<?= $pageTitle ?>
Logo
ಮುಖಪುಟ ಓದುವುದು ಕೇಳು
Business

EPF ಅಕೌಂಟ್‌ನಿಂದ LIC ಪ್ರೀಮಿಯಂ ಪಾವತಿ: ಸುಲಭ ವಿಧಾನ

EPF ಅಕೌಂಟ್‌ನಿಂದ LIC ಪ್ರೀಮಿಯಂ ಪಾವತಿ: ಸುಲಭ ವಿಧಾನ
Summary: ಇಪಿಎಫ್ ಸ್ಕೀಮ್​ನ ಪ್ಯಾರಾಗ್ರಾಫ್ 68ರ ಅಡಿಯಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ಇಪಿಎಫ್ (EPFO) ಮೂಲಕ ಒಂದೇ ಎಲ್​ಐಸಿ ಪ್ರೀಮಿಯಮ್ ಕಟ್ಟಬಹುದು. ನಿಮ್ಮಲ್ಲಿ ಸಕ್ರಿಯವಾಗಿರುವ ಇಪಿಎಫ್ ಅಕೌಂಟ್ ಇದ್ದು ನಿಮ್ಮದೇ ಎಲ್​ಐಸಿ ಪಾಲಿಸಿ ಇದ್ದರೆ ಅದಕ್ಕೆ ಪಾವತಿಸಬಹುದು.
BELAGAVI NEWS :

ಇಪಿಎಫ್ ಅಕೌಂಟ್​ನಲ್ಲಿರುವ ಹಣವನ್ನು ಹಿಂಪಡೆಯುವುದು ಈಗ ಸುಲಭ. ಇದೇ ವೇಳೆ, ಇಪಿಎಫ್ ಹಣವನ್ನು ಎಲ್​ಐಸಿ ಪಾಲಿಸಿಯ ಪ್ರೀಮಿಯಮ್ ಕಟ್ಟಲು ಬಳಸುವ ಅವಕಾಶ ಇದೆ.

ಹಾಗಿದ್ದರೆ ಇಪಿಎಫ್ ಅಕೌಂಟ್ ಬಳಸಿ ಎಲ್​ಐಸಿ ಹಣ ಕಟ್ಟಿರಿ. ಇಂಥದ್ದೊಂದು ಸೌಲಭ್ಯವನ್ನು ಇಪಿಎಫ್​ಒ ಒದಗಿಸಿದೆ. ನಿಮ್ಮಲ್ಲಿ ಸಕ್ರಿಯವಾಗಿರುವ ಇಪಿಎಫ್ ಅಕೌಂಟ್ ಇದ್ದು ನಿಮ್ಮದೇ ಎಲ್​ಐಸಿ ಪಾಲಿಸಿ ಇದ್ದರೆ ಅದಕ್ಕೆ ಪಾವತಿಸಬಹುದು.

ಇಪಿಎಫ್ ಸ್ಕೀಮ್​ನ ಪ್ಯಾರಾಗ್ರಾಫ್ 68ರ ಅಡಿಯಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ಇಪಿಎಫ್ (EPFO) ಮೂಲಕ ಒಂದೇ ಎಲ್​ಐಸಿ ಪ್ರೀಮಿಯಮ್ ಕಟ್ಟಬಹುದು, ಅಥವಾ ಇಡೀ ಪಾಲಿಸಿ ಅವಧಿಗೆ ಇಪಿಎಫ್​ನಿಂದ ಪ್ರೀಮಿಯಮ್ ಹಣ ಕಾಲ ಕಾಲಕ್ಕೆ ಸ್ವಯಂ ಆಗಿ ಸಂದಾಯವಾಗುವಂತೆ ಮಾಡಬಹುದು.

ಇಪಿಎಫ್​ಒಗೆ ಫಾರ್ಮ್-14 ಅನ್ನು ಸಲ್ಲಿಸಿದರೆ ಇದರ ಪ್ರಕ್ರಿಯೆ ಆರಂಭವಾಗುತ್ದೆ.

ಇಪಿಎಫ್​ಒ ವೆಬ್​ಸೈಟ್​ಗೆ ಹೋಗಿ ಯುಎಎನ್ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಬೇಕು. ನಂತರ ಕೆವೈಸಿ ಸೆಕ್ಷನ್​ಗೆ ಹೋಗಿ ಎಲ್​ಐಸಿ ಪಾಲಿಸಿ ಎಂಬುದನ್ನು ಆಯ್ಕೆ ಮಾಡಿ. ನಿಮ್ಮ ಎಲ್​ಐಸಿ ಪಾಲಿಸಿ ನಂಬರ್ ಮತ್ತಿತರ ವಿವರವನ್ನು ತುಂಬಿಸಿ, ವೆರಿಫಿಕೇಶನ್ ಪಡೆಯಿರಿ.

ಪಿಎಫ್​ಒದಲ್ಲಿ ನಿಮ್ಮ ಎಲ್​ಐಸಿ ಪಾಲಿಸಿ ಯಶಸ್ವಿಯಾಗಿ ಲಿಂಕ್ ಆದಲ್ಲಿ, ನಿಗದಿತ ದಿನದಂದು ಪಾಲಿಸಿ ಹಣ ತನ್ನಂತಾನೆ ಪಾವತಿಯಾಗುತ್ತದೆ.

ವರ್ಷದಲ್ಲಿ ಹೆಚ್ಚು ಮೊತ್ತದ ಪ್ರೀಮಿಯಮ್ ಕಟ್ಟುವ ಅಗತ್ಯ ಇದ್ದಾಗ ಈ ಸೌಲಭ್ಯ ಬಹಳ ಉಪಯುಕ್ತ ಎನಿಸುತ್ತದೆ. ಅದರಲ್ಲೂ ಹೆಚ್ಚಾಗಿ, ಪ್ರೀಮಿಯಮ್ ಕಟ್ಟಲು ನೀವು ಸಾಲ ಮಾಡಬೇಕಾಗಿ ಬರುವಂತಹ ಸಂದರ್ಭ ಇದ್ದರೆ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಇಪಿಎಫ್ ಅಕೌಂಟ್​ನಲ್ಲಿರುವ ಹಣವನ್ನು ಹಿಂಪಡೆಯುವುದು ಈಗ ಸುಲಭ. ಇದೇ ವೇಳೆ, ಇಪಿಎಫ್ ಹಣವನ್ನು ಎಲ್​ಐಸಿ ಪಾಲಿಸಿಯ ಪ್ರೀಮಿಯಮ್ ಕಟ್ಟಲು ಬಳಸುವ ಅವಕಾಶ ಇದೆ. ಇಪಿಎಫ್ ಸ್ಕೀಮ್​ನ ಪ್ಯಾರಾಗ್ರಾಫ್ 68ರ ಅಡಿಯಲ್ಲಿ ಈ ಸೌಲಭ್ಯ ಒದಗಿಸಲಾಗಿದೆ.

ಇನ್ನಷ್ಟು ಓದಿರಿ:
ರೈಲು ಪ್ರಯಾಣ ದರ ಏರಿಕೆ : ರೈಲ್ವೆ ಸ್ಟಾಕ್ ಬೇಡಿಕೆ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online