<?= $pageTitle ?>
Logo
ಮುಖಪುಟ ಓದುವುದು ಕೇಳು
Business

ಕಿರಾಣಿ ಅಂಗಡಿ ನಡೆಸುತ್ತಿದ್ದವನೇ 'ರಿಸರ್ಚ್ ಅನಲಿಸ್ಟ್ : ಲೈಸೆನ್ಸ್ ರದ್ದು

ಕಿರಾಣಿ ಅಂಗಡಿ ನಡೆಸುತ್ತಿದ್ದವನೇ 'ರಿಸರ್ಚ್ ಅನಲಿಸ್ಟ್ : ಲೈಸೆನ್ಸ್ ರದ್ದು
Summary: ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ 'ಸೆಬಿ' ಇತ್ತೀಚೆಗೆ ಮಧುರೈ ಮೂಲದ ಪುರೂಸ್ಖಾನ್ ಎಂಬುವವರ 'ರಿಸರ್ಚ್ ಅನಲಿಸ್ಟ್' (ಸಂಶೋಧನಾ ವಿಶ್ಲೇಷಕ) ನೋಂದಣಿಯನ್ನು ರದ್ದುಗೊಳಿಸಿದೆ. ತನಿಖೆಯ ವೇಳೆ ಈತ ಷೇರುಪೇಟೆ ತಜ್ಞನಲ್ಲ, ಬದಲಾಗಿ ಮಧುರೈನಲ್ಲಿ ಒಂದು ಸಣ್ಣ ದಿನಸಿ ಅಂಗಡಿ ನಡೆಸುತ್ತಿರುವವನು ಎಂಬುದು ಬಹಿರಂಗವಾಗಿದೆ. ಈತನ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಆನ್ಲೈನ್ ಜಾಲವೊಂದು ಹೂಡಿಕೆದಾರರಿಗೆ ವಂಚಿಸುತ್ತಿತ್ತು ಎಂಬ ದೂರಿನನ್ವಯ ಸೆಬಿ ಈ ಕ್ರಮ ಕೈಗೊಂಡಿದೆ.
ಮುಂಬೈ: ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ 'ಸೆಬಿ' ಇತ್ತೀಚೆಗೆ ಮಧುರೈ ಮೂಲದ ಪುರೂಸ್ಖಾನ್ ಎಂಬುವವರ 'ರಿಸರ್ಚ್ ಅನಲಿಸ್ಟ್' (ಸಂಶೋಧನಾ ವಿಶ್ಲೇಷಕ) ನೋಂದಣಿಯನ್ನು ರದ್ದುಗೊಳಿಸಲಾಗಿದೆ.
ತನಿಖೆಯ ವೇಳೆ ಈತ ಷೇರುಪೇಟೆ ತಜ್ಞನಲ್ಲ, ಬದಲಾಗಿ ಮಧುರೈನಲ್ಲಿ ಒಂದು ಸಣ್ಣ ದಿನಸಿ ಅಂಗಡಿ ನಡೆಸುತ್ತಿರುವವನು ಎಂಬುದು ಬಹಿರಂಗವಾಗಿದೆ. ಈತನ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಆನ್ಲೈನ್ ಜಾಲವೊಂದು ಹೂಡಿಕೆದಾರರಿಗೆ ವಂಚಿಸುತ್ತಿತ್ತು ಎಂಬ ದೂರಿನನ್ವಯ ಸೆಬಿ ಈ ಕ್ರಮ ಕೈಗೊಂಡಿದೆ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಇತ್ತೀಚೆಗೆ ವಿಚಿತ್ರ ಪ್ರಕರಣವೊಂದನ್ನು ಭೇದಿಸಿದ್ದು, ಅಧಿಕೃತವಾಗಿ 'ರಿಸರ್ಚ್ ಅನಲಿಸ್ಟ್' (ಸಂಶೋಧನಾ ವಿಶ್ಲೇಷಕ) ಎಂದು ನೋಂದಾಯಿಸಿಕೊಂಡಿದ್ದ ವ್ಯಕ್ತಿಯೊಬ್ಬ ಅಸಲಿಗೆ ಕಿರಾಣಿ ಅಂಗಡಿ ನಡೆಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಈ ಆಘಾತಕಾರಿ ಸಂಗತಿಯನ್ನು ಕಂಡು ಸ್ವತಃ ಸೆಬಿ ಅಧಿಕಾರಿಗಳೇ ದಂಗಾಗಿದ್ದಾರೆ.
ಮಧುರೈನಲ್ಲಿ ಕೇವಲ 100 ಚದರ ಅಡಿಯ ಚಿಕ್ಕ ದಿನಸಿ ಅಂಗಡಿಯಲ್ಲಿ ಒಂದಿಷ್ಟು ತಿನಿಸುಗಳು ಮತ್ತು ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಪುರೂಸ್ಖಾನ್ ಎಂಬಾತನ ರಿಸರ್ಚ್ ಅನಲಿಸ್ಟ್ ನೋಂದಣಿಯನ್ನು ಸೆಬಿ ಇದೀಗ ರದ್ದುಗೊಳಿಸಿದೆ.
