ಹೆಚ್ಚಿನ ಸಂದರ್ಭಗಳಲ್ಲಿ ಗಂಟಲು ನೋವು ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ, ಈ ತೊಂದರೆಗೆ ಚಿಕಿತ್ಸೆಯಾಗಿ ಪ್ರತಿಜೀವಕಗಳನ್ನು ಬಳಸಬಹುದು. ಆದ್ರೆ, ಪ್ರತಿಯೊಂದು ಸಣ್ಣ ಸಮಸ್ಯೆಗೂ ಔಷಧಿಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಕೆಲವು ಸರಳ ಮನೆಮದ್ದುಗಳು ಹಾಗೂ ಆಯುರ್ವೇದ ಪರಿಹಾರ ಕ್ರಮಗಳು ಸಹಾಯ ಮಾಡಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಇದಕ್ಕಾಗಿ 250 ಎಂಎಲ್ ನೀರಿಗೆ 1 ಟೀಸ್ಪೂನ್ ಅರಿಶಿನ ಹಾಗೂ ಅರ್ಧ ಟೀಸ್ಪೂನ್ ಉಪ್ಪು ಸೇರಿಸಿ 5 ನಿಮಿಷ ಕುದಿಸಿ.
ಈ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಗಂಟಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಅರಿಶಿನವು ಉರಿಯೂತ ನಿವಾರಕವಾಗಿದೆ. ಉರಿಯೂತ ಕಡಿಮೆ ಮಾಡಲು, ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಜೇನುತುಪ್ಪವನ್ನು ಸೇವಿಸುವುದರಿಂದ ವೈರಲ್ ಸೋಂಕುಗಳಿಂದ ಬೇಗನೆ ಪರಿಹಾರ ದೊರೆಯುತ್ತದೆ. ಉರಿಯೂತ ತಕ್ಷಣವೇ ಕಡಿಮೆ ಮಾಡಲು ಸಹಾಯವಾಗುತ್ತದೆ.
ಜೇನುತುಪ್ಪವು ಆಯುರ್ವೇದ ಔಷಧದಲ್ಲಿ ಹಲವು ಪ್ರಕಾರಗಳಲ್ಲಿ ಹೆಚ್ಚು ಪ್ರಯೋಜನಕಾರಿ ಎಂದು ತಜ್ಞರು ವಿವರಿಸುತ್ತಾರೆ. ತೀವ್ರ ಗಂಟಲು ನೋವು ಮತ್ತು ದೇಹದಲ್ಲಿರುವ ಊರಿಯೂತವನ್ನು ಗುಣಪಡಿಸುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.
ಆಯುರ್ವೇದದಲ್ಲಿ ತುಳಸಿಯನ್ನು ಅಧಿಕ ಮಹತ್ವವನ್ನು ನೀಡಲಾಗಿದೆ. ದೇಹದ ಆರೋಗ್ಯ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂದು ಆಯುರ್ವೇದ ತಜ್ಞರು ವಿವರಿಸುತ್ತಾರೆ. ತುಳಸಿ ಕಷಾಯವನ್ನು ತಯಾರಿಸಲು ಒಂದು ಕಪ್ ನೀರಿನಲ್ಲಿ 4ರಿಂದ 5 ಕರಿಮೆಣಸು, 5ರಿಂದ 6 ತುಳಸಿ ಎಲೆಗಳನ್ನು ಕುದಿಸಬೇಕಾಗುತ್ತದೆ. ಬಳಿಕ ನೀರನ್ನು ಸೋಸಿ ಸೇವಿಸಬೇಕಾಗುತ್ತದೆ. ಇದು ಗಂಟಲು ನೋವು, ಕೆಮ್ಮು, ಶೀತವನ್ನು ನಿವಾರಿಸಲು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ತುಳಸಿ ಕಷಾಯವು ಗಂಟಲಿನ ಸೋಂಕುಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೀವ್ರ ಗಂಟಲು ನೋವು ಮತ್ತು ದೇಹದಲ್ಲಿರುವ ಊರಿಯೂತವನ್ನು ಗುಣಪಡಿಸುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ನಿಯಮಿತವಾಗಿ ಜೇನುತುಪ್ಪವನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ನಿಮಗೆ ಗಂಟಲು ನೋವು ಇದ್ದರೆ ಅದನ್ನು ಕರಿಮೆಣಸಿನೊಂದಿಗೆ ಬೆರೆಸಿ ಸೇವಿಸಬಹುದು. ಇದರಿಂದ ಗಂಟಲು ನೋವಿಗೆ ಉತ್ತಮ ಪರಿಹಾರ ಲಭಿಸುತ್ತದೆ.
ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇನ್ನಷ್ಟು ಓದಿರಿ :
ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚಳ