<?= $pageTitle ?>
Logo
ಮುಖಪುಟ ಓದುವುದು ಕೇಳು
Health

ಮೊಟ್ಟೆ ಸೇವನೆ ಮತ್ತು ಮಧುಮೇಹ ಸಂಬಂಧ ಏನು? ಸಂಶೋಧನೆ ಹೇಳುವುದೇನು?

ಮೊಟ್ಟೆ ಸೇವನೆ ಮತ್ತು ಮಧುಮೇಹ ಸಂಬಂಧ ಏನು? ಸಂಶೋಧನೆ  ಹೇಳುವುದೇನು?
Summary: ಮೊಟ್ಟೆ ಸೇವಿಸುವುದರಿಂದ ಮಧುಮೇಹ ಬರುತ್ತದೆ ಎಂಬ ಪ್ರಶ್ನೆಗೆ ಜನರಲ್ಲಿ ಇದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಮೊಟ್ಟೆಗಳಲ್ಲಿ ಇರುವ ಪ್ರೋಟೀನ್ ಮತ್ತು ಪೋಷಕಾಂಶಗಳು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ. ಆದರೆ ಅತಿಯಾಗಿ ಮೊಟ್ಟೆ ಸೇವಿಸುವುದು ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದೇ ಎಂಬ ಕುರಿತು ತಜ್ಞರು ಸ್ಪಷ್ಟತೆ ನೀಡಿದ್ದಾರೆ.
belagavi news:

ದಿನಕ್ಕೆ ಎಷ್ಟು ಮೊಟ್ಟೆ ಸೇರಿಸಬೇಕು, ಮಧುಮೇಹಿ ಇರುವವರು ಮೊಟ್ಟೆ ತಿನ್ನಬಹುದೇ ಮೊಟ್ಟೆಯ ಹಳದಿ ಮತ್ತು ಬಿಳಿಯ ಪಾತ್ರವೇನು ಎಂಬ ಸಂಪೂರ್ಣ ಮಾಹಿತಿಯನ್ನು ಸಂಶೋಧಕರ ಅಭಿಪ್ರಾಯಗಳೊಂದಿಗೆ ಇಲ್ಲಿ ತಿಳಿದುಕೊಳ್ಳೋಣ ಬನ್ನಿ.


ದೇಹದ ಆರೋಗ್ಯ ಸದೃಢವಾಗಿರಲು ಸಮತೋಲನ ಆಹಾರ ಅತ್ಯಂತ್ಯ ಅಗತ್ಯ ಪೌಷ್ಟಿಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರಗಳ ಪೈಕಿ ಮೊಟ್ಟೆ ಒಂದು ಪ್ರಮುಖ ಸ್ಥಾನವನ್ನು ಹೊಂದಿದೆ. ಪ್ರೋಟಿನ್ ವಿಟಮಿನ್ ಗಳು ಮತ್ತು ಖನಿಜಾಂಶಗಳಿಂದ ಕೂಡಿರುವ ಮೊಟ್ಟೆಯನ್ನು ಅನೇಕ ಜನರು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ.


ಉಪಹಾರದಿಂದ ಆರಂಭಿಸಿ ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ವರೆಗೆ ವಿವಿಧ ರೂಪಗಳಲ್ಲಿ ಮೊಟ್ಟೆಯನ್ನು ಸೇವಿಸುವ, ಅಭ್ಯಾಸ ಜನರಲ್ಲಿ ವ್ಯಾಪಕವಾಗಿದೆ. ಆರೋಗ್ಯಕರ ಜೀವನ ಶೈಲಿಗೆ ಮೊಟ್ಟೆಯ ಪಾತ್ರ ಏನು, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬ ಮಾಹಿತಿ ತಿಳಿದುಕೊಳ್ಳುವುದು ಬಹಳ ಮುಖ್ಯ.


ಆರೋಗ್ಯ ತಜ್ಞದ ಪ್ರಕಾರ, ಪ್ರತಿದಿನ ಮೊಟ್ಟೆ ಸೇರಿಸುವುದು ದೇಹಕ್ಕೆ ಹಲವಾರು ರೀತಿಯಲ್ಲಿ ಲಾಭಾಕಾರವಾಗಿದೆ ಮೊಟ್ಟೆಗಳಲ್ಲಿ ಪ್ರೋಟೀನ್ ವಿಟಮಿನ್ ಗಳು ಖನಿಜಾಂಶಗಳು ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳು ದೊರಕುತ್ತವೆ. ಆದರೆ ಇತ್ತೀಚಿಗೆ ಪ್ರಕಟವಾದ ಒಂದು ಅಧ್ಯಯನದಲ್ಲಿ ಅತಿಯಾಗಿ ಮೊಟ್ಟೆ ಸೇವಿಸುವುದು ಮಧುಮೇಹದ ಅಪಾಯವನು ಹೆಚ್ಚಿಸಬಹುದು ಎಂಬ ಅಂಶ ಬಹಿರಂಗವಾಗಿದೆ.
ಸಂಶೋಧನಾ ಪರಧಿಯ ಪ್ರಕಾರ ಪ್ರತಿದಿನ ಒಂದು ಅಥವಾ ಅದಕ್ಕಿಂತ ಹೆಚ್ಚು ಮೊಟ್ಟೆ ಸೇವಿಸುವ ಜನರಿಗೆ ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ವಿಶೇಷವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಅಪಾಯ ಹೆಚ್ಚು ಕಂಡು ಬಂದಿದೆ ಈ ಅಧ್ಯಯನದಲ್ಲಿ ಏನು ಹೇಳಲಾಗಿದೆ. ಎಷ್ಟು ಮೊಟ್ಟೆ ಸೇವಿಸುವುದು ಸುರಕ್ಷಿತ ಯಾರು ಎಚ್ಚರಿಕೆ ವಹಿಸಬೇಕು ಎಂಬ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿದುಕೊಳ್ಳೋಣ.


