ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ರೊಡ್ರಿಗಸ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಅವರು ಅಮೆರಿಕದ ಷರತ್ತುಗಳ ಮೇಲೆ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದ್ದರು. ನಂತರ ಟ್ರಂಪ್ ಅವರು ವೆನೆಜುವೆಲಾದಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ರೊಡ್ರಿಗಸ್ ಅಮೆರಿಕದ ಸಲಹೆಯನ್ನು ಸ್ವೀಕರಿಸಲು ಸಿದ್ಧರಿದ್ದಾರೆ ಎಂದು ಹೇಳಿಕೊಂಡಿದ್ದರು. ಅಮೆರಿಕ ಸೇನಾಪಡೆಯ ವಿಶೇಷ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಪಡಿಸಿಕೊಂಡು ಜೈಲಿಗೆ ಹಾಕಿದ ನಂತರ, ಮಧ್ಯಂತರ ನಾಯಕಿ ಡೆಲ್ಸಿ ರೊಡ್ರಿಗಸ್ ಅವರಿಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರ ಎಚ್ಚರಿಕೆ ನೀಡಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿರುವ ಡೆಲ್ಸಿ ರೊಡ್ರಿಗಸ್ ಅಮೆರಿಕದೊಂದಿಗೆ ಸಹಕರಿಸದಿದ್ದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ವೆನೆಜುವೆಲಾದ ಅಗಾಧವಾದ ಕಚ್ಚಾ ತೈಲ ನಿಕ್ಷೇಪಗಳಲ್ಲಿ ಅಮೆರಿಕ ಹೂಡಿಕೆಗೆ ಪ್ರವೇಶವನ್ನು ತೆರೆಯುವುದು ಸೇರಿದಂತೆ ವಾಷಿಂಗ್ಟನ್‌ನ ಗುರಿಗಳನ್ನು ಪೂರೈಸುವವರೆಗೆ ಮಡುರೊ ಅವರ ಸರ್ಕಾರದ ಜೊತೆ ಕೆಲಸ ಮಾಡಲು ಸಿದ್ಧ ಎಂದು ಟ್ರಂಪ್ ಆಡಳಿತ ಹೇಳುತ್ತದೆ. ವೆನೆಜುವೆಲಾದ ಸುಪ್ರೀಂ ಕೋರ್ಟ್ ಮತ್ತು ಮಿಲಿಟರಿ ಅಧಿಕಾರಿಗಳು ರೊಡ್ರಿಗಸ್ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ದೃಢಪಡಿಸಿದ ನಂತರ ಟ್ರಂಪ್ ಅವರ ಎಚ್ಚರಿಕೆ ಬಂದಿದೆ. ಒಂದೆಡೆ ಯುದ್ಧಕ್ಕೆ ಮುಂದಾಗಿರುವ ದೇಶಗಳಿಗೆ ಶಾಂತಿ ಪಾಠ ಮಾಡುತ್ತಾ, ಮತ್ತೊಂದೆಡೆ ಖುದ್ದು ತಾನೇ ಡಾನ್ ರೀತಿಯ ವರ್ತನೆಯನ್ನು ಟ್ರಂಪ್ ತೋರುತ್ತಿದ್ದಾರೆ. ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊರನ್ನು ಸೆರೆಹಿಡಿದ ಕಾರ್ಯಾಚರಣೆಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡೆಲ್ಸಿ ರೊಡ್ರಿಗಸ್ ಅವರಿಗೂ ಬೆದರಿಕೆ ಹಾಕಿದ್ದಾರೆ.
ಇನ್ನಷ್ಟು ಓದಿರಿ : ವೆನಿಜುವೆಲಾ ಮೇಲೆ ಅಮೆರಿಕ ದಾಳಿ : ಕಾನೂನಿನ ಮೂಲಕ ವಿವಾದ