ಗಡಿಪಾರುಗೊಂಡಿರುವ ಯುವರಾಜ ರೇಜಾ ಪಹ್ಲವಿ ಸಾಮೂಹಿಕ ಪ್ರತಿಭಟನೆಗೆ ಕರೆ ನೀಡಿದ್ದರಿಂದ ಜನರು ತಮ್ಮ ಮನೆಗಳಿಂದಲೇ ಕೂಗುತ್ತಾ ಪ್ರತಿಭಟನೆಗಳಲ್ಲಿ ಭಾಗಿಯಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪ್ರತಿಭಟನಾಕಾರರಿಗೆ ಬೆಂಬಲ ನೀಡಲು ಮಾರುಕಟ್ಟೆಗಳು ಮತ್ತು ಬಜಾರ್‌ಗಳನ್ನು ಮುಚ್ಚಲಾಯಿತು. ಇಲ್ಲಿಯವರೆಗೆ ನಡೆದ ಪ್ರತಿಭಟನಾ ಹಿಂಸಾಚಾರದಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿದ್ದು, 2,270 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ತಿಳಿಸಿದೆ.
ಪ್ರತಿಭಟನೆಗಳ ಬೆಳವಣಿಗೆ ಇರಾನ್‌ನ ನಾಗರಿಕ ಸರ್ಕಾರ ಮತ್ತು ಅದರ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮೇಲೆ ಒತ್ತಡವನ್ನು ಹೆಚ್ಚಿಸಿದೆ. ಇರಾನ್‌ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಕ್ಕೆ ಇರಾನ್ ಸರ್ಕಾರದ ಹಸ್ತಕ್ಷೇಪವೇ ಕಾರಣ ಎಂದು ಇಂಟರ್ನೆಟ್ ಸಂಸ್ಥೆಯಾದ ಕ್ಲೌಡ್‌ಫ್ಲೇರ್ ವರದಿ ಮಾಡಿದೆ. ದುಬೈನಿಂದ ಇರಾನ್‌ಗೆ ಲ್ಯಾಂಡ್‌ಲೈನ್‌ಗಳು ಮತ್ತು ಮೊಬೈಲ್ ಫೋನ್‌ಗಳ ಸಂಪರ್ಕ ಸಾಧ್ಯವಾಗಿಲ್ಲ. ಹಿಂದೆ ಈ ರೀತಿ ಕ್ರಮದಿಂದಾಗಿ ಸರ್ಕಾರ ದಮನಗೊಂಡಿದ್ದ ಉದಾಹರಣೆಗಳು ಇವೆ.
ಪಹ್ಲವಿ ಪ್ರತಿಭಟನೆ ಕರೆಗಳು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಇನ್ನು ಸ್ಪಷ್ಟವಾಗಿಲ್ಲ. ಜಗತ್ತಿನ ಕಣ್ಣು ಇರಾನ್ ಮೇಲೆ ಇದ್ದು, ಜನರು ಬೀದಿಗಿಳಿದು ಒಗ್ಗಟ್ಟಿನಿಂದ ತಮ್ಮ ಬೇಡಿಕೆಗಳನ್ನು ಕೂಗಬೇಕು. ಇಸ್ಲಾಮಿಕ್ ಗಣರಾಜ್ಯದ ನಾಯಕ ಮತ್ತು ಟ್ರಂಪ್ ನಿಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜನರ ದಮಕ್ಕೆ ಉತ್ತರ ಸಿಗದೆ ಹೋಗುವುದಿಲ್ಲ ಎಂದು ಪಹ್ಲವಿ ಕರೆ ನೀಡಿದರು.
ಪ್ರತಿಭಟನೆ ಕರೆ ಬೆನ್ನಲ್ಲೇ ಟೆಹ್ರಾನ್‌ನಾದ್ಯಂತ ಘೋಷಣೆಗಳಲ್ಲಿ ಮೊಳಗಿದವು. ಸರ್ವಾಧಿಕಾರಿಗೆ ಸಾವು ಮತ್ತು ಇಸ್ಲಾಮಿಕ್ ಗಣರಾಜ್ಯಕ್ಕೆ ಸಾವು ಎಂಬ ಘೋಷಣೆಗಳು ಕೇಳಿ ಬಂದವು. ಇದು ಕೊನೆಯ ಯುದ್ಧ ಪಹ್ಲವಿ ಹಿಂತಿರುಗುತ್ತಾರೆ ಎಂದು ಸಾವಿರರು ಜನರು ಬೀದಿಗಳಲ್ಲಿ ಕೂಗಿದರು.
ಪ್ರತಿಭಟನೆಗಳ ಪ್ರಮಾಣದ ಬಗ್ಗೆ ಇರಾನಿನ ಅಧಿಕಾರಿಗಳು ಯಾವುದೇ ಒಪ್ಪಿಗೆಯನ್ನು ನೀಡಿಲ್ಲ. ಆದಾಗ್ಯೂ, ಭದ್ರತಾ ಅಧಿಕಾರಿಗಳು ಗಾಯಗೊಂಡಿದ್ದಾರೆ ಅಥವಾ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಬಂದಿವೆ.
ಇರಾನ್‌ನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ದೇಶಾದ್ಯಂತ ಹರಡಿರುವ ಪ್ರತಿಭಟನೆ ಮತ್ತಷ್ಟು ಜೋರಾಗಿದೆ.ಗಡಿಪಾರುಗೊಂಡಿರುವ ಯುವರಾಜ ರೇಜಾ ಪಹ್ಲವಿ ಸಾಮೂಹಿಕ ಪ್ರತಿಭಟನೆಗೆ ಕರೆಯಿಂದಾಗಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಇನ್ನಷ್ಟು ಓದಿರಿ:
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿಳಂಬ : ವಾಣಿಜ್ಯ ಕಾರ್ಯದರ್ಶಿ ಲುಟ್ನಿಕ್ ಹೇಳಿಕೆ