"ವಿಚಾರಣೆಯ ಸಮಯದಲ್ಲಿ ನೋಟಿಸ್ ಪಡೆದವನಿಗೆ (ಪುರೂಸ್ಖಾನ್) ಷೇರುಪೇಟೆ ವ್ಯವಹಾರಗಳ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದಿರುವುದು ಕಂಡುಬಂತು. ಆತ ದಿನಸಿ ಮತ್ತು ತಿಂಡಿಗಳನ್ನು ಮಾರುವ ಸಣ್ಣ ಅಂಗಡಿ ನಡೆಸುತ್ತಿದ್ದಾನೆ. ಇಂತಹ ವ್ಯಕ್ತಿ ರಿಸರ್ಚ್ ಅನಲಿಸ್ಟ್ ಆಗಿ ನೋಂದಣಿ ಪಡೆದಿದ್ದು ಹೇಗೆ ಎಂಬುದೇ ಸೋಜಿಗದ ಸಂಗತಿ," ಎಂದು ಶುಕ್ಲಾ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಜೂನ್ 2022ರಲ್ಲಿ ಸೆಬಿಯ 'ಸ್ಕೋರ್ಸ್' (SCORES) ಪ್ಲಾಟ್ಫಾರ್ಮ್ನಲ್ಲಿ ಹೂಡಿಕೆದಾರರೊಬ್ಬರು ದೂರು ನೀಡಿದಾಗ ಈ ಪ್ರಕರಣ ಮುನ್ನೆಲೆಗೆ ಬಂತು. www.optionresearch.in ಎಂಬ ವೆಬ್ಸೈಟ್ ಓರ್ವ ಹೂಡಿಕೆದಾರರಿಗೆ 'ಶೂನ್ಯ ರಿಸ್ಕ್' ಮತ್ತು 'ಬಂಡವಾಳ ದ್ವಿಗುಣಗೊಳಿಸುವ' ಆಮಿಷ ಒಡ್ಡಿತ್ತು. ದೂರುದಾರರು ಈ ಸಲಹೆ ನಂಬಿ 50,000 ರೂ. ಶುಲ್ಕ ಪಾವತಿಸಿ, ಅಂತಿಮವಾಗಿ 4 ಲಕ್ಷ ರೂ. ನಷ್ಟ ಅನುಭವಿಸಿದ್ದರು.
ಸ್ವತಃ ಪುರೂಸ್ಖಾನ್ ಕೂಡ ತಾನು ಸಣ್ಣ ವ್ಯಾಪಾರಿಯಾಗಿದ್ದು, ಯಾವುದೇ ಸಂಶೋಧನಾ ಚಟುವಟಿಕೆ ನಡೆಸುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾನೆ.
ತನಿಖೆ ನಡೆಸಿದಾಗ, ಈ ವೆಬ್ಸೈಟ್ ಪುರೂಸ್ಖಾನ್ ಅವರ ಸೆಬಿ ನೋಂದಣಿ ಸಂಖ್ಯೆಯನ್ನು ಪ್ರಮುಖವಾಗಿ ಪ್ರದರ್ಶಿಸುತ್ತಿತ್ತು ಎಂಬುದು ಪತ್ತೆಯಾಯಿತು.'ಆಪ್ಷನ್ ರಿಸರ್ಚ್ ಕನ್ಸಲ್ಟೆನ್ಸಿ' (ಒಆರ್ಸಿ)ಯ ಪಾಲುದಾರನಾದ ಜಿ. ಫಹೀತ್ ಅಲಿ ಎಂಬುವವರು ಬ್ಯಾಂಕ್ ಉದ್ಯೋಗಿಯ ಸೋಗಿನಲ್ಲಿ ಬಂದು, ಉದ್ಯೋಗದ ಆಮಿಷವೊಡ್ಡಿ ತಮ್ಮ ವೈಯಕ್ತಿಕ ದಾಖಲೆಗಳು ಮತ್ತು ಪ್ರಮಾಣಪತ್ರಗಳ ಪ್ರತಿಗಳನ್ನು ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಈ ಕುರಿತು ತಮಿಳುನಾಡು ಪೊಲೀಸರಿಗೆ ಮತ್ತು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿರುವುದಾಗಿ ತಿಳಿಸಿದ್ದರು.
ಈ ಹಿಂದೆ ಇದೇ ಪ್ರಕರಣದಲ್ಲಿ ನಿರ್ಣಯಾಧಿಕಾರಿಗಳು ಪುರೂಸ್ಖಾನ್ ಅವರಿಗೆ ಸಂಶಯದ ಲಾಭ ನೀಡಿ, ದಂಡ ವಿಧಿಸದೆ ಪ್ರಕರಣ ಮುಕ್ತಾಯಗೊಳಿಸಿದ್ದರು. ಆದರೆ, ಆಗಸ್ಟ್ನಲ್ಲಿ ನೀಡಲಾದ ಮತ್ತೊಂದು ಆದೇಶದಲ್ಲಿ ಸಂಬಂಧಿತ ಸಂಸ್ಥೆಗಳಿಗೆ 30.39 ಲಕ್ಷ ರೂ. ಮರುಪಾವತಿಸಲು ಮತ್ತು 2 ವರ್ಷಗಳ ಕಾಲ ಮಾರುಕಟ್ಟೆಯಿಂದ ನಿಷೇಧ ಹೇರಲಾಗಿತ್ತು. ಜೊತೆಗೆ ತಲಾ 6 ಲಕ್ಷ ರೂ. ದಂಡ ವಿಧಿಸಲಾಗಿತ್ತು.
ಪುರೂಸ್ಖಾನ್ ಓರ್ವ ಅನಕ್ಷರಸ್ಥ ವ್ಯಾಪಾರಿಯಾಗಿದ್ದು, ರಿಸರ್ಚ್ ಅನಲಿಸ್ಟ್ ಅರ್ಹತೆ ಹೊಂದಿಲ್ಲದ ಕಾರಣ, ಅವರ ನೋಂದಣಿಯನ್ನೇ ಸಂಪೂರ್ಣವಾಗಿ ರದ್ದುಗೊಳಿಸುವ ಮೂಲಕ ಸೆಬಿ ಈ ವಿಚಿತ್ರ ಪ್ರಕರಣಕ್ಕೆ ಅಂತ್ಯ ಹಾಡಿದೆ.
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online