ಸಂಶೋಧನೆ ತಿಳಿಸುವುದೇನು ?
ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಚೀನಾ ವೇದಿಕೆಯ ವಿಶ್ವವಿದ್ಯಾಲಯ ಮತ್ತು ಕತಾರ್ ವಿಶ್ವವಿದ್ಯಾಲಯ ಸಹಯೋಗದೊಂದಿಗೆ 18 ವರ್ಷಗಳ ದೀರ್ಘಾವಧಿಯ ಅಧ್ಯಯನ ನಡೆಸಿದೆ ಈ ಜಂಟಿ ಸಂಶೋಧನೆಯ ಉದ್ದೇಶ ಹೆಚ್ಚು ಮೊಟ್ಟೆ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ವಿಶ್ಲೇಷಿಸುವುದಾಗಿತ್ತು.


ಸಂಶೋಧನ ವರದಿಯ ಪ್ರಕಾರ ಸಂಸ್ಕರಿಸಿದ ಆಹಾರದೊಂದಿಗೆ ನಿಯಮಿತವಾಗಿ ಹೆಚ್ಚು ಮೊಟ್ಟೆಗಳನ್ನು ಸೇವಿಸುವುದು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಪ್ರತಿದಿನ ಮೊಟ್ಟೆ ತಿನ್ನುವ ಜನರಲ್ಲಿ ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದ ಅಧ್ಯಯನ ತಿಳಿಸಿದೆ.
ಇದಲ್ಲದೆ, ಇಂತಹ ವ್ಯಕ್ತಿಗಳಲ್ಲಿ ಉಪವಾಸದ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ (Fasting blood sugar ) ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ಮೊಟ್ಟೆ ಸೇವನೆಯ ಪ್ರಮಾಣ ಮತ್ತು ಆಹಾರದ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸೂಚಿಸುತ್ತದೆ.


ಟೈಪ್ 2 ಮಧುಮೇಹ ಬರುವ ಅಪಾಯ ಎಷ್ಟು? ಸಂಶೋಧನೆ ಹೇಳುವುದೇನು

ಈ ಮಹತ್ವದ ಸಂಶೋಧನೆಯ ವಿವರಗಳನ್ನು 2017ರಲ್ಲಿ ಜನರಲ್ ಆಫ್ ದಿ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಯಲ್ಲಿ ಪ್ರಕಟಿಸಲಾಗಿದೆ. ಅಧ್ಯಯನ ದ ಪ್ರಕಾರ ಪ್ರತಿದಿನ ಒಂದು ಮೊಟ್ಟೆ ಸೇವಿಸುವುದರೊಂದಿಗೆ ಹೋಲಿಸಿದರೆ ಪ್ರತಿದಿನ ಎರಡು ಮೊಟ್ಟೆಗಳನ್ನು ತಿನ್ನುವುದರ ತಿನ್ನುವವರಿಗೆ ಟೈಪ್ 2 ಮಧುಮೇಹ ಬರುವ ಅಪಾಯ ಶೇ. 23ರಷ್ಟು ಹೆಚ್ಚು ಎಂದು ಕಂಡುಬಂದಿದೆ.
ಇನ್ನು ಗಂಭೀರವಾಗಿ ಪ್ರತಿದಿನ ಮೂರು ಅಥವಾ ಅದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಸೇವಿಸುವವರಿಗೆ ಶೇ. 31 ರಷ್ಟು ಹೆಚ್ಚಿನ ಮಧುಮೇಹದ ಅಪಾಯ ಇರುವುದಾಗಿ ಸಂಶೋಧನೆ ತಿಳಿಸಿದೆ ಈ ಅಧ್ಯಯನದಲ್ಲಿ ಚೀನಾವೈದಿಕೀಯ ವಿಶ್ವವಿದ್ಯಾಲಯದ ಪೌಷ್ಟಿಕತಜ್ಞ ಡಾ. ಮಿಂಗ್ ಲಿ ಭಾಗವಹಿಸಿದರು.
ಸರಾಸರಿ 50 ವರ್ಷ ವಯಸ್ಸಿನ 8,545 ಚೀನಿ ನಾಗರಿಕರು ಈ ದೀರ್ಘಾವಧಿಯ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು ಎಂದು ಡಾ . ಮಿಂಗ್ ಲಿ ಮಾಹಿತಿ ನೀಡಿದ್ದಾರೆ ಈ ಸಂಶೋಧನೆ ಮೊಟ್ಟೆ ಸೇವನೆಯ ಪ್ರಮಾಣದ ಬಗೆ ಎಚ್ಚರಿಕೆವಹಿಸುವ ಅಗತ್ಯವಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.


