಶದಲ್ಲಿ ಗೋಚರತೆ ಕಡಿಮೆಯಾಗಿದೆ.ಪ್ರಯಾಗರಾಜ್ನಲ್ಲಿ ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ಮಾಘ ಮೇಳ ನಡೆಯುತ್ತಿದ್ದು, ಇದು ದೇಶದ ಅತಿದೊಡ್ಡ ತೀರ್ಥಯಾತ್ರೆಗಳಲ್ಲಿ ಒಂದಾಗಿದೆ. ಈ ತೀರ್ಥಯಾತ್ರೆಗೆ ಹಿಂದೂ ಮಾಸದ ಮಾಘದ ಹೆಸರನ್ನು ಇಡಲಾಗಿದೆ. 45 ದಿನಗಳ ತೀರ್ಥಯಾತ್ರೆಯಾಗಿದ್ದು, ಇದು ಪೌಷ ಪೂರ್ಣಿಮೆಯಂದು ಪ್ರಾರಂಭವಾಗಿ ಮಹಾಶಿವರಾತ್ರಿಯಂದು ಕೊನೆಗೊಳ್ಳುತ್ತದೆ.ಭಾರತ ಹವಾಮಾನ ಇಲಾಖೆ ಪ್ರಕಾರ, ನಗರದ ಗರಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಶೀತ ಪರಿಸ್ಥಿತಿಗಳು ತೀವ್ರಗೊಂಡಂತೆ ಕನಿಷ್ಠ ತಾಪಮಾನವು 7 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ. ತೀವ್ರ ಚಳಿಯ ಹೊರತಾಗಿಯೂ, ತಾಪಮಾನ ಕುಸಿತದಿಂದ ಕಂಗೆಡದೇ, ಭಕ್ತರು ಪ್ರಯಾಗ್‌ರಾಜ್‌ನ ಸಂಗಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಲೇ ಇದ್ದರು.ಹರಿದ್ವಾರದಲ್ಲಿ ಶೀತ ಅಲೆಗಳ ಪರಿಸ್ಥಿತಿಯೂ ವರದಿಯಾಗಿದೆ. ಅಲ್ಲಿ ಹರ್ ಕಿ ಪೌಡಿ ಘಾಟ್‌ನಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಗೋಚರತೆಯನ್ನು ಗಮನಾರ್ಹವಾಗಿ ಕ್ಷೀಣವಾಗುವಂತೆ ಮಾಡಿದೆ. ಹರಿಯಾಣದಲ್ಲಿ, ಶೀತಗಾಳಿಯಿಂದಾಗಿ ಕರ್ನಾಲ್ ಜಿಲ್ಲೆಯನ್ನು ದಟ್ಟವಾದ ಮಂಜು ಆವರಿಸಿದೆ. ಕರ್ನಾಲ್‌ನಲ್ಲಿ ಗರಿಷ್ಠ ತಾಪಮಾನವು 17 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನವು ಸುಮಾರು 4 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು ಎಂದು ಐಎಂಡಿ ಮುನ್ಸೂಚನೆ ನೀಡಿದೆಭಾನುವಾರ ರಾತ್ರಿ ನಗರದ ಹಲವಾರು ಭಾಗಗಳಲ್ಲಿ ಶೀತ ಅಲೆಯ ವಾತಾವರಣವಿದ್ದು, ಕನಿಷ್ಠ ತಾಪಮಾನ ಮೂರು ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಪಾಲಂನಲ್ಲಿ ಕನಿಷ್ಠ ತಾಪಮಾನ 3.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಹಲವಾರು ವರ್ಷಗಳಲ್ಲಿನ ಕನಿಷ್ಠ ತಾಪಮಾನವಾಗಿದೆ. ದಿನವಿಡೀ ಇದೇ ರೀತಿಯ ಶೀತಗಾಳಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ತಾಪಮಾನ ತೀವ್ರವಾಗಿ ಕುಸಿದಿದ್ದರಿಂದ, ಅಯನಗರವು 2.9 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನವನ್ನು ದಾಖಲಿಸಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.ಸಫ್ದರ್ಜಂಗ್‌ನಲ್ಲಿ ಭಾನುವಾರ ರಾತ್ರಿ ಕನಿಷ್ಠ ತಾಪಮಾನ 4.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇಂದು ರಾತ್ರಿ ಸುಮಾರು 3 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ. ರಿಡ್ಜ್ ನಿಲ್ದಾಣದಲ್ಲಿ ಕನಿಷ್ಠ ತಾಪಮಾನ 3.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಗರಿಷ್ಠ ತಾಪಮಾನ 18.8 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ಹವಾಮಾನ ಇಲಾಖೆಯಿಂದ ತಿಳಿದು ಬಂದಿದೆ.

ಇನ್ನಷ್ಟು ಓದಿರಿ:
IPL ಶೈಲಿಯಲ್ಲಿ 'ಕೆಪಿಎಲ್' : ಆಂಧ್ರಪ್ರದೇಶದಲ್ಲಿ ಕೋಳಿ ಕಾಳಗಕ್ಕೆ ಸಕಲ ಸಿದ್ಧತೆ .
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online