ಮೊಟ್ಟೆಗಳನ್ನು ಸೇವಿಸುವುದು ಹೇಗೆ? ತಜ್ಞರು ಸಲಹೆ ಏನು
ಮಧುಮೇಹವನ್ನು ತಪ್ಪಿಸಲು ಮೊಟ್ಟೆಗಳನ್ನು ಸರಿಯಾದ ವಿಧಾನದಲ್ಲಿ ಸೇವಿಸುವುದು ಬಹಳ ಮುಖ್ಯ ಎಂದು ಪೌಷ್ಟಿಕ ತಜ್ಞ ಡಾ. ಮಿಂಗ್ ಲಿ ಸಲಹೆ ನೀಡಿದ್ದಾರೆ ಅವರ ಪ್ರಕಾರ ಬೇಯಿಸಿದ ಮೊಟ್ಟೆಗಳನ್ನು ಮಾತ್ರ ಸೇವಿಸುವುದು ಉತ್ತಮ . ಮೊಟ್ಟೆಗೆ ಉಪ್ಪು ಮೆಣಸು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ತಿನ್ನಲು ಅವರು ಶಿಫಾರಸ್ಸು ಮಾಡುತ್ತಾರೆ.


ಇದುಕ್ಕೂ , ಜೊತೆಗೂಡಿ ಮೊಟ್ಟೆಗಳನ್ನು ತರಕಾರಿಗಳೊಂದಿಗೆ ಸೇವಿಸುವುದು ಹೆಚ್ಚು ಲಾಭಕರಯನ್ನು ತಿಳಿಸಿದ್ದಾರೆ. ತರಕಾರಿ ಆಮ್ಲೆಟ್ ತಯಾರಿಸಿ ಸೇವಿಸುವುದು ಉತ್ತಮ ಆಯ್ಕೆ ಎಂದು ಅವರು ಸಲಹೆ ನೀಡಿದ್ದಾರೆ. ಸದಾ ಮೊಟ್ಟೇಯ ಬದಲು ತರಕಾರಿಗಳೊಂದಿಗೆ ಮೊಟ್ಟೆ ಸೇವಿಸುವುದರಿಂದ ಟೈಪ್ ಟು ಮಧುಮೇಹ ಬರುವ ಅಪಾಯ ಕಡಿಮೆಯಾಗುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ.
ಆದರೆ ಮೊಟ್ಟೆ ಭಕ್ಷ್ಯಗಳನ್ನು ತಯಾರಿಸುವಾಗ ತುಪ್ಪ ಎಣ್ಣೆ ಮತ್ತು ಚೀಸ್ ಬಳಕೆಗಳನ್ನು ತಪ್ಪಿಸಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ ಈ ರೀತಿ ಆರೋಗ್ಯಕರ ಆಹಾರ ಪದ್ಧತಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ.


ಓದುಗರಿಗೆ ಸೂಚನೆ:
ವರದಿಯಲ್ಲಿ ನೀಡಲಾಗಿರುವ ಎಲ್ಲಾ ಆರೋಗ್ಯ ಸಂಬಂಧಿತ ಮಾಹಿತಿ ಮತ್ತು ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ ಈ ಪ್ರಕಟಿಸಿರುವ ವಿಷಯ ವೈಜ್ಞಾನಿಕ ಸಂಶೋಧನೆಗಳು ಅಧ್ಯಯನಗಳು ಹಾಗೂ ವೈದಿಕೀಯ ಮತ್ತು ಆರೋಗ್ಯ ವೃತ್ತಿಪರರ ಅಭಿಪ್ರಾಯಗಳ ಆಧಾರದಲ್ಲಿ ಸಿದ್ಧಪಡಿಸಲಾಗಿದೆ.
ಆದರೆ ಪ್ರತಿಯೊಬ್ಬರ ದೈಹಿಕ ಸ್ಥಿತಿ ವಿಭಿನ್ನವಾಗಿರುವುದರಿಂದ ಇಲ್ಲಿ ನೀಡಿರುವ ಯಾವುದೇ ವಿಧಾನ ಅಥವಾ ಸಲಹೆಯನ್ನು ಅನುಸರಿಸುವ ಮೊದಲು ಪರಿಣತ ವೈದರು ಅಥವಾ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಅತ್ಯಂತ ಉತ್ತಮ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ವೈದರ ಸಲಹೆಯೊಂದಿಗೆ ಮಾತ್ರ ನಿರ್ಧಾರ ಕೈಗೊಳ್ಳುವಂತೆ ಓದುಗರಿಗೆ ವಿನಂತಿ.


ಇನ್ನಷ್ಟು ಓದಿರಿ:


ಸೌತ್ ಆಫ್ರಿಕಾ ತಂಡದಿಂದ ವಿಶ್ವ ದಾಖಲೆ ಸಾಧನೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online